BMW i4 : ಈ ಕಾರನ್ನು ಒಂದು ಸಾರಿ ಚಾರ್ಜ್‌ ಮಾಡಿದರೆ ತಿರುಪತಿಗೆ ಹೋಗಿ ಬರಬಹುದು ! - Vistara News

ಆಟೋಮೊಬೈಲ್

BMW i4 : ಈ ಕಾರನ್ನು ಒಂದು ಸಾರಿ ಚಾರ್ಜ್‌ ಮಾಡಿದರೆ ತಿರುಪತಿಗೆ ಹೋಗಿ ಬರಬಹುದು !

BMW i4 : ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳು ಉತ್ತಮ ಮಟ್ಟದಲ್ಲಿ ತನ್ನ ಸ್ತಾನವನ್ನು ಪಡೆದುಕೊಳ್ಳುತ್ತಿದೆ. ಟಾಟಾ ನಂತರ ಈಗ ಬಿಎಂಡಬ್ಲೂ ಕೂಡ ಭಾರತದಲ್ಲಿ ಹೊಸ ಕಾರು ಲಾಂಚ್‌ ಮಾಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಶ್ವದ ಪ್ರತಿಷ್ಠಿತ ಆಟೊಮೊಬೈಲ್‌ ಕಂಪನಿಗಳಲ್ಲೊಂದಾದ ಬಿಎಂಡಬ್ಲೂ ತನ್ನ ಮೊದಲ ಎಲೆಕ್ಟ್ರಿಕ್‌ ಕಾರನ್ನು ಭಾರತ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. BMW i4 ಕಾರಿನ ಬ್ಯಾಟರಿಯನ್ನು ಪೂರ್ಣ ಚಾರ್ಜ್‌ ಮಾಡಿದರೆ 590 ಕಿಲೋಮೀಟರ್‌ ದೂರ ಕ್ರಮಿಸಬಹುದು ಎಂದು ಕಂಪನಿ ತಿಳಿಸಿದೆ.

ಇತ್ತೀಚೆಗೆ ಟಾಟಾ ಸಂಸ್ಥೆ ಎಲೆಕ್ಟ್ರಿಕ್‌ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿತ್ತು. ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ, ವಿನೂತನ ಕಲ್ಪನೆಯ ಎಲೆಕ್ಟ್ರಿಕ್‌ ಕಾರುಗಳನ್ನು ಮಾರುಕಟ್ಟಗೆ ಬಿಡುವಲ್ಲಿ ಟಾಟಾ ಸಂಸ್ಥೆ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ಈಗ ಬಿಎಂಡಬ್ಲೂ ಕೂಡ ಹೊಸ ಕಲ್ಪನೆಯ, ವಿಶೇಷವಾದ ಎಲೆಕ್ಟ್ರಿಕ್‌ ಕಾರನ್ನು ಲಾಂಚ್‌ ಮಾಡಿದೆ. BMW i4 ಕಾರಿನ ಬೆಲೆ ₹69.9 ಲಕ್ಷ ಎಂದು ತಿಳಿಸಿದೆ.

ಕಾರಿನ ವಿಶೇಷತೆಗಳು:

1. ಬಿಳಿ, ಕಪ್ಪು, ಗ್ರೇ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಾಗಲಿದೆ.
2. ಏರೋಡೈನಮಿಕ್‌ ಸೌಲಭ್ಯ ಇಲ್ಲಿ ಅಳವಡಿಸಲಾಗಿದೆ.
3. 340hp ಪವರ್‌ ಈ ಕಾರು ಹೊಂದಿರುತ್ತದೆ. 0-100 ವೇಗವನ್ನು 5.7 ಸೆಕೆಂಡ್‌ಗಳಲ್ಲಿ ತಲುಪುತ್ತದೆ ಎಂದು ತಿಳಿಸಲಾಗಿದೆ.
5. ಹೈ ವೊಲ್ಟೆಜ್‌ ಲಿಥಿಯಂ ಬ್ಯಾಟರಿಯನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಈ ಬ್ಯಾಟರಿ 80.7 kWh ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 590 ಕಿಲೋಮೀಟರ್‌ ಕ್ರಮಿಸಬಹುದು ಸಂಸ್ಥೆ ಹೇಳಿದೆ. ಒಂದು ಚಾರ್ಜ್‌ನಲ್ಲಿ ಇಷ್ಟು ದೂರ ಸಾಗುವ ಯಾವುದೇ ಎಲೆಕ್ಟ್ರಿಕ್‌ ವಾಹನ ಈವರೆಗೆ ಭಾರತ ಮಾರುಕಟ್ಟೆಯಲ್ಲಿ ಕಂಡುಬಂದಿಲ್ಲ. ಬೆಂಗಳೂರಿನಿಂದ ತಿರುಪತಿಗೆ 250 ಕಿಲೋಮೀಟರ್‌ ದೂರವಿದೆ. ಸಂಸ್ಥೆ ಹೇಳುವಷ್ಟೇ ದೂರವನ್ನು ಈ ಕಾರು ನಿಜವಾಗಲೂ ಕ್ರಮಿಸಿದರೆ, ಒಂದು ಬಾರಿ ಬ್ಯಾಟರಿ ಚಾರ್ಜ್‌ ಮಾಡಿ ತಿರುಪತಿಗೆ ಹೋಗಿ ಬೆಂಗಳೂರಿಗೆ ವಾಪಸಾಗಬಹುದು.
6. ಮನೆಯಲ್ಲೇ ಸುಲಭವಾಗಿ ಚಾರ್ಜ್‌ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಭಾರತದಲ್ಲೇ ಅತ್ಯಂತ ಪ್ರಬಲವಾದ ಚಾರ್ಜಿಂಗ್‌ ನೆಟ್ವರ್ಕ್‌ನ್ನು ಸೃಷ್ಟಿಸುವ ಉದ್ದೇಶದಿಂದ ಬಿಎಂಡಬ್ಲೂ ಸಂಸ್ಥೆ ಭಾರತದ 34 ನಗರಗಳಲ್ಲಿ ಚಾರ್ಜಿಂಗ್‌ ಯುನಿಟ್‌ ಅಳವಡಿಸುವ ಯೋಜನೆ ಹೊಂದಿದೆ.

