Site icon Vistara News

NASA Artemis-1 | ತಾಂತ್ರಿಕ ಅಡಚಣೆ, ರದ್ದಾದ ನಾಸಾ ಆರ್ಟೆಮಿಸ್ 1 ಮೂನ್ ಮಿಷನ್

Artemis-1

ವಾಷಿಂಗ್ಟನ್: ತಾಂತ್ರಿಕ ಅಡಚಣೆ ಎದುರಾದ ಹಿನ್ನೆಲೆಯಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಮೂನ್ ಮಿಷನ್ ಆರ್ಟೆಮಿಸ್-1 (NASA Artemis 1) ಉಡಾವಣೆಯನ್ನು ಮುಂದೂಡಿದೆ. ಎದುರಾಗಿರುವ ತಾಂತ್ರಿಕ ಸಮಸ್ಯೆಗಳ್ನುಸರಿಪಡಿಸಲಾಗುತ್ತಿದೆ ಎಂದು ನಾಸಾ ತಿಳಿಸಿದೆ.

ಭಾರಿ ನಿರೀಕ್ಷೆಯೊಂದಿಗೆ ಸೋಮವಾರ ಉಡಾವಣೆಯಾಗಬೇಕಿದ್ದ ಆರ್ಟೆಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದೆ. ಆರ್ಟಿಮಿಸ್-1 ಉಡಾವಣೆಗೆ ಟಿ-40 ಮಿನಿಟ್ಸ್‌ನಲ್ಲಿ ಕೌಂಟ್‌ಡೌನ್‌ ಆರಂಭವಾಗಿತ್ತು. ಅದೇ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು. ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್‌ನ ಕೋರ್‌ ಸ್ಟೇಜ್‌ನಲ್ಲಿರುವ ಆರ್‌ಎಸ್-25 ಎಂಜಿನ್‌ಗಳಲ್ಲಿ ಒಂದಾಗಿರುವ ಎಂಜಿನ್ 3ರಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದನ್ನು ಎಂಜಿನಿಯರ್ಸ್ ಪತ್ತೆ ಹಚ್ಚಿದರು. ಈ ಬಗ್ಗೆ ನಿರಂತರವಾಗಿ ಎಂಜಿನಿಯರ್ಸ್ ನಿಗಾವಹಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ನಾಸಾ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

ಲಾಂಚ್ ಕಂಟ್ರೋಲರ್‌ಗಳು ಎಂಜಿನ್‌ಗಳಿಗೆ, ಕೆಲವು ಕ್ರಯೋಜೆನಿಕ್ ಪ್ರೊಪೆಲ್ಲಂಟ್‌ಗಳನ್ನು ಸೋರಿಕೆ ಮಾಡಲು ಕೋರ್ ಸ್ಟೇಜ್ ಟ್ಯಾಂಕ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ಆ ಮೂಲಕ ಅವುಗಳನ್ನು ಪ್ರಾರಂಭಿಸಲು ಸರಿಯಾದ ತಾಪಮಾನದ ಶ್ರೇಣಿಗೆ ಪಡೆಯಲು ಎಂಜಿನ್‌ಗಳನ್ನು ಸ್ಥಿತಿಗೊಳಿಸುತ್ತವೆ. ಈ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಎಂಜಿನ್ 3 ಅನ್ನು ಸೋರಿಕೆ ಪ್ರಕ್ರಿಯೆಯ ಮೂಲಕ ಸರಿಯಾಗಿ ಕಂಡೀಷನ್ ಮಾಡಲಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಎಂಜಿನಿಯರ್‌ಗಳು ಮಾಡುತ್ತಿದ್ದಾರೆ ಎಂದು ನಾಸಾ ಹೇಳಿಕೊಂಡಿದೆ.

ಚಂದ್ರಯಾನ 1 ಫೇಲ್ ಆಗಿತ್ತು
2019ರಲ್ಲಿ ಇಸ್ರೋ ಚಂದ್ರಯಾನ 1 ಕೂಡ ವಿಫಲವಾಗಿತ್ತು. ವಿಶೇಷ ಏನೆಂದರೆ, ಚಂದ್ರಯಾನ ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ಕಳುಹಿಸಲಾಗಿದ್ದ ಲ್ಯಾಂಡರ್ ಸೂಕ್ತ ರೀತಿಯಲ್ಲಿ ಲ್ಯಾಂಡ್ ಆಗದ್ದರಿಂದ ಇಸ್ರೋ ವೈಫಲ್ಯ ಎದುರಿಸಿತ್ತು. ಈಗ ನಾಸಾ, ತನ್ನ ಆರ್ಟೆಮಿಸ್-1 ಮೂನ್ ಮಿಷನ್ ಉಡಾವಣೆಗೆ ಮುಂಚೆಯೇ ವೈಫಲ್ಯವನ್ನು ಕಂಡಿದ್ದು, ನಿರ್ದಿಷ್ಟ ಸಮಯಕ್ಕೆ ಉಡಾವಣೆ ಮಾಡಲು ಸಾಧ್ಯವಾಗಿಲ್ಲ.

ಇದನ್ನೂ ಓದಿ | ಬಾಹ್ಯಾಕಾಶ | ಇಸ್ರೋದ ನೂತನ SSLV ನಿಜಕ್ಕೂ ವಿಫಲವಾಯಿತೇ?

Exit mobile version