ನವದೆಹಲಿ: ಆಗಸ್ಟ್ 23ರಂದು ಚಂದ್ರನ (Moon) ದಕ್ಷಿಣ ಧ್ರುವದಲ್ಲಿ (South Pool ಭಾರತದ ಚಂದ್ರಯಾನ-3 (Chandrayaan 3) ನೌಕೆ ಇಳಿಯಲಿದೆ. ಈ ಕುರಿತು (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಫುಲ್ ತಯಾರಿ ಕೂಡ ಮಾಡಿಕೊಳ್ಳುತ್ತಿದೆ. ಈ ಮಧ್ಯೆ, ಚಂದ್ರಯಾನ-3 ಮಿಷನ್‌ಗೆ ಪ್ರತಿಸ್ಪರ್ಧಿಯೊಬ್ಬರು ಹುಟ್ಟಿಕೊಳ್ಳುತ್ತಿದ್ದಾರೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್(Roscosmos) ಲೂನಾ 25 ಲೂನಾರ್ ಮಿಷನ್‌ಗೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಲಿದೆ. ವಿಶೇಷ ಎಂದರೆ, ಚಂದ್ರಯಾನ-3 ನೌಕೆ ಇಳಿಯಲಿರುವ ಚಂದ್ರನ ದಕ್ಷಿಣ ಧುರ್ವಕ್ಕೆ ಈ ನೌಕೆ ಕೂಡ ಲಗ್ಗೆ ಹಾಕಲಿದೆ.
ಭಾರತದ ಚಂದ್ರಯಾನ-3 ಅಥವಾ ರಷ್ಯಾದಾ ಲೂನಾ 25 ನೌಕೆ ಪೈಕಿ ಯಾವುದು ಮೊದಲು ಚಂದ್ರನ ಅಂಗಳಕ್ಕೆ ಕಾಲಿಡಲಿದೆ ಎಂಬ ಕುತೂಹಲ ಮೂಡಿದೆ. ಲೂನ್ 25 ನೌಕೆಯು ಚಂದ್ರನಲ್ಲಿ ತೆರಳಲು 5 ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ದಕ್ಷಿಣ ಧ್ರುವದ ಸಂಭಾವ್ಯ ಮೂರು ಸ್ಥಳಗಳಲ್ಲಿ ಲ್ಯಾಂಡಿಂಗ್ ಆಗುವ ಮೂದಲು ಲೂನಾ 25 ಐದರಿಂದ 7 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಇರಲಿದೆ ಎಂದು ರಷ್ಯಾದಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ರಷ್ಯಾ ಬಾಹ್ಯಾಕಾಶ ಸಂಸ್ಥೆ ನೀಡುತ್ತಿರುವ ವಿವರಗಳನ್ನ ಗಮನಿಸಿದರೆ, ರಷ್ಯಾದ ಲೂನಾ 25 ಮತ್ತು ಚಂದ್ರಯಾನ-3 ನೌಕೆಗಳು ಆಲ್ಮೋಸ್ಟ್ ಏಕಕಾಲಕ್ಕೆ ಚಂದ್ರನನ್ನು ಚುಂಬಿಸಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದಾಗ್ಯೂ, ಎರಡು ಕಾರ್ಯಾಚರಣೆಗಳು ಪರಸ್ಪರ ಹಸ್ತಕ್ಷೇಪ ಮಾಡುವುದಿಲ್ಲ ಎಂದು Roscosmos ಹೇಳಿದೆ. ಏಕೆಂದರೆ ಭಾರತ ಮತ್ತು ರಷ್ಯಾದ ಈ ನೌಕೆಗಳು ಪ್ರತ್ಯೇಕ ಲ್ಯಾಂಡಿಂಗ್ ಪ್ರದೇಶಗಳನ್ನು ಆಯ್ದುಕೊಂಡಿವೆ. ಅವು ಪರಸ್ಪರ ಹಸ್ತಕ್ಷೇಪ ಮಾಡುವ ಅಥವಾ ಘರ್ಷಣೆಯಾಗುವ ಯಾವುದೇ ಅಪಾಯವಿಲ್ಲ. ಚಂದ್ರನ ಮೇಲೆ ಎಲ್ಲರಿಗೂ ಸಾಕಷ್ಟು ಸ್ಥಳಾವಕಾಶವಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಚಂದ್ರಯಾನ-3 ನಿರ್ಣಾಯಕ ಹಂತಕ್ಕೆ ದಿನಗಣನೆ, ಚಂದ್ರನ ಅಂಗಳಕ್ಕೆ ಮತ್ತಷ್ಟು ಹತ್ತಿರ!
