US Report: ಪಾಕ್ ಪ್ರಚೋದಿಸಿದರೆ ಸೇನೆಯಿಂದಲೇ ಉತ್ತರ ನೀಡಲು ಭಾರತ ಸಜ್ಜು! - Vistara News

ದೇಶ

US Report: ಪಾಕ್ ಪ್ರಚೋದಿಸಿದರೆ ಸೇನೆಯಿಂದಲೇ ಉತ್ತರ ನೀಡಲು ಭಾರತ ಸಜ್ಜು!

US Reoport: ಒಂದೊಮ್ಮೆ ಪಾಕಿಸ್ತಾನವು ಏನಾದರೂ ಪ್ರಚೋದಿಸಿದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೇನಾ ಕಾರ್ಯಾಚರಣೆಯ ಮೂಲಕವೇ ಉತ್ತರ ನೀಡಲು ಸಜ್ಜಾಗಿದೆ ಎಂದು ಅಮೆರಿಕದ ಗುಪ್ತಚರ ಸಮುದಾಯದ ವರದಿಯಲ್ಲಿ ತಿಳಿಸಲಾಗಿದೆ.

VISTARANEWS.COM


on

If Pakistan provokes, India is ready to answer with the army, Says US report
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಒಂದು ವೇಳೆ ಪಾಕಿಸ್ತಾನವು ಏನಾದರೂ ಪ್ರಚೋದಿಸಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೇನಾ ಕಾರ್ಯಾಚರಣೆ ಮೂಲಕ ಪ್ರತ್ಯುತ್ತರ ನೀಡಲಿದೆ ಎಂದು ಅಮೆರಿಕದ ಗುಪ್ತಚರ ಸಮುದಾಯದವು ಎಚ್ಚರಿಸಿದೆ. ಅಲ್ಲದೇ, ಪಾಕಿಸ್ತಾನ-ಭಾರತ ಮತ್ತು ಚೀನಾ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದೂ ಎಂದು ಅದು ತಿಳಿಸಿದೆ(US Report).

ಅಮೆರಿಕ ಗುಪ್ತಚರ ಸಮುದಾಯವು ವಾರ್ಷಿಕ ಬೆದರಿಕೆ ಅಂದಾಜು ಕಾರ್ಯಯೋಜನೆಯ ಭಾಗವಾಗಿ ಈ ಅಂದಾಜನ್ನು ಸಿದ್ಧಪಡಿಸಲಾಗಿದೆ. ಈ ವರದಿಯನ್ನು ರಾಷ್ಟ್ರೀಯ ಬೇಹುಗಾರಿಕಾ ನಿರ್ದೇಶಕರು ಕಾಂಗ್ರೆಸ್ನಿಯಲ್ ಹೀಯರಿಂಗ್ ವೇಳೆ, ಅಮೆರಿಕದ ಕಾಂಗ್ರೆಸ್‌ಗೆ ಸಲ್ಲಿಸುತ್ತಾರೆ.

ಭಾರತ ಮತ್ತು ಚೀನಾ ದ್ವಿಪಕ್ಷೀಯ ಗಡಿ ಮಾತುಕತೆಯಲ್ಲಿ ತೊಡಗಿವೆ. ಗಡಿ ವಿವಾದಗಳನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಹೀಗಿದ್ದಾಗ್ಯೂ, 2020ರಲ್ಲಿ ಗಡಿಯಲ್ಲಿ ನಡೆದ ಸಂಘರ್ಷದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗುತ್ತಿದೆ. ಇತ್ತೀಚಿನ ದಶಕದಲ್ಲೇ ಇದು ಅತ್ಯಂತ ಗಂಭೀರ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Pakistan economic crisis : ಪಾಕಿಸ್ತಾನದಿಂದ ಸಾಲಕ್ಕಾಗಿ 75 ವರ್ಷಗಳಲ್ಲಿ 23 ಸಲ ಐಎಂಎಫ್‌ಗೆ ಮೊರೆ

ವಿವಾದಿತ ಗುಡಿಗುಂಟ ಭಾರತ ಮತ್ತು ಚೀನಾಗಳು ತಮ್ಮ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತೇವೆ. ಅಣ್ವಸ್ತ್ರ ಸಜ್ಜಿತ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಹೆಚ್ಚಾಗುವ ಸಾಧ್ಯತೆಗಳಿವೆ. ಇದು ನೇರವಾಗಿ ಅಮೆರಿಕ ವ್ಯಕ್ತಿಗಳು ಮತ್ತು ಅಮೆರಿಕ ಹಿತಾಸಕ್ತಿಗೆ ಬೆದರಿಕೆಯೊಡ್ಡಬಹುದು. ಹಾಗಾಗಿ, ಅಮೆರಿಕವು ಮಧ್ಯ ಪ್ರವೇಶಿಸಿಬೇಕಾದ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Lok sabha Election 2024: ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ ಈ ಸಂದರ್ಭದಲ್ಲಿ ಅದು ಹಲವು ಬಾರಿ ಎಡವಿದ್ದರೂ ಮತ್ತೆ ಹಲವು ಬಾರಿ ಪುಟಿದು ಎದ್ದೇಳುವ ಪ್ರಯತ್ನದಲ್ಲಿ ಯುಶಸ್ವಿಯಾಗಿದೆ. ಇದರಲ್ಲಿ ಈ ಬಾರಿ ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ ಹಲವಾರು ಅಂಶಗಳಿವೆ ಅವು ಯಾವುದು ಗೊತ್ತೇ? ಇಲ್ಲಿದೆ ವಿಸ್ತೃತ ವಿಶ್ಲೇಷಣೆ.

