ವರುಷ ಎಂಟು, ಅವಾಂತರಗಳು ನೂರೆಂಟು: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಪುಸ್ತಕ - Vistara News

ಅವಿಭಾಗೀಕೃತ

ವರುಷ ಎಂಟು, ಅವಾಂತರಗಳು ನೂರೆಂಟು: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಪುಸ್ತಕ

ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಪ್ರಯತ್ನ ಮಾಡಿಲ್ಲ. ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ ಎಂದು ನರೇಂದ್ರ ಮೋದಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

siddaramaiah book on modi govt eight years
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ವರ್ಷದ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇತ್ತ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ʻವರುಷ ಎಂಟು, ಅವಾಂತರಗಳು ನೂರೆಂಟುʼ ಎಂಬ ೪೦ ಪುಟದ ಕಿರುಪುಸ್ತಕ ಸಿದ್ಧಪಡಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪುಸ್ತಕವನ್ನು ಸಿದ್ದರಾಮಯ್ಯ ಶನಿವಾರ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರು 2014 ಮೇ 28 ರಂದು ಪ್ರಧಾನಿಯಾಗಿದ್ದು, ಈ ವರ್ಷದ ಮೇ 28ಕ್ಕೆ ಅವರು 8 ವರ್ಷಗಳು ತುಂಬಿದೆ. ಈ ಎಂಟು ವರ್ಷಗಳಲ್ಲಿ ದೇಶದಲ್ಲಿ ಸುಭಿಕ್ಷೆ ತಂದಿದ್ದೇವೆ, ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದಾರೆ.

ನರೇಂದ್ರ ಮೋದಿ ಅವರು 12 ವರ್ಷ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು, ಈಗ ಪ್ರಧಾನಿಯಾಗಿ ಎಂಟು ವರ್ಷಗಳು ತುಂಬಿದೆ. ಮೋದಿ ಅವರು 2014 ರಲ್ಲಿ ಗುಜರಾತ್‌ ಮಾದರಿ ಮಾಡುತ್ತೇವೆ ಎಂದು ದೇಶದ ಉದ್ದಗಲಕ್ಕೆ ಭ್ರಮೆಯನ್ನು ಹುಟ್ಟಿಸಿದ್ದರು. ವಿದೇಶದಲ್ಲಿರುವ ಕಪ್ಪು ಹಣ ತಂದು 15 ಲಕ್ಷದಂತೆ ಪ್ರತಿ ಕುಟುಂಬಕ್ಕೆ ಹಂಚುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ, ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಬೆಲೆ ಏರಿಕೆಯನ್ನು ತಡೆಗಟ್ಟಿ ಅಚ್ಚೇ ದಿನ್‌ ತರುತ್ತೇವೆ ಎಂದಿದ್ದರು.

ಇದನ್ನೂ ಓದಿ | Modi In Karnataka | ಮೋದಿ ಕಾರ್ಯಕ್ರಮದ ಸಮಯಕ್ಕೇ ಸುದ್ದಿಗೋಷ್ಠಿ ಕರೆದ ಸಿದ್ದರಾಮಯ್ಯ

ಕಳೆದ ಎಂಟು ವರ್ಷಗಳಲ್ಲಿ ಒಂದೇ ಒಂದೂ ಭರವಸೆಯೂ ಈಡೇರಿಲ್ಲ. ಇವರ ಮಾತು ನಂಬಿ 2014 ರಲ್ಲಿ 83.4 ಕೋಟಿ ಮತದಾರರಲ್ಲಿ 17 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು. 2019ರಲ್ಲಿ ಈ ಯಾವ ಭರವಸೆಗಳೂ ಈಡೇರದಿದ್ದ ಕಾರಣಕ್ಕೆ ಜನ ಬೇಸರಗೊಂಡಿದ್ದರು. ಹಾಗಾಗಿ ಪುಲ್ವಾಮಾ ಮತ್ತು ಬಾಲಾಕೋಟ್‌ ವಿಷಯಗಳನ್ನು ಮುಂದಕ್ಕೆ ತಂದು ಜನರನ್ನು ವಾಸ್ತವ ಸಮಸ್ಯೆಗಳಿಂದ ಬೇರೆ ಕಡೆ ತಿರುಗಿಸಿ ಮತ್ತೆ ಅಧಿಕಾರಕ್ಕೆ ಬಂದರು. 2019ರ ಚುನಾವಣೆಯಲ್ಲಿ 92 ಕೋಟಿ ಮತದಾರದಲ್ಲಿ 22.9 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು. ಇಡೀ ದೇಶದ ಮತದಾರರು ತಮಗೆ ಬೆಂಬಲಿಸಿದ್ದಾರೆ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ ಎಂದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ನೋಟು ರದ್ದತಿ, ಜಿಎಸ್‌ಟಿ ಜಾರಿ, ಕೊರೊನಾ ಬರುವ ಪೂರ್ವದಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗಗಳು ಇದ್ದವು. ಈಗ ಅವುಗಳಲ್ಲಿ 2.5 ಕೋಟಿ ಉದ್ಯೋಗ ಉಳಿದಿವೆ. ವಿದ್ಯಾವಂತ ಯುವಜನತೆ ಕೆಲಸ ಕೇಳಿದರೆ ಪಕೋಡ ಮಾರಿ ಎಂದರು, ವಿದ್ಯಾವಂತರು ಪಕೋಡ ಮಾರೋಕೆ ಹೋದರೆ ಮೊದಲು ಪಕೋಡ ಮಾರುತ್ತಿದ್ದವರು ಎಲ್ಲಿ ಹೋಗಬೇಕು? ಇಂದು ದೇಶದ ನಿರುದ್ಯೋಗ ಮಿತಿಮೀರಿದೆ. ಸರ್ಕಾರದ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ.

