ಬೆಂಗಳೂರು: ಕರ್ನಾಟಕದಂತೆಯೇ ದಕ್ಷಿಣದ ಇನ್ನಿತರ ರಾಜ್ಯಗಳಲ್ಲೂ ತನ್ನ ಬಲವರ್ಧನೆಗೆ ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆಯೋಜಿಸಿದೆ ಎನ್ನುತ್ತಿರುವಾಗಲೇ, ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಕಾರ್ಯಕ್ರಮದ ಮೂಲಕ ತೆಲಂಗಾಣ ಸಿಎಂ ಶಕ್ತಿಪ್ರದರ್ಶನ ಮಾಡಿದ್ದಾರೆ. ರಾಜ್ಯದ ಕರಾವಳಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದರೆ ಅತ್ತ ಕ್ರಿಕೆಟ್‌ನಲ್ಲಿ ಬೌಲರ್ ಜಸ್‌ಪ್ರಿತ್ ಬುಮ್ರಾ ಒಂದೇ ಓವರ್‌ನಲ್ಲಿ 35 ರನ್ ಸುರಿಮಳೆಗೈದಿದ್ದಾರೆ ಎಂಬುದರ ಜತೆಗೆ ದೇಶದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಬಿಜೆಪಿ ಕಾರ್ಯಕಾರಿಣಿಗೆ ಕೆಸಿಆರ್ ಕೌಂಟರ್; ಬಲ ಪ್ರದರ್ಶನಕ್ಕಾಗಿ ಯಶವಂತ್ ಸಿನ್ಹಾರನ್ನು ಕರೆಸಿದ ಸಿಎಂ
ತೆಲಂಗಾಣದಲ್ಲಿ ಶನಿವಾರ ಹಾಗೂ ಭಾನುವಾರ ಬಿಜೆಪಿ ಕಾರ್ಯಕಾರಿಣಿ ದೊಡ್ಡ ಉತ್ಸವದ ರೂಪದಲ್ಲಿ ನಡೆಯಲಿದೆ. ಈಗಾಗಲೇ ನಗರದ ಬಹುತೇಕ ಮಾರ್ಗಗಳೆಲ್ಲ ಕೇಸರಿಮಯವಾಗಿ ಬಿಜೆಪಿ ಬಾವುಟಗಳು, ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾರ ಪೋಸ್ಟರ್‌ಗಳಿಂದ ರಾರಾಜಿಸುತ್ತಿವೆ. ತೆಲಂಗಾಣ ಕೇಸರಿಯಾಗಿದ್ದು, ಸಹಜವಾಗಿಯೇ ಅಲ್ಲಿನ ಆಡಳಿತ ಪಕ್ಷ ಟಿಆರ್‌ಎಸ್‌ಗೆ ಉರಿ ಮುಟ್ಟಿಸಿದೆ. ಕೆ. ಚಂದ್ರಶೇಖರ್ ರಾವ್ ಸದಾ ಬಿಜೆಪಿ ವಿರುದ್ಧ ಕಿಡಿಕಾರುತ್ತಾರೆ. ಅವರು ಬಿಜೆಪಿಗೆ ಕೌಂಟರ್ ಕೊಡುತ್ತಿದ್ದು, ಮೋದಿ ಆಗಮಿಸಿದ ದಿನವೇ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಗರವನ್ನು ಗುಲಾಬಿಮಯವಾಗಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ವಿಸ್ತಾರ Explainer: ಬಿಜೆಪಿ ಕಾರ್ಯಕಾರಿಣಿ, ಟಿಆರ್‌ಎಸ್ ಜತೆ ಫೈನಲ್ ಫೈಟ್‌ಗೆ ಮುಹೂರ್ತ?
2. Rain News | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ: ತೋಟ, ಮನೆಗಳಿಗೆ ನುಗ್ಗಿದ ನೀರು
ರಾಜ್ಯಾದ್ಯಂತ ಮುಂಗಾರು ಅಬ್ಬರ ದಿನೇದಿನೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ (ಜು.1) ರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ವರ್ಷ ದಾಖಲೆಯ ಮಳೆಯಾಗಿದ್ದು, 2005 ರಲ್ಲಿ 106 ಮಿ.ಮೀ. ಮಳೆ ದಾಖಲಾಗಿತ್ತು. ಲಭ್ಯ ಮಾಹಿತಿ ಪ್ರಕಾರ 47 ವರ್ಷದಲ್ಲಿ ಎರಡನೇ ಬಾರಿ ಧಾರಾಕಾರ ಮಳೆಯಾಗಿದೆ. ಸುಳ್ಯ ನಗರದಲ್ಲಿ 136 ಮಿ.ಮೀ. ಮಳೆಯಾಗಿದೆ ಎಂದು ಮಳೆ ದಾಖಲುಕಾರರಾದ ಎಂದು ಪಿ.ಜಿ.ಎಸ್.ಎನ್.ಪ್ರಸಾದ್ ಹಾಗೂ ಶ್ರೀಧರ್ ರಾವ್ ಮಾಹಿತಿ ನೀಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
