Viral Video: ಚೆನ್ನೈ ಏರ್​ಪೋರ್ಟ್​ಗೆ ಬಂದಿಳಿದ ಮಹಿಳೆಯ ಬ್ಯಾಗ್​​ನಲ್ಲಿ 22 ಹಾವುಗಳು, ಒಂದು ಗೋಸುಂಬೆ - Vistara News

ವೈರಲ್ ನ್ಯೂಸ್

Viral Video: ಚೆನ್ನೈ ಏರ್​ಪೋರ್ಟ್​ಗೆ ಬಂದಿಳಿದ ಮಹಿಳೆಯ ಬ್ಯಾಗ್​​ನಲ್ಲಿ 22 ಹಾವುಗಳು, ಒಂದು ಗೋಸುಂಬೆ

ಹಿಂದೆ ಜನವರಿಯಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಚೆನ್ನೈ ಏರ್​ಪೋರ್ಟ್​ಗೆ ಬ್ಯಾಂಕಾಕ್​​ನಿಂದ ಬಂದವರೊಬ್ಬರ ಎರಡು ಬ್ಯಾಗ್​​ನಲ್ಲಿ 45 ರಾಯಲ್ ಹೆಬ್ಬಾವುಗಳು, ಮೂರು ನಕ್ಷತ್ರ ಆಮೆಗಳು ಸಿಕ್ಕಿದ್ದವು.

VISTARANEWS.COM


on

Snakes Found In Chennai Airport
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಲೇಷ್ಯಾದಿಂದ ಚೆನ್ನೈ ಏರ್​ಪೋರ್ಟ್​ಗೆ (Chennai Airport) ಬಂದಿಳಿದ ಮಹಿಳೆಯ ಬ್ಯಾಗ್​​ನಲ್ಲಿ 22 ಹಾವುಗಳು, ಒಂದು ಗೋಸುಂಬೆ ಪತ್ತೆಯಾಗಿದೆ. ಚೆನ್ನೈ ಏರ್​ಪೋರ್ಟ್​ನಲ್ಲಿ ಭದ್ರತಾ ಸಿಬ್ಬಂದಿ ಕೈಯಲ್ಲಿ ಆಕೆ ಸಿಕ್ಕಿಬಿದ್ದಿದ್ದಾಳೆ. ಹಾವುಗಳು ನೆಲದ ಮೇಲೆ ಹರಿದಾಡುತ್ತಿರುವ, ಭದ್ರತಾ ಸಿಬ್ಬಂದಿ ಹಾವುಗಳನ್ನು ಕೈಯಲ್ಲಿ ಹಿಡಿದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲೇಷ್ಯಾದ ಕೌಲಾಲಂಪುರ್​​ದಿಂದ ಆಕೆ ಚೆನ್ನೈಗೆ ಫ್ಲೈಟ್​ ನಂಬರ್​ ಎಕೆ13ನಲ್ಲಿ ಬಂದಿಳಿದಿದ್ದಳು. ಚೆನ್ನೈನಲ್ಲಿ ಆಕೆಯ ಬ್ಯಾಗ್​​ನ್ನು ಕಸ್ಟಮ್ಸ್​ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. 22 ವಿವಿಧ ಪ್ರಬೇಧಗಳ ಹಾವುಗಳು, ಒಂದು ಗೋಸುಂಬೆ ಪತ್ತೆಯಾಗಿದೆ. ಆ ಮಹಿಳೆಯನ್ನು ಸದ್ಯ ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಅವಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಈ ಹಿಂದೆ ಜನವರಿಯಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಚೆನ್ನೈ ಏರ್​ಪೋರ್ಟ್​ಗೆ ಬ್ಯಾಂಕಾಕ್​​ನಿಂದ ಬಂದವರೊಬ್ಬರ ಎರಡು ಬ್ಯಾಗ್​​ನಲ್ಲಿ 45 ರಾಯಲ್ ಹೆಬ್ಬಾವುಗಳು, ಮೂರು ನಕ್ಷತ್ರ ಆಮೆಗಳು, ಎಂಟು ಕಾರ್ನ್​ ಹಾವುಗಳು ಮತ್ತು ಮೂರು ಮಾರ್ಮೋಸೆಟ್ಸ್​ ಇದ್ದವು. ಹೀಗೆ ವಿದೇಶಗಳಿಂದ ಹಾವುಗಳು, ಇತರ ಜೀವಿಗಳನ್ನು ಚೆನ್ನೈಗೆ ತರುವ ಪ್ರಕರಣಗಳು ಹೆಚ್ಚಿವೆ. ಈಗಾಗಲೇ ಹಲವು ಜನರು ಇದೇ ಕೇಸ್​ನಲ್ಲಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸರ್ಕಾರ ಯು ಟರ್ನ್; ಮದುವೆಗಳಲ್ಲಿ ಮದ್ಯ ಸೇವನೆಗೆ ಇಲ್ಲ ಅವಕಾಶ!

