ನವದೆಹಲಿ: ಕೃತಕ ಬುದ್ಧಿಮತ್ತೆ (artificial intelligence) ಚಾಟ್‌ಜಿಪಿಟಿ (ChatGPT) ಬಳಕೆಯ ಸಾಧ್ಯತೆಗಳು ಹೆಚ್ಚಾಗುತ್ತಲೇ ಇವೆ. ಈಗಾಗಲೇ ಮಾನವನ ಬದುಕಿನ ಎಲ್ಲ ವಿಭಾಗಗಳಲ್ಲೂ ತನ್ನ ಪ್ರಭಾವ ಬೀರುತ್ತಿರುವ ಚಾಟ್‌ಜಿಪಿಟಿ, ವೈದ್ಯಕೀಯ ಕ್ಷೇತ್ರವೂ (Medical Field) ನಿಬ್ಬೆರಗಾಗುವಂತೆ ಮಾಡಿದೆ. 17 ವೈದ್ಯರು (Doctors) ಮೂರು ವರ್ಷಗಳ ಕಾಲ ಪ್ರಯತ್ನ ಪಟ್ಟರೂ ನಾಲ್ಕು ವರ್ಷದ ಅಲೆಕ್ಸ್ ಎಂಬ ಬಾಲಕನ ಹಲ್ಲು ನೋವಿನ ಕಾರಣವನ್ನು (Teeth pain) ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಆ ಕೆಲಸವನ್ನು ಚಾಟ್‌ಜಿಪಿಟಿ ಮಾಡಿದೆ!
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಾಲಕ ಅಲೆಕ್ಸ್ ಅಗಿಯುತ್ತಿದ್ದ ವಸ್ತುಗಳಿಂದಾಗಿ ನೋವು ಕಾಣಿಸಿಕೊಳ್ಳಲಾರಂಭಿಸಿತು. ಅಲೆಕ್ಸ್ ಅಲ್ಲದೇ ಇದೇ ರೀತಿಯ ನೋವು ಅನುಭವಿಸುತ್ತಿದ್ದ ಮತ್ತೊಬ್ಬ ಹುಡುಗ ಕೂಡ ಇದ್ದ. ಮಗುವಿನ ನೋವಿಗೆ ಪರಿಹಾರ ಕಂಡುಹಿಡಿಯಲು ಅಲೆಕ್ಸ್ ಬಾಲಕನ ತಾಯಿ ಹಲವು ವೈದ್ಯರನ್ನು ಕಂಡರು. ಮೂರು ವರ್ಷಗಳ ಕಾಲ ಮಗನ ನೋವು ಮತ್ತು ಅವನು ಅನುಭವಿಸುತ್ತಿರುವ ಇತರ ರೋಗಲಕ್ಷಣಗಳಿಗೆ ಅವರು ಪರಿಪೂರ್ಣವಾದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ವಿಚಿತ್ರ ನೋವಿನಿಂದ ಬಳಲುತ್ತಿದ್ದ ಅಲೆಕ್ಸ್‌ನ ಬೆಳವಣಿಗೆ ಕೂಡ ಕುಂಠಿತವಾಯಿತು. ಈ ಕುರಿತು ವೈದ್ಯರನ್ನು ಸಂಪರ್ಕಿಸಿದಾಗ, ಬಹುಶಃ ಕೋವಿಡ್ ನಂತರದ ಪರಿಣಾಮ ಇರಬಹುದು ಎಂದು ಹೇಳಿದರು. ಅವನೀಗ ಸ್ವಲ್ಪ ಬೆಳೆದಿದ್ದಾನೆ. ಅವನು ನಡೆಯುವಾಗ ಬಲಗಾಲಿನಿಂದ ಮುಂದೆ ಬಂದರೂ ಎಡ ಪಾದವನ್ನು ಮುಂದಕ್ಕೆ ತರುತ್ತಿದ್ದನು ಎಂದು ತಾಯಿ ಹೇಳಿದ್ದಾರೆ. ಇಷ್ಟಾಗಿಯೂ ಮಗನ ನೋವಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಬಾಲಕನ ತಾಯಿ ಕೃತಕ ಬುದ್ಧಿಮತ್ತೆಯ ಚಾಟ್‌ಜಿಪಿಟಿಯ ಮೊರೆ ಹೋದರು. ಅಲೆಕ್ಸ್‌ನ ಹಲ್ಲು ನೋವಿಗೆ ಕಾರಣವೇನು ಮತ್ತು ಬೆಳವಣಿಗೆ ಯಾಕೆ ಕುಂಠಿತವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಕೃತಕ ಬುದ್ಧಿಮತ್ತೆಯ ನೆರವು ಪಡೆಯಲು ಮುಂದಾದರು.
