Site icon Vistara News

ವಿಸ್ತಾರ TOP 10 NEWS : ದಕ್ಷಿಣ ಕರ್ನಾಟಕದಲ್ಲಿ ಮೋದಿ ಅಬ್ಬರ, ಕಾಂಗ್ರೆಸ್​ 6ನೇ ಗ್ಯಾರಂಟಿ ಇತ್ಯಾದಿ ಪ್ರಮುಖ ಸುದ್ದಿಗಳಿವು

modis-outburst-in-south-karnataka-congresss-6th-guarantee-etc

#image_title

1. ಮೈಸೂರು, ಹಾಸನ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಮೋದಿ ಮೇನಿಯಾ
ಕರ್ನಾಟಕ ವಿಧಾನ ಸಭಾ ಚುನಾವಣೆ 2023ರ ಪ್ರಚಾರದ ರಂಗು ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲಾರ, ರಾಮನಗರ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ಮತ್ತು ರೋಡ್​ಶೋ ಕೈಗೊಂಡರು. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್​ನ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು ಸುಸ್ಥಿರ ಸರಕಾರ ಹಾಗೂ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಕೇಳಿಕೊಂಡರು. ಮೋದಿ ಪ್ರಚಾರದ ಪ್ರಮುಖ ಸುದ್ದಿಗಳು ಇಲ್ಲಿವೆ.
1. ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ
2. Karnataka Election 2023: ಶೀಘ್ರವೇ ನನಗೆ ಬೈಯುವುದರಲ್ಲಿ ಕಾಂಗ್ರೆಸಿಗರು ಶತಕ ಬಾರಿಸಲಿದ್ದಾರೆ; ಪ್ರಧಾನಿ ಮೋದಿ
3. ಕಾಂಗ್ರೆಸ್, ಜೆಡಿಎಸ್‌ನದ್ದು ತುಷ್ಟೀಕರಣದ ನೀತಿ; ಬಿಜೆಪಿಯದ್ದು ಸಂತುಷ್ಟೀಕರಣದ ರಾಜನೀತಿ ಎಂದ ಮೋದಿ
4. Modi In Karnataka: ಮೈಸೂರಿನಲ್ಲಿ ಮೋದಿ ರೋಡ್‌ ಶೋ ಮ್ಯಾಜಿಕ್‌; ಜನಸ್ತೋಮದಿಂದ ಪುಷ್ಪವೃಷ್ಟಿ

2. ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ; ಇದು ಕಾಂಗ್ರೆಸ್‌ 6ನೇ ಗ್ಯಾರಂಟಿ
ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಕೆ, ಪದವೀಧರರಿಗೆ ಮಾಸಿಕ 3 ಸಾವಿರ ರೂ. ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ಸೇರಿ ಹಲವು ಉಚಿತ ಭರವಸೆಗಳ ಗ್ಯಾರಂಟಿ ಮೂಲಕ ರಾಜ್ಯದ ಜನರ ಮತ (Congress Guarantee) ಸೆಳೆಯಲು ಮುಂದಾಗಿರುವ ಕಾಂಗ್ರೆಸ್‌ ಆರನೇ ಗ್ಯಾರಂಟಿ ಘೋಷಣೆ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ 5 ಸಾವಿರ ರೂ. ವೇತನ ನೀಡುವುದಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಘೋಷಿಸಿದ್ದಾರೆ. ಇದು ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
1. ಲೂಟಿ ಸರ್ಕಾರ ಬಿಡಿ, ಪ್ರಾಮಾಣಿಕ ಕಾಂಗ್ರೆಸ್‌ಗೆ ಅಧಿಕಾರ ಕೊಡಿ: ಪ್ರಿಯಾಂಕಾ ಗಾಂಧಿ
2. ಗಾಳಿಗೂ ಮೋದಿ ಜಿಎಸ್‌ಟಿ ವಿಧಿಸಿದರೆ ಅಚ್ಚರಿ ಇಲ್ಲ: ಖರ್ಗೆ ವಾಗ್ದಾಳಿ