ಇದನ್ನೂ ಓದಿ: New Arrival | Tata Nexon EV Max ಮಾರುಕಟ್ಟೆಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Affordable Bikes in India : ಕಡಿಮೆ ಬೆಲೆಗೆ ದೊರೆಯುವ ಭಾರತದ ಟಾಪ್ 5 ಬೈಕ್​ಗಳು ಇವು

Affordable Bikes in India : ಕಡಿಮೆ ಬೆಲೆಯ ಬೈಕ್​ಗಳು ದ್ವಿಚಕ್ರ ವಾಹನ ಮಾರಾಟದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಪಾಲು ಪಡೆದುಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದೆ.

VISTARANEWS.COM


on

Motorcycle
Koo

ಬೆಂಗಳೂರು : ಭಾರತದಲ್ಲಿ ಕಡಿಮೆ ಬೆಲೆಯ ಮೋಟಾರ್​ ಸೈಕಲ್​ಗಳಿಗೆ ಹೆಚ್ಚು ಬೇಡಿಕೆ (Affordable Bikes in India). ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಬೆಲೆಯ ಅತಿ ಹೆಚ್ಚು ಮಾರಾಟವಾಗುತ್ತದೆ. ಕಡಿಮೆ ಬೆಲೆ ಹಾಗೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಕಾರಣಗಳಿಗೆ ಈ ಮಾದರಿಯ ಬೈಕ್​ಗಳಿಗೆ ಅತಿ ಹೆಚ್ಚು ಬೇಡಿಕೆ ಇರುತ್ತದೆ. ಭಾರತದಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಟಾಪ್ 5 ಅತ್ಯಂತ ಕೈಗೆಟುಕುವ ಬೈಕುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಇಲ್ಲಿ ಕೊಟ್ಟಿರುವ ಪಟ್ಟಿಯುವ ಮುಂಬಯಿಯ ಎಕ್ಸ್​ಶೋ ರೂಮ್ ಬೆಲೆಯಾಗಿದೆ. ಹೀಗಾಗಿ ಎಲ್ಲ ಕಡೆಯೂ ಇದೇ ಬೆಲೆ ಎಂದು ಹೇಳಲಾಗುವುದಿಲ್ಲ. ನಗರದಿಂದ ನಗರಕ್ಕೆ ಹಾಗೂ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಅಂದ ಈ ಪಟ್ಟಿಯಲ್ಲಿರುವ ಹೋಂಡಾ ಶೈನ್​ 100 ಈ ಸೆಗ್ಮೆಂಟ್​ಗೆ ಹೊಸ ಸೇರ್ಪಡೆ. ಜತೆಗೆ ಇದರ ಎಕ್ಸ್ ಶೂರೂಮ್ ಬೆಲೆ ಮುಂಬಯಿಯದ್ದು ಮಾತ್ರ ಲಭ್ಯವಿದೆ. ಹೀಗಾಗಿ ಉಳಿದ ಬೆಲೆಯನ್ನು ಅದೇ ನಗರಕ್ಕೆ ಹೋಲಿಕೆ ಮಾಡಲಾಗಿದೆ.

ಬಜಾಜ್ ಪ್ಲಾಟಿನಾ 100- 67,808 ರೂ.

ಪ್ಲಾಟಿನಾ 100 ಬಜಾಜ್ ಕಂಪನಿಯ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್ ಇದು. ಬಜಾಜ್ ನ ಸಿಗ್ನೇಚರ್ ಡಿಟಿಎಸ್-ಐ ತಂತ್ರಜ್ಞಾನವನ್ನು ಹೊಂದಿರುವ 102 ಸಿಸಿ ಮೋಟರ್ ನಿಂದ ಇದರಲ್ಲಿದೆ. ಫ್ಯೂಯಲ್-ಇಂಜೆಕ್ಷನ್ ವ್ಯವಸ್ಥೆ ಪಡೆಯದ ಏಕೈಕ ಬೈಕ್ ಕೂಡ ಹೌದು. ಬದಲಿಗೆ ಇದು ಬಜಾಜ್ ನ ಇ-ಕಾರ್ಬ್ ಅನ್ನು ಹೊಂದಿದೆ. ಈ ಎಂಜಿನ್ 7.9 ಬಿ ಹೆಚ್ ಪಿ ಪವರ್ ಮತ್ತು 8.3 ಎನ್ ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಸೆಗ್ ಮೆಂಟಿನಲ್ಲಿ ಪ್ಲಾಟಿನಾದ ವಿಶಿಷ್ಟ ಲಕ್ಷಣವೆಂದರೆ ಅದರ ಎಲ್ ಇಡಿ ಡೇ ರನ್ನಿಂಗ್ ಲೈಟ್​.

ಹೋಂಡಾ ಶೈನ್ 100- 64,900 ರೂ.

ಕಡಿಮೆ ಬೆಲೆಯ ಬೈಕ್​ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಬೈಕ್​ ಹೋಂಡಾ ಶೈನ್ 100. ಹೋಂಡಾ ಶೈನ್ 100 ಬೈಕ್ ಸೀರಿಸ್​ನ ಅತ್ಯಂತ ಸರಳ ಬೈಕ್ ಇದಾಗಿದೆ. ಆಟೋ ಚೋಕ್ ಸಿಸ್ಟಂ ಮತ್ತು ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಫೀಚರ್​ ಹೊಂದಿದೆ. ಇದು ಈ ಸೆಗ್ಮೆಂಟ್​ನಲ್ಲಿ ಒಬಿಡಿ -2 ಎ ಕಾಂಪ್ಲೈಂಟ್ ಮತ್ತು ಇ 20 ಹೊಂದಿಕೆಯಾಗುವ ಏಕೈಕ ಮೋಟಾರ್ ಸೈಕಲ್. ಇದು​​ 7.61 ಬಿಹೆಚ್ ಪಿ, 8.05 ಎನ್ಎಂ ಟಾಕ್​ ಬಿಡುಗಡೆ ಮಾಡುವ 99.7 ಸಿಸಿ ಎಂಜಿನ್ ಹೊಂದಿದೆ. ಇದು ಎಲೆಕ್ಟ್ರಿಕ್ ಸ್ಟಾರ್ಟರ್ ಅನ್ನು ಹೊಂದಿದೆ. ಇದು ದೇಶದ ಅತ್ಯಂತ ಕೈಗೆಟುಕುವ ಸೆಲ್ಫ್-ಸ್ಟಾರ್ಟ್ ಮೋಟಾರ್ ಸೈಕಲ್ ಆಗಿದೆ.