VISTARANEWS.COM


on

By

Lok sabha election-2024
Koo

ದೇಶಾದ್ಯಂತ ಏಳು ಹಂತದಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯ (Lok sabha election-2024) ಮೊದಲ ಹಂತದ ಮತದಾನ (voting) ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ. ವಿಶ್ವದ ಅತಿ ದೊಡ್ಡ ಚುನಾವಣೆಯಲ್ಲಿ ಸುಮಾರು 100 ಕೋಟಿ ಭಾರತೀಯರು (indians) ಮತ ಚಲಾಯಿಸಲಿದ್ದಾರೆ.

ಚುನಾವಣೆ ಪೂರ್ವದಲ್ಲೇ ಸಾಕಷ್ಟು ಸಮೀಕ್ಷೆಗಳನ್ನು ನಡೆಸಲಾಗಿದ್ದು, ಈ ಬಾರಿಯೂ ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಈ ಬಾರಿಯೂ ಬಿಜೆಪಿ ಗೆಲುವು ದಾಖಲಿಸಿದರೆ ಸತತ ಮೂರನೇ ಅವಧಿಗೆ ಅಧಿಕಾರ ಬಿಜೆಪಿ ಪಾಲಾದಂತಾಗುತ್ತದೆ.

ಏಪ್ರಿಲ್ 19ರಿಂದ ಜೂನ್ 1ರವರೆಗೆ ನಡೆಯಲಿರುವ ಏಳು ಹಂತಗಳಲ್ಲಿಮತದಾನದ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ 543 ಸ್ಥಾನಗಳಿಗೆ ನಡೆಯುವ ಚುನಾವಣೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿವೆ.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

1. ಆರ್ಥಿಕತೆಯ ಪ್ರಗತಿ

ಮಾರ್ಚ್ 31ರಂದು ಆರ್ಥಿಕ ವರ್ಷ ಕೊನೆಯಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಸುಮಾರು ಶೇ. 8ರಷ್ಟು ಬೆಳವಣಿಗೆಯಾಗಿದೆ. ಇದು ಅತ್ಯಂತ ವೇಗವಾದ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆಯು ಮೊದಲಿಗಿಂತ ಐದು ಸ್ಥಾನಗಳನ್ನು ಜಿಗಿದು ವಿಶ್ವದಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಈ ಬಾರಿ ಚುನಾವಣೆಯಲ್ಲಿ ತಾವು ಗೆದ್ದರೆ ಅದನ್ನು ಮೂರನೇ ಸ್ಥಾನಕ್ಕೆ ಏರಿಸುವ ಭರವಸೆ ನೀಡಿದ್ದಾರೆ.

2. ಅಭಿವೃದ್ಧಿಯ ತೀವ್ರಗತಿ

ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಪ್ರಮುಖ ನಗರಗಳಾದ ನವದೆಹಲಿ ಮತ್ತು ಮುಂಬಯಿ ಸೇರಿದಂತೆ ದೇಶದಾದ್ಯಂತ ಇರುವ ರಸ್ತೆಗಳು ಮತ್ತು ಸೇತುವೆಗಳು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಅಭಿವೃದ್ಧಿ ಕಾರ್ಯಗಳು ಗ್ರಾಮಾಂತರಕ್ಕಿಂತ ನಗರಗಳಲ್ಲೇ ಹೆಚ್ಚು ಕೇಂದ್ರಿತವಾಗಿವೆ ಎಂಬ ಆರೋಪವೂ ಇದೆ.


3. ಹಣದುಬ್ಬರ, ಬೆಲೆ ಏರಿಕೆ

2021-22 ರಲ್ಲಿ ಶೇ.5.5ರಷ್ಟು ಇದ್ದ ಹಣದುಬ್ಬರ 2022- 23ರಲ್ಲಿ ಶೇ. 6.7ಕ್ಕೆ ಏರಿದೆ. ಕೇವಲ ಫೆಬ್ರವರಿಯಲ್ಲಿ ಹಣದುಬ್ಬರ ಶೇ. 5.09 ರಷ್ಟು ಆಗಿತ್ತು. ಬೆಲೆ ಏರಿಕೆ ವಿಷಯ ಕೂಡ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.

4. ಮೋದಿ ಕಲ್ಯಾಣ ನೀತಿಗಳು

ಕೋವಿಡ್ ಸಾಂಕ್ರಾಮಿಕದ ಬಳಿಕ ಸರ್ಕಾರವು ಭಾರತದ 1.42 ಶತಕೋಟಿ ಜನರಲ್ಲಿ 814 ಮಿಲಿಯನ್ ಜನರಿಗೆ ಉಚಿತ ಆಹಾರ ಪಡಿತರವನ್ನು ನೀಡುತ್ತಿದೆ. ಭಾರತದ ಜನಸಂಖ್ಯೆಯ ಸುಮಾರು ಶೇ.60ರಷ್ಟು ಜನರಿಗೆ ಉಚಿತ ಸಿರಿಧಾನ್ಯಗಳನ್ನು ಸರ್ಕಾರ ಒದಗಿಸುತ್ತಿರುವುದು ದೇಶದ ಅಸಮ ಆರ್ಥಿಕ ಬೆಳವಣಿಗೆಯ ಸಂಕೇತ ಎನ್ನಲಾಗುತ್ತದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಭಾರತದ ಶ್ರೀಮಂತ ನಾಗರಿಕರು ಶೇ.40.1ರಷ್ಟು ಸಂಪತ್ತು ಹೊಂದಿದ್ದರು. ಇದು 1961ರ ಬಳಿಕ ಅತ್ಯಧಿಕವಾಗಿದೆ.