ವಿದೇಶಗಳಿಂದ ಹಾವು ಮತ್ತಿತರ ವನ್ಯಜೀವಿಗಳನ್ನು ತಮಿಳುನಾಡಿಗೆ ಕಳ್ಳಸಾಗಣೆ ಮಾಡಿ, ಇಲ್ಲಿಂದ ಬೇರೆ ರಾಜ್ಯಗಳು ಮತ್ತು ಇತರ ದೇಶಗಳಿಗೆ ಕಳಿಸುವ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಮಿಳುನಾಡು ಅರಣ್ಯ ಇಲಾಖೆ ಮುಂದಾಗಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆಗೆ ತಿದ್ದುಪಡಿಯನ್ನು ಮಾಡಿದ್ದು, ಅದು 2023ರ ಏಪ್ರಿಲ್​ 1ರಿಂದ ಜಾರಿಗ ಬಂದಿದೆ. ಇದರಡಿಯಲ್ಲಿ ಯಾರೇ ಆಗಲಿ, ಪಕ್ಷಿ, ಪ್ರಾಣಿ, ದಂಶಕಗಳು ಸೇರಿ ಯಾವುದೇ ಜೀವಿಗಳ ವಿಶೇಷ ಪ್ರಭೇದಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಅಂಬಾನಿಗಿಂತಲೂ ರಿಚ್‌ ಈತ.. ಗದ್ದೆ ಉಳುಮೆಗೆ 20 ಲಕ್ಷದ ಕಾರೇ ಬೇಕು..!

Viral Video: ಸಾಮಾನ್ಯವಾಗಿ ಗದ್ದೆ, ಹೊಲ ಉಳಮೆ ಮಾಡಲು ಟ್ರ್ಯಾಕ್ಟರ್‌ ಅಥವಾ ಸಾಂಪ್ರದಾಯಿಕ ಪದ್ಧತಿ ಅನುಸರಿಸುವುದಾದರೆ ಎತ್ತುಗಳನ್ನು ಬಳಸುತ್ತೇವೆ. ಆದರೆ ಇಲ್ಲೊಬ್ಬ ಭೂಪ ಗದ್ದೆ ಉಳುಮೆ ಬಳಸಿರೋದು ದುಬಾರಿ ಕಾರು. ಈ ಕಾರಿನ ಬೆಲೆ ಐದಲ್ಲ.. ಹತ್ತಲ್ಲ ಬರೋಬ್ಬರಿ 20 ಲಕ್ಷ ರೂ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ.

