Site icon Vistara News

Pakistan: ನೋಡಿ ಪಾಪಿ ಪಾಕಿಸ್ತಾನ ಎಂಥ ಕೆಲ್ಸಾ ಮಾಡ್ತಿದೆ! ಹೆಂಗಸರು, ಮಕ್ಕಳನಾ ಬಳಸಿಕೊಳ್ತಿದೆಯಂತೆ

Pakistan and Terror groups using women, girls and Juveniles to carry weapon and messages

ನವದೆಹಲಿ: ಪಾಕಿಸ್ತಾನವು (Pakistan) ಭಾರತದಲ್ಲಿ (India) ಯಾವುದೇ ರೀತಿಯಿಂದಾದರೂ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಂಚು ಹೊಸೆಯುತ್ತಲೇ ಇರುತ್ತದೆ ಎಂಬುದಕ್ಕೆ ಮತ್ತೊಂದು ಪುಷ್ಟಿ ದೊರೆತಿದೆ. ಪಾಕಿಸ್ತಾನ ಗುಪ್ತಚರ ಸಂಸ್ಥೆಯಾಗಿರುವ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ISI) ಮತ್ತು ಉಗ್ರ ಸಂಘಟನೆಗಳು (Terror Groups) ನಾಯಕರು, ಆಯುಧಗಳ ರವಾನೆ ಮತ್ತು ಸಂದೇಶಗಳನ್ನು ತಲುಪಿಸಲು ಮಹಿಳೆಯರು (Women), ಮಕ್ಕಳು (Girls) ಮತ್ತು ಬಾಲಾಪರಾಧಿಗಳನ್ನು (juveniles) ಬಳಸಿಕೊಳ್ಳುತ್ತಿರುವ ಸಂಗತಿ ಬಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಉಗ್ರರು ಸಾಂಪ್ರದಾಯಿಕ ಸಂವಹನ ವ್ಯವಸ್ಥೆಗಳನ್ನು ಬಳಸುವುದನ್ನು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಹೊಸ ಹುನ್ನಾರ ಬಯಲಿಗೆ ಬಂದಿದೆ (Indian Army).

ಚಿನಾರ್ ಕಾರ್ಪ್ಸ್ ಎಂದೂ ಕರೆಯಲಾಗುವ ಶ್ರೀನಗರ ಮೂಲದ 15 ಕಾರ್ಪ್ಸ್‌ನ ಕಮಾಂಡಿಂಗ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ಅವರು ಈ ಮಾಹಿತಿಯನ್ನು ಹೊರಗೆ ಹಾಕಿದ್ದಾರೆ. ಅಲ್ಲದೇ, ಗಡಿ ನಿಯಂತ್ರಣ ರೇಖೆಯ (LOC) ಇನ್ನೊಂದು ಬದಿಯಲ್ಲಿ ಜನರು ಸಂಚು ರೂಪಿಸುವ ಮತ್ತು ಅಡ್ಡಿಪಡಿಸಲು ಯೋಜಿಸುತ್ತಿರುವ ಕಾರಣ ಪಡೆಗಳು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ನನಗೆ ಗೊತ್ತಾಗಿರುವಂತೆ ಗಡಿಯಿಂದ ಆಚೆಯಿಂದ ಕಣಿವೆ ರಾಜ್ಯದೊಳಗೆ ಬೆದರಿಕೆಯು ಸಂದೇಶಗಳು, ಮಾದಕ ದ್ರವ್ಯಗಳು ಅಥವಾ ಕೆಲವೊಮ್ಮೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಮಹಿಳೆಯರು, ಹುಡುಗಿಯರು ಮತ್ತು ಬಾಲಾಪರಾಧಿಗಳನ್ನು ಬಳಸಲಾಗುತ್ತಿದೆ. ಈ ವರೆಗೆ ಇಂಥ ಕೆಲವು ಪ್ರಕರಣಗಳನ್ನು ಸೇನೆ ಪತ್ತೆ ಹಚ್ಚಿದೆ. ಪಾಕಿಸ್ತಾನದ ಐಎಸ್ಐ ಮತ್ತು ಭಯೋತ್ಪಾದಕ ಗುಂಪುಗಳು ತೆಗೆದುಕೊಂಡಿರುವ ಅಪಾಯಕಾರಿ ಕ್ರಮವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇತರ ಏಜೆನ್ಸಿಗಳೊಂದಿಗೆ ನಾವು ಕೆಲಸ ಮಾಡಲಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಔಜ್ಲಾ ಹೇಳಿದ್ದಾರೆ.

ಅಂದರೆ, ಭಯೋತ್ಪಾದಕ ಗುಂಪುಗಳ ಸಂವಹನಕ್ಕಾಗಿ ಮೊಬೈಲ್‌ಗಳನ್ನು ಬಳಸುವುದನ್ನು ತ್ಯಜಿಸಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಟೆಚ್‌ಇಂಟ್( ತಾಂತ್ರಿಕ ಗುಪ್ತಚರ) ಗಮನಾರ್ಹವಾಗಿ ಕಡಿಮೆಯಾಗಿವೆ ಎಂದು ಹೇಳಿದರು. ಇದರ ಪರಿಣಾಮ ಏನಾಗಿದೆ ಎಂದರೆ, ಐಎಸ್ಐ ಮತ್ತು ಭಯೋತ್ಪಾದಕ ಗುಂಪುಗಳಿಗೆ ಮಹಿಳೆಯರು, ಹುಡುಗಿಯರು ಮತ್ತು ಬಾಲಾಪರಾಧಿಗಳು ಸಂದೇಶಗಳನ್ನು ರವಾನಿಸುವ ಪರ್ಯಾಯ ಮಾರ್ಗಗಳಾಗಿ ಮಾರ್ಪಟ್ಟಿದ್ದಾರೆ ಎಂದು ಸೇನಾಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Amritpal Singh: ಪಾಕಿಸ್ತಾನದ ಐಎಸ್‌ಐ ಕೈಗೊಂಬೆ ಈ ಅಮೃತ್‌ಪಾಲ್‌ ಸಿಂಗ್

ಪಾಕಿಸ್ತಾನವು ಆರ್ಥಿಕವಾಗಿ ಸಾಕಷ್ಟು ದಿವಾಳಿಯ ಅಂಚಿನಲ್ಲಿದ್ದರೂ ಸೇನೆಯ ಮೇಲಿನ ವೆಚ್ಚವನ್ನು ತಗ್ಗಿಸಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಜತೆಗೆ ನೇರವಾಗಿ ಗೆಲ್ಲಲು ಆಗದ ಪಾಕಿಸ್ತಾನವೂ ಭಯೋತ್ಪಾದನೆಯ ಮೂಲಕ ತೊಂದರೆ ಕೊಡುವ ತನ್ನ ನೀತಿಯನ್ನು ಇನ್ನೂ ಕೈ ಬಿಟ್ಟಿಲ್ಲ. ಅದರ ಭಾಗವಾಗಿಯೇ, ಭಯೋತ್ಪಾದಕ ಗುಂಪುಗಳು ಮತ್ತು ಐಎಸ್ಐ ತನ್ನ ಸಂದೇಶಗಳನ್ನು ರವಾನಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿವೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version