3. Rajasthan murder: ಬಿಜೆಪಿಯೊಳಗೆ ನುಸುಳಲು ಸಂಚು ನಡೆಸಿದ್ದ ಕನ್ಹಯ್ಯ ಲಾಲ್ ಹಂತಕರು!
ರಾಜಸ್ಥಾನದ ಉದಯಪುರದಲ್ಲಿ ಟೇಲರ್ ಕನ್ಹಯ್ಯ ಲಾಲ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಮಹಮ್ಮದ್ ಗೌಸ್ ಎಂಬ ದುಷ್ಟರು ಬಿಜೆಪಿ ಜತೆ ಸಂಪರ್ಕ ಹೊಂದಿದ್ದರೇ ಎಂಬ ಚರ್ಚೆ ಜೋರಾಗಿದೆ. ಈ ನಡುವೆ, ಅವರಿಬ್ಬರೂ ಬಿಜೆಪಿಯೊಳಗೆ ನುಸುಳಿ ಪಕ್ಷದ ಸ್ಥಳೀಯ ನಾಯಕರನ್ನು ಕೊಲ್ಲಲು ಸಂಚು ನಡೆಸುತ್ತಿದ್ದರು ಎಂಬ ಟ್ವಿಸ್ಟ್ ಸಿಕ್ಕಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೪. IBPS Clerk Recruitment 2022 | ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡದಲ್ಲಿಯೇ ನಡೆಯಲಿದೆ ಎಕ್ಸಾಮ್
ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳ (IBPS Clerk Recruitment 2022) ನೇಮಕಕ್ಕಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ’ ನಡೆಸಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ ೨೧ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
೫. ಒಂದೇ ಓವರ್‌ನಲ್ಲಿ 35 ರನ್, ಬುಮ್ರಾ World Record
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹಾಗೂ ಟೆಸ್ಟ್ ತಂಡದ ಹಂಗಾಮಿ ನಾಯಕ ಜಸ್‌ಪ್ರಿತ್ ಬುಮ್ರಾ ಟೆಸ್ಟ್ ಮಾದರಿಯಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಆದರೆ ಅದು ಬೌಲಿಂಗ್‌ನಲ್ಲಿ ಅಲ್ಲ, ಬ್ಯಾಟಿಂಗ್‌ನಲ್ಲಿ. ಓವರ್ ಒಂದರಲ್ಲಿ ಗರಿಷ್ಠ (೩೫ ರನ್) ಬಾರಿಸುವ ಮೂಲಕ ಅವರು world record ಮಾಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ವಿದೇಶಿ ನೆಲದಲ್ಲಿ ಮೊದಲ Century ಬಾರಿಸಿದ ಜಡೇಜಾ
೬. ವರುಷ ಎಂಟು, ಅವಾಂತರಗಳು ನೂರೆಂಟು: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಪುಸ್ತಕ
ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ವರ್ಷದ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇತ್ತ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ʻವರುಷ ಎಂಟು, ಅವಾಂತರಗಳು ನೂರೆಂಟುʼ ಎಂಬ ೪೦ ಪುಟದ ಕಿರುಪುಸ್ತಕ ಸಿದ್ಧಪಡಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈ ಎಂಟು ವರ್ಷಗಳ ಸಂಭ್ರಮಾಚರಣೆ, ಸುಳ್ಳಿನ ಆಚರಣೆ. ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ ಜನದ್ರೋಹದ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7. ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ: ವಿದ್ಯುತ್ ಸಂಪರ್ಕ ಪಡೆಯಲು ʻಒಸಿʼ ಬೇಡ
ಬೆಂಗಳೂರಿನ ಸುಮಾರು ಐದು ಲಕ್ಷಕ್ಕೂ ಹೆಚ್ಚು ಹಾಗೂ ರಾಜ್ಯದ ವಿವಿಧ ನಗರ ಪ್ರದೇಶದ ಲಕ್ಷಾಂತರ ಕಟ್ಟಡ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಗೃಹ, ವಾಣಿಜ್ಯ ಬಳಕೆ ಉದ್ದೇಶಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಸ್ಥಳೀಯ ಸಂಸ್ಥೆಗಳಿಂದ ಪಡೆಯಬೇಕಿದ್ದ ಸ್ವಾಧೀನಾನುಭವ ಪ್ರಮಾಣಪತ್ರ(ಒಸಿ) ಪಡೆಯುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಜಾರಿಗೆ ತಂದಿದ್ದ ನಿಯಮವನ್ನು ಇದೀಗ ಸಿಎಂ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ತೆಗೆದುಹಾಕಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
8. ಕಾಂಗ್ರೆಸ್ ಮಾಜಿ ನಾಯಕ ಕ್ಯಾ. ಅಮರಿಂದರ್ ಸಿಂಗ್ ಎನ್‌ಡಿಎ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?