5. ಮಹಿಳೆಯರ ಪ್ರಭಾವ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಮಹಿಳಾ ಮತದಾರರನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಹಣ ಹಂಚಿಕೆ, ಪೈಪ್‌ಲೈನ್ ಮೂಲಕ ಮನೆಮನೆಗೆ ನೀರು, 24/7 ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕಗಳಂತಹ ಗೃಹೋಪಯೋಗಿ ಸೌಲಭ್ಯಗಳ ಮೂಲಕ ಅವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಇವು ದೇಶದ ಮಹಿಳೆಯರು ಮೋದಿ ಆಡಳಿತ ಕುರಿತು ಸಕಾರಾತ್ಮಕ ಅಭಿಪ್ರಾಯ ಹೊಂದಲು ಕಾರಣವಾಗಿದೆ.


6. ಧಾರ್ಮಿಕ ಪ್ರಭಾವ

ಬಿಜೆಪಿ ಸುಮಾರು 35 ವರ್ಷಗಳ ಹಿಂದೆ ನೀಡಿದ ಭರವಸೆಯನ್ನು ಈಗ ಈಡೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಮೊಘಲ್ ದೊರೆ ಬಾಬರ್ ನಿಂದ ಕೆಡವಲ್ಪಟ್ಟ ದೇವಾಲಯ ಈಗ ಪುನರ್ ನಿರ್ಮಾಣಗೊಂಡಿದೆ.

ಅಲ್ಲದೇ ಪ್ರಧಾನಿಯವರು ದೇಶಾದ್ಯಂತ ಇರುವ ಹಿಂದೂ ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿಗೆ ಹೆಚ್ಚು ಜನ ಬೆಂಬಲವನ್ನು ನೀಡಬಲ್ಲದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೋದಿಯವರ ಸರ್ಕಾರವು ಮುಸ್ಲಿಂ ಶಾಲೆಗಳು ಅಥವಾ ಮದರಸಾಗಳಿಗೆ ಬೆಂಬಲವನ್ನು ಕೊನೆಗೊಳಿಸಿದೆ ಮತ್ತು ಕೆಲವು ಬಿಜೆಪಿ ರಾಜ್ಯಗಳು ಅವುಗಳಲ್ಲಿ ಹಲವನ್ನು ಮುಚ್ಚಿವೆ. ಆದರೆ ಮೋದಿ ಅವರು ಪೌರತ್ವ ಕಾನೂನನ್ನು ಜಾರಿಗೆ ತಂದು ಹೊರದೇಶಗಳಿಂದ ವಲಸೆ ಬಂದಿರುವ ಅನೇಕರಿಗೆ ಸಹಾಯ ಮಾಡಿದೆ.

7. ಭ್ರಷ್ಟಾಚಾರ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಳೆದ ಒಂದು ದಶಕದಲ್ಲಿ ವಿರೋಧ ಪಕ್ಷದ ಸುಮಾರು 150 ರಾಜಕಾರಣಿಗಳನ್ನು ಕರೆಸಿ, ಪ್ರಶ್ನಿಸಿದೆ. ಹಲವಾರು ಅಧಿಕಾರಿಗಳು, ರಾಜಕಾರಣಿಗಳ ಆಸ್ತಿ ಮೇಲೆ ದಾಳಿ ನಡೆಸಿ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ರಾಜಕೀಯ ಲಾಭಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಳೆದ 10 ವರ್ಷಗಳ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಹೀಗಾಗಿ ಈ ಅಂಶವೂ ಈ ಬಾರಿಯ ಚುನಾವಣೆ ಮೇಲೆ ಮಹತ್ವದ ಪ್ರಭಾವ ಬೀರಬಲ್ಲದು.

8. ನಿರುದ್ಯೋಗ

2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರಿಗೆ ಹತ್ತಾರು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದು, ಇದರಲ್ಲಿ ಅರ್ಧದಷ್ಟು ಪೂರೈಕೆ ಮಾಡಲೂ ಸಾಧ್ಯವಾಗಿಲ್ಲ ಎಂಬ ಆರೋಪ ಇದೆ. ನಿರುದ್ಯೋಗ ದರವು ಫೆಬ್ರವರಿಯಲ್ಲಿ ಶೇ. 8ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 2023ರ ಮಾರ್ಚ್ ನಿಂದ ನಿರುದ್ಯೋಗ ದರವು ಶೇ.5.4ಕ್ಕೆ ಏರಿದೆ. ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು 2013-14 ರಲ್ಲಿ ಇದು ಶೇ. 4.9ರಷ್ಟಿತ್ತು.

15- 29 ವರ್ಷದ ಸುಮಾರು ಶೇ. 16ರಷ್ಟು ನಗರ ಯುವಕರು 2022-23 ರಲ್ಲಿ ಕಳಪೆ ಕೌಶಲ್ಯ ಮತ್ತು ಗುಣಮಟ್ಟದ ಉದ್ಯೋಗಗಳ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿದೆ. ಈ ವಿಷಯ ಮೋದಿ ಆಡಳಿತಕ್ಕೆ ನಕಾರಾತ್ಮಕವಾಗಿದೆ. ಪ್ರತಿಪಕ್ಷಗಳ ಪ್ರಬಲ ಅಸ್ತ್ರವಾಗಿದೆ.


