Site icon Vistara News

G20 Summit 2023: ಪಾಕಿಸ್ತಾನಕ್ಕೆ ಟರ್ಕಿ ಶಾಕ್! ವಿಶ್ವಸಂಸ್ಥೆ ಭದ್ರತಾ ಸಮಿತಿಯ ಭಾರತದ ಬೇಡಿಕೆಗೆ ಬೆಂಬಲ

Turkey Prez Erdogan and PM Narendra Modi

ನವದೆಹಲಿ: ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ (UNSC) ಭಾರತವು (India) ತನಗೆ ಕಾಯಂ ಸ್ಥಾನ ನೀಡಬೇಕೆಂದು ದಶಕಗಳಿಂದ ಬೇಡಿಕೆ ಇಟ್ಟಿದೆ. ಆರು ರಾಷ್ಟ್ರಗಳ ಈ ಸಮಿತಿಯಲ್ಲಿನ ಚೀನಾ (China) ವಿರೋಧ ಕಾರಣಕ್ಕಾಗಿ ಈವರೆಗೂ ಭಾರತದ ಬೇಡಿಕೆ ಈಡೇರಿಲ್ಲ. ಅಮೆರಿಕ(America), ಫ್ರಾನ್ಸ್ (France) ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಬೇಡಿಕೆಯನ್ನು ಬೆಂಬಲಿಸಿವೆ. ಈಗ ಈ ಸಾಲಿಗೆ ಟರ್ಕಿ (Turkey) ಕೂಡ ಸೇರಿದೆ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಟರ್ಕಿ ಈಗ ಭಾರತದ ಬೆಂಬಲಿಗೆ ನಿಂತಿರುವುದು ಪಾಕಿಸ್ತಾನಕ್ಕೆ (Pakistan) ಸಹಿಸದಾಗಿದೆ. ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ (Turkish President Recep Tayyip Erdogan) ಅವರು ಭಾನುವಾರ ಮಾತನಾಡಿ, ಭಾರತವು ಭದ್ರತಾ ಸಮಿತಿಯ ಕಾಯಂ ಸದಸ್ಯ ರಾಷ್ಟ್ರವಾದರೆ ಟರ್ಕಿ ಸಂತೋಷ ಪಡುತ್ತದೆ ಎಂದು ಹೇಳಿದ್ದಾರೆ.

ಜಗತ್ತು ಐದು ದೊಡ್ಡ ರಾಷ್ಟ್ರಗಳಿಗಿಂತಲೂ(ಭದ್ರತಾ ಸಮಿತಿ ಸದಸ್ಯ ದೇಶಗಳು) ದೊಡ್ಡದಾಗಿದೆ. ವಿಶ್ವ ಸಂಸ್ಥೆಯ ಎಲ್ಲ 195 ರಾಷ್ಟ್ರಗಳು ನಿಯಮತವಾಗಿ ಭದ್ರತಾ ಸಮಿತಿಯ ಸದಸ್ಯರಾಷ್ಟ್ರಗಳಾಗುವ ಅವಕಾಶವನ್ನು ಕಲ್ಪಿಸಿಕೊಡಬೇಕು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಭಾರತದಂತಹ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದರೆ ನಾವು ಹೆಮ್ಮೆಪಡುತ್ತೇವೆ. ನಿಮಗೆ ತಿಳಿದಿರುವಂತೆ, ಪ್ರಪಂಚವು ಐದು ರಾಷ್ಟ್ರಗಳಿಗಿಂತಲೂ ದೊಡ್ಡದಾಗಿದೆ. ಐದು ರಾಷ್ಟ್ರಗಳಿಗಿಂತಲೂ ಜಗತ್ತು ದೊಡ್ಡದಾಗಿದೆ ಎಂದರೆ ಕೇವಲ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ ಮತ್ತು ರಷ್ಯಾಗಳಲ್ಲ, ನಾವು ಕೇವಲ ಈ ಐದು ರಾಷ್ಟ್ರಗಳೇ ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರಗಳಾಗಿರಬೇಕು ಎಂದು ಬಯಸುವುದಿಲ್ಲ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: G20 Summit 2023: ನಿಮ್ಮ ನಾಯಕತ್ವದಲ್ಲಿ ನಾವು ಏಳಿಗೆ ಹೊಂದುತ್ತೇವೆ! ಪ್ರಧಾನಿ ಮೋದಿಗೆ ಶಾರುಖ್ ಮೆಚ್ಚುಗೆ

ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಸದಸ್ಯರಾಗಲು ಸರದಿ ಸಿಸ್ಟಮ್‌ ಅನ್ನು ಬಲವಾಗಿ ಬೆಂಬಲಿಸಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಯುಎನ್‌ಎಸ್‌ಸಿಯಲ್ಲಿ 15 ಸದಸ್ಯರಿದ್ದಾರೆ, ಐವರು ಶಾಶ್ವತ ಮತ್ತು 10 ರೊಟೇಷನಲ್ ಮೂಲಕ ಸದಸ್ಯರಾಗಿದ್ದಾರೆ. ನಮ್ಮ ಉದ್ದೇಶ ಏನೆಂದರೆ, ಎಲ್ಲ ಸದಸ್ಯ ರಾಷ್ಟ್ರಗಳ ಶಾಶ್ವತವಾಗಿರಬೇಕು. ಎಲ್ಲಾ ರಾಷ್ಟ್ರಗಳು ಸರದಿಯ ಮೂಲಕ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯರಾಗಳು ಅವಕಾಶವನ್ನು ನೀಡಬೇಕು. ಸದ್ಯ ವಿಶ್ವ ಸಂಸ್ಥೆಯಲ್ಲಿ 195 ಸದಸ್ಯ ರಾಷ್ಟ್ರಗಳಿವೆ. ಆದ್ದರಿಂದ, ನಾವು ಸರದಿ ಕಾರ್ಯವಿಧಾನವನ್ನು ಪ್ರಸ್ತಾಪಿಸುತ್ತೇವೆ. ಆ ಮೂಲಕ ಮೂಲಕ ಪ್ರತಿ ರಾಷ್ಟ್ರವು ತನ್ನ ಸರದಿ ಪ್ರಕಾರ ಸಮಿತಿಯ ಸದಸ್ಯರಾಗಬಹುದು ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version