ಆಟೋಮೊಬೈಲ್
Elon Musk: ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಆರಂಭಿಸಲು ಸ್ಥಳ ಗುರುತು ಎಂದ ಉದ್ಯಮಿ ಎಲಾನ್ ಮಸ್ಕ್
Elon Musk:ಕಳೆದ ಕೆಲವು ದಿನಗಳಿಂದಲೂ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಫ್ಯಾಕ್ಟರಿ ಆರಂಭಿಸಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ: ಭಾರತದಲ್ಲಿ ಟೆಸ್ಲಾ (Tesla) ತನ್ನ ಘಟಕವನ್ನು ಆರಂಭಿಸಲಿದೆ ಎಂದು ಕೆಲವು ದಿನಗಳಿಂದ ವರದಿಯಾಗುತ್ತಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಘಟಕವನ್ನು ಆರಂಭಿಸುವ ಸ್ಥಳವನ್ನು ಗುರುತಿಸಲಾಗುವುದು ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO) ಎಲಾನ್ ಮಸ್ಕ್ (Elon Musk) ಅವರು ಹೇಳಿದ್ದಾರೆ.
ವಾಲ್‌ಸ್ಟ್ರೀಟ್ ಜರ್ನಲ್‌ನ ಥೋರಾಲ್ಡ್ ಬಾರ್ಕರ್ ಅವರು ಕಾರ್ಯಕ್ರಮವೊಂದರಲ್ಲಿ, ಟೆಸ್ಲಾ ಫ್ಯಾಕ್ಟರಿ ಆರಂಭಕ್ಕೆ ಭಾರತವು ಆಸಕ್ತಿ ಹೊಂದಿದೆಯೇ ಎಂದು ಎಲಾನ್ ಮಸ್ಕ್ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಅವರು, ಸಂಪೂರ್ಣವಾಗಿ ಎಂದು ಉತ್ತರಿಸಿದ್ದಾರೆ.
ಭಾರತದಲ್ಲಿ ಟೆಸ್ಲಾ ತನ್ನ ಫ್ಯಾಕ್ಟರಿಯನ್ನು ಆರಂಭಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದು ಭಾರತದ ತಂತ್ರಜ್ಞಾನ ಸಹಾಯಕ ಸಚಿವರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕಳೆದ ವಾರ ರಾಯ್ಟರ್ಸ್ ವರದಿ ಮಾಡಿತ್ತು.
ವಿಶ್ವದ ಅತ್ಯಂತ ಬೆಲೆಬಾಳುವ ವಾಹನ ತಯಾರಕ ಟೆಸ್ಲಾ ತನ್ನ ಜಾಗತಿಕ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿದೆ. ಹಾಗಾಗಿ, ಈ ವರ್ಷದ ಆರಂಭದಲ್ಲಿ ಮೆಕ್ಸಿಕೋದಲ್ಲಿ ಗಿಗಾಫ್ಯಾಕ್ಟರಿಯನ್ನು ತೆರೆಯುವುದಾಗಿ ಘೋಷಿಸಿತ್ತು. ಟೆಸ್ಲಾ, ಸ್ಪೇಸ್‌ಎಕ್ಸ್, ಟ್ವಿಟರ್‌ನ ಸಿಇಒ ಮತ್ತು ಹಲವಾರು ಇತರ ಸಂಸ್ಥೆಗಳ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಮಂಗಳವಾರ ವಿವರಗಳನ್ನು ನೀಡದೆ, ಶಿಕ್ಷಣ ಸಂಸ್ಥೆಯನ್ನು ರಚಿಸುವ ಆಲೋಚನೆಯನ್ನು ತೇಲಿ ಬಿಟ್ಟರು.
ಎಲಾನ್ ಮಸ್ಕ್ ಅವರು ತಮ್ಮ ಕಂಪನಿಗಳ ಉತ್ತರಾಧಿಕಾರಿಯನ್ನು ಗುರುತಿಸಿದ್ದಾರೆ. ಆ ವ್ಯಕ್ತಿಯು ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ ಕಂಪನಿಯನ್ನು ನಡೆಸಬಹುದು ಎಂದು ಅವರು ಹೇಳಿದರು. ನೋಡಿ, ನನಗೆ ಏನಾದರೂ ಅನಿರೀಕ್ಷಿತವಾಗಿ ಸಂಭವಿಸಿದಲ್ಲಿ, ನನ್ನ ಅಧಿಕಾರ ವಹಿಸಿಕೊಳ್ಳಲು ಇದು ನನ್ನ ಶಿಫಾರಸು ಎಂದು ನಾನು ಮಂಡಳಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?
