Site icon Vistara News

CM Siddaramaiah: ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್‌; ಹೈಕೋರ್ಟ್‌ ತೀರ್ಪಿನಿಂದ ನಿರಾಳವೋ.. ಸಂಕಷ್ಟವೋ

Siddaramaiah

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah ) ಕುಟುಂಬದ ವಿರುದ್ಧ ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್‌ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ‌ಯಲ್ಲಿ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠವು ತೀರ್ಪು ಕಾಯ್ದರಿಸಿತ್ತು. ಕಳೆದ ಹತ್ತು ದಿನಗಳ ಹಿಂದೆ (ಸೆ.12) ವಾದ-ಪ್ರತಿವಾದವನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಮುಕ್ತಾಯ ಮಾಡಿತ್ತು. ಸೆ.24ಕ್ಕೆ ಮಹತ್ವದ ತೀರ್ಪು ಪ್ರಕಟಿಸಲಿದೆ.

ಅಂದಹಾಗೇ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ ಮಾಡುವ ಹತ್ತು ಅಂಶಗಳು ಏನು? ಸಂಕಷ್ಟವಾಗಿರುವ ಅಂಶಗಳೇನು ಎಂಬ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯಗೆ ಪ್ಲಸ್‌ ಆಗುವ ಹತ್ತು ಅಂಶಗಳು

1. ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ
2. ರಾಜ್ಯಪಾಲರು ಆದೇಶ ಏಕಪಕ್ಷಿಯ – ದುರುದ್ದೇಶ
3. ಪ್ರಾಸಿಕ್ಯೂಷನ್‌‌ ಕೊಡುವಾಗ ನಿಯಮ ಪಾಲಿಸಿಲ್ಲ
4. ಅರ್ಜಿದಾರನಿಗೆ ಸಹಜ ಕಾನೂನು ಪಾಲನೆ ಮಾಡುವ ಅವಕಾಶ ನೀಡಿಲ್ಲ
5. ಪ್ರಾಸಿಕ್ಯೂಷನ್‌‌ ಕೊಡುವಾಗ ಕ್ಯಾಬಿನೇಟ್‌ ನಿರ್ಣಯ ಪರಿಶೀಲನೆ ಮಾಡಬೇಕಿತ್ತು
6. ಕ್ಯಾಬಿನೇಟ್‌ ಸಲಹೆ ತಿರಸ್ಕರಿಸಿದಾಗ ಕಾರಣಗಳನ್ನು ಪ್ರಸ್ತಾಪ ಮಾಡಬೇಕಿತ್ತು.
7. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ವಿರುದ್ಧ ಕೇಸ್‌ಗಳಲ್ಲಿ ಭಾಷಾಂತರ ಮಾಡಿಕೊಡಿ ಎಂದು ಕೇಳಿ ಸಿಎಂ ಕೇಸ್‌‌ಲ್ಲಿ ಭಾಷಾಂತರ ಮಾಡದೇ ಅನುಮತಿ ನೀಡಿದ್ದು ಸಂಶಯಕ್ಕೆ ಕಾರಣ
8. ದೂರದಾರನ ವೈಯುಕ್ತಿಕ ನಡೆತೆ ನೋಡಬೇಕಿತ್ತು, ವಿವೇಚನಾಧಿಕಾರದ ವ್ಯಾಪ್ತಿ ಬಗ್ಗೆ ನೋಡಬೇಕಿತ್ತು
9. 1998-2024ರವರೆಗೂ ನಡೆದ ಘಟನೆಗಳಿಗೂ ನನಗೂ ಸಂಬಂಧವಿಲ್ಲ
10. ಇಂದು ಸಹ ಆ ಆಸ್ತಿ ನನ್ನ ಪತ್ನಿ ಹೆಸರಲ್ಲಿದೆ.

