ಈಗ ಸಮಯದ ಬೆಲೆಯನ್ನು ಎಲ್ಲರೂ ಅರಿತಿದ್ದಾರೆ. ಯಾರನ್ನು ಬೇಕಾದರೂ,ಕೇಳಿ ಬಿಡುವಿಲ್ಲದ ಕೆಲಸ, ಅದು ನಗರವಿರಲಿ, ಹಳ್ಳಿಯೇ ಆಗಿರಲಿ, ಎಲ್ಲರಿಗೂ ಸಮಯ ಎನ್ನುವುದು ಅತ್ಯಂತ ಅಮೂಲ್ಯ. ದುಡ್ಡಿಗೆ ಇರುವಷ್ಟೇ ಬೆಲೆ ಸಮಯಕ್ಕೂ ಇದೆ. ಒಂದು ಸಲ ಕಳೆದ ಸಮಯವನ್ನು ಮತ್ತೆ ಪಡೆಯಲು ಅಸಾಧ್ಯ. ಹೀಗಾಗಿ ವೇಗವಾಗಿ ಯಾವುದಾದರೂ ಕೆಲಸ ಮಾಡಲು ಸಹಕರಿಸುವ ತಂತ್ರಜ್ಞಾನಕ್ಕೆ ಬೆಲೆ ಇದ್ದೇ ಇರುತ್ತದೆ. ೫ಜಿ ಕೂಡ ಅಷ್ಟೇ. (ವಿಸ್ತಾರ 5G Info) ೪ಜಿಗಿಂತ ಹತ್ತು ಪಟ್ಟು ವೇಗದಲ್ಲಿ ಕೆಲಸ ಮಾಡಿಕೊಡುತ್ತದೆ! ಇದೇ ಎಲ್ಲರಿಗೂ ಆಕರ್ಷಣೆ. ಅಂದಹಾಗೆ ಇಲ್ಲಿ ಸಣ್ಣ ಉದಾಹರಣೆಯನ್ನು ನೋಡೋಣ. ವಾಸ್ತವವಾಗಿ ಸಿನಿಮಾ ಒಂದೇ ಅಲ್ಲ, ನಾನಾ ಕ್ಷೇತ್ರಗಳಲ್ಲಿ ಡೌನ್‌ಲೋಡ್ ಸ್ಪೀಡ್ ಬಹಳ ಪ್ರಯೋಜನಕಾರಿ.
ಈಗ ನೀವು ನಿಮ್ಮ ಇಷ್ಟದ ಸಿನಿಮಾವನ್ನು ನೋಡುವ ಸಲುವಾಗಿ ಡೌನ್‌ಲೋಡ್ ಮಾಡಬೇಕಿದೆ, ಹಾಗೂ ಸಿನಿಮಾದ ಸೈಜ್ ೩ಜಿಬಿ ಇದೆ ಎಂದು ಭಾವಿಸಿ. ೩G, ೪G, ೪G LTE, 5G ತಂತ್ರಜ್ಞಾನದಲ್ಲಿ ಸರಾಸರಿ ಎಷ್ಟು ವೇಗದಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಗಮನಿಸೋಣ.
3ಜಿಬಿ ಸೈಜ್‌ನ ಸಿನಿಮಾ ಡೌನ್‌ಲೋಡ್‌ಗೆ ತಗಲುವ ಸಮಯ
3G | 1 ಗಂಟೆ, 8 ನಿಮಿಷಗಳು |
4G | 40 ನಿಮಿಷಗಳು |
4G LTE : | 27 ನಿಮಿಷಗಳು |
5G | 35 ಸೆಕೆಂಡ್‌ಗಳು |
ಇದು ಸರಾಸರಿಯ ಸಂಖ್ಯೆಗಳು ಮಾತ್ರ. ಒಂದು ವೇಳೆ ನಿಮ್ಮ ೫ಜಿ ಸಂಪರ್ಕ ೨೦Gb/s ಸ್ಪೀಡ್‌ನಲ್ಲಿ ಇದ್ದರೆ ಇದೇ ಸಿನಿಮಾವನ್ನು ಕಣ್ಣಿನ ರೆಪ್ಪೆ ಮುಚ್ಚಿ ತೆಗೆಯುವಷ್ಟರೊಳಗೆ ನೀವು ಡೌನ್‌ಲೋಡ್ ಮಾಡಬಹುದು. ನಿಮ್ಮ ಮನೆಗೆ ಕೇಬಲ್ ವೈರ್‌ಗಳ ಮೂಲಕ ಪಡೆಯುವ ಬ್ರಾಡ್ ಬ್ಯಾಂಡ್ ಕನೆಕ್ಷನ್‌ಗಿಂತಲೂ ಹೆಚ್ಚು ವೇಗದಲ್ಲಿ ೫ಜಿ ನೆಟ್ ವರ್ಕ್‌ನ ಸೇವೆ ಪಡೆಯಬಹುದು. ನೀವು ಯಾವುದೇ ಉತ್ತಮ ಎನ್ನಿಸುವ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆದರೂ, ಈಗ ಒಂದು ಸಿನಿಮಾ ಡೌನ್‌ಲೋಡ್ ಮಾಡಲು ಅರ್ಧ ಗಂಟೆ ಬೇಕು. ಅಂಥದ್ದರಲ್ಲಿ ಒಂದು ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ ೫ಜಿಯಲ್ಲಿ ಸಾಧ್ಯ ಎಂದರೆ ಅದರ ವೇಗವನ್ನು ಊಹಿಸಿ. ಇಂಡಸ್ಟ್ರಿಗಳಿಗೂ ಡೇಟಾ ಡೌನ್‌ಲೋಡ್ ಸ್ಪೀಡ್ ಹೆಚ್ಚಳದಿಂದ ಅನುಕೂಲವಾಗುತ್ತದೆ.
2ಜಿಯಿಂದ ೫ಜಿ ತನಕ ಸ್ಪೀಡ್ ಹೀಗಿದೆ:
Generation | 2G | 3G | 3G HSPA | 4G | 4G LTE-A | 5G |
ಗರಿಷ್ಠ ವೇಗ | 0.3Mbps | 7.2Mbps | 42Mbps | 150Mbps | 300Mbps-1Gbps | 1-10Gbps |
ಸರಾಸರಿ ವೇಗ | 0.1Mbps | 1.5Mbps | 5Mbps | 10Mbps | 15Mbps-50Mbps | 50Mbps |
ಜಾಗತಿಕ ಸೆಲ್ಯುಲಾರ್ ವಲಯದಲ್ಲಿ ಚೀನಾ ತನ್ನ ಪ್ರಾಬಲ್ಯಕ್ಕೆ ತೀವ್ರ ಪೈಪೋಟಿ ನಡೆಸುತ್ತಿರುವ ವೇಳೆಯಲ್ಲಿ ಭಾರತ ೫ಜಿ ಜಾರಿಗೆ ತರುತ್ತಿರುವುದು ಗಮನಾರ್ಹ. ಮತ್ತು ಇದರ ತುರ್ತು ಅಗತ್ಯವೂ ಇದೆ. ಒಂದು ೫ಜಿ ಸೆಲ್ ೧ ಕಿ.ಮೀ ವ್ಯಾಪ್ತಿಯಲ್ಲಿ ಅಥವಾ ೦.೩೮೬ ಚದರ ಮೈಲಿ ವ್ಯಾಪ್ತಿಯಲ್ಲಿರುವ ೧೦ ಲಕ್ಷಕ್ಕೂ ಹೆಚ್ಚು ಡಿವೈಸ್‌ಗಳನ್ನು ಸಪೋರ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ೩ಜಿಯಿಂದ ೪ಜಿಗೆ ಬದಲಾವಣೆ ಕಷ್ಟವೆನಿಸಿರಲಿಲ್ಲ. ಡೇಟಾ ಸ್ಪೀಡ್ ಸುಧಾರಣೆಯಾಗಿದೆ. ವರ್ಕ್ ಫ್ರಮ್ ಹೋಮ್ ಸಾಧ್ಯವಾಗಿದೆ. ಆದರೆ ೫ಜಿಯಿಂದ ಎಲ್ಲವೂ ಅನೂಹ್ಯವಾಗಿ ಸುಧಾರಿಸಲಿದೆ. ೪ಜಿಯಿಂದ ಮೊಬೈಲ್ ಸ್ಕ್ರೀನ್‌ಗಳಲ್ಲಿ HD ವಿಡಿಯೊಗಳನ್ನು ನೋಡಲು ಸಾಧ್ಯವಾಗಿದೆ. ೫ಜಿಯಿಂದ ೪K, 8K ಟೆಲಿವಿಶನ್ ಜಮಾನಾ ಬಂದಿದೆ.