3. ಮೇ 10ಕ್ಕೆ ಕುಮಾರಸ್ವಾಮಿಯನ್ನು ಗೆಲ್ಲಿಸಿ, 13ಕ್ಕೆ ಸಿಎಂ ಆಗ್ತಾರೆ: ಎಚ್‌.ಡಿ. ದೇವೇಗೌಡ
ರಾಜ್ಯದಲ್ಲಿ ಬಡವರ ಪರ ಇರುವ ರಾಜಕಾರಣಿ ಎಂದರೆ ಅದುವೇ ಎಚ್.ಡಿ. ಕುಮಾರಸ್ವಾಮಿ. ಹಾಗಾಗಿ ಅವರಿಗೆ ಈ ಬಾರಿ ನೀವು ಆರ್ಶೀವಾದ ಮಾಡಬೇಕು. ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಅವರು ಬರಲು ಸಾಧ್ಯವಾಗಲ್ಲ. ಅವರ ಪರವಾಗಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕಿದೆ. ಚನ್ನಪಟ್ಟಣ ನಮಗೆ ಕರ್ಮಭೂಮಿ‌ಯಾಗಿದೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ (Karnataka Election 2023) ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ, ಮೇ 13ಕ್ಕೆ ಅವರು ಸಿಎಂ ಆಗುತ್ತಾರೆ. ಹಾಗಾಗಿ ಎಲ್ಲರೂ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಿ ಎಂದು ಎಚ್.ಡಿ. ದೇವೇಗೌಡ ಅವರು ಕರೆ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

4. ದಿಲ್ಲಿಗೆ ಬಂದ ಬಳಿಕ ಜನರಿಗೆ ಹತ್ತಿರವಾಗಲು ನೆರವಾಗಿದ್ದು ಮನ್‌ ಕೀ ಬಾತ್:‌ ಪ್ರಧಾನಿ ಮೋದಿ
ನನ್ನ ಪ್ರೀತಿಯ ದೇಶವಾಸಿಗಳೇ, ನಿಮಗೆ ನಮಸ್ಕಾರ, ನನಗೆ ಜನರ ಸಾವಿರಾರು ಪತ್ರಗಳು ಬಂದಿವೆ. ಲಕ್ಷಾಂತರ ಸಂದೇಶಗಳನ್ನು ಓದಿ ಹಲವು ಸಲ ಭಾವುಕನಾಗಿದ್ದೇನೆ. ಮನಸ್ಸು ಭಾವನೆಗಳಿಂದ ತುಂಬಿದಾಗ ನನ್ನನ್ನು ನಾನೇ ಸಂಭಾಳಿಸಿದ್ದೇನೆ. ಮನ್‌ ಕೀ ಬಾತ್‌ ಕೋಟ್ಯಂತರ ಭಾರತೀಯರ ಭಾವನೆಯಾಗಿದೆ. 2014ರ ಅಕ್ಟೋಬರ್‌ 3ರ ವಿಜಯ ದಶಮಿಯಂದು ಮನ್‌ ಕೀ ಬಾತ್‌ ಆರಂಭವಾಗಿತ್ತು. (Mann Ki Baat ) ಇದು ದೇಶದ ಜನತೆಯ ಸಕಾರಾತ್ಮಕ ಭಾವೆನಗಳನ್ನು ಅಭಿವ್ಯಕ್ತಪಡಿಸುವ ಹಬ್ಬವಾಗಿದೆ. ಪ್ರತಿ ತಿಂಗಳೂ ಇದು ಬರುತ್ತದೆ. ಹೀಗೆಂದು ಪ್ರಧಾನಿ ಮೋದಿ ಅವರು 100ನೇ ಮನ್‌ ಕೀ ಬಾತ್‌ ಅನ್ನು ಆರಂಭಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಕಾಂಗ್ರೆಸ್‌ ಪೇಯ್ಡ್‌ ಎಂಜಿನ್‌ ಬಿಡಿ, ಬಿಜೆಪಿ ಡಬಲ್ ಎಂಜಿನ್ ಕೈಹಿಡಿಯಿರಿ: ಯೋಗಿ ಆದಿತ್ಯನಾಥ ಕರೆ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ತುಷ್ಟೀಕರಣ ಮಾಡುತ್ತಿದೆ. ಕರ್ನಾಟಕವನ್ನು ಸಂಕಷ್ಟಕ್ಕೀಡು ಮಾಡಿದೆ. ನಮ್ಮ ಡಬಲ್ ಎಂಜಿನ್ ಸರ್ಕಾರದಿಂದ ಸಶಕ್ತೀಕರಣಕ್ಕೆ ನಮ್ಮ ಅಭಿಯಾನ ನಡೆದಿದೆ. ಯುವ ಕಲ್ಯಾಣ, ಕೃಷಿ ಕಲ್ಯಾಣ, ಗ್ರಾಮೀಣ ಕಲ್ಯಾಣ, ನಗರ ಕಲ್ಯಾಣ ನಡೆದಿದೆ. ಈ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ ಪೇಯ್ಡ್‌ ಎಂಜಿನ್‌ ಕೈ ಬಿಟ್ಟು, ನಮ್ಮ ಡಬಲ್ ಎಂಜಿನ್ ಸರ್ಕಾರವನ್ನು ತನ್ನಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6.ಸುಡಾನ್‌ನಲ್ಲಿ ಸಿಲುಕಿದ್ದ ಹಕ್ಕಿಪಿಕ್ಕಿ ಜನಾಂಗ‌ದವರು ವಾಪಸ್‌; ಕೇಂದ್ರ ಸರ್ಕಾರಕ್ಕೆ ಧನ್ಯವಾದ
ಆಯುರ್ವೇದಿಕ್ ಔಷಧಿ ಮಾರಾಟ ಮಾಡಲು ಹೋಗಿ ದಕ್ಷಿಣ ಆಫ್ರಿಕಾದ ಸುಡಾನ್ ನಗರದಲ್ಲಿ ಸಿಲುಕಿದ್ದ ಹಕ್ಕಿಪಿಕ್ಕಿ ಜನಾಂಗ‌ದವರು (Operation Kaveri) ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ. ಸುಡಾನ್ ನಗರದಿಂದ ವಿಮಾನ ನಿಲ್ದಾಣದವರೆಗೂ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