ಇದನ್ನೂ ಓದಿ : Hyundai Creta : ಭಾರತದಲ್ಲಿ 10 ಲಕ್ಷ ದಾಟಿದ ಹ್ಯುಂಡೈ ಕ್ರೆಟಾ ಮಾರಾಟ

ಟಿವಿಎಸ್ ಸ್ಪೋರ್ಟ್- 61,500 ರಿಂದ 69,873 ರೂ.

ಎಂಜಿನ್ ವಿಚಾರಕ್ಕೆ ಬಂದಾಗ 109.7 ಸಿಸಿ ಎಂಜಿನ್ ಸೆಗ್ಮೆಂಟ್​ನ ಇತರ ಬೈಕುಗಳಿಗಿಂತ ಸ್ವಲ್ಪ ಹೆಚ್ಚಿನ ಶಕ್ತಿ ಹೊಂದಿದೆ. ಟಿವಿಎಸ್ ಸ್ಪೋರ್ಟ್ ಇನ್ನೂ ದೇಶದ ಮೂರನೇ ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್​. ಕಿಕ್ ಸ್ಟಾರ್ಟರ್ ನೊಂದಿಗೆ ಬರುವ ಮೂಲ ಮಾದರಿಯನ್ನು ಇದು ಹೊಂದಿದೆ. ಅದೇ ರೀತಿ ಸೆಲ್ಫ್-ಸ್ಟಾರ್ಟ್ ಆವೃತ್ತಿಗಳು 69,873 ರೂ.ಗಳವರೆಗೆ ಬೆಲೆ ಹೊಂದಿದೆ. ಇದು 8.3 ಬಿಹೆಚ್ ಪಿ ಮತ್ತು 8.7 ಎನ್ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ.

ಹೀರೋ ಎಚ್ಎಫ್ ಡೀಲಕ್ಸ್ 59,998 ರಿಂದ 68,768 ರೂ.

  100 ಸಿಸಿ ಸೆಗ್ಮೆಂಟ್​ನಲ್ಲಿ ಮಾರುಕಟ್ಟೆ ನಾಯಕ ಹೀರೋ ಮೋಟೊಕಾರ್ಪ್. ಕಂಪನಿಗೆ ಈ ಪ್ರಖ್ಯಾತಿ ಉಳಿಸಿಕೊಳ್ಳುವುದಕ್ಕೆ ಸಹಾಯ ಮಾಡುವ ಬೈಕುಗಳಲ್ಲಿ ಎಚ್ ಎಫ್ ಡೀಲಕ್ಸ್ ಕೂಡ ಒಂದು ಇದರಲ್ಲಿ 97 ಸಿಸಿ ‘ಸ್ಲೋಪರ್’ ಎಂಜಿನ್ ಇದೆ. ಈಗ ಹೀರೋನ ಐ 3 ಎಸ್ ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನವನ್ನು ಈ ಬೈಕ್​ಗೆ ಅಳವಡಿಸಲಾಗಿದೆ. ಟಿವಿಎಸ್ ಸ್ಪೋರ್ಟ್ ನಂತೆ, ಬೇಸ್​ಮಾಡೆಲ್​ಗಳಲ್ಲಿ ಕಿಕ್​ ಸ್ಟಾರ್ಟ್​ ಸೌಕರ್ಯ ಇದ್ದರೆ ಟಾಪ್ ಎಂಡ್​ ಬೈಕ್​ನ್ಲಿ ಎಲೆಕ್ಟ್ರಿಕ್ ಸ್ಟಾರ್ಟರ್ ಇದೆ.

  ಹೀರೋ ಎಚ್ಎಫ್ 100 59,068 ರೂ.

  ಸರಳತೆಯಿಂದಾಗಿ ಹೀರೋ ಹೆಚ್ ಎಫ್ 100 ಬೈಕ್ ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಇದು ಎಚ್ ಎಫ್ ಡೀಲಕ್ಸ್ ನಂತೆಯೇ 97 ಸಿಸಿ ಎಂಜಿನ್ ಅನ್ನು ಹೊಂದಿದೆ. 8 ಬಿಹೆಚ್ ಪಿ ಮತ್ತು 8.05 ಎನ್ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. ಐ 3 ಎಸ್ ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನ ಇದರಲ್ಲಿ ಇಲ್ಲ. ಇದು ಕೇವಲ ಕಿಕ್-ಸ್ಟಾರ್ಟರ್ ನೊಂದಿಗೆ ಕೇವಲ ಒಂದೇ ಒಂದು ವೇರಿಯೆಂಟ್​ನಲ್ಲಿ ಲಭ್ಯ.

  Continue Reading

  ಪ್ರಮುಖ ಸುದ್ದಿ

  Hyundai Creta : ಭಾರತದಲ್ಲಿ 10 ಲಕ್ಷ ದಾಟಿದ ಹ್ಯುಂಡೈ ಕ್ರೆಟಾ ಮಾರಾಟ

  Hyundai Creta: ಒಂದು ದಶಲಕ್ಷದ ಮೈಲುಗಲ್ಲನ್ನು ಸಾಧಿಸಲು ಎಂಟು ವರ್ಷ ಐದು ತಿಂಗಳು ಬೇಕಾಯಿತು. ರಫ್ತು ಸೇರಿದಂತೆ, ಕ್ರೆಟಾ ಮಾರಾಟವು 12.7 ಲಕ್ಷ ಯುನಿಟ್ ಗಳನ್ನು ದಾಟಿದೆ.