ಮೋದಿ ಸರ್ಕಾರದ 8 ವರ್ಷಗಳ 8 ಅನಾಹುತಗಳು:

1. ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ.
2. ಬೆಲೆಯೇರಿಕೆ ಹಿಂದೆಂದು ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರ ಗತಿಗೆ ಮುಟ್ಟಿದೆ.
3. ನಿರುದ್ಯೋಗ ತಾರಕಕ್ಕೇರಿದೆ.
4. ರಾಜ್ಯಗಳ ಆರ್ಥಿಕತೆ ಕುಸಿದುಹೋಗುತ್ತಿದೆ.
5. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ ಇದರ ಜೊತೆಯಲ್ಲಿ ದೇಶದ ಪ್ರಜಾಪ್ರಭುತ್ವ ಭಯಬೀತವಾಗಿದೆ.
6. ಜಿಎಸ್‌ಟಿ, ನೋಟು ಅಮಾನ್ಯೀಕರಣ, ಕೊರೊನಾ ನಿರ್ವಹಣೆಯ ಎಡಬಿಡಂಗಿ ನಿಲುವುಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿದೆ.
7. ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ, ಕಾರ್ಖಾನೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ.
8. ರೈತರು, ಕಾರ್ಮಿಕ, ಮಹಿಳೆ, ಯುವ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಅದರ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ, ಧಮನಿಸಲಾಗುತ್ತಿದೆ. ಜನರನ್ನು ಬಡತನಕ್ಕೆ ತಳ್ಳಲಾಗುತ್ತಿದೆ, ಅಂಬಾನಿ, ಅದಾನಿಗಳಂತಹಾ ಕಾರ್ಪೋರೇಟ್‌ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ.

ಬಿಜೆಪಿ ನಾಯಕರು ಉತ್ತರಿಸಲಿ

ಈ ಎಂಟು ವರ್ಷಗಳ ಸಂಭ್ರಮಾಚರಣೆ, ಸುಳ್ಳಿನ ಆಚರಣೆ. ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ, ಜನದ್ರೋಹದ ಕೆಲಸ ಮಾಡಿದ್ದಾರೆ. ಇವುಗಳ ಬಗ್ಗೆ ಮಾಹಿತಿ ಸಹಿತವಾದ ಒಂದು ಕಿರು ಹೊತ್ತಿಗೆಯನ್ನು ತರುತ್ತಿದ್ದೇವೆ. ಹೈದರಾಬಾದ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಈ ಪುಸ್ತಕದಲ್ಲಿರುವ ವಿಷಯಗಳಿಗೆ ಬಿಜೆಪಿಯವರು ಉತ್ತರ ನೀಡಬೇಕು. ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಅವರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಾ ನೋಡೋಣ ಎಂದರು.

ಇದನ್ನೂ ಓದಿ | ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದೆ BJP: ಸಿದ್ದರಾಮಯ್ಯ ವಾಗ್ದಾಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಗೋಡೆಗಳ ಮೇಲೆ ತೂಗು ಹಾಕುವ ಚಿತ್ರಗಳಿಗೂ ಪ್ರಮುಖ ನಿಯಮಗಳು ಮತ್ತು ಸಲಹೆಗಳನ್ನು ವಾಸ್ತು ಶಾಸ್ತ್ರದಲ್ಲಿ (Vastu Tips) ನೀಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಬಹುದು ಮತ್ತು ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಬಹುದು.

VISTARANEWS.COM


on

By

Vastu Tips
Koo

ಮನೆಯಲ್ಲಿ (home) ಪ್ರತಿಯೊಂದು ವಸ್ತುವನ್ನು ಇಡಲೂ ವಾಸ್ತು (Vastu Tips) ನಿಯಮವಿದೆ. ಯಾಕೆಂದರೆ ಮನೆಯೊಳಗಿರುವ ಪ್ರತಿಯೊಂದು ವಸ್ತುವಿನಲ್ಲೂ ಜೀವಕಳೆ ತುಂಬುತ್ತದೆ ಮತ್ತು ಶಕ್ತಿಯ ಕೇಂದ್ರವಾಗಿಸುತ್ತದೆ. ಗೋಡೆಯಲ್ಲಿ (wall) ತೂಗು ಹಾಕುವ ಚಿತ್ರಗಳನ್ನು (Picture) ಇಡುವಾಗಲೂ ವಾಸ್ತು ನಿಯಮವನ್ನು ಪಾಲಿಸಬೇಕು. ಯಾಕೆಂದರೆ ಗೋಡೆಗಳ ಮೇಲೆ ಇಡುವ ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ ಸಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಪ್ರವಹಿಸುವಂತೆ ಮಾಡುತ್ತದೆ. ಎಲ್ಲೆಂದರಲ್ಲಿ ಅಳವಡಿಸಿದರೆ ನಕಾರಾತ್ಮಕತೆ ಹೆಚ್ಚುತ್ತದೆ.

