Gmail password facility has come to prevent others from reading e-mailsPassword protected emails : ಬೇರೆಯವರು ಇ-ಮೇಲ್‌ ಓದದಂತೆ ತಡೆಯಲು ಬಂದಿದೆ ಜಿಮೇಲ್‌ ಪಾಸ್‌ವರ್ಡ್‌ ಸೌಲಭ್ಯ - Vistara News

ತಂತ್ರಜ್ಞಾನ

Password protected emails : ಬೇರೆಯವರು ಇ-ಮೇಲ್‌ ಓದದಂತೆ ತಡೆಯಲು ಬಂದಿದೆ ಜಿಮೇಲ್‌ ಪಾಸ್‌ವರ್ಡ್‌ ಸೌಲಭ್ಯ

Password protected emails ಇ-ಮೇಲ್‌ ಕಳಿಸುವಾಗ ಅದರ ಸುರಕ್ಷತೆಯನ್ನು ಹೆಚ್ಚಿಸಲು ಪಾಸ್‌ ವರ್ಡ್‌ ಸೌಲಭ್ಯವನ್ನು ಗೂಗಲ್‌ನ ಜಿ-ಮೇಲ್‌ ಕಲ್ಪಿಸಿದೆ. ಇದು ಹೇಗೆ? ಇಲ್ಲಿದೆ ವಿವರ.

VISTARANEWS.COM


on

Gmail
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನೀವು ಗೌಪ್ಯ ಮಾಹಿತಿಯೊಂದನ್ನು ಇ-ಮೇಲ್‌ ಮೂಲಕ ಕಳಿಸುತ್ತಿದ್ದು, ಬೇರೆ ಯಾರಾದರೂ ಅಪರಿಚಿತರು ಬಹುಶಃ ಓದಬಹುದು ಎಂಬ ಆತಂಕದಲ್ಲಿ ಇದ್ದೀರಾ? ನಿಮ್ಮ ಇ-ಮೇಲ್‌ಗಳನ್ನು ಸುರಕ್ಷಿತವಾಗಿಡಲು ಪಾಸ್‌ ವರ್ಡ್‌ ಸೌಲಭ್ಯವನ್ನು ಗೂಗಲ್‌ನ ಜಿ-ಮೇಲ್‌ (Gmail) ಕಲ್ಪಿಸಿದೆ. ಜಿಮೇಲ್‌ ಈಗ ಕಾನ್ಫಿಡೆನ್ಷಿಯಲ್‌ ಮೋಡ್‌ ಫೀಚರ್‌ (confidential mode ) ಅನ್ನು ಒಳಗೊಂಡಿದೆ.

ಜಿಮೇಲ್‌ನ ಕಾನ್ಫೆಡೆನ್ಷಿಯಲ್‌ ಮೋಡ್‌ ಫೀಚರ್‌ನಲ್ಲಿ ಇ-ಮೇಲ್‌ಗೆ ಪಾಸ್‌ ವರ್ಡ್‌ ಸೆಟ್‌ ಮಾಡಬಹುದು. ಹೀಗಾಗಿ ಮೆಸೇಜ್‌ನ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು. ಈಗಿನ ದಿನಗಳಲ್ಲಿ ಇ-ಮೇಲ್‌ ಎನ್ನುವುದು ಸಂವಹನದ ಪ್ರಮುಖ ಸಾಧನಗಳಲ್ಲೊಂದಾಗಿದೆ. ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗೆ ಬಳಕೆಯಾಗುತ್ತದೆ. ಹೀಗಿದ್ದರೂ ಸೂಕ್ಷ್ಮ ವಿಷಯಗಳನ್ನು ಇ-ಮೇಲ್‌ ಮೂಲಕ ಶೇರ್‌ ಮಾಡುವಾಗ ಮುಂಜಾಗರೂಕತೆ ಅಗತ್ಯ. ಹೀಗಾಗಿ ಪಾಸ್‌ ವರ್ಡ್ ಮೂಲಕ ಸಂರಕ್ಷಿತ ಇಮೇಲ್‌ಗಳನ್ನು ಕಳಿಸಬಹುದು.

ಏನಿದು ಜಿ-ಮೇಲ್‌ನ ಕಾನ್ಫಿಡೆನ್ಷಿಯಲ್‌ ಮೋಡ್?

ಜಿ-ಮೇಲ್‌ನ ಕಾನ್ಫಿಡೆನ್ಷಿಯಲ್‌ ಮೋಡ್‌ನಲ್ಲಿ ಬಳಕೆದಾರರು ಮೆಸೇಜ್‌ ಮತ್ತು ಅಟ್ಯಾಚ್‌ಮೆಂಟ್‌ಗಳನ್ನು ಪಾಸ್‌ ವರ್ಡ್‌ ಇರುವ ಮತ್ತೊಂದು ಸ್ತರದ ಭದ್ರತೆಯ ಫೀಚರ್‌ ಸಹಿತ ಸಂಬಂಧಪಟ್ಟವರಿಗೆ ಕಳಿಸಬಹುದು. ಇದರಿಂದಾಗಿ ರಹಸ್ಯ ಮಾಹಿತಿಯನ್ನು ಇತರರು ಅಥವಾ ಅಪರಿಚಿತರು ಓದದಂತೆ ತಡೆಯಬಹುದು. ಮೆಸೇಜ್‌ಗೆ ಮುಕ್ತಾಯದ ಅವಧಿಯನ್ನೂ ಬಳಕೆದಾರರು ಸೆಟ್‌ ಮಾಡಲು ಅವಕಾಶ ಇದೆ. (Expiration date) ಮೆಸೇಜ್‌ ಸ್ವೀಕರಿಸುವವರಿಗೆ ಫಾರ್‌ ವರ್ಡ್‌, ಕಾಪಿ, ಪ್ರಿಂಟ್‌, ಡೌನ್‌ ಲೋಡ್‌ ಮಾಡದಂತೆಯೂ ನಿರ್ಬಂಧಿಸಲು ಕಾನ್ಫಿಡೆನ್ಷಿಯಲ್‌ ಮೋಡ್‌ನಿಂದ ಸಾಧ್ಯ.

ಜಿ-ಮೇಲ್‌ನ ಇ-ಮೇಲ್‌ನಲ್ಲಿ ಪಾಸ್‌ ವರ್ಡ್‌ ಸೆಟ್‌ ಮಾಡುವುದು ಹೇಗೆ?

ಜಿ-ಮೇಲ್‌ ಅನ್ನು (Gmail) ತೆರೆಯಿರಿ. ಕಂಪೋಸ್‌ (Compose) ಅನ್ನು ಕ್ಲಿಕ್ಕಿಸಿ.