  VISTARANEWS.COM


  on

  Hyundai Creta
  Koo

  ಬೆಂಗಳೂರು : ಭಾರತದ ಕಾರುಕಟ್ಟೆಯ ಅತ್ಯಂತ ಪ್ರಮುಖ ಕಾರು ಹ್ಯುಂಡೈ ಕ್ರೆಟಾ (Hyundai Creta) ಭಾರತದಲ್ಲಿ ಒಟ್ಟು 10 ಲಕ್ಷ ಮಾರಾಟದ ಗಡಿಯನ್ನು ದಾಟಿದೆ. ಈ ಮೂಲಕ ಕೊರಿಯಾ ಮೂಲಕ ಕಾರು ತಯಾರಕ ಕಂಪನಿ ಹೊಸ ಸಾಧನೆ ಮಾಡಿದೆ. ಕ್ರೆಟಾ ದೇಶದ ಅತಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ ಎಸ್ ಯುವಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ, ಕ್ರೆಟಾ ತಿಂಗಳಿಗೆ ಸರಾಸರಿ 13,103 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ/ ಅಂದರೆ ಪ್ರತಿದಿನ 436 ಯುನಿಟ್ ಗಳನ್ನು ಮಾರಾಟ ಮಾಡಿದೆ.

  ಹ್ಯುಂಡೈನ ಜನಪ್ರಿಯ ಎಸ್ ಯುವಿ ಜುಲೈ 21, 2015 ರಂದು ಬಿಡುಗಡೆಯಾದಾಗಿನಿಂದ 10 ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಲು 101 ತಿಂಗಳುಗಳು ಅಂದರೆ ಎಂಟು ವರ್ಷ ಮತ್ತು ಐದು ತಿಂಗಳುಗಳನ್ನು ತೆಗೆದುಕೊಂಡಿದೆ. ಬಿಡುಗಡೆಯಾದ ಐದು ವರ್ಷಗಳ ನಂತರ, ಆಗಸ್ಟ್ 11, 2020 ರಂದು ಕ್ರೆಟಾ 5 ಲಕ್ಷ ಮಾರಾಟವನ್ನು ಗಳಿಸಿತ್ತು. ಮುಂದಿನ ಅರ್ಧ ಮಿಲಿಯನ್ ಯುನಿಟ್ ಗಳು ಕೇವಲ 41 ತಿಂಗಳು ಅಥವಾ ಮೂರು ವರ್ಷ ಮತ್ತು ಐದು ತಿಂಗಳಲ್ಲಿ ಮಾರಾಟವಾಗಿವೆ. ಇದು ಬೇಡಿಕೆಯ ಹೆಚ್ಚಳವನ್ನು ತೋರಿಸಿದೆ.

  ಕಳೆದ 1 ಲಕ್ಷ ಯುನಿಟ್ ಗಳು ಕೇವಲ ಎಂಟು ತಿಂಗಳಲ್ಲಿ ಮಾರಾಟವಾಗಿವೆ. ಕ್ರೆಟಾ ತೆಗೆದುಕೊಂಡ ಅದೇ ವೇಗವನ್ನು ಕಾಯ್ದುಕೊಂಡು 8,00,000 ದಿಂದ 9,00,000 ಕ್ಕೆ (ನವೆಂಬರ್ 2022-ಜೂನ್ 2023: 1,06,092 ಯುನಿಟ್​​ಗಳು) ಏರಿತು. ಈ ಮಾರಾಟದ ವೇಗದ ಆಧಾರದ ಮೇಲೆ, ಹ್ಯುಂಡೈ ಪ್ರತಿ ಐದು ನಿಮಿಷಕ್ಕೆ ಒಂದು ಕ್ರೆಟಾವನ್ನು ಮಾರಾಟ ಮಾಡಿದೆ ಎಂದು ಹೇಳಿಕೊಂಡಿದೆ.

  ಏಪ್ರಿಲ್ 2023 ರಿಂದ ಜನವರಿ 2024 ರ ಅವಧಿಯಲ್ಲಿ, ಹ್ಯುಂಡೈ ಮೋಟಾರ್ ಇಂಡಿಯಾ, 3,19,122 ಯುವಿಗಳ ಮಾರಾಟದೊಂದಿಗೆ ಪ್ರಸ್ತುತ ಯುವಿ ಮಾರಾಟ ಏಣಿಯಲ್ಲಿ ಮಾರುತಿ ಸುಜುಕಿ ಇಂಡಿಯಾ (5,22,626 ಯುನಿಟ್) ಮತ್ತು ಮಹೀಂದ್ರಾ & ಮಹೀಂದ್ರಾ (3,76,832 ಯುನಿಟ್) ನಂತರ ಮೂರನೇ ಸ್ಥಾನದಲ್ಲಿದೆ. 2024 ರ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಮಾರಾಟವಾದ 1,31,039 ಯುನಿಟ್ ಗಳೊಂದಿಗೆ ಕ್ರೆಟಾ ಹ್ಯುಂಡೈನ ಒಟ್ಟು ಯುವಿ ಮಾರಾಟದಲ್ಲಿ 41.54 ಪ್ರತಿಶತದಷ್ಟು ಪಾಲನ್ನು ಹೊಂದಿದೆ, ನಂತರ ವೆನ್ಯೂ (1,10,348 ಯುನಿಟ್ ಗಳು, 35 ಪ್ರತಿಶತದಷ್ಟು ಪಾಲು). ಕ್ರೆಟಾದ ಮಾರಾಟವು ಹೆಚ್ಚಾಗುತ್ತಿತ್ತು, ಆದರೆ ಜನವರಿ 16, 2024 ರಂದು ಬಿಡುಗಡೆಯಾಗಲಿರುವ ಹೊಸ ಕ್ರೆಟಾ; 2023 ರ ಏಪ್ರಿಲ್-ಜುಲೈ ಅವಧಿಯಲ್ಲಿ 14,000 ಯುನಿಟ್​​ಗಳನ್ನು ದಾಟಿದೆ.

