ನವದೆಹಲಿ: ಮೇಡ್ ಬೈ ಗೂಗಲ್ (Made by Google) ಇವೆಂಟ್‌ನಲ್ಲಿ ಲಾಂಚ್ ಆಗಿರುವ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ (Pixel 8 Smartphone) ಸಾಕಷ್ಟು ಗಮನ ಸೆಳೆಯುತ್ತದೆ. ಗೂಗಲ್ ಟೆನ್ಸರ್ ಜಿ3 (Google Tensor G3) ಆಧರಿತವಾಗಿರುವ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೋ (Pixel 8 Pro) ಸ್ಮಾರ್ಟ್‌ಫೋನ್‌ಗಳು ಕಾರ್ ಕ್ರ್ಯಾಶ್ ಪತ್ತೆ (Car Crash Detection) ಮತ್ತು ಫೋಟೋ ಅನ್‌ಬ್ಲರ್ (Photo Unblur) ಫೀಚರ್‌ಗಳನ್ನು ಒಳಗೊಂಡಿವೆ. ಎಐ ಸಾಮರ್ಥ್ಯಗಳು ಮತ್ತು ಅತ್ಯುತ್ತಮ ಕ್ಯಾಮೆರಾಗಳನ್ನು ಈ ಫೋನ್‍ಗಳು ಹೊಂದಿವೆ. ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಮೇಡ್ ಬೈ ಗೂಗಲ್ ಇವೆಂಟ್‌ನಲ್ಲಿ ಲಾಂಚ್ ಮಾಡಲಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಗೂಗಲ್ ಇಂಟ್ರಿಗ್ರೇಷನ್ ವಾಗಿರುವುದರಿಂದ, ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಆಸ್ಟ್ರೋ-ಫೋಟೋಗ್ರಫಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಅಂದರೆ ಇದು ‘ನಿಜವಾಗಿಯೂ ಕತ್ತಲೆಯಲ್ಲಿ ನೋಡುವ’ ಮೊದಲ ಫೋನ್ ಆಗಿದೆ. ಪಿಕ್ಸೆಲ್ 8 ಫೋಟೋ ಅನ್‌ಬ್ಲ್ ಮತ್ತು ಕಾರ್ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಸೇರಿದಂತೆ ಅನೇಕ ಅದ್ಭುತ ಫೀಚರ್‌ಗಳನ್ನು ಈ ಫೋನ್‌ನಲ್ಲಿ ಕಾಣಬಹುದು.
ಈ ಸುದ್ದಿಯನ್ನೂ ಓದಿ: Apple iPhone: ಆ್ಯಪಲ್‌ನ ಐಫೋನ್ 15, ಐಫೋನ್ 15 ಪ್ಲಸ್ ಉತ್ಪಾದಿಸಲಿದೆ ಟಾಟಾ ಗ್ರೂಪ್!
ಈ ಫೀಚರ್‌ಗಳ ಹೊರತಾಗಿಯೂ ಅಡುಗೆ ಮಾಡುವಾಗ, ಬಾಟಲಿಗಳನ್ನು ಬೆಚ್ಚಗಾಗಿಸುವಾಗ ಮತ್ತು ಹೆಚ್ಚಿನವುಗಳನ್ನು ಅನುಕೂಲಕರವಾಗಿ ಪರಿಶೀಲಿಸಲು ಇದು ಹೊಸ ತಾಪಮಾನ ಸಂವೇದಕಗಳನ್ನು ಹೊಂದಿದೆ. ಪಿಕ್ಸೆಲ್ 6 ಸರಣಿಯಲ್ಲಿನ ಗೂಗಲ್ ಟೆನ್ಸರ್‌ಗೆ ಹೋಲಿಸಿದರೆ ಹೊಸ ಪಿಕ್ಸೆಲ್ 8 ಸಾಧನದಲ್ಲಿ ಎರಡು ಪಟ್ಟು ಹೆಚ್ಚು ಯಂತ್ರ ಕಲಿಕೆ (Learning Models) ಮಾದರಿಗಳನ್ನು ರನ್ ಮಾಡುತ್ತದೆ. ಎಐ ಬಳಕೆದಾರರ ಅನುಭವದ ಪ್ರತಿಯೊಂದು ಅಂಶವನ್ನು ಹೆಚ್ಚಿಸುತ್ತದೆ ಎಂದು ಗೂಗಲ್ ಹೇಳಿದೆ.
ಗೂಗಲ್‌ನ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಬೆಲೆ 699 ಡಾಲರ್(ಅಂದಾಜು 58,206 ರೂ.) ಹಾಗೆಯೇ ಗೂಗಲ್ ಪಿಕ್ಸೆಲ್ 8 ಪ್ರೋ ಸ್ಮಾರ್ಟ್‌ಫೋನ್ ಬೆಲೆ 999 ಡಾಲರ್(83,187 ರೂ.) ಇರಲಿದೆ ಎಂದು ಹೇಳಲಾಗುತ್ತಿದೆ. ಆ್ಯಪಲ್ ಫೋನ್, ಐಫೋನ್ 15 ಲಾಂಚ್ ಮಾಡಿದ ಬೆನ್ನಲ್ಲೇ ಗೂಗಲ್ ತನ್ನ ಪಿಕ್ಸೆಲ್ 8 ಸರಣಿ ಫೋನುಗಳನ್ನು ಲಾಂಚ್ ಮಾಡಿದೆ.