ಬಾಟಮ್‌ನ ಬಲ ಬದಿಯ ವಿಂಡೋದಲ್ಲಿರುವ ಕಾನ್ಫಿಡೆನ್ಸಿಯಲ್‌ ಮೋಡ್‌ (Confidential mode) ಕ್ಲಿಕ್ಕಿಸಿ

ನೀವು ಈಗಾಗಲೇ ಕಾನ್ಫಿಡೆನ್ಷಿಯಲ್‌ ಮೋಡ್‌ನಲ್ಲಿದ್ದರೆ ಎಡಿಟ್‌ (Edit) ಕ್ಲಿಕ್ಕಿಸಿ

ಇ-ಮೇಲ್‌ನ expiration date ಮತ್ತು ಪಾಸ್‌ ಕೋಡ್‌ ಸೆಟ್‌ ಮಾಡಿ. ಇದು ಮೆಸೇಜ್‌ ಟೆಕ್ಸ್ಟ್‌ ಮತ್ತು ಅಟ್ಯಾಚ್‌ಮೆಂಟ್‌ಗೆ ಅನ್ವಯವಾಗುತ್ತದೆ.

ನೀವು No SMS passcode ಅನ್ನು ಆಯ್ಕೆ ಮಾಡಬಹುದು. ಜಿಮೇಲ್‌ app ಬಳಸುವವರು ಆಗ ಇದನ್ನು ನೇರವಾಗಿ ಓಪನ್‌ ಮಾಡಬಹುದು. ಜಿಮೇಲ್‌ ಬಳಸದವರು ಆಗ ಇಮೇಲ್‌ ಮೂಲಕ ಪಾಸ್‌ ಕೋಡ್‌ ಪಡೆಯುತ್ತಾರೆ.

ನೀವು SMS passcode ಆಯ್ಕೆ ಮಾಡಿದ್ದರೆ ಸ್ವೀಕರಿಸುವವರು ಟೆಕ್ಸ್ಟ್‌ ಮೆಸೇಜ್‌ ಮೂಲಕ ಪಾಸ್‌ ಕೋಡ್‌ (passcode) ಪಡೆಯುತ್ತಾರೆ. ಮೆಸೇಜ್‌ ಸವೀಕರಿಸುವವರ ಫೋನ್‌ ನಂಬರ್‌ ಬರೆಯಿರಿ, ನಿಮ್ಮದಲ್ಲ.

Save ಅನ್ನು ಕ್ಲಿಕ್ಕಿಸಿ.

ಕಾನ್ಫಿಡೆನ್ಷಿಯಲ್‌ ಮೋಡ್‌ನಲ್ಲಿ ಕಳಿಸುವುದರಿಂದ ಇ-ಮೇಲ್‌ಗಳನ್ನು ಆಕಸ್ಮಿಕವಾಗಿ ಕಳಿಸುವುದರಿಂದಲೂ ದೂರವಿರಬಹುದು. ಹೀಗಾಗಿ ಹಲವು ಪ್ರಯೋಜನಗಳು ಇವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಾಣಿಜ್ಯ

Tata Motors: ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್‌ ಬಿಡುಗಡೆ ಮಾಡಿದ ಟಾಟಾ ಮೋಟರ್ಸ್

Tata Motors: ಟಾಟಾ ಮೋಟರ್ಸ್ ಕಂಪನಿಯು ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ ವ್ಯಾನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್‌ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ.

VISTARANEWS.COM


on

Tata Motors launched the Magic bi fuel van
Koo

ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ (Tata Motors), ದೇಶದ ಅತ್ಯಂತ ಜನಪ್ರಿಯ ವ್ಯಾನ್ ಟಾಟಾ ಮ್ಯಾಜಿಕ್ (Tata Magic) ಅನ್ನು 4 ಲಕ್ಷ ಗ್ರಾಹಕರು ಖರೀದಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಟಾಟಾ ಮ್ಯಾಜಿಕ್‌ನ ಹೊಸ ಶ್ರೇಣಿಯಾದ ಮ್ಯಾಜಿಕ್ ಬೈ-ಫ್ಯುಯೆಲ್ (Magic Bi Fuel) ಅನ್ನು ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶ್ವಾಸಾರ್ಹತೆ, ಕಾರ್ಯದಕ್ಷತೆ ಮತ್ತು ಕೈಗೆಟುಕುವ ದರಕ್ಕೆ ಹೆಸರುವಾಸಿಯಾಗಿರುವ ಟಾಟಾ ಮೋಟರ್ಸ್ ಅತ್ಯುತ್ತಮ ಸೇವೆಯನ್ನು ನೀಡುವ ಬದ್ಧತೆಯನ್ನು ಹೊಂದಿದೆ. 10 ಆಸನಗಳ ಟಾಟಾ ಮ್ಯಾಜಿಕ್ ವ್ಯಾನ್‌ ಪ್ರಯಾಣಿಕರು ಮತ್ತು ಚಾಲಕರಿಗೆ ಹೇಳಿ ಮಾಡಿಸಿದ ವಾಹನವಾಗಿದೆ. ಸ್ಲೀಕ್ ಡಿಸೈನ್, ಸುರಕ್ಷತೆ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಟಾಟಾ ಮ್ಯಾಜಿಕ್ ಕಳೆದ ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ಸಾಗಿದೆ.

ಇದನ್ನೂ ಓದಿ: Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

ಇಕೋ ಸ್ವಿಚ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಚಾಲಕರಿಗೆ ಅನುಕೂಲದಾಯಕ ಅಂಶಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ವೈಶಿಷ್ಟ್ಯತೆಗಳನ್ನು ಈ ಟಾಟಾ ಮ್ಯಾಜಿಕ್ ಹೊಂದಿದೆ. ಇದಲ್ಲದೇ, ಕೈಗೆಟುಕುವ ದರದಲ್ಲಿ ಈ ವಾಹನ ಲಭ್ಯವಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಕ್ಕೆ ಸೂಕ್ತವಾದ ವಾಹನವಾಗಿರುವ ಟಾಟಾ ಮ್ಯಾಜಿಕ್, ಕಟ್ಟಕಡೆಯ ಮೈಲಿಯವರೆಗೆ ಸಾರಿಗೆ ಸೌಲಭ್ಯ ಒದಗಿಸುವ ವಾಹನವಾಗಿದೆ.