ಮನೆಯ ಗೋಡೆಗಳ ಮೇಲೆ ತೂಗು ಹಾಕುವ ಚಿತ್ರ, ಸರಿಯಾದ ದಿಕ್ಕು ಮತ್ತು ನಿರ್ದಿಷ್ ಬಣ್ಣದದ್ದರೆ ಮಾತ್ರ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ ಎನ್ನುತ್ತದೆ ವಾಸ್ತು.

ಉತ್ತರ ದಿಕ್ಕು

ಸಂಪತ್ತಿನ ದೇವರು ಕುಬೇರ ಈ ದಿಕ್ಕಿನಲ್ಲಿ ವಾಸಿಸುತ್ತಾನೆ. ಹಚ್ಚ ಹಸಿರಿನ ಮರಗಳು, ಸಸ್ಯವರ್ಗ ಮತ್ತು ನೀರಿನ ಮೂಲಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ.

ಪೂರ್ವ ದಿಕ್ಕು

ಈ ದಿಕ್ಕನ್ನು ಉದಯಿಸುತ್ತಿರುವ ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಭಗವಾನ್ ಸೂರ್ಯ, ಸಂತರು ಅಥವಾ ಸೂರ್ಯೋದಯದ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡುವುದು ಪ್ರಯೋಜನಕಾರಿ. ಈ ಚಿತ್ರಗಳು ಮನೆಯಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತರುತ್ತವೆ.

ದಕ್ಷಿಣ ದಿಕ್ಕು

ಪೂರ್ವಜರು ಮತ್ತು ಧರ್ಮಗ್ರಂಥಗಳ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇರಿಸಬಹುದು. ದೆವ್ವ, ಆತ್ಮ ಅಥವಾ ನಕಾರಾತ್ಮಕ ಶಕ್ತಿಯ ಚಿತ್ರಗಳನ್ನು ಈ ದಿಕ್ಕಿನಲ್ಲಿ ಇಡಬಾರದು. ಕೆಂಪು, ಚಿನ್ನದ ಅಥವಾ ಕಿತ್ತಳೆ ಬಣ್ಣದ ಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಪಶ್ಚಿಮ ದಿಕ್ಕು

ಈ ದಿಕ್ಕು ನೀರಿನ ಅಂಶದಿಂದ ಪ್ರಭಾವಿತವಾಗಿರುತ್ತದೆ. ಈ ದಿಕ್ಕಿನಲ್ಲಿ ನೀರು, ಸಮುದ್ರ, ನದಿ ಅಥವಾ ಕಾರಂಜಿ ಚಿತ್ರಗಳನ್ನು ಹಾಕುವುದು ಮಾನಸಿಕ ಶಾಂತಿ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.


ಫೋಟೋಗಳು ಹೇಗಿರಬೇಕು?

ದೇವರು, ದೇವತೆಗಳು ಮತ್ತು ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಮನೆಯಲ್ಲಿ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಈ ಚಿತ್ರಗಳು ಕುಟುಂಬದಲ್ಲಿ ಶಾಂತಿ ಮತ್ತು ಭಕ್ತಿಯನ್ನು ಉತ್ತೇಜಿಸುತ್ತವೆ.

ಹಚ್ಚ ಹಸಿರಿನ ಮರ, ಹೂವುಗಳು, ಪರ್ವತ, ನದಿಗಳು ಮುಂತಾದ ಸುಂದರವಾದ ನೈಸರ್ಗಿಕ ದೃಶ್ಯಗಳ ಚಿತ್ರಗಳನ್ನು ಹಾಕುವುದು ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಕುಟುಂಬ ಸದಸ್ಯರ ಗುಂಪು ಫೋಟೋಗಳನ್ನು ಅಥವಾ ಸಂತೋಷದ ಕುಟುಂಬ ಕ್ಷಣಗಳ ಚಿತ್ರಗಳನ್ನು ಹಾಕುವುದು ಕುಟುಂಬದಲ್ಲಿ ಪ್ರೀತಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಏರುತ್ತಿರುವ ಸೂರ್ಯ, ಚಾಲನೆಯಲ್ಲಿರುವ ಕುದುರೆಗಳು, ಹಾರುವ ಪಕ್ಷಿಗಳು ಮುಂತಾದ ಶಕ್ತಿಯುತ ಮತ್ತು ಸ್ಪೂರ್ತಿದಾಯಕ ಚಿತ್ರಗಳನ್ನು ಇಡುವುದರಿಂದ ಮನೆಯವರಲ್ಲಿ ಶಕ್ತಿ ಮತ್ತು ಸ್ಫೂರ್ತಿ ನೀಡುತ್ತದೆ.

ಯಾವ ಎತ್ತರದಲ್ಲಿ ಇಡಬೇಕು?

ಚಿತ್ರಗಳನ್ನು ಸುಲಭವಾಗಿ ಗೋಚರಿಸುವಂತಹ ಎತ್ತರದಲ್ಲಿ ಗೋಡೆಯ ಮೇಲೆ ಇಡಬೇಕು ಮತ್ತು ಅವುಗಳನ್ನು ನೋಡುವಲ್ಲಿ ಯಾರೂ ಅನಾನುಕೂಲವಾಗಬಾರದು. ಚಿತ್ರಗಳನ್ನು ಮುಖ್ಯ ಬಾಗಿಲಿನ ಮುಂದೆ ಅಥವಾ ನೇರವಾಗಿ ಹಾಸಿಗೆಯ ಮುಂದೆ ಇಡುವುದನ್ನು ತಪ್ಪಿಸಬೇಕು. ಧಾರ್ಮಿಕ ಅಥವಾ ಕುಟುಂಬದ ಚಿತ್ರಗಳನ್ನು ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಇಡಬಾರದು.

