Site icon Vistara News

Tesla Inc: ಟೆಸ್ಲಾ ಕಂಪನಿಗೆ ಭಾರತೀಯ ಮೂಲದ ವೈಭವ್ ತನೇಜಾ ಹೊಸ ಸಿಎಫ್ಒ

Vaibhav Taneja

ನವದೆಹಲಿ: ಅಮೆರಿಕ ಮೂಲದ, ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಒಡೆತನದ ಎಲೆಕ್ಟ್ರಿಕ್ ಕಾರ್ ಉತ್ಪಾದಕ ಕಂಪನಿ ಟೆಸ್ಲಾ(Tesla Inc), ಭಾರತೀಯ ಮೂಲದ ವೈಭವ್ ತನೇಜಾ ಅವರನ್ನು ಕಂಪನಿಯ ನೂತನ ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ (Chief Financial Officer – CFO) ನೇಮಕ ಮಾಡಿದೆ. ಈ ಹಿಂದೆ ಈ ಹುದ್ದೆಯನ್ನು ಜಕಾರಿ ಕಿರ್ಖೋರ್ನ್ (Zachary Kirkhorn) ಅವರು ನಿರ್ವಹಣೆ ಮಾಡುತ್ತಿದ್ದರು. ಅವರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಂಪನಿಯು, ಅವರ ಜಾಗಕ್ಕೆ ವೈಭವ್ ತನೇಜಾ ಅವರನ್ನು ನೇಮಕ ಮಾಡಿದೆ. ಇದರೊಂದಿಗೆ ಜಾಗತಿಕ ಪ್ರತಿಷ್ಠಿತ ಕಂಪನಿಗಳಲ್ಲಿ ಭಾರತೀಯ ಮೂಲದವರು ಪಾರುಪತ್ಯ ಮುಂದುವರಿದಂತಾಗಿದೆ. ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಭಾರತೀಯ ಮೂಲದವರು ಸಿಇಒಗಳಾಗಿ ಕೆಲಸ ಮಾಡುತ್ತಿದ್ದಾರೆ.

ಜಕಾರಿ ಕಿರ್ಖೋರ್ನ್ ಅವರು ಸೋಮವಾರ ಘೋಷಣೆ ಮಾಡಿ ತಾವು ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಹೇಳಿದರು. ಇಂದು ಬೆಳಿಗ್ಗೆ ಟೆಸ್ಲಾ ಕಂಪನಿಯು ಮುಖ್ಯ ಹಣಕಾಸು ಅಧಿಕಾರಿಯಾಗಿ ನನ್ನನ್ನು ಹುದ್ದೆಯಿಂದ ಕೆಳಗಿಳಿಸಿದ್ದಾರೆ. ನನ್ನ ಸ್ಥಾನಕ್ಕೆ ಕಂಪನಿಯ ಮುಖ್ಯ ಲೆಕ್ಕಪತ್ರ ಅಧಿಕಾರಿ ವೈಭವ್ ತನೇಜಾ ಅವರು ಬರಲಿದ್ದಾರೆಂದು ಟೇಸ್ಲಾ ಘೋಷಿಸಿದೆ ಎಂದು ಕಿರ್ಖೋನ್ ಅವರು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ.

ಯಾರು ಈ ವೈಭವ್ ತನೇಜಾ?

2019ರ ಮಾರ್ಚ್‌ನಿಂದ ವೈಭವ್ ತನೇಜಾ ಅವರು ಕಂಪನಿಯ ಮುಖ್ಯ ಲೆಕಪತ್ರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, ಅವರು 2018ರಿಂದಲೂ ಕಂಪನಿಯು ಕಾರ್ಪೊರೇಟ್ ಕಂಟ್ರೋಲರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. 2017ರಿಂದ 2018ರರವರೆಗೆ ವೈಭವ್ ತನೇಜಾ ಅವರು ಕಂಪನಿಯ ಅಸಿಸ್ಟಂಟ್ ಕಾರ್ಪೊರೇಟ್ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದರು.

ಈ ಸುದ್ದಿಯನ್ನೂ ಓದಿ: Tesla cars : ಭಾರತದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಟೆಸ್ಲಾ ಮಾತುಕತೆ ಶುರು, 20 ಲಕ್ಷ ರೂ.ಗೆ ಕಾರು

2016ರ ಮಾರ್ಚ್‌ನಿಂದ ಅಮೆರಿಕ ಮೂಲದ ಸೋಲಾರ್ ಸಿಟಿ ಕಂಪನಿಯಲ್ಲಿ ವೈಭವ್ ತನೇಜಾ ಅವರು ವಿವಿಧ ಹಣಕಾಸು ಮತ್ತು ಲೆಕ್ಕಪತ್ರ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಈ ಸೋಲಾರ್ ಸಿಟಿ ಕಂಪನಿಯನ್ನು ಟೆಸ್ಲಾ ಕಂಪನಿಯು 2016ರಲ್ಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಇದಕ್ಕೂ ಮೊದಲು ವೈಭವ್ ತನೇಜಾ ಅವರು, ಪ್ರೈಸ್‌ವಾಟರ್‌ಹೌಸ್ ಕೂಪರ್ಸ್ ಕಂಪನಿಯಲ್ಲಿದ್ದರು. ಅವರು 1999 ಮತ್ತು 2016ರ ನಡುವೆ ಈ ಕಂಪನಿಯ ಪರವಾಗಿ ಭಾರತ ಮತ್ತು ಅಮೆರಿಕದಲ್ಲಿ ಕೆಲಸ ಮಾಡಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಭಾರತದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಟೆಸ್ಲಾ ಮಾತುಕತೆ ಶುರು, 20 ಲಕ್ಷ ರೂ.ಗೆ ಕಾರು

ಕೊನೆಗೂ ಉದ್ಯಮಿ ಎಲಾನ್‌ ಮಸ್ಕ್‌ ನೇತೃತ್ವದ ಟೆಸ್ಲಾ ಎಲೆಕ್ಟ್ರಿಕ್‌ ಕಾರು ಕಂಪನಿಯು ಭಾರತದಲ್ಲಿ ತನ್ನ ಕಾರ್ಖಾನೆಯನ್ನು ನಿರ್ಮಿಸುವ ಬಗ್ಗೆ ಸರ್ಕಾರದ ಜತೆಗೆ ಮಾತುಕತೆ ಶುರು ಮಾಡಿದೆ. (Tesla cars ) ಹೂಡಿಕೆಯ ಪ್ರಸ್ತಾಪದ ಬಗ್ಗೆ ಸರ್ಕಾರದ ಜತೆ ಟೆಸ್ಲಾ ಮಾತುಕತೆ ನಡೆಯುತ್ತಿದೆ. ವರ್ಷಕ್ಕೆ 5 ಲಕ್ಷ ಎಲೆಕ್ಟ್ರಿಕ್‌ ಕಾರುಗಳನ್ನು ಕಾರ್ಖಾನೆ ಉತ್ಪಾದಿಸುವ ನಿರೀಕ್ಷೆ ಇದೆ.

ಭಾರತದಲ್ಲಿ ಟೆಸ್ಲಾ ಕಾರುಗಳ ದರ 20 ಲಕ್ಷ ರೂ.ಗಳಿಂದ ಟೆಸ್ಲಾ ಕಾರುಗಳು ಮಾರಾಟವಾಗಲಿದೆ. ಚೀನಾದಲ್ಲಿ ಟೆಸ್ಲಾ ಕಾರುಗಳು ಗಣನೀಯವಾಗಿ ಅಸ್ತಿತ್ವದಲ್ಲಿವೆ. ಟೆಸ್ಲಾದ ಕಾರ್ಖಾನೆಯೂ ಅಲ್ಲಿದೆ. ಇದೀಗ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಿ ರಫ್ತು ಮಾಡಲು ಟೆಸ್ಲಾ ಆಲೋಚಿಸಿದೆ. ಇಂಡೊ-ಪೆಸಿಫಿಕ್‌ ವಲಯದಲ್ಲಿ ಟೆಸ್ಲಾ ಕಾರುಗಳ ಮಾರಾಟಕ್ಕೆ ಎಲಾನ್‌ ಮಸ್ಕ್‌ ಯೋಜಿಸಿದ್ದಾರೆ.

ಟೆಸ್ಲಾ ಮಹತ್ತ್ವಾಕಾಂಕ್ಷೆಯೊಂದಿಗೆ ಭಾರತಕ್ಕೆ ಬರುತ್ತಿದೆ. ಭಾರತದಲ್ಲಿ ನಮಗೆ ಸಕಾರಾತ್ಮಕ ಪ್ರೋತ್ಸಾಹ ಸಿಗಲಿದೆ ಎಂಬ ವಿಶ್ವಾಸ ಇದೆ. ಸ್ಥಳೀಯ ತಯಾರಕರು ಮತ್ತು ರಫ್ತುದಾರರ ಸಹಕಾರವನ್ನು ಮುಖ್ಯವಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಉತ್ತಮ ಡೀಲ್‌ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲಾನ್‌ ಮಸ್ಕ್‌ ಅವರು ಕಳೆದ ತಿಂಗಳು ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ಮಾತುಕತೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ನಾನು ಪ್ರಧಾನಿ ಮೋದಿಯ ಅಭಿಮಾನಿ ಎಂದು ಮಸ್ಕ್‌ ಬಳಿಕ ಹೇಳಿದ್ದರು. ಮೋದಿಯವರು ಭಾರತದ ಬಗ್ಗೆ ನಿಜಕ್ಕೂ ಕಾಳಜಿ ಹೊಂದಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೇವೆ ಎಂದು ಹೇಳಿದ್ದರು.

Exit mobile version