ಟಾಟಾ ಮ್ಯಾಜಿಕ್ –ಬೈ-ಫ್ಯುಯೆಲ್ ವಾಹನವು 694 ಸಿಸಿ ಎಂಜಿನ್ ಮತ್ತು 60 ಲೀಟರ್ ಸಾಮರ್ಥ್ಯದ ಸಿಎನ್‌ಜಿ ಟ್ಯಾಂಕ್ ಹಾಗೂ 5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ. ಒಂದು ಬಾರಿ ಸಿಎನ್‌ಜಿ ಟ್ಯಾಂಕ್ ತುಂಬಿಸಿದರೆ 380 ಕಿಲೋಮೀಟರ್‌ವರೆಗೆ ಸಾಗಬಹುದಾಗಿದೆ. ಸರಿಸಾಟಿಯಿಲ್ಲದ ಕಾರ್ಯದಕ್ಷತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚದಿಂದ ಕೂಡಿರುವ ಈ ಮ್ಯಾಜಿಕ್ ವಾಹನಕ್ಕೆ 2 ವರ್ಷಗಳ ಅಥವಾ 72,000 ಕಿಲೋಮೀಟರ್‌ಗಳ ವಾರಂಟಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Leopard Attack: ನೂರಕ್ಕೂ ಹೆಚ್ಚು ಕುರಿಗಳ ಜತೆಯೇ ಎರಡು ಗಂಟೆ ಇದ್ದ ಚಿರತೆ!

ಈ ಕುರಿತು ಮಾತನಾಡಿದ ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ವಿಭಾಗದ ಪ್ಯಾಸೆಂಜರ್ ಬ್ಯುಸಿನೆಸ್‌ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಆನಂದ್ ಎಸ್., ನಮ್ಮ ವಿನೂತನವಾದ ಮ್ಯಾಜಿಕ್ ಬ್ರ್ಯಾಂಡ್ ಅನ್ನು 4 ಲಕ್ಷ ಗ್ರಾಹಕರಿಗೆ ತಲುಪಿಸಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. ಈ ಮೈಲಿಗಲ್ಲು ಸ್ಥಾಪಿಸಿರುವ ಸವಿನೆನಪಿಗಾಗಿ ನಾವು ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮ್ಯಾಜಿಕ್ ಬೈ-ಫ್ಯುಯೆಲ್ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಇದು ಪೆಟ್ರೋಲ್‌ನೊಂದಿಗೆ ಸಿಎನ್‌ಜಿ ಚಾಲಿತ ವಾಹನವಾಗಿದೆ. ಸಾರಿಗೆ ಅಗತ್ಯತೆಗಳನ್ನು ಪೂರೈಸುವುದು ಮತ್ತು ನಮ್ಮ ಗ್ರಾಹಕರ ಲಾಭದ ಪ್ರಮಾಣ ಹಾಗೂ ಅನುಕೂಲವನ್ನು ಸುಧಾರಣೆ ಮಾಡುವುದಕ್ಕೆ ಪೂರಕವಾಗಿ ಈ ಹೊಸ ಶ್ರೇಣಿಯ ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

Navigating App: ಬೆಂಗಳೂರಿಗರಿಗೆ ಗುಡ್‌ ನ್ಯೂಸ್;‌ ಶೀಘ್ರವೇ ಬರಲಿದೆ ಹೊಸ ನ್ಯಾವಿಗೇಟಿಂಗ್‌ ಆ್ಯಪ್‌

Navigating App: ಬೆಂಗಳೂರಿನ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಹೊಸ ನ್ಯಾವಿಗೇಟಿಂಗ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಯಾಣಿಕರಿಗೆ ರೂಟ್‌ ತೋರಿಸುವ ಜತೆಗೆ ಯಾವ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಇದೆ, ಯಾವ ರೋಡ್‌ ಚೆನ್ನಾಗಿದೆ ಎಂಬುದರ ಕುರಿತು ಕೂಡ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Navigating App
Koo

ಬೆಂಗಳೂರು: ಹೊಸತನ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಎಂದಿಗೂ ಹಿಂದೆಬಿದ್ದಿಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರು ದೇಶದ ನಾನಾ ಭಾಗಗಳ ಜನರನ್ನು ಕೈಬೀಸಿ ಕರೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಈಗ ಮತ್ತೊಂದು ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಹೌದು, ರಾಜ್ಯ ರಾಜಧಾನಿಯಲ್ಲಿ ಶೀಘ್ರವೇ ಪ್ರಯಾಣಿಕರ (Commuters) ಅನುಕೂಲಕ್ಕಾಗಿ ಹೊಸ ನ್ಯಾವಿಗೇಟಿಂಗ್‌ ಆ್ಯಪ್‌ (Navigating App) ಬರಲಿದೆ. ಬೆಂಗಳೂರಿನಲ್ಲಿ ಸಂಚರಿಸುವರಿಗೆ ಇದು ಉತ್ತಮ ‘ಮಾರ್ಗ’ದರ್ಶನ ನೀಡಲಿದೆ.

ಬೆಂಗಳೂರಿನಲ್ಲಿ ಸಂಚರಿಸುವವರಿಗೆ ಅನುಕೂಲವಾಗಲಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿ ಎಂಬ ದೃಷ್ಟಿಯಿಂದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಇಲಾಖೆಯು ಮ್ಯಾಪ್‌ಪ್ಲಸ್‌ ಮ್ಯಾಪ್‌ಮೈಇಂಡಿಯಾ (Mappls MapmyIndia) ಎಂಬ ಕಂಪನಿಯ ಜತೆ ಒಡಂಡಿಕೆ (MoU) ಮಾಡಿಕೊಂಡಿದೆ. ಈಗಾಗಲೇ ಮ್ಯಾಪ್‌ಪ್ಲಸ್‌ ಮ್ಯಾಪ್‌ಮೈಇಂಡಿಯಾ ಕಂಪನಿಯು ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಆ್ಯಪ್‌ನಿಂದ ಏನೆಲ್ಲ ಅನುಕೂಲ?

ಹೊಸ ಆ್ಯಪ್‌ನಿಂದ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಕಡಿಮೆ ಟ್ರಾಫಿಕ್‌ ಇರುವ ರಸ್ತೆಗಳನ್ನು ಸೂಚಿಸುವುದು, ರಿಯಲ್‌ ಟೈಮ್‌ ಆಗಿ ನ್ಯಾವಿಗೇಟ್‌ ಮಾಡುವುದು, ಯಾವ ರಸ್ತೆಗಳು ಕ್ಲೋಸ್‌ ಆಗಿವೆ, ಯಾವ ಕಡೆ ಹೋದರೆ ಉತ್ತಮ ರಸ್ತೆ ಇದೆ, ಯಾವ ಮಾರ್ಗಗಳು ಇಕ್ಕಟ್ಟವಾಗಿವೆ ಎಂಬುದು ಸೇರಿ ಪ್ರಯಾಣಿಕರಿಗೆ ಹಲವು ಮಾಹಿತಿ ನೀಡಲಿದೆ. ಇದು ಗೂಗಲ್‌ ಮ್ಯಾಪ್‌ಗೆ ಪರ್ಯಾಯವಾಗಿ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿ ಎಂಬುದಾಗಿ ತಿಳಿದುಬಂದಿದೆ.