  ಇದನ್ನೂ ಓದಿ : Mahindra Thar : ಥಾರ್ ಅಭಿಮಾನಿಗಳಿಗೆ ಖುಷಿಯ ವಿಚಾರ, ಕಾಯುವಿಕೆ ಅವಧಿ ಇಳಿಕೆ

  2024 ಕ್ರೆಟಾ ಫೇಸ್ ಲಿಫ್ಟ್ ಅನ್ನು ಜನವರಿ 16 ರಂದು ಬಿಡುಗಡೆ ಮಾಡಲಾಯಿತು. ಇದರ ಬೆಲೆ ಎಂಟ್ರಿ ಲೆವೆಲ್ ಇ ಪೆಟ್ರೋಲ್-ಮ್ಯಾನುವಲ್ ರೂಪಾಂತರಕ್ಕೆ ರೂ.11 ಲಕ್ಷಗಳಾಗಿದ್ದು, ಟಾಪ್-ಸ್ಪೆಕ್ ಎಸ್ ಎಕ್ಸ್ (ಒ) ಡೀಸೆಲ್-ಆಟೋಮ್ಯಾಟಿಕ್ ಟ್ರಿಮ್ ಗೆ ಆರಂಭಿಕ ಬೆಲೆಗಳು ರೂ.20 ಲಕ್ಷದ ವರೆಗೆ ಇದೆ. ಐದು ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ, ಒಟ್ಟು 19 ವೇರಿಯೆಂಟ್​​ಗಳನ್ನು ನೀಡಲಾಗುತ್ತದೆ. ಈ ಬೆಲೆ ತಂತ್ರವು ಹೊಸ ಕ್ರೆಟಾ ಬ್ಯಾಂಗ್ ಅನ್ನು ಮಧ್ಯಮ ಗಾತ್ರದ ಎಸ್ ಯುವಿ ವಿಭಾಗದಲ್ಲಿ ಪ್ರಭಾವಶಾಲಿಯನ್ನಾಗಿ ಮಾಡಿದೆ. ಪ್ರತಿಸ್ಪರ್ಧಿಗಳಾದ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಸಿಟ್ರೋನ್ ಸಿ 3 ಏರ್ ಕ್ರಾಸ್ ಕಡಿಮೆ ಬೆಲೆಯನ್ನು ಹೊಂದಿವೆ.

  280,000 ಕ್ಕೂ ಹೆಚ್ಚು ಮೇಡ್ ಇನ್ ಇಂಡಿಯಾ ಕ್ರೆಟಾಸ್ ರಫ್ತು

  2023 ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು 2,82,542 ಕ್ರೆಟಾಗಳನ್ನು ರಫ್ತು ಮಾಡಲಾಗಿದೆ/ ಹಣಕಾಸು ವರ್ಷ 2024 ರ ಮೊದಲ 10 ತಿಂಗಳಲ್ಲಿ 3,555 ಕ್ರೆಟಾಗಳ ಸಾಗಣೆಯು ಶೇಕಡಾ 98 ರಷ್ಟು ಕಡಿಮೆಯಾಗಿದೆ (ಏಪ್ರಿಲ್ 2022-ಜನವರಿ 2023: 21,756 ಯುನಿಟ್ಗಳು). ಆದಾಗ್ಯೂ ಕಂಪನಿ ರಫ್ತುಗಳಿಗೆ ಹೋಲಿಸಿದರೆ ದೇಶೀಯ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸುವತ್ತ ಹೆಚ್ಚು ಗಮನ ಹರಿಸಲಾಗಿದೆ ಎಂಬುದು ಸ್ಪಷ್ಟ.

  ಬರಲಿದೆ ಹ್ಯುಂಡೈ ಕ್ರೆಟಾ ಇವಿ

  ಭಾರತದಲ್ಲಿ ಹ್ಯುಂಡೈನ ಇವಿ ಕಾರು ಮಾರುಕಟ್ಟೆ ತಂತ್ರವು ಕ್ರೆಟಾದ ಕಡೆಗೂ ಗಮನ ಹರಿಸಿದೆ. ಇದನ್ನು ಆಟೋ ಎಕ್ಸ್ ಪೋ 2025 ರಲ್ಲಿ ಪ್ರದರ್ಶಿಸುವ ಸಾಧ್ಯತೆಯಿದೆ. 2024 ರ ಕೊನೆಯ ತ್ರೈಮಾಸಿಕದಲ್ಲಿ ಉತ್ಪಾದನೆಯಾಗಬಹುದು.

  ಕಾಂಪ್ಯಾಕ್ಟ್ ಎಸ್ ಯುವಿ ಮಾರುಕಟ್ಟೆಯು ಭಾರತದಲ್ಲಿ ಎಸ್​ಯುವಿ ಮಾರಾಟಕ್ಕೆ ಅತಿದೊಡ್ಡ ಕೊಡುಗೆ ನೀಡಿಲ್ಲ. ಮಧ್ಯಮ ಗಾತ್ರದ ಎಸ್ ಯುವಿಗಳಿಗೆ ಬೇಡಿಕೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ವಿಶೇಷವಾಗಿ ಮಾರುತಿ ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಫೇಸ್ ಲಿಫ್ಟೆಡ್ ಕಿಯಾ ಸೆಲ್ಟೋಸ್ ನಂತಹ ಹೊಸ ಮಾದರಿಗಳು. ಸ್ಪರ್ಧೆಯ ಹೊರತಾಗಿಯೂ ಕ್ರೆಟಾ ಸೆಗ್ಮೆಂಟ್ ಲೀಡರ್ ಆಗಿ ಮುಂದುವರಿದಿದೆ,

  Continue Reading

  ಪ್ರಮುಖ ಸುದ್ದಿ

  Mahindra Thar : ಥಾರ್ ಅಭಿಮಾನಿಗಳಿಗೆ ಖುಷಿಯ ವಿಚಾರ, ಕಾಯುವಿಕೆ ಅವಧಿ ಇಳಿಕೆ

  Mahindra Thar: ಥಾರ್ 4×2 ಡೀಸೆಲ್ ನ ಕಾಯುವ ಅವಧಿಯು 5-6 ತಿಂಗಳುಗಳಷ್ಟು ಕಡಿಮೆಯಾಗಿದೆ. 4×4 ರೂಪಾಂತರವು 2-3 ತಿಂಗಳಷ್ಟು ಕಡಿಮೆಯಾಗಿದೆ.