ಟೆಸ್ಲಾ ಮಂಡಳಿಯ ನಿರ್ದೇಶಕರಾದ ಜೇಮ್ಸ್ ಮುರ್ಡೋಕ್ ಅವರು ಕಳೆದ ವರ್ಷ ನ್ಯಾಯಾಲಯದಲ್ಲಿ ಟ್ವಿಟ್ಟರ್‌ಗೆ ಸಂಬಂಧಿಸಿದಂತೆ ಹೂಡಿಕೆದಾರರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಸಮಯದಲ್ಲಿ ಎಲೆಕ್ಟ್ರಿಕ್ ಕಾರು ತಯಾರಕರ ಮುಖ್ಯಸ್ಥರಾಗಲು ಸಂಭಾವ್ಯ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ಎಲಾನ್ ಮಸ್ಕ್ ಅವರು ಗುರುತಿಸಿದ್ದಾರೆ ಎಂದು ಸಾಕ್ಷ್ಯ ನುಡಿದಿದ್ದರು. ಇತ್ತೀಚೆಗಷ್ಟೇ ಟ್ವಿಟರ್‌ಗೆ ಸಿಇಒ ಅವರನ್ನು ಘೋಷಿಸಿರುವ ಮಸ್ಕ್ ಈಗ ತಮ್ಮ ಗಮನವನ್ನು ಟೆಸ್ಲಾ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಟೋಮೊಬೈಲ್
Maruti Suzuki : ಮಾರುತಿಯ 5 ಡೋರ್ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್ಗೆ ಪೈಪೋಟಿ ಖಚಿತ
ಎಂಟ್ರಿ ಲೆವೆಲ್ ಜಿಮ್ನಿ (Jimny) ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ .
ನವ ದೆಹಲಿ: ಮಾರುತಿ ಸುಜು (Maruti Suzuki)ಕಿ ಕಂಪನಿಯು ತನ್ನ ಬಹುನಿರೀಕ್ಷಿತ ಜಿಮ್ನಿ ಎಸ್ಯುವಿಯನ್ನು (Jimny) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಎಂಟ್ರಿ ಲೆವೆಲ್ ಝೀಟಾ ವೇರಿಯೆಂಟ್ನ ಬೆಲೆಯು ಭಾರತದ ಎಕ್ಸ್ ಶೋರೂಂ ರೂ.12.74 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ಎಂಡ್ ಕಾರಿನ ಬೆಲೆಯು 15.5 ಲಕ್ಷ ರೂಪಾಯಿ . ಆಟೋ ಎಕ್ಸ್ ಪೋ 2023ರಲ್ಲಿ ಬಿಡುಗಡೆಯಾದಾಗಿನಿಂದ ಜಿಮ್ನಿಯ ಬುಕಿಂಗ್ ನಡೆಯುತ್ತಿದೆ ಮತ್ತು ಕಂಪನಿಯು ಈಗಾಗಲೇ 30,000ಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ. ಡೀಲರ್ ಮೂಲಗಳ ಪ್ರಕಾರ ಜೂನ್ ಮಧ್ಯದಿಂದ ಹಂತಹಂತವಾಗಿ ವಿತರಣೆಗಳು ಪ್ರಾರಂಭವಾಗುತ್ತವೆ.
ನಮ್ಮ ಮಾರುಕಟ್ಟೆಗಾಗಿ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಐದು ಡೋರ್ಗಳ ಜಿಮ್ನಿಯನ್ನು ಪಡೆದ ಮೊದಲ ದೇಶ ಭಾರತ. ಜಿಮ್ನಿಯನ್ನು ಮಾರುತಿಯ ಗುರುಗ್ರಾಮ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಅಲ್ಲಿಂದಲೇ ಇತರ ದೇಶಗಳಿಗೆ ರಫ್ತು ಮಾಡಲಾಗುವುದು. ಗ್ರಾಹಕರು ಮಾಸಿಕ 33,550 ರೂಪಾಯಿ ಚಂದಾದಾರಿಕೆ ಮೂಲಕ ಜಿಮ್ನಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದ ಕಂಪನಿ ಹೇಳಿದೆ.