ಚಾಟ್‌ಜಿಪಿಟಿಯ ಟೂಲ್‌ನಲ್ಲಿ ತಮ್ಮ ಎದುರಿಸುತ್ತಿದ್ದ ನೋವಿನ ಎಲ್ಲ ರೋಗ ಲಕ್ಷಣಗಳನ್ನು ವಿವರಿಸಿದರು. ಅಲೆಕ್ಸ್ ಅಪರೂಪದ ನರವೈಜ್ಞಾನಿಕ ಸ್ಥಿತಿಯಿಂದ ಬಳಲುತ್ತಿರುವುದನ್ನು ಕಂಡುಕೊಂಡರು. ಇದನ್ನು ಟೆಥರ್ಡ್ ಕಾರ್ಡ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಬಳಿಕ ಫೇಸ್‌ಬುಕ್‌ನ ಗ್ರೂಪ್‌ಗಳಿಗೆ ಜಾಯಿನ್ ಆದರು. ಅಲ್ಲಿ ಇದೇ ರೀತಿಯ ವಿಶಿಷ್ಟ ರೋಗದಿಂದ ಬಳಲುತ್ತಿದ್ದ ಇತರ ಮಕ್ಕಳು ಇರುವುದು ಗೊತ್ತಾಯಿತು.
ಈ ಸುದ್ದಿಯನ್ನೂ ಓದಿ: OpenAI Bankruptcy: ಎಲ್ಲರ ಉದ್ಯೋಗ ಕಸಿಯಲಿದೆ ಎಂದ ಚಾಟ್‌ಜಿಪಿಟಿಯೇ ದಿವಾಳಿ; ವರದಿ ಹೇಳೋದೇನು?
ವಿಚಿತ್ರ ನರರೋಗದಿಂದ ಬಳಲುತ್ತಿರುವ ಹಿಂಟ್ ಸಿಗುತ್ತಿದ್ದಂತೆ ಅಲೆಕ್ಸ್‌ನನ್ನು ನರಶಸ್ತ್ರಚಿಕಿತ್ಸಕರ ಬಳಿಗೆ ತಾಯಿ ಕರೆದುಕೊಂಡು ಹೋದರು. ಅಲ್ಲದೇ, ತನ್ನ ಮಗ ಟೆಥರ್ಡ್ ಕಾರ್ಡ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು ಎಂದು ವೈದ್ಯರಿಗೆ ವಿವರಿಸಿದರು. ವೈದ್ಯರು ಎಂಆರ್‌ಐ ಸ್ಕ್ಯಾನ್ ಪರಿಶೀಲಿಸಿದರು. ಬಳಿಕ ಚಿಕಿತ್ಸೆ ನೀಡಿದರು. ಶಸ್ತ್ರ ಚಿಕಿತ್ಸೆಯ ಕೆಲವು ವಾರಗಳ ಬಳಿಕ ಅಲೆಕ್ಸ್ ಈಗ ನಾರ್ಮಲ್ ಸ್ಥಿತಿಗೆ ತಲುಪಿದ್ದಾರೆ. ವೈದ್ಯರಿಗೆ ಸವಾಲಾಗಿದ್ದ ರೋಗ ಪತ್ತೆಯನ್ನು ಅಂತಿಮವಾಗಿ ಚಾಟ್‌ಜಿಪಿಟಿ ಪತ್ತೆ ಹಚ್ಚಿತು.