  VISTARANEWS.COM


  on

  Mahindra Thar
  Koo

  ಬೆಂಗಳೂರು: ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಆಫ್​ರೋಡಿಂಗ್​ ಎಸ್​ಯುವಿ ಮಹೀಂದ್ರಾ ಥಾರ್ (Mahindra Thar)​ ಮಾಸಿಕ ಸರಾಸರಿ 5,700 ಯುನಿಟ್ ಗಳಿಗಿಂತ ಹೆಚ್ಚು ಮಾರಾಟವಾಗುತ್ತಿದೆ. ಅದೇ ರೀತಿ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತತಿದೆ. ಹೀಗಾಗಿ ಮಹೀಂದ್ರಾ ಕಂಪನಿಯು ಇನ್ನೂ ಥಾರ್ ನ ಸುಮಾರು 71,000 ಯುನಿಟ್ ಗಳಷ್ಟು ಬ್ಯಾಕ್ ಲಾಗ್ ಅನ್ನು ಹೊಂದಿದೆ. ಅಂದರೆ ಬುಕಿಂಗ್ ಆದ ಬಳಿಕವೂ ಅಷ್ಟೊಂದು ಕಾರನ್ನು ಗ್ರಾಹಕರಿಗೆ ವಿತರಣೆ ಮಾಡಬೇಕಾಗಿದೆ. ಆದಾಗ್ಯೂ ಉತ್ಪಾದನೆಯ ವೇಗ ವೃದ್ಧಿಸುವ ಮೂಲಕ ಕಾಯುವಿಕೆಯ ಅವಧಿಯನ್ನು (ವೇಟಿಂಗ್ ಪಿರಿಯಡ್​) ಕಡಿಮೆ ಮಾಡಲು ಮಹೀಂದ್ರಾ ನಿರ್ಧರಿಸಿದೆ. ಇದು ಥಾರ್​ ಬುಕ್ ಮಾಡಿರುವ ಅಭಿಮಾನಿಗಳ ಪಾಲಿಗೆ ಸಂತಸದ ವಿಷಯವಾಗಿದೆ.

  ಫೆಬ್ರವರಿ 2024 ರಲ್ಲಿ ಮಹೀಂದ್ರಾ ಥಾರ್ 4×2 ಕಾಯುವ ಅವಧಿಗಳು

  ಥಾರ್ 4×2 (ಅಥವಾ ಥಾರ್ ಆರ್ ಡಬ್ಲ್ಯುಡಿ) ಡೀಸೆಲ್ ಪ್ರಸ್ತುತ 10-11 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಏತನ್ಮಧ್ಯೆ, ಪೆಟ್ರೋಲ್ ಥಾರ್ 4×2 ಗಾಗಿ 5-6 ತಿಂಗಳು ಕಾಯಬೇಕಾಗುತ್ತದೆ/ ಈ ಎರಡೂ ಟೈಮ್ ಲೈನ್ ಗಳು ಆಯ್ಕೆ ಮಾಡಿದ ವೇರಿಯೆಂಟ್​​ ಮೇಲೆ ಅವಲಂಬಿತವಾಗಿರುತ್ತದೆ. ಇವು ಅಕ್ಟೋಬರ್ 2023ರಲ್ಲಿ ವರದಿಯಾದ 15, 16 ತಿಂಗಳ ಕಾಯುವಿಕೆ ಅವಧಿಗಳಿಗಿಂತ ಗಮನಾರ್ಹ ಕಡಿತವಾಗಿದೆ.

  ಡೀಸೆಲ್ ಥಾರ್ 4×2 1.5-ಲೀಟರ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲ್ಪಟ್ಟಿದೆ. ಇದು 118 ಬಿಹೆಚ್ ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಆವೃತ್ತಿಯು ಥಾರ್ 4×4 ನಿಂದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್​ ಘಟಕವನ್ನು ಹೊಂದಿದೆ. ಇದು 152 ಬಿಹೆಚ್ ಪಿ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್​ಬಾಕ್ಸ್​ ಬರುತ್ತದೆ. ಥಾರ್ 4×2 ಶ್ರೇಣಿಯ ಬೆಲೆಗಳು 11.25 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ರೂ.11.25 ಲಕ್ಷಗಳವರೆಗೆ ಹೋಗುತ್ತವೆ.

  ಫೆಬ್ರವರಿ 2024 ರಲ್ಲಿ ಮಹೀಂದ್ರಾ ಥಾರ್ 4×2 ಕಾಯುವ ಅವಧಿಗಳು

  ಥಾರ್ 4×4 ನ ಯಾವುದೇ ವೇರಿಯೆಂಟ್​ ಖರೀದಿಸಲು ಬಯಸುವವರು ಕೇವಲ 2-3 ತಿಂಗಳು ಕಾಯಬೇಕಾಗುತ್ತದೆ, ಮತ್ತು ಕಾಯುವ ಅವಧಿಯು 5-6 ತಿಂಗಳುಗಳಿಂದ ಕಡಿಮೆಯಾಗಿದೆ. ಇದು ಉತ್ಪಾದನೆಯನ್ನು ಹೆಚ್ಚಿಸುವ ಮಹೀಂದ್ರಾ ಪ್ರಯತ್ನಗಳು ಫಲ ನೀಡುತ್ತಿವೆ ಎಂಬುದನ್ನು ತೋರಿಸುತ್ತದೆ.