ಇದನ್ನೂ ಓದಿ: ವಿಸ್ತಾರ 5G Info| ನಿಮ್ಮ ಮೊಬೈಲ್ 5G ಸಪೋರ್ಟ್ ಮಾಡುತ್ತಿದೆಯೇ ಎಂದು ತಿಳಿಯುವುದು ಹೇಗೆ?
೪ಜಿಯಲ್ಲಿ ಕೇವಲ ೨೦೦ ಮೆಗಾಬೈಟ್ ಡೇಟಾವನ್ನು ಪ್ರತಿ ಸೆಕೆಂಡ್‌ಗೆ ವರ್ಗಾಯಿಸಲು ಸಾಧ್ಯವಾದರೆ (MBPS), ೫ಜಿಯಿಂದ ೧ ಗಿಗಾಬೈಟ್ ಅಥವಾ ಹೆಚ್ಚಿನ ಡೇಟಾವನ್ನು ವರ್ಗಾವಣೆ ಮಾಡಬಹುದು. 1 ಮೆಗಾ ಬೈಟ್ (ಡೇಟಾವನ್ನು ಅಳೆಯುವ ಯುನಿಟ್) ಎಂದರೆ ೧೦ ಲಕ್ಷ ಬೈಟ್‌ಗಳು. 1 ಗಿಗಾ ಬೈಟ್ ಎಂದರೆ ೧೦೦ ಕೋಟಿ ಬೈಟ್‌ಗಳು. ಒಂದು ಚದರ ಕಿ.ಮೀ ಪ್ರದೇಶದಲ್ಲಿ ೪ಜಿಗಿಂತ ೧೦ ಪಟ್ಟು ಹೆಚ್ಚು ಡಿವೈಸ್‌ಗಳಿಗೆ ೫ಜಿ ತಂತ್ರಜ್ಞಾನ ಸಪೋರ್ಟ್ ಮಾಡುತ್ತದೆ. ಇದು ಅದರ ಅಗಾಧತೆಗೆ ಒಂದು ನಿದರ್ಶನ.
ಕಾಲ್ ಡ್ರಾಪ್ ಸಮಸ್ಯೆಗೆ ೫ಜಿ ಸಂಪೂರ್ಣ ಪರಿಹಾರ ನೀಡಬಹುದು ಎನ್ನಲಾಗದಿದ್ದರೂ, ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ಸ್ವಯಂಚಾಲಿತ ಕಾರುಗಳಿಗೆ ೫ಜಿ ತಂತ್ರಜ್ಞಾನ ಸಹಕಾರಿ. ಇದರಿಂದ ಆ ಕಾರುಗಳಿಗೆ ತಮ್ಮು ಸುತ್ತಲಿನ ಪ್ರತಿಯೊಂದು ಕಾರು, ಬೈಕ್, ಜನ ಸಂಚಾರ ಎಲ್ಲವೂ ಗೊತ್ತಾಗಲಿದೆ.
ಇದನ್ನೂ ಓದಿ:ವಿಸ್ತಾರ 5G Info| 5G ಎಂದರೆ ಸ್ಪೀಡ್ ಮಾತ್ರವಲ್ಲ, ಪ್ರಯೋಜನ ಸಾರ್ವತ್ರಿಕ