VISTARANEWS.COM


on

Viral video
Koo

ನವದೆಹಲಿ: ಈಗಿನ ಕಾಲದಲ್ಲಿ ಜನಪ್ರಿಯತೆ ಪಡೆಯಲು ಅಥವಾ ಪ್ರಚಾರ ಪಡೆಯಲು ಜನ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಬೇಗ ಫೇಮಸ್‌ ಆಗ್ಬೇಕು ಅನ್ನೋ ಹುಚ್ಚಿಗೆ ಬಿದ್ದು ಎಂಥಾ ರಿಸ್ಕ್‌ ತೆಗೆದುಕೊಳ್ಳೋಕೂ ರೆಡಿ ಆಗಿರುತ್ತಾರೆ. ಇಲ್ಲ, ತಮ್ಮ ಬೆಲೆ ಬಾಳುವ ವಸ್ತುಗಳನ್ನೂ ತಮ್ಮ ಮೋಜಿಗೆ ಪಣಕ್ಕಿಡುತ್ತಾರೆ. ಒಟ್ಟಿನಲ್ಲಿ ಪ್ರಚಾರ ಸಿಕ್ಕರೆ ಸಾಕು ಎಂಬ ಭಾವನೆ ಅವರದ್ದಾಗಿರುತ್ತದೆ. ಇದೀಗ ಅಂತಹದ್ದೇ ಒಂದು ಬಹಳ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಗದ್ದೆ, ಹೊಲ ಉಳಮೆ ಮಾಡಲು ಟ್ರ್ಯಾಕ್ಟರ್‌ ಅಥವಾ ಸಾಂಪ್ರದಾಯಿಕ ಪದ್ಧತಿ ಅನುಸರಿಸುವುದಾದರೆ ಎತ್ತುಗಳನ್ನು ಬಳಸುತ್ತೇವೆ. ಆದರೆ ಇಲ್ಲೊಬ್ಬ ಭೂಪ ಗದ್ದೆ ಉಳುಮೆ ಬಳಸಿರೋದು ದುಬಾರಿ ಕಾರು(Car). ಈ ಕಾರಿನ ಬೆಲೆ ಐದಲ್ಲ.. ಹತ್ತಲ್ಲ ಬರೋಬ್ಬರಿ 20 ಲಕ್ಷ ರೂ. ಸಾಮಾಜಿಕ ಜಾಲತಾಣ(Social Media)ದಲ್ಲಿ ವಿಡಿಯೋ(Viral Video)ವೊಂದು ವೈರಲ್‌ ಆಗುತ್ತಿದೆ.

ಸ್ಕೋರ್ಪಿಯೋ N ಎಂಬ 20 ಲಕ್ಷ ರೂ ಬೆಲೆ ಈ ದುಬಾರಿ ಕಾರನ್ನು ರೋಡಿನಲ್ಲಿ ಓಡಿಸುವ ಬದಲು ಇಲ್ಲೊಬ್ಬ ಗದ್ದೆ ಉಳುಮೆಗೆ ಬಳಸಿದ್ದಾನೆ. ಲಕ್ಷಾಂತರ ರೂ ಬೆಲೆ ಈ ಸುಂದರ ಕಾರನ್ನು ಟ್ರ್ಯಾಕ್ಟರ್‌ಗಳಾಗಿ ಪರಿವರ್ತಿಸಿ ಉಳುಮೆ ಮಾಡಿದ್ದಾನೆ. ವ್ಯಕ್ತಿಯೊಬ್ಬ ಐಷಾರಾಮಿ ಕಾರಿನೊಂದಿಗೆ ಕೆಸರು ಗದ್ದೆಯನ್ನು ಉಳುಮೆ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ವೀಡಿಯೋದಲ್ಲಿ ಕಾರಿನ ಹಿಂಬದಿಯಲ್ಲಿ ಟ್ರ್ಯಾಕ್ಟರ್ ನೇಗಿಲು ಜೋಡಿಸಲಾಗಿದ್ದು, ಕಾರು ಹೊಲವನ್ನು ಉಳುಮೆ ಮಾಡಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಿಂದ ಹಾಗೆಯೇ ಇಳಿಯುತ್ತಾನೆ. ಕಾರು ತನ್ನಷ್ಟಕ್ಕೆ ಮುಂದಕ್ಕೆ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಚಾಲಕ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿರುವುದರಿಂದ ಅವನ ಗುರುತು ಪತ್ತೆ ಆಗಿಲ್ಲ. ಇನ್ನು ಡ್ರೈವರ್‌ ಇಲ್ಲದೆಯೇ ಕಾರು ಚಲಿಸುತ್ತದೆ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇನ್ನು ಇದು ಬರೀ ರೀಲ್ಸ್‌ಗಾಗಿ ಮಾಡಿರುವಂತೆ ಕಾಣುತ್ತಿದೆ. ಈ ಅಚ್ಚರಿಯ ವಿಡಿಯೋ ನೋಡಿ ಹಲವರು ದಂಗಾಗಿದ್ದಾರೆ. ದುಬಾರಿ ಕಾರನ್ನು ಕೊಂಡುಕೊಳ್ಳುವುದಕ್ಕೇ ಕಷ್ಟ ಪಡುತ್ತಿದ್ದರೆ ಈತ ಈ ರೀತಿಯಾಗಿ ಕಾರನ್ನು ಧೂಳಲ್ಲಿ ಮುಳುಗಿಸಿ ಗದ್ದೆ ಉಳುಮೆ ಮಾಡುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