  ಇದನ್ನೂ ಓದಿ : Ola scooter : ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 25,000 ರೂ.ವರೆಗೆ ಇಳಿಕೆ

  ಥಾರ್ 4×4 ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೇಲೆ ತಿಳಿಸಿದ 152 ಬಿಹೆಚ್ ಪಿ, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 132 ಬಿಹೆಚ್ ಪಿ, 2.2-ಲೀಟರ್ ಎಂಜಿನ್​ನಲ್ಲಿದೆ. 2WD ರೂಪಾಂತರಗಳಿಗಿಂತ ಭಿನ್ನವಾಗಿ, 4×4 ಗಳು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಹೊಂದಿವೆ. ಮ್ಯಾನುಯಲ್​ ಶಿಫ್ಟ್ 4×4 ಟ್ರಾನ್ಸ್​ಫರ್​ ಕೇಸ್ ಪಡೆಯುತ್ತವೆ. ಆಯ್ದ ರೂಪಾಂತರಗಳು ಮ್ಯಾನುಯಲ್​ ಲಾಕಿಂಗ್ ಡಿಫರೆನ್ಸಿಯಲ್​ ಅನ್ನು ಹೊಂದಿವೆ.

  ಮಹೀಂದ್ರಾ ಥಾರ್ 4×4 ಪೆಟ್ರೋಲ್ ಬೆಲೆಗಳು ಪ್ರಸ್ತುತ 14.30 ಲಕ್ಷ-16.60 ಲಕ್ಷ ರೂ.ಗಳ ನಡುವೆ ಇದ್ದರೆ, ಡೀಸೆಲ್ ಆವೃತ್ತಿಗಳ ಬೆಲೆ 15.00 ಲಕ್ಷ-17.20 ಲಕ್ಷ ರೂ.

  Continue Reading

  ದೇಶ

  CJI Chandrachud : ಸುಪ್ರೀಂ ಕೋರ್ಟ್ ಮುಖ್ಯ​ ನ್ಯಾಯಮೂರ್ತಿ ಚಂದ್ರಚೂಡ್ ಕಾರಿನ ನಂಬರ್ ಪ್ಲೇಟ್ ವೈರಲ್

  CJI Chandrachud : ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಬಳಸುವ ಕಾರಿನ ನಂಬರ್ ಪ್ಲೇಟ್ನ ಸೀರಿಯಲ್ ​ ಆಕರ್ಷಣೆಗೆ ಪ್ರಮುಖ ಕಾರಣ.

  VISTARANEWS.COM


  on

  CJI Car
  Koo

  ನವದೆಹಲಿ: ಸುಪ್ರಿಂಕೋರ್ಟ್​ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (CJI Chandrachud) ಅವರು ಬಳಸು ವ ಕಾರಿನ ನಂಬರ್ ಪ್ಲೇಟ್ ಆಸಕ್ತರ ಗಮನ ಸೆಳೆದಿದೆ. ಹೀಗಾಗಿ ಕಾರಿನ ನಂಬರ್​ ಪ್ಲೇಟ್​ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದೆ. (Viral News) ಅವರ ಕಾರಿನ ಕಾರಿನ ಚಿತ್ರವನ್ನು ಉದ್ಯಮಿ ಲಾಯ್ಡ್ ಮಥಾಯಿಸ್​ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ (Xpost) ಪೋಸ್ಟ್ ಮಾಡಿದ್ದಾರೆ. ಆ ಬಳಿಕ ಅದು ಎಲ್ಲರ ಗಮನ ಸೆಳೆದಿದೆ. ಯಾಕೆಂದರೆ ಪ್ಲೇಟ್​ ಮೇಲೆ ‘ಡಿಎಲ್ 1 ಸಿಜೆಐ 0001’ ಎಂದು ಬರೆಯಲಾಗಿತ್ತು. ನಂಬರ್​ ಪ್ಲೇಟ್​​ನ ಸೀರಿಯಲ್​ (ಸಿಜೆಐ- ಚೀಪ್​ ಜಸ್ಟಿಸ್​ ಆಫ್​ ಇಂಡಿಯಾ) ಫ್ಯಾನ್ಸಿಯಾಗಿದ್ದ ಕಾರಣ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.

  ನಿನ್ನೆ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಅವರನ್ನು ನೋಡಿದೆ. ನಾನು ಹೊರಗೆ ಹೋಗುವಾಗ, ಅವರ ಕಾರಿನ ಪರವಾನಗಿ ಪ್ಲೇಟ್ ಗಮನ ಸೆಳೆಯಿತು. ಡಿಎಲ್ 1 ಸಿಜೆಐ 0001. ತುಂಬಾ ಕೂಲ್ ಆಗಿದೆ. ಮುಖ್ಯ ಚುನಾವಣಾ ಆಯುಕ್ತರ ಕಾರಿನ ನಂಬರ್ ಪ್ಲೇಟ್ ಡಿಎಲ್ 1 ಸಿಇಸಿ 0001 ಆಗಿದೆಯೇ ಎಂದು ಆಶ್ಚರ್ಯ ಪಡುತ್ತೀರಾ? ಮಥಾಯಿಸ್​ ಕಾರಿನ ಚಿತ್ರದೊಂದಿಗೆ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

  ಮಥಾಯಿಸ್​ ಅವರ ಎಕ್ಸ್​ ಪೋಸ್ಟ್​ ಇಲ್ಲಿದೆ

  ಮರ್ಸಿಡಿಸ್ ಇ 350 ಡಿ ಮಾದರಿಯ ಮಾಲೀಕತ್ವವನ್ನು ಪರಿಶೀಲನೆ ಮಾಡಿದಾಗ ಅದು ಭಾರತದ ಸುಪ್ರೀಂ ಕೋರ್ಟ್​​ನ ರಿಜಿಸ್ಟ್ರಾರ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಗೊತ್ತಾಗಿದೆ. ಈ ಕಾರನ್ನು ಸರ್ಕಾರವು ಸಿಜೆಐಗೆ ಒದಗಿಸಿದೆ ಎಂಬದು ಗೊತ್ತಾಗಿದೆ.