ಇದನ್ನೂ ಓದಿ: Vastu Tips: ವೈವಾಹಿಕ ಜೀವನ ಸುಖಮಯವಾಗಿರಲು ಈ ವಾಸ್ತು ನಿಯಮ ಅನುಸರಿಸಿ

ಫೋಟೋಗಳ ಬಣ್ಣ ಏನು?

ವರ್ಣಚಿತ್ರಗಳಲ್ಲಿ ಬಳಸುವ ಬಣ್ಣಗಳಿಗೆ ಗಮನ ಕೊಡುವುದು ಸಹ ಮುಖ್ಯವಾಗಿದೆ. ನೀಲಿ, ಹಸಿರು, ಹಳದಿ ಮುಂತಾದ ಬೆಳಕು ಮತ್ತು ಹಿತವಾದ ಬಣ್ಣಗಳು ಮಾನಸಿಕ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಕೆಂಪು, ಕಪ್ಪು ಮತ್ತು ಕಂದು ಬಣ್ಣಗಳಂತಹ ಗಾಢ ಮತ್ತು ಹೆಚ್ಚು ಉತ್ತೇಜಕ ಬಣ್ಣಗಳನ್ನು ಮಿತವಾಗಿ ಬಳಸಬೇಕು.

ಫೋಟೋಗಳನ್ನು ಹೇಗೆ ಇರಿಸಬೇಕು?

ಚಿತ್ರಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿಡಬೇಕು. ಧೂಳು, ಕೊಳಕು ಮತ್ತು ಹಾನಿಗೊಳಗಾದ ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು.

Continue Reading

ವೈರಲ್ ನ್ಯೂಸ್

Viral Video: ಮದುವೆಗೂ ಮೊದಲು ವಧುವನ್ನು ಕಿಡ್ನ್ಯಾಪ್‌ ಮಾಡಲೇಬೇಕು! ಇದು ಈ ಜನಾಂಗದ ಕಡ್ಡಾಯ ನಿಯಮ!

ಮದುವೆಗೂ ಮುನ್ನ ಹಿಂಬಾ ಬುಡಕಟ್ಟಿನ ಸಂಪ್ರದಾಯದಲ್ಲಿ ವಧುವನ್ನು ಅಪಹರಿಸಿ ನೂರು ದಿನಗಳ ಕಾಲ ಕೆಂಪು ಮಣ್ಣಿನ ಲೇಪನ ಮಾಡಲಾಗುತ್ತದೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ವಿವಾಹ ವಿಧಿವಿಧಾನಗಳು (Wedding Rituals) ವಿಶ್ವದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆಯಾಗಿರುತ್ತದೆ. ಅದರಲ್ಲೂ ಕೆಲವೊಂದು ಚಿತ್ರವಿಚಿತ್ರ ಆಚರಣೆಗಳೂ ಇವೆ. ಅದರಲ್ಲಿ ನಮಿಬಿಯಾದ (Namibia) ಅರೆ ಅಲೆಮಾರಿ ಬುಡಕಟ್ಟು (tribe) ಜನಾಂಗವಾದ ಹಿಂಬಾದ (himba) ಈ ವಿವಾಹ ಆಚರಣೆಯು ಸೇರಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋಗಳು ವೈರಲ್ (Viral Video) ಆಗಿ ಚರ್ಚೆಗೆ ಕಾರಣವಾಗಿದೆ.

ಹಿಂಬಾವನ್ನು ನಮೀಬಿಯಾದ ಕೊನೆಯ ಅರೆ ಅಲೆಮಾರಿ ಬುಡಕಟ್ಟು ಜನಾಂಗ ಎಂದು ಪರಿಗಣಿಸಲಾಗಿದೆ. ಸುಮಾರು 50,000 ಜನಸಂಖ್ಯೆಯನ್ನು ಹೊಂದಿರುವ ಇವರು ಇಲ್ಲಿನ ಸ್ಥಳೀಯ ಜನರು. ಅವರಿಗೆ ಸ್ವಂತ ಮನೆಗಳಿದ್ದರೂ ಮಳೆ ಅಥವಾ ನೀರಿನ ಕೊರತೆಯಿಂದಾಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಾರೆ. ಹೀಗಾಗಿ ಇವರನ್ನು ಅರೆ ಅಲೆಮಾರಿ ಎಂದು ಕರೆಯಲಾಗುತ್ತದೆ. ಈ ಬುಡಕಟ್ಟು ಜನ ತಮ್ಮ ವಿಚಿತ್ರ ವಿವಾಹ ಪದ್ಧತಿಗಳಿಂದಾಗಿ ಆಗಾಗ್ಗೆ ಎಲ್ಲರ ಗಮನ ಸೆಳೆಯುತ್ತಾರೆ.

