Site icon Vistara News

Password protected emails : ಬೇರೆಯವರು ಇ-ಮೇಲ್‌ ಓದದಂತೆ ತಡೆಯಲು ಬಂದಿದೆ ಜಿಮೇಲ್‌ ಪಾಸ್‌ವರ್ಡ್‌ ಸೌಲಭ್ಯ

Gmail

ನವ ದೆಹಲಿ: ನೀವು ಗೌಪ್ಯ ಮಾಹಿತಿಯೊಂದನ್ನು ಇ-ಮೇಲ್‌ ಮೂಲಕ ಕಳಿಸುತ್ತಿದ್ದು, ಬೇರೆ ಯಾರಾದರೂ ಅಪರಿಚಿತರು ಬಹುಶಃ ಓದಬಹುದು ಎಂಬ ಆತಂಕದಲ್ಲಿ ಇದ್ದೀರಾ? ನಿಮ್ಮ ಇ-ಮೇಲ್‌ಗಳನ್ನು ಸುರಕ್ಷಿತವಾಗಿಡಲು ಪಾಸ್‌ ವರ್ಡ್‌ ಸೌಲಭ್ಯವನ್ನು ಗೂಗಲ್‌ನ ಜಿ-ಮೇಲ್‌ (Gmail) ಕಲ್ಪಿಸಿದೆ. ಜಿಮೇಲ್‌ ಈಗ ಕಾನ್ಫಿಡೆನ್ಷಿಯಲ್‌ ಮೋಡ್‌ ಫೀಚರ್‌ (confidential mode ) ಅನ್ನು ಒಳಗೊಂಡಿದೆ.

ಜಿಮೇಲ್‌ನ ಕಾನ್ಫೆಡೆನ್ಷಿಯಲ್‌ ಮೋಡ್‌ ಫೀಚರ್‌ನಲ್ಲಿ ಇ-ಮೇಲ್‌ಗೆ ಪಾಸ್‌ ವರ್ಡ್‌ ಸೆಟ್‌ ಮಾಡಬಹುದು. ಹೀಗಾಗಿ ಮೆಸೇಜ್‌ನ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು. ಈಗಿನ ದಿನಗಳಲ್ಲಿ ಇ-ಮೇಲ್‌ ಎನ್ನುವುದು ಸಂವಹನದ ಪ್ರಮುಖ ಸಾಧನಗಳಲ್ಲೊಂದಾಗಿದೆ. ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗೆ ಬಳಕೆಯಾಗುತ್ತದೆ. ಹೀಗಿದ್ದರೂ ಸೂಕ್ಷ್ಮ ವಿಷಯಗಳನ್ನು ಇ-ಮೇಲ್‌ ಮೂಲಕ ಶೇರ್‌ ಮಾಡುವಾಗ ಮುಂಜಾಗರೂಕತೆ ಅಗತ್ಯ. ಹೀಗಾಗಿ ಪಾಸ್‌ ವರ್ಡ್ ಮೂಲಕ ಸಂರಕ್ಷಿತ ಇಮೇಲ್‌ಗಳನ್ನು ಕಳಿಸಬಹುದು.

ಏನಿದು ಜಿ-ಮೇಲ್‌ನ ಕಾನ್ಫಿಡೆನ್ಷಿಯಲ್‌ ಮೋಡ್?

ಜಿ-ಮೇಲ್‌ನ ಕಾನ್ಫಿಡೆನ್ಷಿಯಲ್‌ ಮೋಡ್‌ನಲ್ಲಿ ಬಳಕೆದಾರರು ಮೆಸೇಜ್‌ ಮತ್ತು ಅಟ್ಯಾಚ್‌ಮೆಂಟ್‌ಗಳನ್ನು ಪಾಸ್‌ ವರ್ಡ್‌ ಇರುವ ಮತ್ತೊಂದು ಸ್ತರದ ಭದ್ರತೆಯ ಫೀಚರ್‌ ಸಹಿತ ಸಂಬಂಧಪಟ್ಟವರಿಗೆ ಕಳಿಸಬಹುದು. ಇದರಿಂದಾಗಿ ರಹಸ್ಯ ಮಾಹಿತಿಯನ್ನು ಇತರರು ಅಥವಾ ಅಪರಿಚಿತರು ಓದದಂತೆ ತಡೆಯಬಹುದು. ಮೆಸೇಜ್‌ಗೆ ಮುಕ್ತಾಯದ ಅವಧಿಯನ್ನೂ ಬಳಕೆದಾರರು ಸೆಟ್‌ ಮಾಡಲು ಅವಕಾಶ ಇದೆ. (Expiration date) ಮೆಸೇಜ್‌ ಸ್ವೀಕರಿಸುವವರಿಗೆ ಫಾರ್‌ ವರ್ಡ್‌, ಕಾಪಿ, ಪ್ರಿಂಟ್‌, ಡೌನ್‌ ಲೋಡ್‌ ಮಾಡದಂತೆಯೂ ನಿರ್ಬಂಧಿಸಲು ಕಾನ್ಫಿಡೆನ್ಷಿಯಲ್‌ ಮೋಡ್‌ನಿಂದ ಸಾಧ್ಯ.

ಜಿ-ಮೇಲ್‌ನ ಇ-ಮೇಲ್‌ನಲ್ಲಿ ಪಾಸ್‌ ವರ್ಡ್‌ ಸೆಟ್‌ ಮಾಡುವುದು ಹೇಗೆ?

ಜಿ-ಮೇಲ್‌ ಅನ್ನು (Gmail) ತೆರೆಯಿರಿ. ಕಂಪೋಸ್‌ (Compose) ಅನ್ನು ಕ್ಲಿಕ್ಕಿಸಿ.

ಬಾಟಮ್‌ನ ಬಲ ಬದಿಯ ವಿಂಡೋದಲ್ಲಿರುವ ಕಾನ್ಫಿಡೆನ್ಸಿಯಲ್‌ ಮೋಡ್‌ (Confidential mode) ಕ್ಲಿಕ್ಕಿಸಿ

ನೀವು ಈಗಾಗಲೇ ಕಾನ್ಫಿಡೆನ್ಷಿಯಲ್‌ ಮೋಡ್‌ನಲ್ಲಿದ್ದರೆ ಎಡಿಟ್‌ (Edit) ಕ್ಲಿಕ್ಕಿಸಿ

ಇ-ಮೇಲ್‌ನ expiration date ಮತ್ತು ಪಾಸ್‌ ಕೋಡ್‌ ಸೆಟ್‌ ಮಾಡಿ. ಇದು ಮೆಸೇಜ್‌ ಟೆಕ್ಸ್ಟ್‌ ಮತ್ತು ಅಟ್ಯಾಚ್‌ಮೆಂಟ್‌ಗೆ ಅನ್ವಯವಾಗುತ್ತದೆ.

ನೀವು No SMS passcode ಅನ್ನು ಆಯ್ಕೆ ಮಾಡಬಹುದು. ಜಿಮೇಲ್‌ app ಬಳಸುವವರು ಆಗ ಇದನ್ನು ನೇರವಾಗಿ ಓಪನ್‌ ಮಾಡಬಹುದು. ಜಿಮೇಲ್‌ ಬಳಸದವರು ಆಗ ಇಮೇಲ್‌ ಮೂಲಕ ಪಾಸ್‌ ಕೋಡ್‌ ಪಡೆಯುತ್ತಾರೆ.

ನೀವು SMS passcode ಆಯ್ಕೆ ಮಾಡಿದ್ದರೆ ಸ್ವೀಕರಿಸುವವರು ಟೆಕ್ಸ್ಟ್‌ ಮೆಸೇಜ್‌ ಮೂಲಕ ಪಾಸ್‌ ಕೋಡ್‌ (passcode) ಪಡೆಯುತ್ತಾರೆ. ಮೆಸೇಜ್‌ ಸವೀಕರಿಸುವವರ ಫೋನ್‌ ನಂಬರ್‌ ಬರೆಯಿರಿ, ನಿಮ್ಮದಲ್ಲ.

Save ಅನ್ನು ಕ್ಲಿಕ್ಕಿಸಿ.

ಕಾನ್ಫಿಡೆನ್ಷಿಯಲ್‌ ಮೋಡ್‌ನಲ್ಲಿ ಕಳಿಸುವುದರಿಂದ ಇ-ಮೇಲ್‌ಗಳನ್ನು ಆಕಸ್ಮಿಕವಾಗಿ ಕಳಿಸುವುದರಿಂದಲೂ ದೂರವಿರಬಹುದು. ಹೀಗಾಗಿ ಹಲವು ಪ್ರಯೋಜನಗಳು ಇವೆ.

Exit mobile version