9. ರೈತರ ಪ್ರತಿಭಟನೆ

ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಅದರ ಲಕ್ಷಣ ಕಾಣುತ್ತಿಲ್ಲ. ವಿಶೇಷವಾಗಿ ರೈತರು ಪ್ರತಿಭಟನೆ ಇದಕ್ಕೆ ಸಾಕ್ಷಿಯಾಗಿದೆ. ದೇಶದ ರೈತರ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಲು ಮೋದಿಗಿನ್ನೂ ಸಾಧ್ಯವಾಗಿಲ್ಲ.

10. ಜಾಗತಿಕ ಸ್ಥಾನಮಾನ

ಕಳೆದ ವರ್ಷ ಜಿ 20 ಶೃಂಗಸಭೆಯನ್ನು ಆಯೋಜಿಸಿರುವುದು, ರಷ್ಯಾದ ದಾಳಿಯ ವೇಳೆ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಸಾಧನೆಯಾಗಿದೆ. ಇದರಿಂದ ದೇಶಕ್ಕೆ ಸಿಗುತ್ತಿರುವ ಆರ್ಥಿಕತೆ ಬೆಂಬಲದೊಂದಿಗೆ ಭಾರತದ ಏರುತ್ತಿರುವ ಜಾಗತಿಕ ಸ್ಥಾನಮಾನ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.

Continue Reading

ಕಾಲಿವುಡ್

Lok Sabha Election 2024: ಚೆನ್ನೈನಲ್ಲಿ ಮತ ಚಲಾಯಿಸಿದ ರಜನಿಕಾಂತ್​, ಧನುಷ್, ಕಮಲ್ ಹಾಸನ್, ವಿಜಯ್‌!

Lok Sabha Election 2024: ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಮತಗಟ್ಟೆಯಿಂದ ನಿರ್ಗಮಿಸುವಾಗ ಅಭಿಮಾನಿಗಳು ಅವರನ್ನು ಗುಂಪುಗೂಡಿದ್ದಾರೆ. ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಮತ ಚಲಾಯಿಸಿದರು.

VISTARANEWS.COM


on

Lok Sabha Election 2024 Rajinikanth Kamal Haasan Dhanush Vijay Sethupathi vote in Chennai
Koo

ಚೆನ್ನೈ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಇಂದು (ಏ.19) ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (voting) ಆರಂಭವಾಗಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಮುಂಜಾನೆ 7 ಗಂಟೆಗೇ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ಸಾಹದ ಪ್ರತಿಕ್ರಿಯೆ ಕಂಡುಬಂತು. ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಮತ್ತು ಕಮಲ್ ಹಾಸನ್ (Kamal Haasan) ಏಪ್ರಿಲ್ 19 ರಂದು ಚೆನ್ನೈನ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ನಟ ಧನುಷ್ ಅವರು ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಮತ ಚಲಾಯಿಸಿದರು. ವಿಜಯ್ ಸೇತುಪತಿ ಕಿಲ್ಪಾಕ್‌ನ (Vijay Sethupathi vote in Chennai) ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಮತಗಟ್ಟೆಯಿಂದ ನಿರ್ಗಮಿಸುವಾಗ ಅಭಿಮಾನಿಗಳು ಅವರನ್ನು ಗುಂಪುಗೂಡಿದ್ದಾರೆ. ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಮತ ಚಲಾಯಿಸಿದರು.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಇಂದು ಮತದಾನ ಮಾಡಲಿರುವ ರಾಜ್ಯಗಳು

ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 2 ಕ್ಷೇತ್ರಗಳು
ಅರುಣಾಚಲ ಪ್ರದೇಶದ 2 ಕ್ಷೇತ್ರಗಳು
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

21 ರಾಜ್ಯಗಳ 102 ಕ್ಷೇತ್ರಗಳಲ್ಲಿ 11 ಎಸ್ಟಿ, 18 ಎಸ್ಸಿ, 73 ಸಾಮಾನ್ಯ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 1.87 ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, 16.63 ಕೋಟಿ ಮತದಾರರಿಂದ ಮತದಾನ ನಡೆಯಲಿದೆ. ಇವರಲ್ಲಿ 8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿ ಮತದಾರರು ಇದ್ದಾರೆ. 35.67 ಲಕ್ಷ ಯುವ ಸಮೂಹದಿಂದ ಮೊದಲ ಸಲ ಓಟಿಂಗ್ ನಡೆಯುತ್ತಿದೆ. 3.51 ಕೋಟಿ ಯುವ ಮತದಾರರು ಹಾಗೂ 14.14 ಲಕ್ಷ 85+ ವಯಸ್ಸಿನ ಮತದಾರರು ಇದ್ದಾರೆ.

ಕಣದಲ್ಲಿ 1625 ಅಭ್ಯರ್ಥಿಗಳು, 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿದೆ. 127 ಸಾಮಾನ್ಯ, 67 ಪೊಲೀಸ್, 167 ಇತರೆ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರ ನೇಮಕವಾಗಿದೆ.