ವಧುವಿನ ಅಪಹರಣ

ಹಿಂಬಾ ಬುಡಕಟ್ಟಿನಲ್ಲಿ ಮದುವೆಗೆ ಮೊದಲು ವಧುವನ್ನು ಅಪಹರಿಸಲಾಗುತ್ತದೆ. ಆಕೆಯನ್ನು 100 ದಿನಗಳ ಕಾಲ ಹೆಚ್ಚಿನ ಭದ್ರತೆಯ ಕೋಣೆಯಲ್ಲಿ ಇರಿಸಲಾಗುತ್ತದೆ. ಆ ಸಮಯದಲ್ಲಿ ಕೆಂಪು ಮಣ್ಣನ್ನು ಅವಳ ಸಂಪೂರ್ಣ ದೇಹಕ್ಕೆ ಲೇಪಿಸಲಾಗುತ್ತದೆ. ಇದೀಗ ಅಂತಹ ವಿಡಿಯೋ ವೈರಲ್ ಆಗಿದೆ. ಹಿಂಬಾ ಬುಡಕಟ್ಟಿನಲ್ಲಿ ಮದುವೆಯ ಸಂಪ್ರದಾಯದಲ್ಲಿ ವಧುವಿನ ಅಪಹರಣ ಮತ್ತು ಅವಳಿಗೆ ಕೆಂಪು ಮಣ್ಣನ್ನು ಹೊದಿಸುವುದನ್ನು ಒಳಗೊಂಡಿರುತ್ತದೆ.

ಹೀಗೆ ಅವಳನ್ನು ಅಪಹರಿಸುವಾಗ ವಧು ಹೊಸ ಬಟ್ಟೆ ಮತ್ತು ದುಬಾರಿ ಆಭರಣಗಳೊಂದಿಗೆ ಅಲಂಕರಿಸಲ್ಪಡುತ್ತಾಳೆ. ಈ ಸಮಯದಲ್ಲಿ ಅವಳು ಧರಿಸುವ ಕೆಲವು ವಿಶೇಷ ಉಡುಪುಗಳು ಒಕೋರಿ ಎಂದು ಕರೆಯಲ್ಪಡುವ ಚರ್ಮದ ಶಿರಸ್ತ್ರಾಣವಾಗಿದೆ. ಇದು ಸಾಮಾನ್ಯವಾಗಿ ವಧುವಿನ ತಾಯಿಯಿಂದ ಸಿಗುವ ಉಡುಗೊರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹಿಂಬಾ ಬುಡಕಟ್ಟಿನ ಹುಡುಗಿಯೊಬ್ಬಳು ತನ್ನ ದೇಹದಾದ್ಯಂತ ಕೆಂಪು ಮಣ್ಣನ್ನು ಲೇಪಿಸಿಕೊಂಡು ಕುಳಿತಿದ್ದಾಳೆ. ಕಾಲ್ಬೆರಳಿನಿಂದ ಕೂದಲಿನವರೆಗೆ, ಹುಡುಗಿ ಕೆಂಪು ಮಣ್ಣಿನಲ್ಲಿಮುಚ್ಚಲ್ಪಟ್ಟಿರುತ್ತಾಳೆ.
ಘಾನಾದ ಫ್ರಾಫಾ ಬುಡಕಟ್ಟು ಕೂಡ ಈ ಪದ್ಧತಿಯನ್ನು ಅನುಸರಿಸುತ್ತದೆ.

ಈ ಕುರಿತು ಕಾಮೆಂಟ್ ಮಾಡಿರುವ ಒಬ್ಬರು, ಹುಡುಗಿಯನ್ನು 100 ದಿನಗಳ ಕಾಲ ಕೆಂಪು ಮಣ್ಣಿನಲ್ಲಿ ಮುಚ್ಚಲು ಏನಾದರೂ ವೈಜ್ಞಾನಿಕ ಕಾರಣವಿದೆಯೇ ಎಂದು ಪ್ರಶ್ನಿಸಿದ್ದಾರೆ.


ಮದುವೆ ಮತ್ತು ಮಧುಚಂದ್ರದ ಮೊದಲು ಅವಳ ಚರ್ಮವನ್ನು ನಯಗೊಳಿಸುವುದಕ್ಕಾಗಿ ಮತ್ತು ಅವಳ ದೇಹವನ್ನು ಸ್ವಚ್ಛ ಗೊಳಿಸುವುದಕ್ಕಾಗಿ ಈ ರೀತಿ ಮಾಡುತ್ತಾರೆಯೇ ಎಂಬುದನ್ನು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಂಪ್ರದಾಯ, ಪದ್ಧತಿ ಮತ್ತು ಆಚರಣೆಗಳು ವೈಜ್ಞಾನಿಕ ಮಹತ್ವವನ್ನು ಹೊಂದಿವೆ ಮತ್ತು ಜನರು ಅದನ್ನು ಅನುಸರಿಸುವಂತೆ ಮಾಡಲು ಧಾರ್ಮಿಕ ನಂಬಿಕೆಗಳಿಗೆ ಸೇರಿಸಲಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ

Continue Reading

ರಾಜಕೀಯ

Gali Janardana Reddy : ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಮಡಿಲಿಗೆ, ಕಲ್ಯಾಣದಲ್ಲಿ ಲಾಭ ನಿರೀಕ್ಷೆ

Gali Janardhana Reddy : ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಬಿಜೆಪಿ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆ ಇದೆ.

VISTARANEWS.COM


on

Gali Janarhana Reddy
Koo

ಬೆಂಗಳೂರು: ಬಿಜೆಪಿ ಮೇಲೆ ಮುನಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯ (Assembly Election 2023) ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya pragati Party) ಸ್ಥಾಪನೆ ಮಾ‌ಡಿ ಸಡ್ಡು ಹೊಡೆದಿದ್ದ ಗಾಲಿ ಜನಾರ್ದನ ರೆಡ್ಡಿ (Gali Janardana Reddy) ಅವರು ಕಮಲ ಪಾಳಯಕ್ಕೆ ಮರಳಿದ್ದಾರೆ (Janardhana Reddy rejoins Congress). ಫೆಬ್ರವರಿ 27ರಂದು ನಡೆದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದ ಅವರು ಲೋಕಸಭಾ ಚುನಾವಣೆಗೆ (Lok Sabha Election 2024) ಮುನ್ನ ಬಿಜೆಪಿಗೆ ಬಲ ತುಂಬಿದ್ದಾರೆ. ಅವರ ಮರು ಸೇರ್ಪಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಟಿ. ಜಾನ್‌ ಅವರ ಪುತ್ರ ಥಾಮಸ್‌ ಜಾನ್‌ ಅವರು ಪಕ್ಷ ಸೇರಿದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಿರಿಯ ನಾಯಕ ಸಿ.ಟಿ. ರವಿ, ಸಂಸದ ಪಿ.ಸಿ. ಮೋಹನ್‌, ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಂಸದ ದೇವೇಂದ್ರಪ್ಪ ಅವರು ಭಾಗಿಯಾಗಿದ್ದಾರೆ. ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಅಪಾರ ಬೆಂಬಲಿಗರು ಪಕ್ಷ ಸೇರಿದರು. ಬಿ.ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ. ಅವರು ನಾಯಕರು ಮತ್ತು ಹಿಂಬಾಲಕರನ್ನು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಪಕ್ಷಕ್ಕೆ ಸ್ವಾಗತ ಮಾಡಿದರು.

ಮೋದಿ ಅವರ ನಾಯಕತ್ವ ಮೆಚ್ಚಿ ಬಂದಿದ್ದಾರೆ ಎಂದ ವಿಜಯೇಂದ್ರ

ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಪಕ್ಷಕ್ಕೆ ಬಂದಿರುವುದು ಬಹಳ ಸಂತೋಷದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರು, ತಾವೇ ಕಟ್ಟಿದ ಪಕ್ಷವನ್ನು ವಿಸರ್ಜನೆ ಮಾಡಿ ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಶಕ್ತಿ ಬಂದಂತಾಗಿದೆ. ಮೋದಿ ಅವರ ನಾಯಕತ್ವ ಮೆಚ್ಚಿ ಮರು ಸೇರ್ಪಡೆ ಆಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

Gali Janarhana Reddy1
ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಂದಿಗೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ʻʻಲೋಕಸಭೆಯಲ್ಲಿ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ದಿನೇದಿನೆ ಮೋದಿ ಅವರ ಪರ ವಾತಾವರಣ ಹೆಚ್ಚುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ‌ʼʼ ಎಂದು ಹೇಳಿದ್ದಾರೆ.

ಬೆಳಗ್ಗೆ ಹೋಗಿ ಮಧ್ಯಾಹ್ನ ಮರಳಿ ಬಂದ ಹಾಗೆ ಅನಿಸ್ತಿದೆ ಎಂದ Gali Janardana Reddy

ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುತ್ತಿದ್ದೇನೆ. ನನ್ನ ಕಷ್ಟದ ಕಾಲದಲ್ಲಿ ನನ್ನ ಬೆನ್ನಿಗೆ ನಿಂತ ಎಲ್ಲಾ ಕಾರ್ಯಕರ್ತರಿಗೂ ವಂದನೆ ಸಲ್ಲಿಸ್ತೇನೆ. ನಾವೆಲ್ಲರೂ ಸೇರಿ ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ ಎಂದು ಹೇಳಿದರು.

ʻʻದೇಶದ ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಿನಂತೆ ಕೆಲಸ‌ ಮಾಡಿರುವ ಮೋದಿ ಅವರಿಗೆ ವಂದನೆಗಳು. ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿ, ಬಾಹ್ಯ ಬೆಂಬಲ ಬೇಡ. ಬಿಜೆಪಿಗೆ ಬಂದು ಕೆಲಸ ಮಾಡಿ ಅಂತ ಆಹ್ವಾನ ನೀಡಿದರು. ಅವರ ಆಹ್ವಾನ ಸ್ವೀಕರಿಸಿ ಬಂದಿದ್ದೇನೆ. ಇದು ನನ್ನ ಪೂರ್ವ ಜನ್ಮದ ಪುಣ್ಯʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ಅವರು ನನಗೆ ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಯಡಿಯೂರಪ್ಪ ಅವರು ಸಿಎಂ‌ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈಗ ಅವರ ಸುಪುತ್ರ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಕೆಲಸ ಮಾಡುತ್ತೇವೆ ಎಂದು ಹೇಳಿದರು.

ʻʻಎಲ್ಲಾ ಏಳುಬೀಳುಗಳನ್ನು ನೋಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ನನ್ನ ಮನೆಗೆ ವಾಪಸ್ ಬಂದಿರೋ ಖುಷಿ ಇದೆ. ಕೆಲವು ಕಾರಣದಿಂದ ಹೊರಗೆ ಹೋಗಿದ್ದೆ. 13 ವರ್ಷಗಳ ಬಳಿಕ ವಾಪಸ್ ಬಂದಿದ್ದೇನೆ ಅನಿಸುತ್ತಿಲ್ಲ. ಬೆಳಗ್ಗೆ ಹೋಗಿ, ಮಧ್ಯಾಹ್ನ ಬಂದಿದ್ದೇನೆ ಅನಿಸುತ್ತಿದೆʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.