ಈ ಶಾಕಿಂಗ್‌ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ @TorqueIndia ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಕೇವಲ 32 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 2 ಲಕ್ಷ 83 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. Instagram ನಲ್ಲಿ ರಾಹುಲ್ ರಾವ್ (@rahul_raosaheb) ಅವರು ಹಂಚಿಕೊಂಡಿರುವ ಈ ವಿಡಿಯೋ ನೋಡಿದ ಜನರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದು, ಈತ ಅಂಬಾನಿಗಿಂತಲೂ ಶ್ರೀಮಂತ ಎಂದು ರಿಯಾಕ್ಟ್‌ ಮಾಡಿದ್ದಾರೆ.

Continue Reading

ಕ್ರೀಡೆ

Shakib Al Hasan: ಸೆಲ್ಫಿ ತೆಗೆಯಲು ಬಂದ ಅಭಿಮಾನಿಗೆ ಥಳಿಸಲು ಮುಂದಾದ ಶಕಿಬ್; ವಿಡಿಯೊ ವೈರಲ್​

Shakib Al Hasan: ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿರುವ ಶಕೀಬ್​ ಪಂದ್ಯಕ್ಕೂ ಮುನ್ನ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ಅಭಿಮಾನಿಯನ್ನು ಕಂಡ ಕೂಡಲೇ ಕೆರಳಿದ ಶಕೀಬ್ ಕುತ್ತಿಗೆಗೆ ಕೈಹಾಕಿ ಹೊಡೆಯಲು ಮುಂದಾಗಿದ್ದಾರೆ. ಈ ವಿಡಿಯೊ ಇದೀಗ ವೈರಲ್​ ಆಗುತ್ತಿದೆ.

VISTARANEWS.COM


on

Shakib Al Hasan
Koo

ಢಾಕಾ: ಬಾಂಗ್ಲಾದೇಶದ ಕ್ರಿಕೆಟ್​ ತಂಡದ ಹಿರಿಯ ಆಲ್​ರೌಂಡರ್​ ಶಕಿಬ್ ಅಲ್ ಹಸನ್‌(Shakib Al Hasan) ತಾಳ್ಮೆ ಕಳೆದುಕೊಂಡು, ಅಂಪೈರ್​ಗಳ ಜತೆ ಮತ್ತು ಅಭಿಮಾನಿಗಳ ನಡುವೆ ಈಗಾಗಲೇ ಹಲವು ಬಾರಿ ಕಿರಿಕ್​ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಶಕಿಬ್​ ಥಳಿಸಲು ಮುಂದಾಗಿದ್ದಾರೆ. ಈ ವಿಡಿಯೊ ವೈರಲ್(Video Viral)​ ಆಗಿದ್ದು ಶಕಿಬ್​​ ವರ್ತನೆ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಆಡಲಿಳಿದಿದ್ದಾರೆ.