Continue Reading

ಪ್ರವಾಸ

Summer Tour: ಹಚ್ಚ ಹಸುರಿನ ಪ್ರಶಾಂತ ನಗರ ಶಿಲ್ಲಾಂಗ್; ಬೇಸಿಗೆ ಪ್ರವಾಸಕ್ಕೆ ಸೂಕ್ತ

Summer Tour: ಭಾರತದ ಇತರೆ ರಾಜಧಾನಿಗಳಲ್ಲಿರುವಂತೆ ಹೆಚ್ಚಿನ ಜನದಟ್ಟಣೆಯಿಲ್ಲದ ಸುಂದರ ನಗರ ಶಿಲ್ಲಾಂಗ್. ಮೋಡಿ ಮಾಡುವ ಹಲವು ಸುಪ್ರಸಿದ್ದ ತಾಣಗಳನ್ನು ಹೊಂದಿರುವ ಶಿಲ್ಲಾಂಗ್ ದಟ್ಟ ಅರಣ್ಯದ ನಡುವೆ ಕುಳಿತಿದೆಯೇನೋ ಎಂಬಂತೆ ಭಾಸವಾಗುತ್ತದೆ.

VISTARANEWS.COM


on

By

summer trip
Koo

ಜಗತ್ತಿನಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿಯಿಂದ (cherrapunji) 55 ಕಿ.ಮೀ ದೂರದಲ್ಲಿರುವ ಮೇಘಾಲಯದ (meghalaya) ರಾಜಧಾನಿ ಶಿಲ್ಲಾಂಗ್ (Shillong) ತನ್ನ ನೈಸರ್ಗಿಕ ಸೌಂದರ್ಯದಿಂದ ದೇಶ- ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಬೇಸಗೆಯಲ್ಲಿ (Summer Tour) ಹಸುರು ಬೆಟ್ಟಗಳ ನಡುವೆ ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದ್ದರೆ ಶಿಲ್ಲಾಂಗ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಶಿಲ್ಲಾಂಗ್ ಗೆ ಭೇಟಿ ನೀಡಿದರೆ ಇಲ್ಲಿ ತಪ್ಪಿಸಿಕೊಳ್ಳಬಾರದ 9 ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ. ಹಚ್ಚಹಸುರಿನ ಬೆಟ್ಟಗಳ ನಡುವೆ ನೆಲೆಯಾಗಿರುವ ಶಿಲ್ಲಾಂಗ್ ನೈಸರ್ಗಿಕ ಔದಾರ್ಯ ಮತ್ತು ರೋಮಾಂಚಕ ಸಂಸ್ಕೃತಿಯಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲೇ ಜಲಪಾತ, ಸರೋವರ, ವಸ್ತುಸಂಗ್ರಹಾಲಯ, ಮಾರುಕಟ್ಟೆಗಳು ಸೇರಿದಂತೆ ಇನ್ನು ಹಲವು ಆಕರ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಈ ಒಂಬತ್ತು ಮುಖ್ಯ ಸ್ಥಳಗಳಿವೆ.

ಇದನ್ನೂ ಓದಿ: Summer Tour: ಬಿರು ಬೇಸಿಗೆಯಲ್ಲೂ ತಂಪಾದ ಅನುಭವ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು

ಶಿಲ್ಲಾಂಗ್ ಶಿಖರ

ಶಿಲ್ಲಾಂಗ್ ಶಿಖರದಿಂದ ಪನೋರಮಾಗಳು ರುದ್ರರಮಣೀಯ ಕಣಿವೆಯ ವೀಕ್ಷಣೆಗಾಗಿ ನಗರದ ಅತ್ಯುನ್ನತ ಕೇಂದ್ರ. ಇಲ್ಲಿಗೆ ಭೇಟಿ ನೀಡಿದ ವೇಳೆ ಮೊದಲು ಶಿಲ್ಲಾಂಗ್ ಪೀಕ್ ಗೆ ಭೇಟಿ ನೀಡಿ. 1965 ಮೀಟರ್ ಎತ್ತರದಲ್ಲಿರುವ ಇದು ಕೆಳಗಿನ ಹಸಿರು ಬೆಟ್ಟಗಳು ಮತ್ತು ಸರೋವರದ ದೃಶ್ಯದಿಂದ ಎಲ್ಲರನ್ನೂ ಬೆರಗುಗೊಳಿಸುತ್ತದೆ ಸಮೀಪದಲ್ಲೇ ಕೆಫೆಟೇರಿಯಾಗಲಿವೆ. ನಗರ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಹತ್ತಿರದಲ್ಲಿರುವ ಕೆಫೆಯಲ್ಲಿ ಶುಂಠಿ, ನಿಂಬೆ ಚಹಾ ಮತ್ತು ಜಿಲೇಬಿ ಅನ್ನು ಸವಿಯಬಹುದು.


ಉಮಿಯಂ ಸರೋವರ

ಶಿಲ್ಲಾಂಗ್‌ನಿಂದ ಉತ್ತರಕ್ಕೆ ಸುಮಾರು 15 ಕಿ.ಮೀ. ದೂರದಲ್ಲಿ ಹಸುರಿನಿಂದ ಕೂಡಿದ ಬೆಟ್ಟಗಳ ನಡುವೆ ನೆಲೆಸಿರುವ ಬಾರಾಪಾನಿ ಸರೋವರ ಎಂದೂ ಕರೆಯಲ್ಪಡುವ ಸಮ್ಮೋಹನಗೊಳಿಸುವ ಉಮಿಯಂ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಮಂಜಿನಿಂದ ಆವೃತವಾದ ಬೆಟ್ಟದ ಸಿಲ್ಹೌಟ್‌ಗಳು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ದಡಗಳಲ್ಲಿ ಸಾಕಷ್ಟು ರೆಸಾರ್ಟ್ ಗಳು ಇರುವುದರಿಂದ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು. ಇದಕ್ಕೆ ಹತ್ತಿರವಾಗಿ ಲುಮ್ ನೆಹರು ಪಾರ್ಕ್ ಇದೆ.