“ಹೊಸ ಆ್ಯಪ್‌ನಿಂದ ಪ್ರಯಾಣಿಕರಿಗೆ ಮಾತ್ರವಲ್ಲ ಟ್ರಾಫಿಕ್‌ ಪೊಲೀಸರಿಗೆ ಇದು ಅನುಕೂಲವಾಗಲಿದೆ. ಎಲ್ಲೆಲ್ಲಿ ಟ್ರಾಫಿಕ್‌ ಇದೆ ಎಂಬುದನ್ನು ಆ್ಯಪ್‌ ಮೂಲಕವೇ ಪತ್ತೆಹಚ್ಚಿ, ಆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ. ರೋಡ್‌ಬ್ಲಾಕ್‌ಗಳು, ಗುಂಡಿಗಳು, ದುರಸ್ತಿ ಕೆಲಸ ನಡೆಯುತ್ತಿರುವ ರಸ್ತೆಗಳ ಕುರಿತು ಕೂಡ ಮಾಹಿತಿ ನೀಡಲಿದೆ” ಎಂಬುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: WhatsApp : ನಿಮ್ಮ ವಾಟ್ಸ್​​​ಆ್ಯಪ್​ನಲ್ಲಿ ಈ ಫೀಚರ್ ಇಲ್ಲವೇ? ತಕ್ಷಣ ಅಪ್​ಡೇಟ್​ ಮಾಡಿಕೊಳ್ಳಿ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

ಸೈಬರ್‌ ಸೇಫ್ಟಿ ಅಂಕಣ: ಸಾಮಾಜಿಕ ಮಾಧ್ಯಮ ವ್ಯಸನವು ನಮ್ಮ ಜೀವನವನ್ನು ಎಷ್ಟು ಹಿಡಿದಿಟ್ಟಿದೆ ಎಂದು ಗುರುತಿಸಲು ಸುಲಭ ವಿಧಾನಗಳಿವೆ. ವ್ಯಸನದ ಚಿಹ್ನೆಗಳನ್ನು ಗುರುತಿಸಲು ಸಹಾಯ ಮಾಡಲು 5C ವಿಧಾನ ಎಂಬ ಫ್ರೇಮ್‌ವರ್ಕ್‌ ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಇಲ್ಲಿ ನೋಡಲಾಗಿದೆ.

VISTARANEWS.COM


on

mobile addiction cyber asafety
Koo

ಭಾಗ-1

cyber-safty-logo

ಬಹಳ ದಿನಗಳ ನಂತರ ಶಾಲಾ ದಿನಗಳ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದೆ. ಆದರೆ ಅಲ್ಲಿ ಉತ್ಸಾಹಭರಿತ ಸಂಭಾಷಣೆಗೆ ಬದಲಾಗಿ, ಪ್ರತಿಯೊಬ್ಬರೂ ತಮ್ಮ ಫೋನ್‌ಗಳಿಗೆ ಅಂಟಿಕೊಂಡಿದ್ದರು. ಮೌನವಾಗಿ ಸಾಮಾಜಿಕ ಜಾಲತಾಣಗಳ ಫೀಡ್‌ಗಳನ್ನೋ, ಮೆಸೆಂಜರ್ ಆ್ಯಪ್‌ಗಳಲ್ಲಿ ಸ್ಟೇಟಸ್‌ಗಳನ್ನೋ ಸ್ಕ್ರೋಲ್ ಮಾಡುವುದರಲ್ಲೇ ಬ್ಯುಸಿಯಾಗಿದ್ದರು. ಒಂದು ಕಾಲದಲ್ಲಿ ಪರಸ್ಪರ ಕಾಲೆಳೆದುಕೊಂಡು ಹಾಸ್ಯಮಯವಾಗಿದ್ದ ಸಮಾವೇಶ, ಅಂತರ್ಜಾಲದ ಸಾಮಾಜಿಕ ಜಾಲತಾಣವೆಂಬ ಜಾಲದಲ್ಲಿ ಕಳೆದುಹೋದಂತೆ ಭಾಸವಾಯಿತು.

ಅತಿಯಾದರೆ ಅಮೃತವೂ ವಿಷವಾಗುತ್ತಂತೆ. ಹಾಗೆ ತಂತ್ರಜ್ಞಾನದ ಅವಲಂಬನೆ ನಮ್ಮನ್ನು ಸೆಲ್‌ಫೋನಿಗೆ ಸೆರೆಯಾಗುವಂತೆ ಮಾಡುತ್ತಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳೂ ತಮಗೆ ಸಿಕ್ಕಿದ ಅವಕಾಶದಲ್ಲಿ ಮೊಬೈಲ್‌ ಒಳಹೊಕ್ಕಿರುತ್ತಾರೆ.

ನಾನು ಈ ಸೈಬರ್‌ಸೇಫ್ಟಿ ಅಂಕಣದಲ್ಲಿ “ಸಾಮಾಜಿಕ ಜಾಲತಾಣಗಳ ವ್ಯಸನ! ಬಚಾವಾಗೋದು ಹೇಗೆ?” ಎಂಬ ಲೇಖನದಲ್ಲಿ ಅಂತರ್ಜಾಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಬಗ್ಗೆ ಮತ್ತು ಅದರ ಜಾಲದಿಂದ ತಪ್ಪಿಸಿಕೊಳ್ಳುವ ಬಗೆಗಿನ ವೀಡಿಯೊ ವಿವರಿಸುತ್ತಾ ಸ್ನೇಹಿತ ನೀರಜ್‌ ಕುಮಾರ್‌ ಅವರು ಈ ಬಗ್ಗೆ ಯೂಟ್ಯೂಬಿನಲ್ಲಿ ಅಪ್ಲೋಡ್‌ ಮಾಡಿರುವ ವೀಡಿಯೊಗಳ ಬಗ್ಗೆ ಬರೆದಿದ್ದೆ. ಆ ಲೇಖನದಲ್ಲಿ ಸ್ನೇಹಿತ ನೀರಜ್‌ ಕುಮಾರ್ ವ್ಯಸನದ ಬಗ್ಗೆ ಮನಮುಟ್ಟುವಂತೆ ತಿಳಿಸಿದ್ದಾರೆ. ಎಚ್ಚರಿಸಿದ್ದಾರೆ. ಅವರ ಆಂಗ್ಲ ಭಾಷಾ ವೀಡಿಯೊಗಳ ಲಿಂಕ್ ಮತ್ತೊಮ್ಮೆ ನಿಮಗಾಗಿ:

