ಬೆಂಗಳೂರು: ಇತ್ತೀಚೆಗೆ ಬಂಧಿತರಾದ ನಿಷೇಧಿತ ಪಿಎಫ್‌ಐ ಕಾರ್ಯಕರ್ತರು ಮಾಹಿತಿಗಳ ವಿನಿಮಯಕ್ಕೆ ಟೆಲಿಗ್ರಾಂ ಆ್ಯಪ್ ಅನ್ನು ಹೆಚ್ಚೆಚ್ಚು ಬಳಸುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ನ ಮೇಲೆ ನಿಗಾ ಇಡಲು ಬೆಂಗಳೂರಿನ ಪೊಲೀಸರಿಗೆ ಎನ್ಐಎ ಮಹತ್ವದ ಸೂಚನೆ ನೀಡಿದೆ.
ಕೆ.ಜಿ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಮೊಬೈಲ್‌ಗಳಲ್ಲಿರುವ ಟೆಲಿಗ್ರಾಂ ಅಕೌಂಟ್ ಪರಿಶೀಲನೆ ಮಾಡಲಾಗಿದೆ. ಹೆಚ್ಚಿನ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಟೆಲಿಗ್ರಾಂ ಆ್ಯಪ್‌ಗಳು ಹೆಚ್ಚಾಗಿ ಬಳಕೆಯಾಗಿರುವುದು ಪತ್ತೆಯಾಗಿದೆ. ಎಲ್ಲಾ ಸಂಭಾಷಣೆ ಸಹ ಟೆಲಿಗ್ರಾಂ ಆ್ಯಪ್ ಮೂಲಕ ನಡೆದಿರುವ ಶಂಕೆ ಮೂಡಿದೆ. ಹೀಗಾಗಿ ಟೆಲಿಗ್ರಾಂನ ಸಂಪೂರ್ಣ ಮಾಹಿತಿ ಕಲೆಹಾಕಿದರೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಟೆಲಿಗ್ರಾಂನ ಎಲ್ಲಾ ಡಿಲೀಟ್ ಆಗಿರುವ ಮೆಸೇಜ್‌ಗಳನ್ನೂ ರಿಟ್ರೀವ್ ಮಾಡಲು ಸೈಬರ್ ಪೊಲೀಸರು ಮುಂದಾಗಿದ್ದಾರೆ.
ಆರೋಪಿಗಳ, ಶಂಕಿತರ ಟೆಲಿಗ್ರಾಂ ಆ್ಯಪ್‌ನ ಇಂಚಿಂಚೂ ಶೋಧ ಮಾಡಲು ರಾಜಧಾನಿಯ ಪೊಲೀಸರಿಗೆ NIA ಸೂಚನೆ ನೀಡಿದೆ. ಈ ಬಗ್ಗೆ ಈ ಬಗ್ಗೆ ಖುದ್ದು ಮಾನಿಟರಿಂಗ್ ಮಾಡುವಂತೆ ಕಮೀಷನರ್ ಪ್ರತಾಪ್ ರೆಡ್ಡಿಗೆ ಸೂಚನೆ ನೀಡಲಾಗಿದೆ. ನಗರದ ಎಲ್ಲಾ ಸೈಬರ್ ಇನ್ಸ್‌ಪೆಕ್ಟರ್‌ಗಳ ಜೊತೆ ಕಮೀಷನರ್ ಮೀಟಿಂಗ್ ಮಾಡಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | ಪಿಎಫ್ಐ ಆಯ್ತು, ಈಗ ಇನ್ನೊಂದು ಕಾರ್ಯಾಚರಣೆಗೆ ಇಳಿದ ಎನ್ಐಎ; 3 ರಾಜ್ಯಗಳ, 50 ಸ್ಥಳಗಳಲ್ಲಿ ರೇಡ್
ಟೆಲಿಗ್ರಾಂ ಬಗ್ಗೆಯೇ ಯಾಕೆ?