7. ಜೆಡಿಎಸ್‌ ಅಭ್ಯರ್ಥಿಗೆ ಆಮಿಷವೊಡ್ಡಿದ್ದ ಸೋಮಣ್ಣ ವಿರುದ್ಧ FIR; ಸ್ಪರ್ಧೆಯಿಂದ ಅನರ್ಹ ಭೀತಿ
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು (Aluru Mallu) ಅವರಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ (V Somanna) ಅವರು ಕರೆ ಮಾಡಿ ಈ ಚುನಾವಣೆಗೆ (Karnataka Election 2023) ಸಲ್ಲಿಸಿರುವ ನಾಮಪತ್ರವನ್ನು ವಾಪಸ್‌ ಪಡೆಯಲು 50 ಲಕ್ಷ ರೂಪಾಯಿ ಹಣ ನೀಡುವ ಆಮಿಷವೊಡ್ಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಸೋಮಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

8. ಲುಧಿಯಾನ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ದುರಂತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಪಂಜಾಬ್​​ನ ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿರುವ ಒಂದು ಕಾರ್ಖಾನೆಯಲ್ಲಿ ಅನಿಲ ಸೋರಿಕೆ (Ludhiana Gas Leak) ಉಂಟಾಗಿ 11 ಮಂದಿ ಮೃತಪಟ್ಟಿದ್ದಾರೆ. ಪ್ರಾರಂಭದಲ್ಲಿ ಈ ಸಂಖ್ಯೆ 9 ಇತ್ತು. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಲವರು ಅಸ್ವಸ್ಥರಾಗಿದ್ದು ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ವಿಷಾನಿಲಯ ಸೋರಿಕೆಯಾಗಿರುವ ಕಾರ್ಖಾನೆಗೆ ಎನ್​ಡಿಆರ್​ಎಫ್​ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತಪಟ್ಟವರಲ್ಲಿ 13 ಮತ್ತು 11 ವರ್ಷದ ಇಬ್ಬರು ಬಾಲಕರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