ಮಾರುತಿ ಸುಜುಕಿ ಜಿಮ್ನಿ ಪವರ್ ಟ್ರೇನ್
ಜಿಮ್ನಿ ಎಸ್ಯುವಿಯಲ್ಲಿ 1.5 ಲೀಟರಿನ 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದೆ. ಇಉ 105 ಬಿಎಚ್ಪಿ ಪವರ್, ಹಾಗೂ 134 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. 5 ಸ್ಪೀಡ್ನ ಮ್ಯಾನುಯಲ್ ಅಥವಾ 4 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯಿದೆ. ಮಾರುತಿ ತನ್ನೆಲ್ಲ ಕಾರುಗಳಿಗೆ ಕೆ15 ಸಿ ಎಂಜಿನ್ ಬಳಸುತ್ತಿರುವ ನಡುವೆಯೇ ಜಿಮ್ನಿಯಲ್ಲಿ ಹಳೆಯ ಕೆ 15ಬಿ ಎಂಜಿನ್ ಅನ್ನು ಬಳಸುತ್ತದೆ. ಜಿಮ್ನಿ ಮ್ಯಾನುವಲ್ ಗೇರ್ಬಾಕ್ಸ್ ಹೊಂದಿರುವ ಕಾರು 16.94 ಕಿ.ಮೀ ಮೈಲೇಜ್ ಕೊಟ್ಟರೆ, ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರುವ ಕಾರು 16.39 ಕಿ.ಮೀ ಮೈಲೇಜ್ ನೀಡುತ್ತದೆ.
ಜಿಮ್ನಿಯ ಆಫ್ರೋಡ್ಗೆ ಸಂಬಂಧಿಸಿ ಹೇಳುವುದಾದರೆ ಆಲ್ಗ್ರಿಪ್ ಪ್ರೊ 4ಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ಗೇರ್ಬಾಕ್ಸ್ನಲ್ಲಿ ನೀಡಲಾಗಿದೆ. ಅದೇ ರೀತಿ 2WD-ಹೈ, 4WD-ಹೈ ಮತ್ತು 4WD-ಲೊ ಮೋಡ್ನೊಂದಿಗೆ ನೀಡಲಾಗಿದೆ. ಲ್ಯಾಡರ್ ಫ್ರೇಮ್ ಚಾಸಿಸ್ ಅನ್ನು ಇದು ಹೊಂದಿ್ದು. 3ಲಿಂಕ್ ಬಲಿಷ್ಠ ಆಕ್ಸಲ್ ಸಸ್ಪೆನ್ಷನ್ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಕೊಡಲಾಗಿದೆ. ಜಿಮ್ನಿ 5 ಡೋರ್ ಕಾರು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಮಾರುತಿ ಸುಜುಕಿ ಜಿಮ್ನಿಯ ವೈಶಿಷ್ಟ್ಯಗಳು
ಸ್ವಯಂಚಾಲಿತ ಎಲ್ಇಡಿ ಹೆಡ್ ಲ್ಯಾಂಪ್ಗಳು, 9.0 ಇಂಚಿನ ಸ್ಮಾರ್ಟ್ ಪ್ಲೇ ಪ್ರೊ + ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಜಿಮ್ನಿಯ ಆಲ್ಫಾ ಟ್ರಿಮ್ ಗರಿಷ್ಠ ಫೀಚರ್ಗಳನ್ನು ಪಡೆದುಕೊಂಡಿವೆ. ಆರು ಏರ್ ಬ್ಯಾಗ್ಗಳು, ಇಎಸ್ಪಿ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುರಕ್ಷತಾ ಫೀಚರ್ಗಳನ್ನು ಎಲ್ಲ ವೇರಿಯೆಂಟ್ಗಳಲ್ಲಿ ನೀಡಲಾಗಿದೆ.
ಜಿಮ್ನಿ ