Site icon Vistara News

Google India: ಗೂಗಲ್ ಪೇನಿಂದ ಸಣ್ಣ ವ್ಯಾಪಾರಸ್ಥರಿಗೆ ಚಿಲ್ಲರೆ ಸಾಲ ಸೌಲಭ್ಯ!

Google Pay to launch sachet loans to small businessman, Says Google India

ನವದೆಹಲಿ: ದೇಶದಲ್ಲಿನ ಸಣ್ಣ ವ್ಯಾಪಾರಸ್ಥರಿಗೆ (Small Businessman) ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೂಗಲ್ ಇಂಡಿಯಾ(Google India), ಗೂಗಲ್ ಪೇ (Google Pay) ಮೂಲಕ ಸಣ್ಣ ಮೊತ್ತದ ಸಾಲ(Retail Loans) ಸಹಾಯವನ್ನು ಗುರುವಾರ ಘೋಷಿಸಿದೆ. ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಮೊತ್ತದ ಸಾಲಗಳು ಬೇಕಾಗುತ್ತವೆ. ಆದ್ದರಿಂದ ಟೆಕ್ ದೈತ್ಯ ಜಿಪೇ ಅಪ್ಲಿಕೇಶನ್‌ನಲ್ಲಿ ಸ್ಯಾಷೇ ಸಾಲಗಳನ್ನು (ಸಣ್ಣ ಮೊತ್ತದ ಸಾಲ) ಪ್ರಾರಂಭಿಸಿದೆ. ಕಂಪನಿಯು ಸಣ್ಣ ವ್ಯವಹಾರಗಳಿಗೆ ಕೇವಲ 15 ಸಾವಿರ ರೂ. ಸಾಲವನ್ನು ನೀಡುತ್ತದೆ ಮತ್ತು ಅದನ್ನು 111 ರೂ.ಕ್ಕಿಂತ ಕಡಿಮೆ ಮೊತ್ತದ ಮೂಲಕ ಮರುಪಾವತಿಸಬಹುದು ಎಂದು ಗೂಗಲ್ ಇಂಡಿಯಾ ಹೇಳಿದೆ. ಸಾಲ ಸೇವೆಗಳನ್ನು ಒದಗಿಸಲು ಟೆಕ್ ದೈತ್ಯ ಡಿಎಂಐ ಫೈನಾನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

ವ್ಯಾಪಾರಿಗಳ ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಪರಿಹರಿಸಲು ಸಹಾಯ ಮಾಡುವ ePayLater ಸಹಭಾಗಿತ್ವದಲ್ಲಿ ಗೂಗಲ್ ಪೇ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್(ಸಾಲ) ಒದಗಿಸಲಿದೆ. ವ್ಯಾಪಾರಿಗಳು ತಮ್ಮ ದಾಸ್ತಾನು ಮತ್ತು ಸರಬರಾಜುಗಳನ್ನು ಖರೀದಿಸಲು ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ವಿತರಕರಲ್ಲಿ ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಯುಪಿಐ ಮೂಲಕ ಐಸಿಐಸಿಐ ಬ್ಯಾಂಕ್ ಪಾಲುದಾರಿಕೆಯೊಂದಿಗೆ ಗೂಗಲ್ ಇಂಡಿಯಾ ಕ್ರೆಡಿಟ್ ಲೈನ್ಸ್ ಆರಂಭವನ್ನು ಘೋಷಿಸಿದೆ. ಅಲ್ಲದೇ, ಆಕ್ಸಿಸ್ ಬ್ಯಾಂಕ್ ಜತೆಗೂಡಿ ವೈಯಕ್ತಿ ಸಾಲ ಸೌಲಭ್ಯವನ್ನು ವಿಸ್ತರಿಸಿದೆ. ಇದೇ ವೇಳೆ ಮಾತನಾಡಿದ ಗೂಗಲ್ ಪೇ ಉಪಾಧ್ಯಕ್ಷ ಅಂಬರೀಷ್ ಕೆಂಘೆ ಅವರು, ಕಳೆದ 12 ತಿಂಗಳಲ್ಲಿ ಯುಪಿಐ ಮೂಲಕ 167 ಕೋಟಿ ರೂಪಾಯಿ ಮೌಲ್ಯವನ್ನು ಪ್ರಕ್ರಿಯೆಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Google DigiKavach: ಹಣಕಾಸು ವಂಚನೆ ತಡೆಯಲು ‘ಡಿಜಿಕವಚ’ ಆರಂಭಿಸಿದ ಗೂಗಲ್!

ಗೂಗಲ್ ಪೇ ಮೂಲಕ ವಿತರಿಸಲಾಗಿರುವ ಒಟ್ಟು ಸಾಲಗಳ ಪೈಕಿ ಅರ್ಧದಷ್ಟು ಸಾಲಗಳನ್ನು ತಿಂಗಳಿಗೆ 30 ಸಾವಿರ ರೂ.ಕ್ಕಿಂತಲೂ ಕಡಿಮೆ ಆದಾಯ ಇರುವವರಿಗೆ ನೀಡಲಾಗಿದೆ. ಈ ಪೈಕಿ ಹೆಚ್ಚಿನ ಪಾಲು ಎರಡನೇ ಸ್ತರ ಮತ್ತು ಅದಕ್ಕಿಂತ ಕಡಿಮೆ ಜನಸಂಖ್ಯೆಯು ನಗರಗಳಿಗೆ ಸೇರಿದ್ದಾಗಿದೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಅಂಬರೀಷ್ ಕೆಂಘೆ ಅವರು ತಿಳಿಸಿದ್ದಾರೆ.

ಗೂಗಲ್ ಫಾರ್ ಇಂಡಿಯಾ 9ನೇ ಆವೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಗೂಗಲ್ ಕಂಪನಿಯ ಭಾರತದ ಉಪಾಧ್ಯಕ್ಷ ಸಂಜಯ್ ಗುಪ್ತಾ ಅವರು, ಕೃತಕ ಬುದ್ಧಿಮತ್ತೆ ಬಳಕೆಯಲ್ಲಿನ ಸುರಕ್ಷತೆಯನ್ನು ಹೆಚ್ಚಿಸುವ ಯೋಜನೆಗಳು ಜಾರಿಯಲ್ಲಿವೆ ಎಂದು ತಿಳಿಸಿದ್ದಾರೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version