ಆನೆ ಜಲಪಾತ

ನೈಸರ್ಗಿಕ ಸೌಂದರ್ಯದ ನಡುವಿನ ಮೂರು-ಹಂತದ ಕ್ಯಾಸ್ಕೇಡಿಂಗ್ ಎಲಿಫೆಂಟ್ ಫಾಲ್ಸ್‌ ಅತ್ಯಾಕರ್ಷಕವಾಗಿದೆ. ಹಸಿರು ಬಂಡೆಗಳ ಕೆಳಗೆ ನೈಸರ್ಗಿಕ ಕೊಳಕ್ಕೆ ಧುಮುಕುತ್ತವೆ. ಆನೆಯ ಸೊಂಡಿಲನ್ನು ಹೋಲುವ ಹರಿವು ಅದಕ್ಕೆ ವಿಶಿಷ್ಟವಾದ ಹೆಸರನ್ನು ನೀಡಿದೆ. ಸೊಂಪಾದ ಅರಣ್ಯದ ನಡುವೆ ಪ್ರಾಚೀನ ನೋಟಗಳು ಮೋಡಿಮಾಡುತ್ತವೆ. 49 ಅಡಿ ಎತ್ತರವಿರುವ ಈ ಜಲಪಾತ ಶಿಲ್ಲಾಂಗ್‌ನಿಂದ 12 ಕಿ.ಮೀ. ದೂರದಲ್ಲಿದೆ.


ಡಾನ್ ಬಾಸ್ಕೋ ಮ್ಯೂಸಿಯಂ

ಅಸ್ಸಾಂ ಟ್ರಿಬ್ಯೂನ್ ಪ್ರೆಸ್ ಬಳಿಯ ಡಾನ್ ಬಾಸ್ಕೋ ಮ್ಯೂಸಿಯಂನಲ್ಲಿರುವ ಈಶಾನ್ಯ ಭಾರತದ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲಾಕೃತಿಗಳು, ವೇಷಭೂಷಣಗಳು, ಆಯುಧಗಳು, ಸಂಗೀತ ವಾದ್ಯಗಳನ್ನು ಛಾಯಾಚಿತ್ರಗಳು ಮತ್ತು ಖಾಸಿ, ಗಾರೋ ಮತ್ತು ಜೈನ್ತಿಯಂತಹ ಜನಾಂಗೀಯ ಸಮುದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ. ಇಲ್ಲಿಗೆ ಬೆಳಗ್ಗೆ 9 ರಿಂದ 5.30 ರವರೆಗೆ ಭೇಟಿ ನೀಡಬಹುದು. ಭಾನುವಾರದಂದು ಇದನ್ನು ಮುಚ್ಚಲಾಗುತ್ತದೆ.

ಪ್ರೆಟಿ ವಾರ್ಡ್‌ನ ಸರೋವರ

ಪೆಡಲ್ ಬೋಟಿಂಗ್ ಇಷ್ಟಪಡುವವರಿಗೆ ಮೇಘಾಲಯದ ಬೊಟಾನಿಕಲ್ ಗಾರ್ಡನ್ಸ್‌ನ ಮಧ್ಯ ಇರುವ ವಾರ್ಡ್‌ನ ಸರೋವರ ಮೋಡಿ ಮಾಡುತ್ತದೆ. ಅರಳುತ್ತಿರುವ ನೈದಿಲೆಗಳು, ಸುತ್ತಮುತ್ತಲಿನ ಆರ್ಕಿಡ್‌ಗಳು ಮತ್ತು ಪೈನ್ ಮರಗಳು ಸುಂದರ ಪ್ರಶಾಂತ ವಾತಾವರಣದ ಸವಿ ಉಣಿಸುವುದು. 1891 ರಲ್ಲಿ ಬ್ರಿಟಿಷರು ನಿರ್ಮಿಸಿದ್ದು, ಸುಂದರವಾದ ಉದ್ಯಾನ, ಕೆಫೆಗಳು ಇಲ್ಲಿನ ಆಕರ್ಷಣೆಯಾಗಿದೆ.

ಸೇಕ್ರೆಡ್ ಮಾವ್‌ಫ್ಲಾಂಗ್ ವುಡ್

ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಾವ್‌ಫ್ಲಾಂಗ್ ಹಳ್ಳಿಯಲ್ಲಿ ದಟ್ಟವಾದ ತೋಪುಗಳ ನಡುವೆ ನಡೆದಾಡುವ ಸುಂದರ ಅನುಭೂತಿಯನ್ನು ನೀಡುತ್ತದೆ. ಇದು ಸ್ಥಳೀಯ ಖಾಸಿ ದೇವತೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇಲ್ಲಿ ಪುರಾತನ ಮರಗಳು, ಅಪರೂಪದ ಸಸ್ಯಗಳನ್ನು ಕಾಣಬಹುದು. ಶಿಲ್ಲಾಂಗ್‌ನಿಂದ 25 ಕಿ.ಮೀ. ದೂರದಲ್ಲಿದ್ದು, ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ.

