ನವದೆಹಲಿ: ಭಾರತ ಸೇರಿ ಜಗತ್ತಿನೆಲ್ಲೆಡೆ ಪ್ರತಿಯೊಂದು ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನ ಕಾಲಿಟ್ಟಿದೆ. ಲವ್ ಲೆಟರ್ ಬರೆಯುವುದರಿಂದ ಹಿಡಿದು ಕೋಡ್ ರಚನೆವರೆಗೆ, ರೋಬೊಗಳು ಕುಳಿತಲ್ಲಿಗೆ ಬಂದು ಊಟ ಸರಬರಾಜು ಮಾಡುವವರೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪಸರಿಸಿದೆ. ಇದರ ಬೆನ್ನಲ್ಲೇ, ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಇರಿಸಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸೆಕ್ಸ್ ಬೊಂಬೆಗಳನ್ನು (AI Powered Sex Dolls) ಅಥವಾ ಸೆಕ್ಸ್ ರೋಬೊಗಳನ್ನು ಅಭಿವೃದ್ಧಿಪಡಿಸಿದ್ದು, ಇವು ಮನುಷ್ಯರಿಗೆ ನೈಜ ಲೈಂಗಿಕ ಸುಖವನ್ನು ಅನುಭವಿಸಲು ಸಾಧ್ಯವಾಗಿಸುತ್ತವೆ ಎಂದು ತಿಳಿದುಬಂದಿದೆ.
ಹೌದು, ಚೀನಾದ ಶೆಂಝೆನ್ ಮೂಲದ ಸ್ಟಾರ್‌ಪೆರಿ ಟೆಕ್ನಾಲಜಿ ಎಂಬ ಕಂಪನಿಯ ವಿಜ್ಞಾನಿಗಳು ಸೆಕ್ಸ್ ಬೊಂಬೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಇವರು ಸೆಕ್ಸ್ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಇವುಗಳು ಮನುಷ್ಯರಿಗೆ ನೈಜವಾದ ಲೈಂಗಿಕ ಸುಖವನ್ನು ನೀಡಲಿವೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಸುದ್ದಿಸಂಸ್ಥೆಯು ವರದಿ ಮಾಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಪುರುಷರು, ಮಹಿಳೆಯರು ಸೇರಿ ಯಾರಿಗೇ ಆಗಲಿ ಲೈಂಗಿಕ ಸುಖ ಅನುಭವಿಸಲು ಬೇರೊಬ್ಬರ ಅವಶ್ಯಕತೆಯೇ ಇರುವುದಿಲ್ಲ. ಸೆಕ್ಸ್ ಡಾಲ್‌ಗಳ ಮೂಲಕವೇ ಸಂಭೋಗ ಸುಖ ಅನುಭವಿಸಬಹುದು ಎಂದು ಹೇಳಲಾಗುತ್ತಿದೆ.
ಇವುಗಳ ಕಾರ್ಯನಿರ್ವಹಣೆ ಹೇಗೆ?
ಜಗತ್ತಿನಲ್ಲಿ ಇದುವರೆಗೆ ಕೃತಕವಾಗಿ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿರಲಿಲ್ಲ. ಆದರೆ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಚೀನಾ ವಿಜ್ಞಾನಿಗಳು ನೈಜ ಸುಖ ಅನುಭವಿಸುವ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸೆಕ್ಸ್ ಡಾಲ್‌ಗಳು ಬ್ಯಾಟರಿ ಚಾಲಿತ ಆಗಿರುತ್ತವೆ. ಅವುಗಳ ಮಾಂಸಖಂಡಗಳು ಕೂಡ ಮನುಷ್ಯರ ಹಾಗೆ ಇರಲಿದ್ದು, ಫ್ಲೆಕ್ಸಿಬಲ್ ಕೂಡ ಆಗಿರಲಿವೆ. ಮನುಷ್ಯರ ಭಾವನೆಗಳಿಗೆ ಸ್ಪಂದಿಸಿ, ನಿಜವಾದ ಲೈಂಗಿಕ ಸುಖವನ್ನು ಅನುಭವಿಸಲು ಇವು ನೆರವಾಗಲಿವೆ ಎಂದು ಹೇಳಲಾಗುತ್ತಿದೆ. ಹಲವು ಸವಾಲುಗಳನ್ನು ಮೀರಿಯೂ ವಿಜ್ಞಾನಿಗಳು ಈ ಕನಸು ನನಸಾಗಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.
ರೇಟ್ ಎಷ್ಟಾಗಬಹುದು?
ವಿಜ್ಞಾನಿಗಳು ಈಗಾಗಲೇ ಸೆಕ್ಸ್ ರೋಬೊಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 5.6 ಅಡಿಯ ರೋಬೊಗಳನ್ನು ತಯಾರಿಸುತ್ತಿದ್ದು, ಬಳಸುವವರಿಗೆ ಅನುಕೂಲವಾಗಲಿ ಎಂದು 29 ಕೆ.ಜಿ ತೂಕದ ಡಾಲ್‌ಗಳನ್ನು ತಯಾರಿಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಇವುಗಳನ್ನು ತಯಾರಿಸುವ ಕಾರಣ ಆರಂಭದಲ್ಲಿ ಇವುಗಳ ಬೆಲೆಯು 1.25 ಲಕ್ಷ ರೂ.ನಿಂದ 6 ಲಕ್ಷ ರೂ.ವೆರೆಗೆ ಇರಲಿವೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ ಸೆಕ್ಸ್ ರೋಬೊಗಳನ್ನು ತಯಾರಿಸುವುದರಿಂದ ಮನುಷ್ಯ ಮನುಷ್ಯನ ಸಂಬಂಧ, ಬಾಂಡಿಂಗ್ ಹಾಳಾಗುತ್ತದೆ ಎಂದು ಒಂದಷ್ಟು ಮಡಿವಂತರು ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ.