Site icon Vistara News

Explainer: EVಗಳೇಕೆ ಹೊತ್ತಿ ಉರಿಯುತ್ತಿವೆ?

ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ ಕನಿಷ್ಠ 7 ಕಡೆ ದ್ವಿಚಕ್ರ ಎಲೆಕ್ಟ್ರಿಕ್‌ ವಾಹನಗಳು ನಿಂತಲ್ಲೇ ಅಗ್ನಿಗಾಹುತಿಯಾಗಿವೆ. ಏ.22ರಂದು ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸತ್ತಿದ್ದಾರೆ. ತಮಿಳುನಾಡಿನ ತಿರುಪುರದಲ್ಲಿ ಒಕಿನಾವ ಸ್ಕೂಟರ್‌, ನಾಶಿಕ್‌ನಲ್ಲಿ ಜಿತೇಂದ್ರ ನ್ಯೂ ಇವಿ, ಇನ್ನೆರಡು ಘಟನೆಗಳಲ್ಲಿ ಓಲಾ ಹಾಗೂ ಪ್ಯೂರ್‌ ಇವಿ ಕಂಪನಿಗಳ ಟೂ ವ್ಹೀಲರ್‌ಗಳು ಬೆಂಕಿಗಾಹುತಿಯಾದವು. ಮಾರ್ಚ 25ರಂದು ವೆಲ್ಲೂರ್‌ನಲ್ಲಿ ನಡೆದ ಒಕಿನಾವ ಸ್ಕೂಟರ್‌ ದುರಂತದಲ್ಲಿ ಇಬ್ಬರು ಸತ್ತರು. ಇದು ಇವಿಗಳ ಸುರಕ್ಷತೆ ಬಗ್ಗೆ ಭಾರಿ ಸಂದೇಹ ಮೂಡಿಸುವಂತಿದೆ.

ಸರಕಾರದಿಂದ ನೇಮಿಸಲಾದ ಒಂದು ಸಮಿತಿ ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಸಿತು. ಇದರಲ್ಲಿ ಐಐಎಸ್‌ಸಿ, ಸ್ಫೋಟಕಗಳ ಮತ್ತು ಪರಿಸರ ಸುರಕ್ಷತಾ ಕೇಂದ್ರದ ತಜ್ಞರಿದ್ದರು. ಆಯ ಕಂಪನಿಗಳು ಅವುಗಳದೇ ತನಿಖೆ ಜಾರಿಯಲ್ಲಿಟ್ಟಿವೆ. ಗ್ರಾಹಕರ ಸುರಕ್ಷತೆಗೆ ಗರಿಷ್ಠ ಗಮನ ಕೊಡುವುದಾಗಿ ಅವು ಹೇಳಿವೆ.
ಆದರೆ ಇವಿ ಸ್ಫೋಟಗಳಿಗೆ ನಿರ್ದಿಷ್ಟ ಕಾರಣಗಳೇನು ಎಂಬುದು ಇನ್ನೂ ತಿಳಿಯಬೇಕಿದೆ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನ ಹಾಗೂ ಕಳಪೆ ನಿರ್ಮಾಣವೇ ಇದಕ್ಕೆ ಕಾರಣವಾಗಿರಬಹುದು ಎಂಬುದು ತಜ್ಞರ ಅಂದಾಜು.

ಬಿಸಿಲು ಕಾರಣವೇ?

ಈಗ ಬೇಸಿಗೆ, ಬಿಸಿಲು ಹೆಚ್ಚುತ್ತಿದೆ. ಈ ಹಿಂದಿನ ಋತುವಿನಲ್ಲಿ ಇಷ್ಟೊಂದು ಅವಘಡಗಳು ಆಗಿರಲಿಲ್ಲ. ತಾಪಮಾನದಿಂದಾಗಿ ಹೀಗಾಗುತ್ತಿದೆ ಎನ್ನಲು ಇದು ಕಾರಣ. ಈ ವಾಹನಗಳಲ್ಲಿ ಬಳಸುತ್ತಿರುವ ಲಿಥಿಯಂ- ಅಯಾನ್‌ ಬ್ಯಾಟರಿಗಳು ಬರುತ್ತಿರುವುದು ಚೀನಾ, ಕೊರಿಯಾ ಮುಂತಾದ ಕಡಿಮೆ ಉಷ್ಣತಾಮಾನದ ಪ್ರದೇಶಗಳಿಂದ. ಇವು ಭಾರತೀಯ ಹವಾಮಾನಕ್ಕೆ ತಕ್ಕಂತಿಲ್ಲ. ಈಗ ಸ್ಫೋಟ ಪ್ರಕರಣಗಳು ನಡೆದಿರುವುದು ಸಹ ಹೆಚ್ಚು ತಾಪಮಾನದ ಪ್ರದೇಶಗಳಲ್ಲಿ. ಹೊರಗಿನ ವಾತಾವರಣದ ಉಷ್ಣತೆ 40-45 ಡಿಗ್ರಿ ಸೆಲ್ಷಿಯಸ್‌ ತಲುಪಿದರೆ, ಬ್ಯಾಟರಿಯೊಳಗಿನ ಉಷ್ಣತೆ 50-55 ಡಿಗ್ರಿ ಸೆಲ್ಷಿಯಸ್‌ಗೆ ಏರುವುದು ಸಾಧ್ಯವಿದೆ. ಇಂಥ ಸಂದರ್ಭದಲ್ಲಿ ಅದರೊಳಗಿನ ಕೆಮಿಕಲ್‌ಗಳು ಯದ್ವಾತದ್ವಾ ವರ್ತಿಸಿ ಸ್ಫೋಟಗೊಳ್ಳಬಹುದು.