ಕಾಂಗ್ರೆಸ್ ಮಾಜಿ ನಾಯಕ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಎನ್‌ಡಿಎ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಅವರ ಕಚೇರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಕಾಂಗ್ರೆಸ್ ಬಿಟ್ಟ ನಂತರ, ಪಂಜಾಬ್ ಲೋಕ್ ಕಾಂಗ್ರೆಸ್ ಪಾರ್ಟಿ ಕಟ್ಟಿರುವ ಅವರು, ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅವರೀಗ ಲಂಡನ್‌ನಲ್ಲಿ, ಬೆನ್ನುನೋವಿನ ಸರ್ಜರಿಗೆ ಒಳಗಾಗಿದ್ದಾರೆ. ಅಲ್ಲಿಂದ ವಾಪಸಾದ ತಕ್ಷಣ ಬಿಜೆಪಿ ಸೇರಲಿದ್ದಾರೆ. ತಮ್ಮ ಪಕ್ಷವನ್ನು ಅದರೊಂದಿಗೆ ವಿಲೀನ ಮಾಡಲಿದ್ದಾರೆ ಎಂದು ಹೇಳಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
9. ಸಿಎಂ ಏಕನಾಥ ಶಿಂಧೆಯನ್ನು ಶಿವಸೇನೆಯ ಎಲ್ಲ ಹುದ್ದೆಗಳಿಂದ ವಜಾಗೊಳಿಸಿದ ಉದ್ಧವ್ ಠಾಕ್ರೆ
ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರನ್ನು ಶಿವಸೇನೆ ಪಕ್ಷದ ಎಲ್ಲ ಹುದ್ದೆಗಳಿಂದಲೂ ವಜಾಗೊಳಿಸಿ ಉದ್ಧವ್ ಠಾಕ್ರೆ ಆದೇಶ ಹೊರಡಿಸಿದ್ದಾರೆ. ಏಕನಾಥ ಶಿಂಧೆ ಶಿವಸೇನೆಯಿಂದ ಬಂಡಾಯ ಹೋಗಿ ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ. ʻನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದೀರಿ. ಈ ಮೂಲಕ ಶಿವಸೇನೆಯ ಸದಸ್ಯತ್ವನ್ನೂ ನೀವೇ ಬಿಟ್ಟಿದ್ದೀರಿ. ಹೀಗಾಗಿ ಶಿವಸೇನೆಯ ಪ್ರಮುಖ್ ಆಗಿರುವ ನಾನು ನನ್ನ ಅಧಿಕಾರ ಬಳಸಿಕೊಂಡು, ನಿಮ್ಮನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ತೆಗೆದುಹಾಕುತ್ತಿದ್ದೇನೆʼ ಎಂದು ಉದ್ಧವ್ ಠಾಕ್ರೆ ಆದೇಶ ಪತ್ರದಲ್ಲಿ ಬರೆದಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. ಸ್ಪೈಸ್‌ಜೆಟ್ ವಿಮಾನದಲ್ಲಿ ಹೊಗೆ ಕಂಡ ಬಳಿಕ ತುರ್ತು ಭೂಸ್ಪರ್ಶ, 2 ತಿಂಗಳಲ್ಲಿ 4ನೇ ಅವಘಡ
ನವ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತಾಗಿ ಮರಳಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ. ಸ್ಪೈಸ್‌ಜೆಟ್ ವಿಮಾನ ಈ ರೀತಿ ಸಮಸ್ಯೆಗೆ ಸಿಲುಕುತ್ತಿರುವುದು ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಬಾರಿ. ದಿಲ್ಲಿಯಿಂದ ಹೊರಟ ಈ ವಿಮಾನದಲ್ಲಿ ೫೦ ಪ್ರಯಾಣಿಕರು ಇದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)