ಇದನ್ನೂ ಓದಿ : Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

Gali Janardana Reddy ಅಜ್ಞಾತವಾಸ ಮುಗಿಸಿ ಮರಳಿದ ಶ್ರೀರಾಮ ಎಂದ ಶ್ರೀರಾಮುಲು

ಜನಾರ್ದನ ರೆಡ್ಡಿ ಅವರ ಪಕ್ಷ ಮರು ಸೇರ್ಪಡೆಯಿಂದ ಅವರ ಗೆಳೆಯ ಹಾಗೂ ಬಳ್ಳಾರಿ‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು, ಜನಾರ್ದನ ರೆಡ್ಡಿ ಅವರು ರಾಜಕೀಯ ಅಜ್ಞಾತವಾಸ ಮುಗಿಸಿ ಬಿಜೆಪಿಗೆ ವಾಪಸು ಬರ್ತಿದ್ದಾರೆ. ಅವರು ಬಿಜೆಪಿಗೆ ಬರುವುದರಿಂದ ರಾಜಕೀಯವಾಗಿ ನಮಗೆ ಲಾಭ ಆಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ನಮಗೆ ಲಾಭ ಆಗಲಿದೆ. ನಮಗೆ ಈ ಬೆಳವಣಿಗೆ ಹೆಚ್ಚು ಶಕ್ತಿ ತಂದಿದೆ. ರಾಷ್ಟ್ರೀಯ ನಾಯಕರು ರೆಡ್ಡಿ ಬಿಜೆಪಿಗೆ ಬರಲು ಕಾರಣರಾಗಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪಿಎಂ ಮಾಡಲು ಈ ನಿರ್ಧಾರ ಎಂದು ಹೇಳಿದರು ಶ್ರೀರಾಮುಲು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಬೆಳವಣಿಗೆ ಆಗಿದ್ದರೆ ಲಾಭ ಆಗುತ್ತಿತ್ತು. ಎಲ್ಲವೂ ರಾಷ್ಟ್ರೀಯ ನಾಯಕರ ಇಚ್ಛೆಯಂತೆ ಆಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.

Gali Janardana Reddy ಸೇರ್ಪಡೆಯಿಂದ ಬಿಜೆಪಿಗೆ ಏನು ಲಾಭ?

ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿ ಸೇರುವುದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಕಮಲ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ.

ಅದರಲ್ಲೂ ಮುಖ್ಯವಾಗಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರಿಗೆ ಸಾಕಷ್ಟು ಲಾಭವಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಂತೆ ಬಿಜೆಪಿ ಮತಗಳು ವಿಭಜನೆ ಆಗೋದು ತಪ್ಪಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಪ್ರಭಾವಿ ನಾಯಕರ ಕೊರತೆಯನ್ನು ರೆಡ್ಡಿ ಸೇರ್ಪಡೆ ನೀಗಲಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ಅನಿವಾರ್ಯವಾದರೆ ರೆಡ್ಡಿ ತಂತ್ರಗಳು ಬಿಜೆಪಿಗೆ ಅನುಕೂಲವಾಗಲಿದೆ. ಯಾಕೆಂದರೆ, ಇಂಥ ತಂತ್ರಗಳನ್ನು ರೂಪಿಸುವಲ್ಲಿ ರೆಡ್ಡಿ ಅವರು ನಿಪುಣರಾಗಿದ್ದಾರೆ.

Continue Reading

ಬೆಂಗಳೂರು

Arun Yogiraj : ರಾಮ್‌ ಲಲ್ಲಾನ ಎಂದೂ ನೋಡದ ಚಿತ್ರ ತೋರಿಸಿದ ಶಿಲ್ಪಿ ಅರುಣ್‌ ಯೋಗಿರಾಜ್‌; ಎಷ್ಟು ಮುದ್ದಾಗಿದೆ ನೋಡಿ…

Arun Yogiraj : ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಒಂದು ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎಂದೂ ಕಾಣದ ಮುಗ್ಧ ಮುಖದ ರಾಮ ಕಾಣಿಸುತ್ತಾನೆ.

VISTARANEWS.COM


on

Arun Yogiraj at work time
Koo

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ (Sri Rama Mandir) ವಿರಾಜಮಾನನಾಗಿರುವ ಶ್ರೀ ರಾಮ ಲಲ್ಲಾನ (Ram lalla) ಸುಂದರ ಮೂರ್ತಿಯನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಕಳೆದ ಜನವರಿ 22ರಂದು ದೇವರ ಪ್ರಾಣಪ್ರತಿಷ್ಠೆ (Rama Pranaprathishte) ನಡೆದಿದ್ದು, ಅಂದು ಮೊದಲ ಬಾರಿಗೆ ಅಲಂಕೃತ ಶ್ರೀ ರಾಮನನ್ನು ನೋಡಿದ ಜನರು ಭಗವಂತನೇ ಧರೆಗಿಳಿದಂತೆ ಕಾಣುತ್ತಿದೆ ಎಂದು ಖುಷಿಪಟ್ಟಿದ್ದರು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರ ಭಕ್ತಿ ಮತ್ತು ಕೈಚಳಕದಿಂದ ಮೂಡಿ ಸುಂದರ ಶಿಲ್ಪ ಕಲಾಕೃತಿಯನ್ನು ಕಳೆದ 33 ದಿನಗಳಲ್ಲಿ ಒಟ್ಟು ಒಂದು ಕೋಟಿ ಜನ ನೋಡಿ ಭಾವುಕರಾಗಿದ್ದಾರೆ. ಇದರ ನಡುವೆಯೇ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಇದುವರೆಗೂ ಯಾರೂ ನೋಡಿರದ ಅಪರೂಪದ ಚಿತ್ರವೊಂದನ್ನು ‌ ತೆರೆದಿಟ್ಟಿದ್ದಾರೆ.