ಶೇಖ್ ಜಮಾಲ್ ಧನ್ಮೊಂಡಿ ಕ್ಲಬ್ ಪರವಾಗಿ ಆಡುತ್ತಿರುವ ಶಕೀಬ್​ ಪಂದ್ಯಕ್ಕೂ ಮುನ್ನ ಸಹ ಆಟಗಾರರ ಜತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ಮೈದಾನಕ್ಕೆ ಬಂದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ಅಭಿಮಾನಿಯನ್ನು ಕಂಡ ಕೂಡಲೇ ಕೆರಳಿದ ಶಕೀಬ್, ಇಲ್ಲ ಫೋಟೊ ತೆಗೆಸಿಕೊಳ್ಳಲ್ಲ ಇಲ್ಲಿಂದ ಹೋಗು ಎಂದು ​ಸೂಚನೆ ನೀಡಿದ್ದಾರೆ. ಆದರೂ ಕೂಡ ಅಭಿಮಾನಿ ಮತ್ತೆ ಮತ್ತೆ ಫೋಟೊ ತೆಗೆಯಲು ಒತ್ತಾಯಿಸಿದಾಗ, ಅವರ ಕುತ್ತಿಗೆಗೆ ಕೈಹಾಕಿದ ಶಾಕಿಬ್ ಹೊಡೆಯಲು ಮುಂದಾದರು. ಈ ವಿಡಿಯೊ ಇದೀಗ ವೈರಲ್​ ಆಗುತ್ತಿದೆ.

ಶಕಿಬ್‌ ಅವರು ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲೇನಲ್ಲ ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್‌ ಅವರೊಂದಿಗೆ ಶಕಿಬ್‌ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್​ ಲೀಗ್​ನಲ್ಲಿ ಅಂಪೈರ್​ ಅವರು ಔಟ್​ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್​ ವಿಕೆಟ್​ಗೆ ಕಾಲಿನಿಂದ ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ Shakib Al Hasan : ರಾಜಕೀಯ ಆಟದಲ್ಲಿ ಗೆಲುವು ಕಂಡ ಶಕಿಬ್ ಅಲ್ ಹಸನ್​

ಹಿಂದೊಮ್ಮೆ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಶಕಿಬ್‌ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಗುಂಪಿನ ಮಧ್ಯೆಯಿಂದ ಫೋಟೊ ತೆಗೆಯಲು ಮುಂದಾಗಿದ್ದ ಇದರಿಂದ ಸಿಟ್ಟಿಗೆದ್ದ ಶಕೀಬ್​ತಲೆಯಿಂದ ಕ್ಯಾಪ್​ ಎಳೆದಿದ್ದರು. ಅಲ್ಲದೆ ಕ್ಯಾಪ್‌ ನಿಂದಲೇ ಒಂದೆರಡು ಬಾರಿ ಥಳಿಸಿದ್ದರು. 

Continue Reading

ವೈರಲ್ ನ್ಯೂಸ್

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Viral Video:ಭಾರೀ ಮಳೆಯಲ್ಲಿ ಕರೆಂಟ್‌ ಶಾಕ್‌ ಹೊಡೆದು 40ವರ್ಷದ ಹಣ್ಣು-ತರಕಾರಿ ವ್ಯಾಪಾರಿಯೊಬ್ಬ ನೋಡ ನೋಡ್ತಿದ್ದಂತೆ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಫಕ್ರು ಎಂದು ಗುರುತಿಸಲಾಗಿದ್ದು, ನೀರು ತುಂಬಿದ್ದ ರಸ್ತೆ ದಾಟಿ ಬಂದು ವಿದ್ಯುತ್‌ ಕಂಬವನ್ನು ಮುಟ್ಟಿದ ಕೂಡಲೇ ಅವರಿಗೆ ಶಾಕ್‌ ಹೊಡೆದಿದೆ.

