Site icon Vistara News

G20 Summit Day 2 LIVE Updates: ರಾಜ್‌ಘಾಟ್‌ಗೆ ಆಗಮಿಸಿದ ಜಿ20 ನಾಯಕರು, ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಗೌರವ ನಮನ

G20 Leaders At Rajghat

G20 Leaders Pay Tributes To Mahatma Gandhiji At Rajghat

ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಜಿ20 ಶೃಂಗಸಭೆ ಆರಂಭವಾಗಿದೆ(G20 Summit 2023). ಶನಿವಾರ ನಡೆದ ಜಿ20 ಶೃಂಗ ಸಭೆಯ ಯಶಸ್ವಿಯಾಗಿದ್ದು, ಭಾನುವಾರ(ಸೆ.10) ಕೂಡ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಭಾನುವಾರದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಜಾಗತಿಕ ನಾಯಕರು ಮಹಾತ್ಮ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ಜಿ20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ…..(G20 Summit LIVE Updates)

B Somashekhar

ಜಾಗತಿಕ ನಾಯಕರಿಗೆ ಮೋದಿ ಸ್ವಾಗತ

ಜಿ 20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ಜಾಗತಿಕ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಯುವ ಭಾರತ ಮಂಟಪಕ್ಕೆ ಸ್ವಾಗತಿಸಿದರು. ಕೆಲವೇ ಕ್ಷಣಗಳಲ್ಲಿ ಎಲ್ಲ ನಾಯಕರು ಗ್ರೂಪ್ ಫೋಟೊ ತೆಗೆಸಿಕೊಳ್ಳಲಿದ್ದಾರೆ.

B Somashekhar

ನಾನು ಹೆಮ್ಮೆಯ ಹಿಂದು; ಜಿ 20 ಸಭೆಗೂ ಮುನ್ನ ರಿಷಿ ಸುನಕ್ ಹೇಳಿಕೆ

“ನಾನು ಹೆಮ್ಮೆಯ ಹಿಂದು ಆಗಿದ್ದೇನೆ. ನಾನು ಹಿಂದು ಆಚರಣೆಗಳಂತೆಯೇ ಬೆಳೆದಿದ್ದೇನೆ. ಕೆಲ ದಿನಗಳ ಹಿಂದಷ್ಟೇ ನಾವು ರಕ್ಷಾಬಂಧನ ಆಚರಿಸಿದೆವು. ಭಾರತದ ದೇಗುಲಗಳಿಗೆ ಭೇಟಿ ನೀಡುತ್ತೇನೆ” ಎಂದು ಜಿ 20 ಶೃಂಗಸಭೆಗೂ ಮುನ್ನ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹೇಳಿದರು.

B Somashekhar

ಜಿ 20 ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಬಂದೋಬಸ್ತ್‌

Harish Kera

ಔತಣಕೂಟಕ್ಕೆ ರಾಜ್ಯದ ಇಬ್ಬರಿಗೆ ಆಹ್ವಾನ, ಇಬ್ಬರೂ ಗೈರು

ಹೊಸದಿಲ್ಲಿ: ಜಿ20 ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಾತ್ರಿ ನೀಡುತ್ತಿರುವ ವಿಶೇಷ ಔತಣಕೂಟಕ್ಕೆ ಕರ್ನಾಟಕದಲ್ಲಿ ಇಬ್ಬರಿಗೆ ಆಹ್ವಾನ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ಬಂದಿದೆ. ಆದರೆ ಇಬ್ಬರೂ ಭಾಗವಹಿಸುತ್ತಿಲ್ಲ. ದೇವೇಗೌಡರು ಅನಾರೋಗ್ಯ ಕಾರಣ ಆಗಮಿಸುತ್ತಿಲ್ಲ. ಸಿಎಂ ಕಾರಣ ನೀಡಿಲ್ಲ.

Mallikarjun Tippar

ಪ್ರಧಾನಿ ಮೋದಿ ಮತ್ತು ಬೈಡೆನ್ ಮಾತುಕತೆ

ಅಮೆರಿಕ ಅಧ್ಯಕ್ಷ G-20 ಸಭೆಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದೆಹಲಿಯ ಲೋಕ ಕಲ್ಯಾಣ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಜೋ ಬೈಡೆನ್‌ರನ್ನು ಪ್ರಧಾನಿ ಮೋದಿ ಅವರು ಆಹ್ವಾನಿಸಿದರು. ಈ ವೇಳೆ, ಎರಡೂ ರಾಷ್ಟ್ರಗಳಿಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಾಢವಾಗಿಸುವ ವಿಷಯಗಳ ಕುರಿತು ಚರ್ಚೆಯಾಗಿದೆ. ಉಭಯ ನಾಯಕರ ಫೋಟೋಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಹಂಚಿಕೊಂಡಿದೆ. ಜೆಟ್ ಇಂಜಿನ್‌ಗಳ ಒಪ್ಪಂದ, ಡ್ರೋನ್‌ಗಳ ಖರೀದಿ ಮತ್ತು 5G ಮತ್ತು 6G ನೆಟ್‌ವರ್ಕ್‌ಗಳಂತಹ ತಂತ್ರಜ್ಞಾನಗಳ ಸಹಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿದೆ ಎಂದು ಕೇಂದ್ರ ಸರ್ಕಾರ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

Exit mobile version