ಇದು ಕೆಲಸ ಪ್ರಗತಿಯಲ್ಲಿದ್ದ ಕಾಲದ ಚಿತ್ರ. ನಮಗೆ ಮೂರ್ತಿಯ ಆಯ ಅಳತೆಗಳ ಬಗ್ಗೆ ಧೈರ್ಯದ ಭಾವನೆ ಇತ್ತು. ಆದರೆ, ರಾಮ್‌ ಲಲ್ಲಾನನ್ನು ನಮ್ಮ ಸೂಕ್ಷ್ಮ ಸ್ಪರ್ಶದಿಂದ ಮೂಡಿಸಿದಾಗ ಅಂತಿಮ ಫಲಿತಾಂಶ ಅದ್ಭುತವಾಗಿ ಮೂಡಿಬಂತು ಎಂದಿದ್ದಾರೆ ಅರುಣ್‌ ಯೋಗಿರಾಜ್‌.

ಟ್ವಿಟರ್‌ನಲ್ಲಿ ತಾವು‌ ಮೂರ್ತಿ ಕೆತ್ತನೆ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿರುವ ಅವರು, ರಾಮನ ಮುದ್ದಾದ ಮುಖವನ್ನು ಕೈಯಲ್ಲಿ ಹಿಡಿದಿದ್ದಾರೆ.

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಐದು ಲಕ್ಷದ 40 ಸಾವಿರ ಜನರು ವೀಕ್ಷಿಸಿದ್ದಾರೆ. ಅದ್ಭುತ ಕಲಾಕೃತಿ ಎಂದು ಹಾಡಿ ಹೊಗಳಿಸಿದ್ದಾರೆ. ಇದು ಮೈಸೂರು ಜಿಲ್ಲೆಯಲ್ಲಿ ಸಿಕ್ಕಿದ ಕೃಷ್ಣ ಶಿಲೆಯಲ್ಲಿ ಕೆತ್ತಿದ ಶಿಲ್ಪವಾಗಿದ್ದು, ಭಾರಿ ಜನಾಕರ್ಷಣೆಯನ್ನು ಪಡೆದಿದೆ.

ಇದನ್ನೂ ಓದಿ : Pandit Pacha Saab | ಶ್ರೀರಾಮ ಕೋಟಿ ಬರೆದಿದ್ದ ಮುಸ್ಲಿಂ ಪಂಡಿತ ವಿಧಿವಶ

ರಾಮ ಲಲ್ಲಾ, ರಾಮ ಜನ್ಮಭೂಮಿ ಚಿತ್ರವಿರುವ ನಾಣ್ಯ ಬಿಡುಗಡೆ

ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಮ ಲಲ್ಲಾ ಮತ್ತು ರಾಮ ಮಂದಿರದ ಚಿತ್ರವಿರುವ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

Continue Reading
Advertisement
Vinay Kulkarni
ಕರ್ನಾಟಕ32 mins ago

Vinay Kulkarni: ವಿನಯ್ ಕುಲಕರ್ಣಿಗೆ ತೀವ್ರ ಹಿನ್ನಡೆ; ಸಿಬಿಐ ವಿಶೇಷ ಕೋರ್ಟ್‌ನ ತೀರ್ಪು ಎತ್ತಿ ಹಿಡಿದ ಸುಪ್ರೀಂ

Modi 3.0 Cabinet
ಪ್ರಮುಖ ಸುದ್ದಿ38 mins ago

Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Students Fashion
ಫ್ಯಾಷನ್48 mins ago

Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

Suresh Gopi
ದೇಶ1 hour ago

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Medical student commits suicide in Bengaluru
ಬೆಂಗಳೂರು1 hour ago

Medical Student : ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

Shivaraj Kumar
ಕರ್ನಾಟಕ2 hours ago

Shivaraj Kumar: ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ?: ನಟ ಶಿವರಾಜ್‌ ಕುಮಾರ್‌

Money Guide
ಮನಿ ಗೈಡ್2 hours ago

Money Guide: ಹೆಚ್ಚಿನ ಬಡ್ಡಿ ಮಾತ್ರವಲ್ಲ, ಪಿಪಿಎಫ್ ನಿಂದ ಇನ್ನೂ ಏನೇನು ಪ್ರಯೋಜನ?

MLA Shivaram Hebbar should resign immediately MLC Shantharama Siddi demands
ಉತ್ತರ ಕನ್ನಡ2 hours ago

Uttara Kannada News: ಪಕ್ಷದ್ರೋಹಿ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹ

Chandan Shetty Niveditha gowda roumers on srujan lokesh
ಸ್ಯಾಂಡಲ್ ವುಡ್2 hours ago

Chandan Shetty: 3ನೇ ವ್ಯಕ್ತಿ ಜತೆ ನಿವೇದಿತಾ ಸಂಬಂಧದ ಕುರಿತು ಚಂದನ್‌ ಹೇಳಿದ್ದೇನು?

Viral Video
ವೈರಲ್ ನ್ಯೂಸ್2 hours ago

Viral Video: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಗೆ ಬೆಂಕಿ! ಸೋಲೇ ಕಾರಣ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ7 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