  ಇದನ್ನೂ ಓದಿ : BJP’s national convention : ಜುಲೈ, ಆಗಸ್ಟ್​ನ ವಿದೇಶ ಪ್ರವಾಸ ಬುಕ್ ಆಗಿದೆ; ಹ್ಯಾಟ್ರಿಕ್​ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮೋದಿ

  ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಇ 350ಡಿ ಎಎಂಜಿ ಲೈನ್ ಇ-ಕ್ಲಾಸ್ ಸರಣಿಯ ಟಾಪ್ ಮಾದರಿಯಾಗಿದ್ದು, ಇ-ಕ್ಲಾಸ್ ಟಾಪ್ ಮಾದರಿಯ ಬೆಲೆಯು ರೂ.88.96 ಲಕ್ಷ ರೂಪಾಯಿ. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಇ 350ಡಿ ಎಎಂಜಿ ಲೈನ್ ಆಟೋಮ್ಯಾಟಿಕ್ (ಟಿಸಿ) ಟ್ರಾನ್ಸ್ ಮಿಷನ್ ನಲ್ಲಿ ಲಭ್ಯವಿದ್ದು, ಅಬ್ಸಿಡಿಯನ್ ಬ್ಲ್ಯಾಕ್ ಮೆಟಾಲಿಕ್, ಗ್ರಾಫೈಟ್ ಗ್ರೇ, ಹೈಟೆಕ್ ಸಿಲ್ವರ್ ಮೆಟಾಲಿಕ್ ಮತ್ತು ಪೋಲಾರ್ ವೈಟ್ ಎಂಬ 4 ಬಣ್ಣಗಳಲ್ಲಿ ಲಭ್ಯವಿದೆ.

  Continue Reading
  Advertisement
  slim woman good health digestion
  ಆರೋಗ್ಯ38 seconds ago

  Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

  Karnataka Weather Rain for first week of March
  ಕರ್ನಾಟಕ31 mins ago

  Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

  Electricity Bil
  ಸಂಪಾದಕೀಯ60 mins ago

  ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

  dina bhavishya read your daily horoscope predictions for February 28 2024
  ಭವಿಷ್ಯ2 hours ago

  Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

  Jain (Deemed-to-be University)
  ಬೆಂಗಳೂರು7 hours ago

  ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

  Siddaramaiah
  ಪ್ರಮುಖ ಸುದ್ದಿ7 hours ago

  ಪಶು ಸಂಗೋಪನಾ ಇಲಾಖೆ ಆಸ್ತಿ ಅಲ್ಪಸಂಖ್ಯಾತ ಇಲಾಖೆಗೆ ವರ್ಗಾವಣೆ; ಸಿದ್ದರಾಮಯ್ಯ ಆದೇಶ

  Reva University
  ಬೆಂಗಳೂರು7 hours ago

  ರೇವಾ ವಿವಿಯಲ್ಲಿ ಜಿಯೋಪಾಲಿಟಿಕ್ಸ್, ಇಂಟರ್ ನ್ಯಾಷನಲ್ ಸ್ಟಡೀಸ್ ಉನ್ನತ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

  Reliance Disney
  ದೇಶ8 hours ago

  Reliance Disney: ರಿಲಯನ್ಸ್‌-ಡಿಸ್ನಿ ವಿಲೀನ, ಮಾಧ್ಯಮದಲ್ಲಿ 70 ಸಾವಿರ ಕೋಟಿ ರೂ. ಹೂಡಿಕೆ

  44 Congress workers to get power in corporations and boards
  ಪ್ರಮುಖ ಸುದ್ದಿ8 hours ago

  Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್

  Puneri Paltan vs Haryana Steelers
  ಕ್ರೀಡೆ8 hours ago

  Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

  Sharmitha Gowda in bikini
  ಕಿರುತೆರೆ5 months ago

  Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

  Kannada Serials
  ಕಿರುತೆರೆ5 months ago

  Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

  Bigg Boss- Saregamapa 20 average TRP
  ಕಿರುತೆರೆ4 months ago

  Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

  galipata neetu
  ಕಿರುತೆರೆ3 months ago

  Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

  Kannada Serials
  ಕಿರುತೆರೆ5 months ago

  Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

  Kannada Serials
  ಕಿರುತೆರೆ5 months ago

  Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

  Bigg Boss' dominates TRP; Sita Rama fell to the sixth position
  ಕಿರುತೆರೆ4 months ago

  Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

  geetha serial Dhanush gowda engagement
  ಕಿರುತೆರೆ2 months ago

  Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

  varun
  ಕಿರುತೆರೆ3 months ago

  Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

  Kannada Serials
  ಕಿರುತೆರೆ6 months ago

  Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

  dina bhavishya read your daily horoscope predictions for February 28 2024
  ಭವಿಷ್ಯ2 hours ago

  Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

  Dina Bhavishya
  ಭವಿಷ್ಯ1 day ago

  Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

  Rajya Sabha election Pakistan Zindabad slogans raised inside Vidhana Soudha by Nasir Hussain supporters
  ರಾಜಕೀಯ1 day ago

  ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

  Ghar Wapsi ST Somashekhar and Shivaram Hebbar to quit BJP
  ರಾಜಕೀಯ2 days ago

  Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

  Rajyasabha Elections 42 Congress MLAs contacted by JDS candidate says DK Shivakumar
  ರಾಜಕೀಯ2 days ago

  Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

  read your daily horoscope predictions for february 27 2024
  ಭವಿಷ್ಯ2 days ago

  Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

  Crowd mistakes Arabic words as Quran Verses on the kurta and Pak Women mobbed
  ವಿದೇಶ3 days ago

  Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

  read your daily horoscope predictions for february 26 2024
  ಭವಿಷ್ಯ3 days ago

  Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

  Dina Bhavishya
  ಭವಿಷ್ಯ4 days ago

  Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

  Video Viral Student falls under school bus He escaped with minor injuries
  ವೈರಲ್ ನ್ಯೂಸ್5 days ago

  Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

  ಟ್ರೆಂಡಿಂಗ್‌