ಭಾಗ-1: https://www.youtube.com/watch?v=vPA4hI7M-b0&t=131s
ಭಾಗ-2: https://www.youtube.com/watch?v=Or9xytt7zR0&t=114s

ಬಹಳ ಸಮಯದ ನಂತರ ಬಿಡುಗಡೆ ಮಾಡಿದ ಹೊಸ ವೀಡಿಯೊ ಸರಣಿಯಲ್ಲಿ ಸಾಮಾಜಿಕ ಜಾಲತಾಣದ ಸೆಳೆತದಿಂದ ಬಿಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಸಿದ್ದಾರೆ ಎನ್ನುವ ನೀರಜ್ ಕುಮಾರ್. ಇದನ್ನು ಸಿದ್ಧ ಪಡಿಸುಲು ಅವರು ಸುಮಾರು ಒಂಬತ್ತು ತಿಂಗಳು ವಿವಿಧ ವಿಧಾನಗಳನ್ನು ಪರೀಕ್ಷಿಸುತ್ತಿದ್ದರು. ಆ ನಿಟ್ಟಿನಲ್ಲಿ ಬಹಳಷ್ಟು ಸಂಶೋಧನೆಯನ್ನೂ ಮಾಡಿ ಮೂರು ವೀಡಿಯೊಗಳನ್ನು ಯುಟ್ಯೂಬಿನಲ್ಲಿ ಅಪ್ಲೋಡ್‌ ಮಾಡಿದ್ದಾರೆ.

1) ನೀವು ವ್ಯಸನಿಯಾಗಿದ್ದೀರಿ ಎಂದು ನೀವು ತಿಳಿದು ಕೊಳ್ಳುವುದು ಹೇಗೆ?
2) ನಿಮ್ಮ ಮೆದುಳು ನಿಮ್ಮೊಂದಿಗೆ ಹೇಗೆ ಆಟವಾಡುತ್ತದೆ?
3) ಸಾಮಾಜಿಕ ಮಾಧ್ಯಮದ ಮೇಲೆ ಹಿಡಿತ ಸಾಧಿಸುವುದು ಹೇಗೆ?

ಸಾಮಾಜಿಕ ಮಾಧ್ಯಮ ವ್ಯಸನವು ನಮ್ಮ ಜೀವನವನ್ನು ಎಷ್ಟು ಹಿಡಿದಿಟ್ಟಿದೆ ಎಂದು ಗುರುತಿಸಲು ಸುಲಭ ವಿಧಾನವನ್ನು ತಿಳಿಸಿದ್ದಾರೆ. ವ್ಯಸನದ ಚಿಹ್ನೆಗಳನ್ನು ಗುರುತಿಸಲು ಸಹಾಯ ಮಾಡಲು 5C ವಿಧಾನ ಎಂಬ ಫ್ರೇಮ್‌ವರ್ಕ್‌ ಪ್ರಸ್ತಾಪಿಸಿದ್ದಾರೆ. ಈ ವಿಧಾನವು ಸಾಮಾಜಿಕ ಮಾಧ್ಯಮ ಬಳಕೆಯ ಐದು ಪ್ರಮುಖ ಅಂಶಗಳನ್ನು ವಿವರಿಸುತ್ತದೆ: ಕಡುಬಯಕೆ (Craving), ನಿಯಂತ್ರಣ (Control), ನಿಭಾಯಿಸುವಿಕೆ (Coping), ಒತ್ತಾಯ (Compulsioin) ಮತ್ತು ಪರಿಣಾಮ (Consequence). ಈ ಪ್ರತಿಯೊಂದು ಅಂಶಗಳನ್ನು ಹತ್ತಿರದಿಂದ ನೋಡುವ ಮೂಲಕ, ನಾವು ನಮ್ಮ ಸ್ವಂತ ಸಾಮಾಜಿಕ ಮಾಧ್ಯಮ ಅಭ್ಯಾಸಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಪಡೆಯಬಹುದು ಮತ್ತು ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಬಹುದು.

1) ಕಡುಬಯಕೆ – ಅಂತ್ಯವಿಲ್ಲದ ರಿಫ್ರೆಶ್: ಮೊದಲ C, ಕ್ರೇವಿಂಗ್, ಸಾಮಾಜಿಕ ಮಾಧ್ಯಮದ ಅಪ್ಡೇಟ್ಗಳಿಗಾಗಿ ನಿಮ್ಮ ಫೋನ್ ಅನ್ನು ಪರಿಶೀಲಿಸುವ ನಿರಂತರ ಪ್ರಚೋದನೆಯನ್ನು ಸೂಚಿಸುತ್ತದೆ. ಯಾವುದೇ ಅಧಿಸೂಚನೆಗಳಿಲ್ಲದಿದ್ದರೂ ಸಹ, ದಿನವಿಡೀ ನಿಮ್ಮ ಫೋನ್ ಅನ್ನು ಎಷ್ಟು ಬಾರಿ ಪರಿಶೀಲಿಸುತ್ತೀರಿ? ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, X, ಸ್ನ್ಯಾಪ್ಚಾಟ್‌ ಮುಂತಾದವುಗಳನ್ನು ಎಷ್ಟು ಬಾರಿ ರಿಫ್ರೆಶ್‌ ಮಾಡುತ್ತೀರಿ? ಹೊಸದೇನೂ ಇಲ್ಲದೆ? ನಿಮ್ಮ ಫೋನ್ ಬಳಕೆ ಮತ್ತು ಪರದೆಯ ಸಮಯವನ್ನು ಪತ್ತೆ ಹಚ್ಚಲು ನೀರಜ್ ಕುಮಾರ್‌ ಸಲಹೆ ನೀಡುತ್ತಾರೆ. 60 ಕ್ಕೂ ಹೆಚ್ಚು ಪಿಕಪ್‌ಗಳನ್ನು ಹೊಂದಿರುವ ಒಂದು ಗಂಟೆಗಿಂತ ಹೆಚ್ಚಿನ ದೈನಂದಿನ ಪರದೆಯ ಸಮಯವು (daily screen time) ಸಾಮಾಜಿಕ ಮಾಧ್ಯಮದ ಕಡುಬಯಕೆ ಅಭ್ಯಾಸವನ್ನು ಸೂಚಿಸುತ್ತದೆ.