ಪೊಲೀಸ್ ಬಜಾರ್‌

ಶಾಪಿಂಗ್ ಪ್ರಿಯರಿಗಾಗಿ ಇಲ್ಲಿರುವ ಫಂಕಿ ಕೆಫೆಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಥಳೀಯ ಕರಕುಶಲ ಮಳಿಗೆಳು ಅತ್ಯಾಕರ್ಷಕವಾಗಿದೆ. ಹಂದಿಮಾಂಸದ ಮೊಮೊಗಳು, ದೋಸೆಗಳು ಮತ್ತು ಬಬಲ್ ಚಹಾದೊಂದಿಗೆ ಜನಾಂಗೀಯ ಬುಡಕಟ್ಟು ಆಭರಣಗಳು, ಬಿದಿರಿನ ಕರಕುಶಲ ವಸ್ತುಗಳು ಮತ್ತು ಟ್ರೆಂಡಿ ಜಾಕೆಟ್‌ಗಳನ್ನು ಖರೀದಿ ಮಾಡಬಹುದು. ಇಲ್ಲಿ ಸಾಂಪ್ರದಾಯಿಕ ಉಡುಪುಗಳು, ಕರಕುಶಲ ವಸ್ತುಗಳು ಸಿಗುತ್ತವೆ.


ಶಿಲ್ಲಾಂಗ್ ಕೋರ್ಸ್‌

ಸುಂದರವಾದ ಶಿಲ್ಲಾಂಗ್ ಗಾಲ್ಫ್ ಕೋರ್ಸ್‌ನಲ್ಲಿ ಒಂದು ದಿನ ಸ್ವಿಂಗ್ ಅಭ್ಯಾಸ ಮಾಡಬಹುದು. ನೀಲಿ ಆಕಾಶದ ಕೆಳಗೆ ಪೈನ್ ಮರಗಳಿಂದ ಸುತ್ತುವರೆದಿರುವ ಇದು 1898 ರಲ್ಲಿ ಟಿಷ್ ನಾಗರಿಕ ಸೇವಕರಿಂದ ಸ್ಥಾಪಿಸಲಾದ ಭಾರತದ ಅತ್ಯಂತ ಹಳೆಯ ಗಾಲ್ಫ್ ಕೋರ್ಸ್ ಎನ್ನಲಾಗುತ್ತದೆ.


ಕ್ಯಾಥೆಡ್ರಲ್

ಶಿಲ್ಲಾಂಗ್ ನಲ್ಲಿ ಡಾನ್ ಬಾಸ್ಕೊ ಸ್ಕ್ವೇರ್ ಬಳಿಯ ಭವ್ಯವಾದ ಮತ್ತು ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರುವ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್ ಕ್ಯಾಥೆಡ್ರಲ್‌ ಈಶಾನ್ಯದಲ್ಲಿರುವ ಅತ್ಯಂತ ಹಳೆಯ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದಾಗಿದೆ. 1936ರಲ್ಲಿ ಇದನ್ನು ನಿರ್ಮಿಸಲಾಗಿದ್ದು, 1951 ರಲ್ಲಿ ವ್ಯಾಟಿಕನ್‌ನಿಂದ ಪವಿತ್ರಗೊಳಿಸಲಾಯಿತು. ಬಣ್ಣದ ಗಾಜಿನ ಫಲಕಗಳು, ಅವಳಿ ಗಂಟೆ ಗೋಪುರಗಳು ಇಲ್ಲಿನ ಆಕರ್ಷಣೆ.

Continue Reading

ಪ್ರಮುಖ ಸುದ್ದಿ

Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

Indian Navy: ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾದ ತ್ರಿಪಾಠಿ ಅವರು ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ಮುಂಬೈನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪ್ರಧಾನ ಯುದ್ಧ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

VISTARANEWS.COM


on

indian navy chief of naval staff dinesh tripathi
Koo

ಹೊಸದಿಲ್ಲಿ: ವೈಸ್ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ (Vice Admiral Dinesh Tripathi) ಅವರನ್ನು ನೌಕಾಪಡೆ (Indian Navy) ಮುಂದಿನ ಮುಖ್ಯಸ್ಥರನ್ನಾಗಿ (Chief of Naval Staff) ಕೇಂದ್ರ ಸರಕಾರ ನೇಮಿಸಿದೆ. ಪ್ರಸ್ತುತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ (Admiral R. Harikumar) ಅವರು ಸೇವೆಯಿಂದ ನಿವೃತ್ತರಾದ ನಂತರ ಅವರು ಏಪ್ರಿಲ್ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮೇ 15, 1964ರಂದು ಜನಿಸಿದ ತ್ರಿಪಾಠಿ, ಖಡಕ್‌ವಾಸ್ಲಾದ ಸೈನಿಕ್ ಸ್ಕೂಲ್ ರೇವಾ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರನ್ನು 1985ರಲ್ಲಿ ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಯಿತು.

ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾದ ತ್ರಿಪಾಠಿ ಅವರು ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಸಿಗ್ನಲ್ ಸಂವಹನ ಅಧಿಕಾರಿ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ INS ಮುಂಬೈನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪ್ರಧಾನ ಯುದ್ಧ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ವೈಸ್ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರ ಸಮುದ್ರ ಕಮಾಂಡ್‌ಗಳಲ್ಲಿ ಐಎನ್‌ಎಸ್ ವಿನಾಶ್, ಕಿರ್ಚ್ ಮತ್ತು ತ್ರಿಶೂಲ್ ಸೇರಿವೆ. ಸುಮಾರು 39 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ, ಅವರು ಮುಂಬೈನಲ್ಲಿ ವೆಸ್ಟರ್ನ್ ಫ್ಲೀಟ್‌ನ ಫ್ಲೀಟ್ ಆಪರೇಷನ್ ಆಫೀಸರ್, ನೌಕಾ ಕಾರ್ಯಾಚರಣೆಗಳ ನಿರ್ದೇಶಕರು, ಪ್ರಧಾನ ನಿರ್ದೇಶಕ ನೆಟ್‌ವರ್ಕ್ ಸೆಂಟ್ರಿಕ್ ಕಾರ್ಯಾಚರಣೆಗಳು ಮತ್ತು ಪ್ರಧಾನ ನಿರ್ದೇಶಕ ನೌಕಾ ಯೋಜನೆಗಳನ್ನು ಒಳಗೊಂಡಂತೆ ವಿವಿಧ ಪ್ರಮುಖ ಕಾರ್ಯಾಚರಣೆ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ಸಹ ನಡೆಸಿದ್ದಾರೆ.

