Site icon Vistara News

Kashmir Dispute: ಗಿಲ್ಗಿಟ್‌-ಬಾಲ್ಟಿಸ್ತಾನಕ್ಕೆ ಅಮೆರಿಕ ರಾಯಭಾರಿ ರಹಸ್ಯ ಭೇಟಿ! ಭಾರತಕ್ಕೆ ಶೀಘ್ರ ಸಿಗುತ್ತಾ ಸಿಹಿ ಸುದ್ದಿ?

David Blome

ನವದೆಹಲಿ: ಭಾರತ-ಪಾಕಿಸ್ತಾನ (India and Pakistan) ನಡುವಿನ ಕಾಶ್ಮೀರ ವಿವಾದ (Kashmir Dispute) ಬಗೆಹರಿಸಲು ಅಮೆರಿಕ (America) ಮಧ್ಯಸ್ಥಿಕೆಗೆ ಮುಂದಾಗಿದೆಯಾ? ಇಂಥದೊಂದು ಅನುಮಾನ ಮೂಡಲು ಕಾರಣವಿದೆ. ಜಿ20 ಶೃಂಗಸಭೆ (G20 Summit) ನಡೆಯುತ್ತಿರುವಾಗಲೇ ಅಮೆರಿಕನ್ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದರೆ, ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಡೇವಿಡ್ ಬ್ಲೋಮ್ (David Blome) ಅವರು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ ಪ್ರದೇಶದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ (Gilgit-Baltistan) ರಹಸ್ಯ ಭೇಟಿ ನೀಡಿದ್ದರು. ಈ ಕಾರಣಕ್ಕಾಗಿಯೇ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ (Eric Garcetti) ಅವರು ಮಾತ್ರ, ಪಾಕಿಸ್ತಾನ ಮತ್ತು ಭಾರತಗಳು ತಮ್ಮ ನಡುವಿನ ಈ ಸಮಸ್ಯೆಯವನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿನ ಅಮೆರಿಕ ರಾಯಭಾರಿಗೆ ಪ್ರತಿಕ್ರಿಯಿಸುವುದು ನನ್ನ ಕೆಲಸವಲ್ಲ. ಆದರೆ, ಅವರು ಆಗಲೇ ಅಲ್ಲಿದ್ದರು. ಜಿ20 ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನಿಯೋಗದ ಭಾಗವವಾಗಿ ನಾವಿದ್ದೇವೆ ಎಂದು ಅಮೆರಿಕದ ರಾಯಭಾರಿ 20 ನೇ ಭಾರತ-ಅಮೆರಿಕ ಆರ್ಥಿಕ ಶೃಂಗದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಶ್ಮೀರ ವಿಷಯದ ಬಗ್ಗೆ ಅಮೆರಿಕದ ಹೊಂದಿರುವ ನಿಲುವನ್ನು ರಾಯಭಾರಿ ಗಾರ್ಸೆಟ್ಟಿ ಅವರು ಪುನರುಚ್ಚಾರ ಮಾಡಿದರು. ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಯ ಮೂಲಕ ಪರಿಹರಿಸಬೇಕಾದ ದ್ವಿಪಕ್ಷೀಯ ವಿಷಯವಾಗಿದೆ. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಹರಿಸಬೇಕಾದ ಸಮಸ್ಯೆಯಾಗಿದೆ ಮತ್ತು ಅಮೆರಿಕ ಸೇರಿದಂತೆ ಮೂರನೇ ವ್ಯಕ್ತಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಎರಿಕ್ ಗಾರ್ಸೆಟ್ಟಿ ಅವರು ಹೇಳಿದರು.

ಪಾಕಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರು ಇತ್ತೀಚೆಗೆ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಖಾಸಗಿ ಭೇಟಿ ನೀಡಿದ್ದರು. ಈ ಘಟನೆಯೇ ಗಾರ್ಸೆಟ್ಟಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರೇರಣೆಯಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನವನ್ನು ನವದೆಹಲಿಯು, ಅವಿಭಜಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಅವಿಭಾಜ್ಯ ಅಂಗ ಎಂದು ಪರಿಗಣಿಸುತ್ತದೆ.

ಈ ಸುದ್ದಿಯನ್ನೂ ಓದಿ: G 20 Meeting: ಚೀನಾ ಮತ್ತೆ ಉದ್ಧಟತನ; ಕಾಶ್ಮೀರ ವಿವಾದಿತ ಪ್ರದೇಶ ಎಂದು ಹೇಳಿಕೆ, ಜಿ-20 ಸಭೆ ಬಹಿಷ್ಕಾರ

ಭೇಟಿಯ ವೇಳೆ ಪಾಕಿಸ್ತಾನದ ರಾಯಭಾರಿ ಡೊನಾಲ್ಡ್ ಬ್ಲೋಮ್ ಅವರು ಗಿಲ್ಗಿಟ್-ಬಾಲ್ಟಿಸ್ತಾನದ ಅನೇಕ ಮನರಂಜನೆಯ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಿದರು. ಇದೇ ವೇಳೆ ಅವರು ಗಿಲ್ಗಿಟ್-ಬಾಲ್ಟಿಸ್ತಾನ್ ಅಸೆಂಬ್ಲಿಯ ಡೆಪ್ಯುಟಿ ಸ್ಪೀಕರ್ ಸಾದಿಯಾ ಡ್ಯಾನಿಶ್ ಮತ್ತು ಅಸೆಂಬ್ಲಿ ಸದಸ್ಯೆ ರಾಣಿ ಸನಮ್ ಫರ್ಯಾದ್ ಅವರೊಂದಿಗೆ ಸಭೆ ನಡೆಸಿದರು.

ಅಮೆರಿಕದ ರಾಜತಾಂತ್ರಿಕರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2002ರ ಅಕ್ಟೋಬರ್‌ನಲ್ಲಿ ಡೊನಾಲ್ಡ್ ಬ್ಲೋಮ್ ಅವರು ಮುಜಫರಾಬಾದ್‌ಗೆ ಭೇಟಿ ನೀಡಿ, ಪಾಕ್‌ನಿಂದ ನೇಮಕವಾಗಿರುವ ತನ್ವೀರ್ ಇಲ್ಯಾಸ್ ಅವರನ್ನು ಭೇಟಿ ಮಾಡಿದ್ದರು. 2005ರ ಭೂಕಂಪದಲ್ಲಿ ಮೃತಪಟ್ಟ ಜನರಿಗೆ ಈ ವೇಳೆ ಬ್ಲೋಮ್ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅಲ್ಲದೇ, ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯನ್ನು ದೃಢಪಡಿಸಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version