9. ಲಾಸ್ಟ್​ ಬಾಲ್​ ಥ್ರಿಲ್​, ಚೆನ್ನೈ ವಿರುದ್ಧ ಪಂಜಾಬ್​ ತಂಡಕ್ಕೆ 4 ವಿಕೆಟ್​ ವಿಜಯ
ಅತ್ಯಂತ ರೋಚಕವಾಗಿ ನಡೆದ ನಡೆದ ಐಪಿಎಲ್​ 16ನೇ ಆವೃತ್ತಿಯ (IPL 2023) 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡ 4 ವಿಕೆಟ್​ ವಿಜಯ ಸಾಧಿಸಿದೆ. ಕೊನೇ ಎಸೆತದಲ್ಲಿ ಗೆಲುವಿಗೆ ಬೇಕಾಗಿದ್ದ ಮೂರು ರನ್​ಗಳನ್ನು ಬಾರಿಸಿದ ಪಂಜಾಬ್ ತಂಡ ವಿಜಯೋತ್ಸವ ಆಚರಿಸಿದರೆ, ತವರಿನ ಪ್ರೇಕ್ಷಕರ ಮುಂದೆ ಚೆನ್ನೈ ತಂಡಕ್ಕೆ ತೀವ್ರ ನಿರಾಸೆ ಉಂಟಾಯಿತು. ಇದು ಕೂಡ ಹಾಲಿ ಆವೃತ್ತಿಯ ಮತ್ತೊಂದು ಲಾಸ್ಟ್​ ಬಾಲ್​ ಥ್ರಿಲ್​ ಪಂದ್ಯ ಎನಿಸಿಕೊಂಡಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

10.ಚೆನ್ನೈ ಏರ್​ಪೋರ್ಟ್​ಗೆ ಬಂದಿಳಿದ ಮಹಿಳೆಯ ಬ್ಯಾಗ್​​ನಲ್ಲಿ 22 ಹಾವುಗಳು, ಒಂದು ಗೋಸುಂಬೆ
ಮಲೇಷ್ಯಾದಿಂದ ಚೆನ್ನೈ ಏರ್​ಪೋರ್ಟ್​ಗೆ (Chennai Airport) ಬಂದಿಳಿದ ಮಹಿಳೆಯ ಬ್ಯಾಗ್​​ನಲ್ಲಿ 22 ಹಾವುಗಳು, ಒಂದು ಗೋಸುಂಬೆ ಪತ್ತೆಯಾಗಿದೆ. ಚೆನ್ನೈ ಏರ್​ಪೋರ್ಟ್​ನಲ್ಲಿ ಭದ್ರತಾ ಸಿಬ್ಬಂದಿ ಕೈಯಲ್ಲಿ ಆಕೆ ಸಿಕ್ಕಿಬಿದ್ದಿದ್ದಾಳೆ. ಹಾವುಗಳು ನೆಲದ ಮೇಲೆ ಹರಿದಾಡುತ್ತಿರುವ, ಭದ್ರತಾ ಸಿಬ್ಬಂದಿ ಹಾವುಗಳನ್ನು ಕೈಯಲ್ಲಿ ಹಿಡಿದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲೇಷ್ಯಾದ ಕೌಲಾಲಂಪುರ್​​ದಿಂದ ಆಕೆ ಚೆನ್ನೈಗೆ ಫ್ಲೈಟ್​ ನಂಬರ್​ ಎಕೆ13ನಲ್ಲಿ ಬಂದಿಳಿದಿದ್ದಳು. ಚೆನ್ನೈನಲ್ಲಿ ಆಕೆಯ ಬ್ಯಾಗ್​​ನ್ನು ಕಸ್ಟಮ್ಸ್​ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. 22 ವಿವಿಧ ಪ್ರಬೇಧಗಳ ಹಾವುಗಳು, ಒಂದು ಗೋಸುಂಬೆ ಪತ್ತೆಯಾಗಿದೆ. ಆ ಮಹಿಳೆಯನ್ನು ಸದ್ಯ ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಅವಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಇಲ್ಲಿ ಕ್ಲಿಕ್ ಮಾಡಿ

Exit mobile version