ನವದೆಹಲಿ: ಒಂದು ವೇಳೆ ಪಾಕಿಸ್ತಾನವು ಏನಾದರೂ ಪ್ರಚೋದಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೇನಾ ಕಾರ್ಯಾಚರಣೆ ಮೂಲಕ ಪ್ರತ್ಯುತ್ತರ ನೀಡಲಿದೆ ಎಂದು ಅಮೆರಿಕದ ಗುಪ್ತಚರ ಸಮುದಾಯದವು ಎಚ್ಚರಿಸಿದೆ. ಅಲ್ಲದೇ, ಪಾಕಿಸ್ತಾನ-ಭಾರತ ಮತ್ತು ಚೀನಾ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದೂ ಎಂದು ಅದು ತಿಳಿಸಿದೆ(US Report).
ಅಮೆರಿಕ ಗುಪ್ತಚರ ಸಮುದಾಯವು ವಾರ್ಷಿಕ ಬೆದರಿಕೆ ಅಂದಾಜು ಕಾರ್ಯಯೋಜನೆಯ ಭಾಗವಾಗಿ ಈ ಅಂದಾಜನ್ನು ಸಿದ್ಧಪಡಿಸಲಾಗಿದೆ. ಈ ವರದಿಯನ್ನು ರಾಷ್ಟ್ರೀಯ ಬೇಹುಗಾರಿಕಾ ನಿರ್ದೇಶಕರು ಕಾಂಗ್ರೆಸ್ನಿಯಲ್ ಹೀಯರಿಂಗ್ ವೇಳೆ, ಅಮೆರಿಕದ ಕಾಂಗ್ರೆಸ್‌ಗೆ ಸಲ್ಲಿಸುತ್ತಾರೆ.
ಭಾರತ ಮತ್ತು ಚೀನಾ ದ್ವಿಪಕ್ಷೀಯ ಗಡಿ ಮಾತುಕತೆಯಲ್ಲಿ ತೊಡಗಿವೆ. ಗಡಿ ವಿವಾದಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಹೀಗಿದ್ದಾಗ್ಯೂ, 2020ರಲ್ಲಿ ಗಡಿಯಲ್ಲಿ ನಡೆದ ಸಂಘರ್ಷದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗುತ್ತಿದೆ. ಇತ್ತೀಚಿನ ದಶಕದಲ್ಲೇ ಇದು ಅತ್ಯಂತ ಗಂಭೀರ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Pakistan economic crisis : ಪಾಕಿಸ್ತಾನದಿಂದ ಸಾಲಕ್ಕಾಗಿ 75 ವರ್ಷಗಳಲ್ಲಿ 23 ಸಲ ಐಎಂಎಫ್‌ಗೆ ಮೊರೆ
ವಿವಾದಿತ ಗುಡಿಗುಂಟ ಭಾರತ ಮತ್ತು ಚೀನಾಗಳು ತಮ್ಮ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತೇವೆ. ಅಣ್ವಸ್ತ್ರ ಸಜ್ಜಿತ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಹೆಚ್ಚಾಗುವ ಸಾಧ್ಯತೆಗಳಿವೆ. ಇದು ನೇರವಾಗಿ ಅಮೆರಿಕ ವ್ಯಕ್ತಿಗಳು ಮತ್ತು ಅಮೆರಿಕ ಹಿತಾಸಕ್ತಿಗೆ ಬೆದರಿಕೆಯೊಡ್ಡಬಹುದು. ಹಾಗಾಗಿ, ಅಮೆರಿಕವು ಮಧ್ಯ ಪ್ರವೇಶಿಸಿಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.