ಹಿಂದಿನ ಅಡ್ಮಿರಲ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರು NHQ ನಲ್ಲಿ ನೌಕಾ ಸಿಬ್ಬಂದಿಯ ಸಹಾಯಕ ಮುಖ್ಯಸ್ಥರಾಗಿ (ನೀತಿ ಮತ್ತು ಯೋಜನೆಗಳು) ಸೇವೆ ಸಲ್ಲಿಸಿದರು ಮತ್ತು ಪೂರ್ವ ನೌಕಾಪಡೆಗೆ ಕಮಾಂಡ್ ಮಾಡುವ ಧ್ವಜ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಕೇರಳದ ಎಝಿಮಲದಲ್ಲಿರುವ ಪ್ರತಿಷ್ಠಿತ ಇಂಡಿಯನ್ ನೇವಲ್ ಅಕಾಡೆಮಿಯ ಕಮಾಂಡೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಜುಲೈ 2020 ರಿಂದ ಮೇ 2021 ರವರೆಗೆ ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿದ್ದರು.

ತ್ರಿಪಾಠಿ ಅವರು ಕೊಚ್ಚಿಯ ಸಿಗ್ನಲ್ ಸ್ಕೂಲ್, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್, ನೇವಲ್ ಹೈಯರ್ ಕಮಾಂಡ್ ಕೋರ್ಸ್, ಕಾರಂಜಾ ಮತ್ತು ಯುನೈಟೆಡ್ ಸ್ಟೇಟ್ಸ್ ನೇವಲ್ ವಾರ್ ಕಾಲೇಜಿನಲ್ಲಿ ನೇವಲ್ ಕಮಾಂಡ್ ಕಾಲೇಜಿನಲ್ಲಿ ಕೋರ್ಸ್‌ಗಳನ್ನು ಪಡೆದಿದ್ದಾರೆ.

ಅವರು ಪರಮ ವಿಶಿಷ್ಟ ಸೇವಾ ಪದಕ (PVSM), ಅತಿ ವಿಶಿಷ್ಟ ಸೇವಾ ಪದಕ (AVSM) ಮತ್ತು ನವೋ ಸೇನಾ ಪದಕ (NSM) ಗಳನ್ನೂ ಸಹ ಪಡೆದಿದ್ದಾರೆ.

ಇದನ್ನೂ ಓದಿ: Job Alert: ಭಾರತೀಯ ನೌಕಾಪಡೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಏಪ್ರಿಲ್‌ 30ರೊಳಗೆ ಅರ್ಜಿ ಸಲ್ಲಿಸಿ

Continue Reading
Advertisement
Neha Murder Case Neha stabbed in ISIS model murdered for not working Love jihad says Pramod Muthalik
ಕ್ರೈಂ9 mins ago

Neha Murder Case: ಐಸಿಸ್‌ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್‌ ಜಿಹಾದ್‌ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್‌ ಮುತಾಲಿಕ್

Lok sabha election-2024
Latest16 mins ago

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Nenapirali Prem New Movie announced
ಸ್ಯಾಂಡಲ್ ವುಡ್26 mins ago

Nenapirali Prem: ಪೊಲೀಸ್ ಖದರ್‌ನಲ್ಲಿ `ನೆನಪಿರಲಿ ಪ್ರೇಮ್’: ಹೊಸ ಸಿನಿಮಾ ಅನೌನ್ಸ್‌!

Neha murder case Karnataka is becoming another Bihar says Basavaraj Bommai
ಕರ್ನಾಟಕ29 mins ago

Neha Murder Case: ನೇಹಾ ಕೊಲೆ ಕೇಸ್; ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿದೆ: ಬಸವರಾಜ ಬೊಮ್ಮಾಯಿ

Assault Case
ಬೆಂಗಳೂರು29 mins ago

Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

India’s Russian oil imports hit record high in February
ಪ್ರಮುಖ ಸುದ್ದಿ36 mins ago

Israel- Iran war: ಇರಾನ್‌ ವಾಯುನೆಲೆ ಮೇಲೆ ಇಸ್ರೇಲ್‌ ದಾಳಿ ಆರಂಭ; ಕಚ್ಚಾ ತೈಲ ಬೆಲೆ 4% ಏರಿಕೆ

Teja Sajja Hanuman Movie Feme Mirai announce
ಟಾಲಿವುಡ್46 mins ago

Teja Sajja: ಹೊಸ ಸಿನಿಮಾ ಅನೌನ್ಸ್‌ ಮಾಡಿದ ʻಹನುಮಾನ್ʼ ಹೀರೊ ತೇಜ್ ಸಜ್ಜಾ

Murder case Man stabbed to death 9 times for refusing to love
ಪ್ರಮುಖ ಸುದ್ದಿ54 mins ago

Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

Viral Video
ವೈರಲ್ ನ್ಯೂಸ್55 mins ago

Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

IPL 2024
ಕ್ರೀಡೆ56 mins ago

IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ8 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