2) ನಿಯಂತ್ರಣ – ನಿದ್ರಾ ಪೂರ್ವ ಸ್ಕ್ರಾಲ್ ಅನ್ನು ನೀವು ನಿಯಂತ್ರಿಸಬಹುದೇ? ಇದು ನಿಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಯಂತ್ರಿಸುವ ನಿಮ್ಮ ಸಾಮರ್ಥ್ಯವನ್ನು ಸೂಚಿಸುತ್ತದೆ. ಮಲಗುವ ಮುನ್ನ ನಿಮ್ಮ ಫೋನ್ ಅನ್ನು ನೀವು ಸುಲಭವಾಗಿ ಕೆಳಗೆ ಇಡಬಹುದೇ ಮತ್ತು ಮುಂಜಾನೆಯವರೆಗೂ ಸಾಮಾಜಿಕ ಮಾಧ್ಯಮದ ಮೂಲಕ ಸ್ಕ್ರಾಲ್ ಮಾಡುವ ಪ್ರಚೋದನೆಯನ್ನು ತಡೆಯಬಹುದಾ? ನಿಯಂತ್ರಣ ಸಾಧ್ಯವಾದರೆ 0 ಅಂಕವು ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ವೀಡಿಯೊ ಸೂಚಿಸುತ್ತದೆ. ಆದರೆ ನಿಜ ಹೇಳಿ: ನಿದ್ರೆಯ ಮೊದಲಿನ ಒಂದು ಸ್ಕ್ರಾಲ್ ಎಷ್ಟು ಬಾರಿ ನಿಮ್ಮನ್ನು ತನ್ನ ಜಾಲದೊಳಗೆ ಸೆಳೆದುಕೊಂಡು ನಿಮ್ಮ ನಿದ್ರೆಗೆ ಮಾರಕವಾಗಿದೆ?

3) ನಿಭಾಯಿಸುವುದು – Scrolling Away the Blues: ಇದು ಬೇಸರ, ಒಂಟಿತನ ಅಥವಾ ಒತ್ತಡದಂತಹ ನಕಾರಾತ್ಮಕ ಭಾವನೆಗಳನ್ನು ಎದುರಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುವುದನ್ನು ಸೂಚಿಸುತ್ತದೆ. ಬಹುಶಃ ನೀವು ಸ್ನೇಹಿತರೊಂದಿಗಿನ ಜಗಳದ ನಂತರ Instagram ಅನ್ನು ನೋಡಬಹುದು ಅಥವಾ ಕೆಲಸದಲ್ಲಿ ಅತಿಯಾದ ಭಾವನೆಯನ್ನು ಅನುಭವಿಸಿದಾಗ ಬುದ್ಧಿಹೀನವಾಗಿ Facebook ಮೂಲಕ ಸ್ಕ್ರಾಲ್ ಮಾಡಬಹುದು. ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ನೀವು ಸಹಜವಾಗಿಯೇ ಸಾಮಾಜಿಕ ಮಾಧ್ಯಮಕ್ಕೆ ತಿರುಗುತ್ತಿದ್ದರೆ, ನೀವು ಅದನ್ನು ನಿಭಾಯಿಸುವ ಕಾರ್ಯವಿಧಾನವಾಗಿ ಬಳಸುತ್ತಿರಬಹುದು. ಈ ವರ್ಗದಲ್ಲಿ 0 ಸ್ಕೋರ್ ನೀವು ಆರೋಗ್ಯಕರ ನಿಭಾಯಿಸುವ ತಂತ್ರಗಳನ್ನು ಹೊಂದಿರುವಿರಿ ಎಂದು ಸೂಚಿಸುತ್ತದೆ.

4) ಕಂಪಲ್ಷನ್: ದಿ ಫ್ಯಾಂಟಮ್ ನೋಟಿಫಿಕೇಶನ್ ಸಿಂಡ್ರೋಮ್: ಪ್ರಜ್ಞಾಪೂರ್ವಕ ಕಾರಣವಿಲ್ಲದೆ ನಿಮ್ಮ ಫೋನ್ ಅನ್ನು ನೀವು ಎಷ್ಟು ಬಾರಿ ನೋಡುತ್ತೀರಿ ಎಂಬುದರ ಮೂಲಕ ಕಂಪಲ್ಶನ್‌ ಅನ್ನು ಅಳೆಯಲಾಗುತ್ತದೆ. ನೀವು ಯಾವುದೇ ಅಧಿಸೂಚನೆಗಳನ್ನು ನಿರೀಕ್ಷಿಸುತ್ತಿಲ್ಲ ಎಂದು ಅರಿತುಕೊಳ್ಳಲು ನಿಮ್ಮ ಫೋನ್ ಅನ್ನು ಎತ್ತಿಕೊಂಡು ಅದನ್ನು ಅನ್ಲಾಕ್ ಮಾಡುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಅಥವಾ ಸ್ವಲ್ಪ ಸಮಯದವರೆಗೆ ನಿಮ್ಮ ಫೋನ್ ಕೈಗೆಟುಕದಿದ್ದಾಗ ನೀವು ವಿಚಿತ್ರವಾದ ಆತಂಕವನ್ನು ಅನುಭವಿಸಬಹುದು. 0 ಅಂಕವು ಕನಿಷ್ಠ ಕಂಪಲ್ಸಿವ್ ಫೋನ್ ಬಳಕೆಯನ್ನು ಸೂಚಿಸುತ್ತದೆ. ಆದರೆ ಪ್ರಾಮಾಣಿಕವಾಗಿರಿ, ಈ “ಫ್ಯಾಂಟಮ್ ನೋಟಿಫಿಕೇಶನ್ ಸಿಂಡ್ರೋಮ್” ಅನ್ನು ನಾವು ದಿನಕ್ಕೆ ಎಷ್ಟು ಬಾರಿ ಅನುಭವಿಸುತ್ತೇವೆ?

5) ಪರಿಣಾಮ – ಸಂಪರ್ಕ ಕಡಿತಗೊಂಡರೆ ಹತಾಶರಾಗಿದ್ದೀರಾ? ಪರಿಣಾಮವು ಸಾಮಾಜಿಕ ಮಾಧ್ಯಮವನ್ನು ತಲುಪದಿದ್ದಾಗ ನಿಮಗಾಗುವ ಭಾವನಾತ್ಮಕ ಪ್ರಭಾವವನ್ನು ಸೂಚಿಸುತ್ತದೆ. ನೀವು ಸಾಮಾಜಿಕ ಮಾಧ್ಯಮವನ್ನು ಬಳಸಲು ಸಾಧ್ಯವಾಗದಿದ್ದಾಗ ಆತಂಕ, ಹತಾಶೆ ಅಥವಾ ಬೇಸರವನ್ನು ಅನುಭವಿಸುತ್ತೀರಾ? ವಿಹಾರಕ್ಕೆ ಹೋಗುವುದನ್ನು ಮತ್ತು ನಿಮ್ಮ ಫೋನ್ ಚಾರ್ಜರ್ ಅನ್ನು ಮರೆತುಬಿಡುವುದನ್ನು ಕಲ್ಪಿಸಿಕೊಳ್ಳಿ – ಕೇವಲ ಆಲೋಚನೆಯು ನಿಮ್ಮ ಬೆನ್ನುಮೂಳೆಯ ಕೆಳಗೆ ನಡುಗುಕ ಹುಟ್ಟಿಸುತ್ತದೆಯೇ? 0 ಅಂಕವು ಸಂಪರ್ಕ ಕಡಿತಗೊಳ್ಳುವುದರಿಂದ ನೀವು ಋಣಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಸೂಚಿಸುತ್ತದೆ.

