ದೇಶದ ರಾಜಧಾನಿ ದಿಲ್ಲಿಯಲ್ಲಿ (New Delhi) ಜಿ20 ಶೃಂಗಸಭೆ ಆರಂಭವಾಗಿದೆ(G20 Summit 2023). ಶನಿವಾರ ನಡೆದ ಜಿ20 ಶೃಂಗ ಸಭೆಯ ಯಶಸ್ವಿಯಾಗಿದ್ದು, ಭಾನುವಾರ(ಸೆ.10) ಕೂಡ ಮಹತ್ವದ ಚರ್ಚೆಗಳು ಆರಂಭವಾಗಲಿವೆ. ಭಾನುವಾರದ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಜಾಗತಿಕ ನಾಯಕರು ಮಹಾತ್ಮ ಗಾಂಧೀಜಿಯವರ ಸಮಾಧಿ ಸ್ಥಳವಾದ ರಾಜ್ಘಾಟ್ಗೆ ಆಗಮಿಸಿ ಗೌರವ ನಮನ ಸಲ್ಲಿಸಿದರು. ಜಿ20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗಾಗಿ…..(G20 Summit LIVE Updates)
ನಾಳೆ ವಿಧ್ಯುಕ್ತವಾಗಿ ಜಿ20 ಶೃಂಗ ಸಭೆ ಆರಂಭ
ಜಿ20 ಶೃಂಗ ಸಭೆಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ವಿಶ್ವ ನಾಯಕರ ಸಮಾಗಮ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿದೆ. ಈ ವೇಳೆ, ಜಾಗತಿಕ ಸಮಸ್ಯೆಗಳು ಕುರಿತು ಚಿಂತನ ಮಂಥನ ನಡೆಯಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಟ್ವೀಟ್ ಮಾಡಿ, 18ನೇ ಜಿ20 ಶೃಂಗಸಭೆ ದಿಲ್ಲಿಯ ಐಕಾನಿಕ್ ಭಾರತ್ ಮಂಟಪಂನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ರಷ್ಯಾ ಹಾಗೂ ಚೀನಾ ಅಧ್ಯಕ್ಷರನ್ನು ಹೊರತುಪಡಿಸಿ ವಿಶ್ವದ ಪ್ರಮುಖ ನಾಯಕರೆಲ್ಲರೂ ಈಗಾಗಲೇ ದಿಲ್ಲಿ ತಲುಪಿದ್ದಾರೆ. ಸೆಪ್ಟೆಂಬರ್ 9ರಂದು ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಔತಣಕೂಟವನ್ನೂ ಏರ್ಪಡಿಸಿದ್ದಾರೆ.
ಸೆಪ್ಟೆಂಬರ್ 9, ಶನಿವಾರ ಇಡಿ ದಿನದ ಕಾರ್ಯಕ್ರಮ ಪಟ್ಟಿ ಇಲ್ಲಿದೆ…
-ಬೆಳಗ್ಗೆ 9.30 – 10.30: ಭಾರತ್ ಮಂಟಪದಲ್ಲಿ ವಿವಿಧ ಮುಖ್ಯಸ್ಥರ ಆಗಮನ – ಹಂತ-2 ರ “ಟ್ರೀ ಆಫ್ ಲೈಫ್ ಫೋಯರ್” ನಲ್ಲಿ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಪ್ರಧಾನ ಮಂತ್ರಿಯವರ ಫೋಟೋ ಸೆಷನ್ – ಲೆವೆಲ್-2 ನಾಯಕರ ಲಾಂಜ್ನಲ್ಲಿ ರಾಷ್ಟ್ರಗಳ ಮುಖ್ಯಸ್ಥರ ಸಭೆ
-ಬೆಳಗ್ಗೆ 10.30 – 13.30: ಮೊದಲ ಅಧಿವೇಶನ: ಭಾರತ ಮಂಟಪದ ಲೆವೆಲ್-2 ಶೃಂಗಸಭೆ ಸಭಾಂಗಣದಲ್ಲಿ “ಒಂದು ಭೂಮಿ” ವಿಷಯದ ಕುರಿತು ಸಭೆ – ನಂತರ ಊಟದ ವಿರಾಮ
-ಮಧ್ಯಾಹ್ನ ಗಂಟೆ. 13.30 – 15.00: ಭಾರತ ಮಂಟಪದ ಹಂತ-ಒಂದರಲ್ಲಿ ದ್ವಿಪಕ್ಷೀಯ ಚರ್ಚೆಗಳು
-15.00-16.45 ಮಧ್ಯಾಹ್ನ: ಎರಡನೇ ಸೆಷನ್: ಹಂತ – 2 ಶೃಂಗಸಭೆ ಸಭಾಂಗಣದಲ್ಲಿ “ಒಂದು ಕುಟುಂಬ” ಕುರಿತು ಚರ್ಚೆ
ನಂತರ ಹೋಟೆಲ್ಗೆ ವಾಸ್ತವ್ಯಕ್ಕೆ ವಾಪಸ್ ಆಗಲಿರುವ ಅತಿಥಿಗಳು
-ರಾತ್ರಿ 19.00-20.00: ರಾಷ್ಟ್ರಪತಿ ಆಹ್ವಾನ ನೀಡಿರುವ ಔತಣಕೂಟಕ್ಕೆ ಮುಖ್ಯಸ್ಥರ ಆಗಮನ – ಫೋಟೋ ಸೆಷನ್
-ರಾತ್ರಿ 20.00-21.15 : ಭೋಜನ ಹಾಗೂ ಚರ್ಚೆ
-ರಾತ್ರಿ 21.10-21.45 : ಭಾರತ್ ಮಂಡಪಂ ಹಂತ – 2ಲಾಂಜ್ ನಲ್ಲಿ ನಾಯಕರು ಮತ್ತು ಪ್ರತಿನಿಧಿಗಳ ಸಭೆ