ಬೇರೆಲ್ಲ ಸಂಪರ್ಕ ಆ್ಯಪ್‌ಗಳಿಗಿಂತ ಟೆಲಿಗ್ರಾಂನಲ್ಲಿ ಹೆಚ್ಚು ಫೀಚರ್ಸ್ ಇದೆ. ತನಿಖಾ ಸಂಸ್ಥೆಗಳಿಗೆ ಇದನ್ನು ಟ್ರ್ಯಾಕ್ ಮಾಡುವುದು ಸಹ ಕಷ್ಟದ ಕೆಲಸ. ನಿನ್ನೆ ವಾರಾಣಸಿಯಲ್ಲಿ ಬಂಧಿತನಾದ ಐಸಿಸ್ ಉಗ್ರನೊಬ್ಬ ಸಹ ಉಗ್ರ ಕೃತ್ಯಗಳ ತರಬೇತಿಗೆ, ಪ್ರಮುಖ ಸಂದೇಶಗಳ ರವಾನೆಗೆ ಟೆಲಿಗ್ರಾಂ ಬಳಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಟೆಲಿಗ್ರಾಂ ಬಗ್ಗೆ ಹೆಚ್ಚಿನ ನಿಗಾ ಇಡಲಾಗಿದೆ. ಕೆ.ಜಿ ಹಳ್ಳಿ ಪಿಎಫ್ಐ ಕೇಸಿನಲ್ಲಿ 55 ಮೊಬೈಲ್ ಪೋನ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಇದರಲ್ಲಿ 30ಕ್ಕೂ ಹೆಚ್ಚು ಆ್ಯಂಡ್ರಾಯ್ಡ್ ಪೋನ್‌ಗಳಾಗಿವೆ.
ಸೈಬರ್ ಪೊಲೀಸರಿಗೆ ಕಮೀಷನರ್ ಕೊಟ್ಟ ಟಾಸ್ಕ್‌ಗಳು
- ಆರೋಪಿಗಳ ಎಲ್ಲಾ ಮೊಬೈಲ್ ಇಂಚಿಂಚೂ ಜಾಲಾಡಬೇಕು.
- ಟೆಲಿಗ್ರಾಂ ಆ್ಯಪ್‌ನಲ್ಲಿ ಯಾರ ಜೊತೆ ಮೆಸೇಜ್ ಮಾಡಿದ್ದಾರೆ?
- ಯಾರ ಜೊತೆ ಸಂಘಟನೆಯನ್ನು ಬೆಳೆಸೋ ಬಗ್ಗೆ ಮಾತನಾಡಿದ್ದಾರೆ?
- ಮುಂದಿನ ಪ್ರತಿಭಟನೆ ಬಗ್ಗೆ ಮಾತನಾಡಿದ್ದಾರಾ? ಏನು ಮಾತನಾಡಿದ್ದಾರೆ?
- ಏನಾದರೂ ವಿಧ್ವಂಸಕ ಕೃತ್ಯಗಳು ನಡೆಸೋ ಫ್ಲ್ಯಾನಿಂಗ್ ಬಗ್ಗೆ ಚರ್ಚೆ ಆಗಿತ್ತಾ?
- ಬಹುತೇಕ ಎಲ್ಲಾ ಮೆಸೇಜ್ ಡಿಲೀಟ್ ಮಾಡಿರುತ್ತಾರೆ, ಅದನ್ನು ರಿಟ್ರೀವ್ ಮಾಡಲೇಬೇಕು.
- ಟೆಲಿಗ್ರಾಂನಲ್ಲಿ ಇರುವ ಗ್ರೂಪ್ಸ್ ಬಗ್ಗೆ ಹಾಗೂ ಅದರಲ್ಲಿನ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹ.
- ಚುನಾವಣೆಗೆ ಸ್ಪರ್ಧಿಸೋ ಬಗ್ಗೆ ಮಾತನಾಡಿದ್ದಾರಾ? ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಅಂತ ಡಿಸ್ಕಸ್ ಆಗಿದೆಯಾ?
- ಪ್ರಮುಖವಾಗಿ ಹಣಕಾಸಿನ ಬಗ್ಗೆ ಮಾತನಾಡಿದ್ದಾರಾ?
- ಹಣದ ವ್ಯವಹಾರ ಬಗ್ಗೆ ಯಾರ ಹತ್ತಿರ ಮಾತನಾಡಿದ್ದಾರೆ?…ಇತ್ಯಾದಿ.
ಇದನ್ನೂ ಓದಿ | ಪಿಎಫ್ಐ ಹಿಟ್ಲಿಸ್ಟ್: ಕೇರಳ ಆರ್ಎಸ್ಎಸ್ನ ಐವರು ಪ್ರಮುಖರಿಗೆ ಕೇಂದ್ರದಿಂದ ವೈ ಶ್ರೇಣಿ ಭದ್ರತೆ