ಚಂದ್ರಯಾನ ನೌಕೆಯು 100 ಕಿಮೀ ವೃತ್ತಾಕಾರದ ಕಕ್ಷೆಯಿಂದ ಚಂದ್ರನ ಹತ್ತಿರಕ್ಕೆ ಚಲಿಸುತ್ತಿದ್ದಂತೆ ಚಂದ್ರಯಾನ-3 ಮಿಷನ್‌ನ (Chandrayyan 3) ಅತ್ಯಂತ ನಿರ್ಣಾಯಕ ಹಂತದ ಪ್ರಕ್ರಿಯೆ (critical phase) ಆರಂಭವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮುಖ್ಯಸ್ಥ ಎಸ್ ಸೋಮನಾಥ್ ಸೋಮವಾರ ಹೇಳಿದ್ದಾರೆ(Isro chief S Somanath). ಚಂದ್ರಯಾನ-3 ನೌಕೆಯ ಕಕ್ಷೆಯನ್ನು ನಿರ್ಧರಿಸುವ ಪ್ರಕ್ರಿಯೆಯು ಆಗಸ್ಟ್ 9 ಮತ್ತು 17ರ ನಡುವೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ಚಂದ್ರಯಾನ-3 ಮಿಷನ್ ಈವರೆಗೂ ಉತ್ತಮವಾಗಿ ನಡೆದಕೊಂಡು ಹೋಗುತ್ತಿದೆ. ಚಂದ್ರಯಾನ-3 ನೌಕೆಯನ್ನು ಹೊತ್ತ ರಾಕೆಟ್ ಅನ್ನು ಜುಲೈ 14ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಈಗ ಚಂದ್ರನ ಸುತ್ತ 170 ಕಿಮೀ 4,313 ಕಿಮೀ ದೀರ್ಘವೃತ್ತದ ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Chandrayyan 3: ಚಂದ್ರಯಾನ-3 ನಿರ್ಣಾಯಕ ಹಂತಕ್ಕೆ ದಿನಗಣನೆ, ಚಂದ್ರನ ಅಂಗಳಕ್ಕೆ ಮತ್ತಷ್ಟು ಹತ್ತಿರ!
ಮುಂದಿನ ನಿರ್ಣಾಯಕ ಹಂತವು ಹಲವು ಮ್ಯಾನವೋರಿಂಗ್ ಕಾಣಲಿದ್ದು, ನೌಕೆಯು ಮತ್ತಷ್ಟು ಚಂದ್ರನ ಹತ್ತಿರಕ್ಕೆ ಹೋಗಲಿದೆ. ಅಂತಿಮವಾಗಿ ನೌಕೆಯಿಂದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. 100 ಕಿಮೀ ವರೆಗೆ ನಾವು ಯಾವುದೇ ತೊಂದರೆಯನ್ನು ಕಾಣುವುದಿಲ್ಲ. ಸಮಸ್ಯೆಗಳು ಭೂಮಿಯಿಂದ ನಿಖರವಾಗಿ ಲ್ಯಾಂಡರ್ನ ಸ್ಥಾನವನ್ನು ಅಂದಾಜು ಮಾಡುವುದರಲ್ಲಿ ಮಾತ್ರವೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮಾಪನವು ಬಹಳ ನಿರ್ಣಾಯಕ ಅಳತೆಯಾಗಿದ್ದು, ನಾವು ಇದನ್ನು ಕಕ್ಷೆಯ ನಿರ್ಣಯ ಪ್ರಕ್ರಿಯೆ ಎಂದು ಕರೆಯುತ್ತೇವೆ. ಇದು ಪ್ರಕ್ರಿಯೆ ಸರಿಯಾಗಿದ್ದರೆ, ಉಳಿದ ಪ್ರಕ್ರಿಯೆಗಳನ್ನು ಸುಲಭವಾಗಿ ಮಾಡಬಹುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.