ಕಳಪೆ ಸಾಮಗ್ರಿ?
ಮಾರುಕಟ್ಟೆಯಲ್ಲಿ ಈಗ ವಿದ್ಯುಚ್ಚಾಲಿತ ವಾಹನಗಳ ಹವಾ ಇದೆ. ಇದನ್ನು ನಗದೀಕರಿಸಿಕೊಳ್ಳಲು ಹಾಗೂ ಮಾರುಕಟ್ಟೆಯ ಬೇಡಿಕೆಯ ವೇಗವನ್ನು ಸರಿಗಟ್ಟಲು ಕೆಲವು ಆಟೊಮೊಬೈಲ್‌ ಕಂಪನಿಗಳು, ಚೀನಾ ಮುಂತಾದ ಕಡೆಗಳಿಂದ ಅಗ್ಗದ ಕಚ್ಚಾವಸ್ತುಗಳನ್ನು ತಂದು, ಇವಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿರುವ ಸಾಧ್ಯತೆ ಇದೆ.

ದೋಷಪೂರಿತ ಇವಿ ವಾಪಸ್‌
ಈ ಘಟನೆಗಳ ಬಗ್ಗೆ ಕೇಂದ್ರ ಸಾರಿಗೆ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ದೋಷಪೂರಿತ ಎಲೆಕ್ಟ್ರಿಕ್‌ ವಾಹನಗಳ ಬ್ಯಾಚ್‌ಗಳನ್ನು ಸ್ವಪ್ರೇರಣೆಯಿಂದ ಹಿಂದೆಗೆದುಕೊಳ್ಳುವಂತೆ ವಾಹನ ಕಂಪನಿಗಳಿಗೆ ಸೂಚಿಸಿದ್ದಾರೆ. ಪ್ಯೂರ್‌ ಕಂಪನಿ ತನ್ನ ವಾಹನಗಳನ್ನು ಹಿಂದೆಗೆದುಕೊಂಡಿದೆ. ಕೇಂದ್ರ ತನಿಖೆ ನಡೆಸುತ್ತಿದೆ. ತನಿಖೆ ವೇಳೆ ಯಾವುದೇ ದೋಷ ಕಂಡುಬಂದರೆ ಕಂಪನಿಗಳಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಬ್ಯಾಟರಿಗಳ ಅಳವಡಿಕೆ, ವಾಹನಗಳ ಸಾಗಣೆ ಮುಂತಾದವುಗಳಲ್ಲಿ ಗುಣಮಟ್ಟ ಪಾಲನೆ ಇಲ್ಲದಿದ್ದಲ್ಲಿ ಸಬ್ಸಿಡಿ ಕೊಡಲಾಗುವುದಿಲ್ಲ ಎಂದಿದ್ದಾರೆ.

ಎಆರ್‌ಎಐ ಪಾತ್ರ ಏನು?
ದೇಶದಲ್ಲಿ ಎಲ್ಲ ವಾಹನಗಳ ಟೆಸ್ಟಿಂಗ್‌ ನಡೆಸಿ ಅನುಮತಿ ನೀಡುವ ಆಟೋಮೋಟಿವ್‌ ರಿಸರ್ಚ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ (ಎಆರ್‌ಎಐ) ಇದೆ. ಇದು ನಡೆಸುವ ಪರೀಕ್ಷೆಗಳು ಸಾಕಷ್ಟು ತೃಪ್ತಿಕರವಾಗಿಲ್ಲವೇ, ಇಲ್ಲವಾದರೆ ಕಳಪೆ ಗುಣಮಟ್ಟದ ಇವಿಗಳು ಮಾರುಕಟ್ಟೆಗೆ ಬರಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಇದೆ. ಇವಿಗಳ ಗುಣಮಟ್ಟವನ್ನು ಈ ಸಂಸ್ಥೆ ಮತ್ತಷ್ಟು ಖಾತ್ರಿಪಡಿಸಬೇಕು.

ಸರಕಾರ ಏನು ಮಾಡಬೇಕು?

ಇದನ್ನೂ ಓದಿ: Explainer: ನೆಟ್‌ಫ್ಲಿಕ್ಸ್‌ ಭಾರತದಲ್ಲಿ ಚಂದಾದಾರರನ್ನು ಕಳೆದುಕೊಳ್ಳುತ್ತಿರುವುದೇಕೆ?

ಗ್ರಾಹಕರೇನು ಮಾಡಬಹುದು?

Exit mobile version