Site icon Vistara News

BMW i4 : ಈ ಕಾರನ್ನು ಒಂದು ಸಾರಿ ಚಾರ್ಜ್‌ ಮಾಡಿದರೆ ತಿರುಪತಿಗೆ ಹೋಗಿ ಬರಬಹುದು !

ವಿಶ್ವದ ಪ್ರತಿಷ್ಠಿತ ಆಟೊಮೊಬೈಲ್‌ ಕಂಪನಿಗಳಲ್ಲೊಂದಾದ ಬಿಎಂಡಬ್ಲೂ ತನ್ನ ಮೊದಲ ಎಲೆಕ್ಟ್ರಿಕ್‌ ಕಾರನ್ನು ಭಾರತ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. BMW i4 ಕಾರಿನ ಬ್ಯಾಟರಿಯನ್ನು ಪೂರ್ಣ ಚಾರ್ಜ್‌ ಮಾಡಿದರೆ 590 ಕಿಲೋಮೀಟರ್‌ ದೂರ ಕ್ರಮಿಸಬಹುದು ಎಂದು ಕಂಪನಿ ತಿಳಿಸಿದೆ.

ಇತ್ತೀಚೆಗೆ ಟಾಟಾ ಸಂಸ್ಥೆ ಎಲೆಕ್ಟ್ರಿಕ್‌ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿತ್ತು. ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ, ವಿನೂತನ ಕಲ್ಪನೆಯ ಎಲೆಕ್ಟ್ರಿಕ್‌ ಕಾರುಗಳನ್ನು ಮಾರುಕಟ್ಟಗೆ ಬಿಡುವಲ್ಲಿ ಟಾಟಾ ಸಂಸ್ಥೆ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ಈಗ ಬಿಎಂಡಬ್ಲೂ ಕೂಡ ಹೊಸ ಕಲ್ಪನೆಯ, ವಿಶೇಷವಾದ ಎಲೆಕ್ಟ್ರಿಕ್‌ ಕಾರನ್ನು ಲಾಂಚ್‌ ಮಾಡಿದೆ. BMW i4 ಕಾರಿನ ಬೆಲೆ ₹69.9 ಲಕ್ಷ ಎಂದು ತಿಳಿಸಿದೆ.

ಕಾರಿನ ವಿಶೇಷತೆಗಳು:

1. ಬಿಳಿ, ಕಪ್ಪು, ಗ್ರೇ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಾಗಲಿದೆ.
2. ಏರೋಡೈನಮಿಕ್‌ ಸೌಲಭ್ಯ ಇಲ್ಲಿ ಅಳವಡಿಸಲಾಗಿದೆ.
3. 340hp ಪವರ್‌ ಈ ಕಾರು ಹೊಂದಿರುತ್ತದೆ. 0-100 ವೇಗವನ್ನು 5.7 ಸೆಕೆಂಡ್‌ಗಳಲ್ಲಿ ತಲುಪುತ್ತದೆ ಎಂದು ತಿಳಿಸಲಾಗಿದೆ.
5. ಹೈ ವೊಲ್ಟೆಜ್‌ ಲಿಥಿಯಂ ಬ್ಯಾಟರಿಯನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಈ ಬ್ಯಾಟರಿ 80.7 kWh ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 590 ಕಿಲೋಮೀಟರ್‌ ಕ್ರಮಿಸಬಹುದು ಸಂಸ್ಥೆ ಹೇಳಿದೆ. ಒಂದು ಚಾರ್ಜ್‌ನಲ್ಲಿ ಇಷ್ಟು ದೂರ ಸಾಗುವ ಯಾವುದೇ ಎಲೆಕ್ಟ್ರಿಕ್‌ ವಾಹನ ಈವರೆಗೆ ಭಾರತ ಮಾರುಕಟ್ಟೆಯಲ್ಲಿ ಕಂಡುಬಂದಿಲ್ಲ. ಬೆಂಗಳೂರಿನಿಂದ ತಿರುಪತಿಗೆ 250 ಕಿಲೋಮೀಟರ್‌ ದೂರವಿದೆ. ಸಂಸ್ಥೆ ಹೇಳುವಷ್ಟೇ ದೂರವನ್ನು ಈ ಕಾರು ನಿಜವಾಗಲೂ ಕ್ರಮಿಸಿದರೆ, ಒಂದು ಬಾರಿ ಬ್ಯಾಟರಿ ಚಾರ್ಜ್‌ ಮಾಡಿ ತಿರುಪತಿಗೆ ಹೋಗಿ ಬೆಂಗಳೂರಿಗೆ ವಾಪಸಾಗಬಹುದು.
6. ಮನೆಯಲ್ಲೇ ಸುಲಭವಾಗಿ ಚಾರ್ಜ್‌ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಭಾರತದಲ್ಲೇ ಅತ್ಯಂತ ಪ್ರಬಲವಾದ ಚಾರ್ಜಿಂಗ್‌ ನೆಟ್ವರ್ಕ್‌ನ್ನು ಸೃಷ್ಟಿಸುವ ಉದ್ದೇಶದಿಂದ ಬಿಎಂಡಬ್ಲೂ ಸಂಸ್ಥೆ ಭಾರತದ 34 ನಗರಗಳಲ್ಲಿ ಚಾರ್ಜಿಂಗ್‌ ಯುನಿಟ್‌ ಅಳವಡಿಸುವ ಯೋಜನೆ ಹೊಂದಿದೆ.

ಇದನ್ನೂ ಓದಿ: New Arrival | Tata Nexon EV Max ಮಾರುಕಟ್ಟೆಗೆ

Exit mobile version