ಈ ಪ್ರತಿಯೊಂದು ವರ್ಗಕ್ಕೂ 0 ರಿಂದ 10 ಸ್ಕೋರ್ ಅನ್ನು ನಿಯೋಜಿಸಲು ವೀಡಿಯೊ ಶಿಫಾರಸು ಮಾಡುತ್ತದೆ. 60% ಕ್ಕಿಂತ ಹೆಚ್ಚಿನ ಸ್ಕೋರ್ (ಅಂದರೆ ಒಟ್ಟು ಸ್ಕೋರ್ 30 ಮೀರಿದರೆ) ಸಾಮಾಜಿಕ ಮಾಧ್ಯಮ ಬಳಕೆ ನಿಮ್ಮ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸೂಚಿಸುತ್ತದೆ. ಇದು ಸ್ವಯಂ-ಮೌಲ್ಯಮಾಪನ ಸಾಧನವಾಗಿದೆ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಮತ್ತು ನಿಮ್ಮ ವ್ಯಸನ ಗಂಭಿರ ಮಟ್ಟದಲ್ಲಿದ್ದರೆ ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ನೀರಜ್ಕುಮಾರ್. ವ್ಯಸನದ ಸ್ಕೋರ್ ಕಡಿಮೆಯಾದಂತೆ ನಿಮ್ಮ ಸೈಬರ್‌ ಭದ್ರತೆಯೂ ಹೆಚ್ಚುತ್ತದೆ ಮತ್ತು ನಿಮಗೆ ದಿನದಲ್ಲಿ 24 ಗಂಟೆಗಳಿಗಿಂತಲೂ ಜಾಸ್ತಿ ಸಮಯವಿದೆ ಎಂದು ಅನಿಸುತ್ತದೆ. ಮುಂದಿನ ವಾರ ಸಾಮಾಜಿಕ ಮಾಧ್ಯಮವನ್ನು ಆರೋಗ್ಯಕರವಾಗಿ ಬಳಸುವುದು ಹೇಗೆ ಎನ್ನುವುದನ್ನು ತಿಳಿಯೋಣ. ಸ್ವಯಂ-ಮೌಲ್ಯಮಾಪನ ಮಾಡಿಕೊಳ್ಳುವ ಮುನ್ನ ನೀರಜ್‌ ಕುಮಾರ್‌ ಅವರ ವೀಡಿಯೊ ನೋಡಿ ಮುಂದುವರಿಯಿರಿ.

Continue Reading

ತಂತ್ರಜ್ಞಾನ

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಇ
ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ನೋಡಿಕೊಳ್ಳಲು ಎಂಬವರನ್ನು ಒಪನ್ ಎಐ ನೇಮಕ ಮಾಡಿಕೊಂಡಿದೆ. ಒಪನ್ ಎಐ ನ ಭಾರತದ ಮೊದಲ ಉದ್ಯೋಗಿಯಾಗಿರುವ ಇವರು ಯಾರು ಗೊತ್ತೇ ?

VISTARANEWS.COM


on

By

Pragya Misra
Koo

ಚಾಟ್ ಜಿಪಿಟಿ (ChatGPT ) ಮಾರ್ಕರ್ ಒಪನ್ ಎಐ (OpenAI) ಭಾರತದಲ್ಲಿ (india) ತನ್ನ ಮೊದಲ ಉದ್ಯೋಗಿಯನ್ನು (first employee) ನೇಮಕ ಮಾಡಿದೆ. ಸಾರ್ವಜನಿಕ ನೀತಿ ವ್ಯವಹಾರ ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು 39 ವರ್ಷದ ಪ್ರಗ್ಯಾ ಮಿಶ್ರಾ (Pragya Misra) ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಕೃತಕ ಬುದ್ಧಿಮತ್ತೆ (AI) ನಿಯಮಾವಳಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಈ ಸಂದರ್ಭದಲ್ಲಿ ಹೊಸ ಸರ್ಕಾರ ರಚನೆಯ ಸಿದ್ಧತೆಯಲ್ಲಿರುವಾಗ ಈ ಬೆಳವಣಿಗೆ ನಡೆದಿದೆ.ಮೈಕ್ರೋಸಾಫ್ಟ್ ಕಾರ್ಪ್ ಬೆಂಬಲಿತ ಕಂಪೆನಿಯು ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿಕೊಂಡಿದೆ. ಈ ತಿಂಗಳ ಅಂತ್ಯದಿಂದ ಮಿಶ್ರಾ ಅವರು OpenAI ನಲ್ಲಿ ಕೆಲಸ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ: ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ನಿಯಂತ್ರಿಸಲು ವಿಶ್ವದಾದ್ಯಂತ ಸರ್ಕಾರಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಅನುಕೂಲಕರವಾಗಿ ನಿಯಮಗಳನ್ನು ರೂಪಿಸಲು AI ಕಂಪೆನಿಯು ಈ ನೇಮಕಾತಿಯನ್ನು ನಡೆಸಿದೆ. OpenAI ನ ಮೊದಲ ಭಾರತೀಯ ಉದ್ಯೋಗಿ ಪ್ರಗ್ಯಾ ಮಿಶ್ರಾ ಅವರ ಕುರಿತಾದ ಕಿರು ಮಾಹಿತಿ ಇಲ್ಲಿದೆ.

ಪ್ರಗ್ಯಾ ಮಿಶ್ರಾ ಅವರ ಪಾತ್ರ?

OpenAI ಯು ಸರ್ಕಾರಿ ಸಂಬಂಧಗಳ ಮುಖ್ಯಸ್ಥರನ್ನಾಗಿ ಪ್ರಗ್ಯಾ ಮಿಶ್ರಾ ಅವರನ್ನು ನೇಮಿಸಿದೆ. ಈ ಮೂಲಕ ಕಂಪೆನಿಗೆ ಮೊದಲ ಭಾರತೀಯರ ನೇಮಕವಾಗಿದೆ. ಕಂಪೆನಿಯು ಈ ನೇಮಕಾತಿಯ ಬಗ್ಗೆ ಇನ್ನೂ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಬ್ಲೂಮ್‌ಬರ್ಗ್ ತಿಳಿಸಿದ್ದು, ಭಾರತದಲ್ಲಿ ಸಾರ್ವಜನಿಕ ನೀತಿ ವ್ಯವಹಾರಗಳು ಮತ್ತು ಪಾಲುದಾರಿಕೆಗಳನ್ನು ಮುನ್ನಡೆಸಲು ಪ್ರಜ್ಞಾ ಮಿಶ್ರಾ ಅವರನ್ನು ನೇಮಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಯಾರು ಪ್ರಗ್ಯಾ ಮಿಶ್ರಾ ?

2021ರ ಜುಲೈ ನಿಂದ ಪ್ರಗ್ಯಾ ಮಿಶ್ರಾ ಅವರು ಟ್ರೂಕಾಲರ್‌ಗಾಗಿ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಅವರು ಸರ್ಕಾರಿ ಸಚಿವಾಲಯಗಳು, ಪ್ರಮುಖ ಪಾಲುದಾರರು, ಹೂಡಿಕೆದಾರರು ಮತ್ತು ಮಾಧ್ಯಮ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಕೆಲಸ ಮಾಡಿದ್ದಾರೆ. ಮೂರು ವರ್ಷಗಳ ಮೊದಲು ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನೊಂದಿಗೆ ಕೆಲಸ ಮಾಡಿರುವ ಅವರು 2018 ರಲ್ಲಿ ತಪ್ಪು ಮಾಹಿತಿಯ ವಿರುದ್ಧ WhatsApp ಅಭಿಯಾನವನ್ನು ಮುನ್ನಡೆಸಿದರು. ಅನ್ ಸ್ಟಾರ್ ಆಂಡ್ ಯಂಗ್ ಮತ್ತು ನವದೆಹಲಿಯ ರಾಯಲ್ ಡ್ಯಾನಿಶ್ ರಾಯಭಾರ ಕಚೇರಿಯಲ್ಲೂ ಕೆಲಸ ಮಾಡಿದ ಅನುಭವ ಅವರಿಗಿದೆ.

ಶಿಕ್ಷಣ

ಪ್ರಗ್ಯಾ ಮಿಶ್ರಾ ಅವರು 2012ರಲ್ಲಿ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್ಸ್ ಟಿಟ್ಯೂಟ್ ನಿಂದ ತಮ್ಮ ಎಂಬಿಎ ಪದವಿ ಪಡೆದರು ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವೀಧರರಾಗಿದ್ದಾರೆ. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಬಾರ್ಗೇನಿಂಗ್ ಮತ್ತು ನೆಗೋಷಿಯೇಷನ್ಸ್‌ನಲ್ಲಿ ಡಿಪ್ಲೊಮಾವನ್ನೂ ಹೊಂದಿದ್ದಾರೆ.

ಗಾಲ್ಫ್ ಆಟಗಾರರು

ಪ್ರಗ್ಯಾ ಮಿಶ್ರಾ ಅವರು 1998 ಮತ್ತು 2007 ರ ನಡುವೆ ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಗಾಲ್ಫ್ ಆಟಗಾರರಾಗಿದ್ದಾರೆ. ಅವರು ಹಾರ್ಟ್‌ಫುಲ್‌ನೆಸ್ ಧ್ಯಾನ ತರಬೇತುದಾರರಾಗಿದ್ದು, ಪ್ರಗ್ಯಾನ್ ಪಾಡ್‌ಕ್ಯಾಸ್ಟ್ ನಿಂದ ಅದನ್ನು ಆಯೋಜಿಸುತ್ತಾರೆ.

ಯಾಕೆ ಈ ನೇಮಕ ?

1.4 ಶತಕೋಟಿ ಜನರು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ ಭಾರತದಲ್ಲಿ ಗಮನಾರ್ಹ ಬೆಳವಣಿಗೆಯ ಅವಕಾಶವಿದೆ. ವಿಶ್ವಾದ್ಯಂತ ಸರ್ಕಾರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವನ್ನು ಹೇಗೆ ನಿಯಂತ್ರಿಸಬೇಕೆಂದು ಪರಿಗಣಿಸುತ್ತಿರುವಾಗ ಅನುಕೂಲಕರವಾದ ನಿಯಮಗಳನ್ನು ರೂಪಿಸಲು AI ಕಂಪೆನಿಯ ಪ್ರಯತ್ನಗಳನ್ನು ಈ ನೇಮಕಾತಿಯು ಎತ್ತಿ ತೋರಿಸಿದೆ. ಹೀಗಾಗಿ ಪ್ರಗ್ಯಾ ಮಿಶ್ರಾ ಅವರಿಗೆ ಇದೊಂದು ಸಾಕಷ್ಟು ಸವಾಲಿನ ಕೆಲಸವಾಗಿರಲಿದೆ.

Continue Reading
Advertisement
jai sriram slogan koppal crime news
ಕ್ರೈಂ5 mins ago

Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಪ್ರಮುಖ ಸುದ್ದಿ41 mins ago

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

bhagavanth khuba poster lok sabha election 2024
ಬೀದರ್‌48 mins ago

Lok Sabha Election 2024: ಪೋಸ್ಟರ್‌ ಮೂಲಕ ಸಚಿವ ಭಗವಂತ ಖೂಬಾ ಅವಹೇಳನ, ದೂರು

dashamukha column madness
ಅಂಕಣ1 hour ago

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

bengaluru karaga in darga
ಬೆಂಗಳೂರು1 hour ago

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

gukesh dommaraju rajamarga column
ಅಂಕಣ1 hour ago

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

, Dr. Rajkumar's birthday
ಪ್ರಮುಖ ಸುದ್ದಿ1 hour ago

Rajkumar Birthday : ಇಂದು ಡಾ. ರಾಜ್​ಕುಮಾರ್ ಜನುಮದಿನ; ವರನಟನಿಗೆ ಕನ್ನಡಿಗರ ನಮನ

Karnataka Weather Forecast
ಮಳೆ2 hours ago

Karnataka Weather : ಸುಳಿಗಾಳಿ ಪ್ರಭಾವ; ರಭಸ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಎಚ್ಚರಿಕೆ

Benefits of Bamboo Shoots
ಆರೋಗ್ಯ2 hours ago

Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

Dina Bhavishya
ಭವಿಷ್ಯ3 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