VISTARANEWS.COM


on

Koo

ಹೈದರಾಬಾದ್‌: ಭಾರೀ ಮಳೆಯಲ್ಲಿ ಕರೆಂಟ್‌ ಶಾಕ್‌(Electric Shock) ಹೊಡೆದು 40ವರ್ಷದ ಹಣ್ಣು-ತರಕಾರಿ ವ್ಯಾಪಾರಿಯೊಬ್ಬ ನೋಡ ನೋಡ್ತಿದ್ದಂತೆ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಫಕ್ರು ಎಂದು ಗುರುತಿಸಲಾಗಿದ್ದು, ನೀರು ತುಂಬಿದ್ದ ರಸ್ತೆ ದಾಟಿ ಬಂದು ವಿದ್ಯುತ್‌ ಕಂಬವನ್ನು ಮುಟ್ಟಿದ ಕೂಡಲೇ ಅವರಿಗೆ ಶಾಕ್‌ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ (Viral Video) ಆಗುತ್ತಿದೆ.

ತೆಲಂಗಾಣದ ಬಹುದ್ದೂರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಆರಂಭದಲ್ಲಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಂಡು ಆತ ಕುಡಿದು ಬಿದ್ದಿರುವುದೆಂದು ಭಾವಿಸಿದ ಜನ ನಿರ್ಲಕ್ಷ್ಯ ಮಾಡಿ ಹೋಗಿದ್ದರು. ಬಳಿಕ ಆತನನ್ನು ಗಮನಿಸಿದ ಪೊಲೀಸರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆತನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಫಕ್ರು ಜಲಾವೃತಗೊಂಡಿದ್ದ ರಸ್ತೆ ದಾಟಿ ಬಂದು ಅಲ್ಲೇ ಇದ್ದ ವಿದ್ಯುತ್‌ ಕಂಬವನ್ನು ಮುಟ್ಟುತ್ತಾನೆ ಆಗ ಇದ್ದಕ್ಕಿದ್ದಂತೆ ಆತ ಕುಸಿದು ಬಿದ್ದು ನೆಲದಲ್ಲಿ ಒದ್ದಾಡೋಕೆ ಶುರು ಮಾಡುವುದನ್ನು ವೈರಲಾಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಬಹದ್ದೂರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಯಿ ಹಾಗೂ ಮಗು ವಿದ್ಯುತ್ ಶಾಕ್‌ ತಗುಲಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ನಗರದ ಹೋಪ್ ಫಾರ್ಮ್‌ ಬಳಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತಾಯಿ – ಮಗು ತುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿತ್ತು .ಘಟನೆಯಲ್ಲಿ 23 ವರ್ಷ ವಯಸ್ಸಿನ ತಾಯಿ ಹಾಗೂ 9 ತಿಂಗಳ ಹೆಣ್ಣು ಮಗು ದುರ್ಮರಣ ಅಪ್ಪಿದೆ ಎಂದು ತಿಳಿದು ಬಂದಿದೆ. ಮೃತರನ್ನು ಸೌಂದರ್ಯಾಂದ್ ಹಾಗೂ ಆಕೆಯ ಮಗು ಸುವಿಕ್ಷಾ ಎಂದು ಗುರ್ತಿಸಲಾಗಿದೆ. ತಮಿಳುನಾಡಿನಿಂದ ಬೆಂಗಳೂರು ನಗರಕ್ಕೆ ತಾಯಿ – ಮಗು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:

ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕೂಡಲೇ ತಾಯಿ ಹಾಗೂ ಮಗು ಕೆಳಗೆ ಬಿದ್ದ ಒದ್ದಾಟ ನಡೆಸಿದರು. ಇಬ್ಬರಿಗೂ ಸಾಕಷ್ಟು ಸುಟ್ಟ ಗಾಯಗಳಾಗಿದ್ದವು. ತಾಯಿ ಹಾಗೂ ಮಗುವಿನ ಜೊತೆಗೆ ಇದ್ದ ಪತಿ ಸಂತೋಷ್ ಕುಮಾರ್ ಅವರು ತಮ್ಮ ಪತ್ನಿ ಹಾಗೂ ಮಗುವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾದವು. ಸಂತೋಷ್ ಕುಮಾರ್ ಅವರ ಕಣ್ಣೆದುರಲ್ಲೇ ಪತ್ನಿ ಹಾಗೂ ಮಗು ಸಾವನ್ನಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು.