ಸಿಎಂ ಸಿದ್ದರಾಮಯ್ಯಗೆ ಮೈನಸ್‌ ಆಗುವ ಹತ್ತು ಅಂಶಗಳು


1. ರಾಜ್ಯಪಾಲರ ಷೋಕಾಸ್‌ ನೋಟೀಸ್‌ಗೆ ಉತ್ತರ ಕೊಟ್ಟು ಸಹಜ ನ್ಯಾಯ ಪಾಲನೆ ಆಗಿದೆ
2. ರಾಜ್ಯಪಾಲರು ಆದೇಶ ಮಾಡುವಾಗ ನನಗೆ ಸಂಶಯ ಇದೆ ಅಂತ ಬರೆದಿದ್ದಾರೆ
3. ರಾಜ್ಯಪಾಲರಿಗೆ ಸಂವಿಧಾನದತ್ತವಾಗಿ ಸಿಕ್ಕಿರುವ ವಿವೇಚನಾಧಿಕಾರ
4. ಒಬ್ಬ ಸಾಮಾನ್ಯ ಮನುಷ್ಯನಾದರೆ ನೋಟಿಫಿಕೇಷನ್‌ ಆದ ಜಮೀನು ಡಿನೋಟಿಫಿಕೇಷನ್‌ ಮಾಡಲು ಸಾಧ್ಯವಿಲ್ಲ
5. 1997ರಿಂದ 2004ವರೆಗೂ ನಡೆದಿರುವ ಘಟನೆಗಳನ್ನ ನೋಡಿದರೆ ಇದರ ಹಿಂದೆ ಅಧಿಕಾರ ಇರೋರ ಕೈ ಇರುವುದು ಸ್ಪಷ್ಟ
6. ಕೆಸರೆ ಗ್ರಾಮದ ಜಮೀನಿಗೆ ವಿಜಯನಗರದಲ್ಲಿ ಪರಿಹಾರ ನಿವೇಶನಗಳನ್ನು ಕೇಳಿರುವುದು
7. ಸಿದ್ದರಾಮಯ್ಯ ಪತ್ನಿ ನೊಂದಾಣಿ ಕಚೇರಿಗೂ ಹೋಗದೇ ಗೆಸ್ಟ್‌ ಹೌಸ್‌ಲ್ಲಿ ಗಿಫ್ಟ್‌‌‌ ಡೀಡ್‌‌ ರಿಜಿಸ್ಟರ್ ಆಗಿದೆ
8. ಸಿದ್ದರಾಮಯ್ಯ ರಕ್ಷಣೆ ಮಾಡಲು ಕ್ಯಾಬಿನೇಟ್‌ ನಿರ್ಣಯ – ಕ್ಯಾಬಿನೇಟ್‌ ನಿರ್ಣಯದಲ್ಲಿ ಬದ್ಧರಾಗಿರಬೇಕು ಎಂದು ಸೂಚನೆ ಕೊಟ್ಟಿದ್ದು
9. ರಾಜ್ಯದಲ್ಲಿ ಸಿಎಂ ವಿರುದ್ಧ ಸೂಕ್ತ ದಾಖಲೆ ಇದರೆ ಯಾವುದೇ ಒಬ್ಬ ವ್ಯಕ್ತಿ ದೂರು ದಾಖಲಿಸಬಹುದು 17 ಎ ಕೆಳೆಗಡೆ ತನಿಖೆಗೆ ಕೊರಬಹುದು
10. ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಶಿಫಾರಸ್ಸು ಇಲ್ಲದಿದ್ದರೂ ತೆರೆಮರೆಯ ಹೀರೋ ಇವರೇ ಆಗಿರುವುದು

ಅರ್ಜಿ ಅಂಗೀಕಾರವಾದರೆ ಸಿದ್ದರಾಮಯ್ಯ ಸೇಫ್ ಆಗಲಿದ್ದು, ರಾಜ್ಯಪಾಲರಿಗೆ ಹಾಗೂ ದೂರುದಾರರಿಗೆ ಹಿನ್ನಡೆ ಆಗಲಿದೆ. ಸಿಎಂ ಸ್ಥಾನ ಮತ್ತಷ್ಟು ಭದ್ರವಾಗಲಿದೆ. ಆಕಸ್ಮತ್‌ ಅರ್ಜಿ ತಿರಸ್ಕಾರಗೊಂಡರೆ ಸಿಎಂ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಿಎಂ ವಿರುದ್ಧ ರಾಜೀನಾಮೆ ಪಟ್ಟು ಜಾಸ್ತಿ ಆಗಬಹುದು. ವಿಪಕ್ಷಗಳ ಜತೆಗೆ ಸ್ವಪಕ್ಷದಲ್ಲೂ ರಾಜಿನಾಮೆ ಪಟ್ಟು ಜಾಸ್ತಿ ಆಗಬಹುದು.

ರಾಜ್ಯಾದ್ಯಂತ ಅಲರ್ಟ್‌ ಆದ ಪೊಲೀಸರು

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ರದ್ದು ಕೋರಿ ಪ್ರಶ್ನಿಸಿರುವ ಅರ್ಜಿಯ ಆದೇಶ ಹಿನ್ನೆಲೆಯಲ್ಲಿ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲು ಹಿರಿಯ ಪೊಲೀಸರು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಎಲ್ಲಾ ಕಮಿಷನರೆಟ್ ಹಾಗೂ ಎಲ್ಲಾ ಜಿಲ್ಲೆಯ ಎಸ್‌ಪಿಗಳು, ಡಿಸಿಪಿಗಳಿಗೆ ಡಿಜಿಪಿ ಅಲೋಕ್ ಮೋಹನ್ ಹಾಗೂ ಎಡಿಜಿಪಿ ಲಾ ಆ್ಯಂಡ್ ಆರ್ಡರ್‌ರಿಂದ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಟ್ ಹೆಚ್ಚಿಸುವಂತೆ ಹಾಗೂ ತೀರ್ಪು ಸಿಎಂ ವಿರೋಧ ಬಂದರೆ ಪ್ರತಿಭಟನೆ, ಗಲಭೆ ,ಧರಣಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಬಿಗಿ ಭದ್ರತೆ ವಹಿಸುವಂತೆ ತಿಳಿಸಲಾಗಿದೆ.

ಕೋರ್ಟ್‌ನಲ್ಲಿ ತುಂಬಿ ಹೋಗಿರುವ ವಕೀಲರು

ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಪ್ರಶ್ನಿಸಿರುವ ಅರ್ಜಿ ಆದೇಶ ಹಿನ್ನೆಲೆಯಲ್ಲಿ ಈಗಾಗಲೇ ಕೋರ್ಟ್ ಆವರಣ ವಕೀಲರಿಂದ ತುಂಬಿ ಹೋಗಿದೆ. ಹೈಕೋರ್ಟ್ ಕೋರ್ಟ್ ಹಾಲ್ ನಂ 17 ರಲ್ಲಿ ಆದೇಶ ಬರಲಿದೆ. ಈಗಾಗಲೇ ಕೋರ್ಟ್ ಹಾಲ್ ತುಂಬ ವಕೀಲರು ಸೇರಿದ್ದಾರೆ. ಕೋರ್ಟ್ ಹಾಲ್‌ಗೆ ದೂರುದಾರ ಟಿಜೆ ಅಬ್ರಾಹಂ ಆಗಮಿಸಿದ್ದಾರೆ.

ಸಿಎಂ ಪರವಾಗಿ ತೀರ್ಪು ಖಂಡಿತಾ- ವಕೀಲ ಶತಭೀಷ್‌ ಶಿವಣ್ಣ

ರಾಜ್ಯಪಾಲರ ಪ್ರಾಸಿಕ್ಯೂಷನ್‌ ತಡೆಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪು ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪರ ವಕೀಲ ಶತಭೀಷ್ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಳಂಕ ರಹಿತ ರಾಜಕಾರಣಿ, ಅವರ ವಿರುದ್ಧ ರಾಜ್ಯಪಾಲರ ಕೊಟ್ಟ ಆದೇಶವನ್ನು ಪ್ರಶ್ನಿಸಲಾಗಿತ್ತು. ಹೈಕೋರ್ಟ್‌ನಲ್ಲಿ ಬಹಳ ಉತ್ತಮವಾಗಿ ಕಾನೂನು ಹೋರಾಟ ಆಗಿದೆ. ಸಿಎಂ ಪರವಾಗಿ ಸಂಪೂರ್ಣ ಆದೇಶ ಬರುತ್ತದೆ. ರಾಜ್ಯಪಾಲರ ಆದೇಶ ರದ್ದು ಮಾಡುತ್ತಾರೆ ಎಂಬ ವಿಶ್ವಾಸವಿದೆ.

ರಾಜ್ಯಪಾಲರ ಆದೇಶದಲ್ಲಿ ಎರಡು ಭಾಗವಿದೆ, ಒಂದು ತನಿಖೆ ಮಾಡಲು ಪೂರ್ವಾನುಮತಿ, ಎರಡನೇಯದು ಅಭಿಯೋಜನೆ ಆಗಿದೆ. ಇದು ಅಭಿಯೋಜನೆ ಅಲ್ಲ ಎಂದು ವಾದ ವಿವಾದಗಳ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿ, ಸಾಲಿಸಿಟರ್ ಜನರಲ್ ಹೇಳಿದ್ದಾರೆ. ಕೇವಲ ಪ್ರೆಯರ್ ಅಪ್ರೂವಲ್ ಎಂದು ಒಪ್ಪಿಕೊಂಡಾಗಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಕೈವಾಡವಿಲ್ಲ, ಯಾವುದೇ ನಿರ್ಧಾರ ಮಾಡಿಲ್ಲ, ಶಿಫಾರಸು ಮಾಡಿಲ್ಲ. ಹಾಗಾಗಿ ಪ್ರೇಯರ್ ಅಪ್ರೂವಲ್ ಕೊಡುವ ಅವಶ್ಯಕತೆಯಿಲ್ಲ. ನಮ್ಮ ಪರವಾಗಿ ಸರಿಯಾಗಿ ವಾದ ಮಾಡಿದ್ದಾರೆ. ವ್ಯತಿರಿಕ್ತ ತೀರ್ಪು ಬಂದರೆ ರಿಟ್ ಅಪೀಲ್ ಅವಕಾಶವಿದೆ. ನಾವು ಆದರೂ ಹೋಗಬಹುದು, ಅವರಾದರೂ ಹೋಗಬಹುದು. ಕಾನೂನು ಹೋರಾಟ, ರಾಜಕೀಯ ಹೋರಾಟ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕವಿಲ್ಲ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version