Continue Reading

ಕ್ರೀಡೆ

Viral News: ದೆಹಲಿ To ಗೋವಾ ವಿಮಾನ ಟಿಕೆಟ್​​ ಬೆಲೆಗಿಂತ ದುಬಾರಿ ಟೀಮ್​ ಇಂಡಿಯಾದ ಟಿ20 ವಿಶ್ವಕಪ್​ ಜೆರ್ಸಿ

Viral News: ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್​ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್​ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅಚ್ಚರಿ ಪಟ್ಟಿದ್ದಾರೆ.

VISTARANEWS.COM


on

viral news
Koo

ಮುಂಬಯಿ: ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಟೀಮ್​ ಇಂಡಿಯಾದ ಹೊಸ ಜೆರ್ಸಿ(India’s Jersey T20 World Cup) ಪ್ರಕಟಗೊಂಡಿದೆ. ಸೋಮವಾರ ಭಾರತ ತಂಡದ ಕಿಟ್​ ಪ್ರಯೋಜಕತ್ವ ಪಡೆದಿರುವ ಕ್ರೀಡಾ ಉಡುಪುಗಳ ಅಡಿಡಾಸ್​ ಕಂಪೆನಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ದೈತ್ಯ ಗಾತ್ರದ ಹೊಸ ಜೆರ್ಸಿಯನ್ನು ಅನಾವರಣ ಮಾಡಿತ್ತು. ರೋಹಿತ್​ ಶರ್ಮ, ರವೀಂದ್ರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಒಳಗೊಂಡ ವಿಶೇಷ ವಿಡಿಯೊ ಇದಾಗಿತ್ತು. ಇದೀಗ ಆಟಗಾರರ ಜೆರ್ಸಿ ಬೆಲೆ ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುವ ವಿಮಾನದ ಟಿಕೆಟ್​ ಬೆಲೆಗಿಂತಲೂ ಅಧಿಕವಾಗಿದೆ.(Viral News)

ಹೌದು, ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ಪ್ರಯಾಣದ ದರ 5,134 ರೂ. ಆದರೆ, ಟೀಮ್​ ಇಂಡಿಯಾದ ಆಟಗಾರರ ಹೊಸ ಜೆರ್ಸಿಯ ಬೆಲೆ 5,999 ರೂ. ಇದೆ. ಇದೀಗ ಜೆರ್ಸಿ ಮತ್ತು ವಿಮಾನ ಟಿಕೆಟ್​ ದರದ ಫೋಟೊಗಳನ್ನು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅಚ್ಚರಿ ಪಟ್ಟಿದ್ದಾರೆ.

ದೆಹಲಿಯಿಂದ ಗೋವಾಕ್ಕೆ ಇರುವ ವಿಮಾನ ದರದ ಫೋಟೊ

ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ.

ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

ಹೊಸ ಜೆರ್ಸಿಯಲ್ಲಿ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಉಪನಾಯಕ ಹಾರ್ದಿಕ್​ ಪಾಂಡ್ಯ ಅವರ ಎಡಿಟೆಡ್​ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಫೊಟೊ ಕಂಡ ಕೆಲ ನೆಟ್ಟಿಗರು ಇದು ಇಂಡಿಯನ್​ ಆಯಿಲ್​ ಕಂಪೆನಿಯ ಡ್ರೆಸ್​ನಂತಿದೆ,, ಹಾರ್ಫಿಕ್​ ಬಾಟಲ್​ ತರಾ ಇದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಜೀತಾ​ಲಾಲ್​ ಚಂಪಕ್ಲಾಲ್ ಅವರಿಂದ ಸ್ಫೂರ್ತಿ ಪಡೆದು ಈ ಜೆರ್ಸಿ ಮಾಡಲಾಗಿದೆ ಎಂದು ಹೇಳಿದ್ದಾರೆ.


ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

2013ರಲ್ಲಿ ಎಂಎಸ್ ಧೋನಿ ನಾಯಕರಾಗಿದ್ದಾಗ ಭಾರತ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದಿತ್ತು. ಅಂದಿನಿಂದ, ಭಾರತವು ಏಕದಿನ ವಿಶ್ವಕಪ್, ಟಿ 20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ವಿಫಲವಾಗಿದೆ. ಇದೀಗ ಈ ಬಾರಿಯ ಟಿ20 ವಿಶ್ವಕಪ್​ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಲು ರೋಹಿತ್​ ಪಡೆ ಪಣತೊಟ್ಟಿದೆ.

Continue Reading
Advertisement
BJP Karnataka State police issues notices to JP Nadda and Amit Malviya and BY Vijayendra
ಕ್ರೈಂ8 mins ago

BJP Karnataka: ಜೆ.ಪಿ. ನಡ್ಡಾ, ಅಮಿತ್‌ ಮಾಳವೀಯಾಗೆ ರಾಜ್ಯ ಪೊಲೀಸರ ನೋಟಿಸ್‌; 7 ದಿನದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ

Sam Pitroda
ಪ್ರಮುಖ ಸುದ್ದಿ14 mins ago

Sam Pitroda: ಭಾರತೀಯರ ಬಣ್ಣದ ಕುರಿತು ಮಾತಾಡಿದ ಸ್ಯಾಮ್‌ ಪಿತ್ರೋಡಾ ತಲೆದಂಡ; ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ!

Neeraj Chopra
ಕ್ರೀಡೆ33 mins ago

Neeraj Chopra: 3 ವರ್ಷದ ಬಳಿಕ ದೇಶೀಯ ಕ್ರೀಡಾಕೂಟದಲ್ಲಿ ನೀರಜ್​ ಚೋಪ್ರಾ ಸ್ಪರ್ಧೆ

Cancer Risk
ಆರೋಗ್ಯ43 mins ago

Cancer Risk: ಕ್ಯಾನ್ಸರ್ ಅಪಾಯದಿಂದ ಪಾರಾಗಲು ಯಾವ ಆಹಾರ ಸೇವಿಸಬಾರದು? ಯಾವ ಆಹಾರ ಸೇವಿಸಬೇಕು?

K Vasantha Bangera
ಪ್ರಮುಖ ಸುದ್ದಿ53 mins ago

K Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

T20 World Cup 2024
ಕ್ರೀಡೆ2 hours ago

T20 World Cup 2024: ಕ್ರಿಕೆಟ್​ ಪ್ರಿಯರಿಗೆ ಗುಡ್​ ನ್ಯೂಸ್​​; ಈ ಮೊಬೈಲ್‌ ಆ್ಯಪ್​ನಲ್ಲಿ ಟಿ20 ವಿಶ್ವಕಪ್ ಉಚಿತ ಪ್ರಸಾರ

Girls Pleats Skirts Fashion
ಫ್ಯಾಷನ್2 hours ago

Girls Pleats Skirts Fashion: ಹುಡುಗಿಯರ ಮೆಚ್ಚಿನ ಆಯ್ಕೆ ಕೊರಿಯನ್‌ ಪ್ಲೀಟ್ಸ್‌ ಸ್ಕರ್ಟ್ಸ್‌ಗಳು

Jan Aushadhi
ದೇಶ2 hours ago

Jan Aushadhi: ಪ್ರಯಾಣಿಕರಿಗೆ ಗುಡ್‌ ನ್ಯೂಸ್; ರೈಲು ನಿಲ್ದಾಣಗಳಲ್ಲೂ ಸಿಗಲಿವೆ ಕಡಿಮೆ ಬೆಲೆಗೆ ಔಷಧ!

Prajwal Revanna Case HD Kumaraswamy King of Blackmail and DK Shivakumar is back
ಚಿಕ್ಕಮಗಳೂರು2 hours ago

Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

Hoskote News
ಕರ್ನಾಟಕ2 hours ago

Hoskote News: ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿ ಆಯ್ಕೆಗೆ ಬಿಜೆಪಿ ಆಕ್ರೋಶ; ಸಿಎಂ ಹೇಳಿದ್ದೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ23 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ1 day ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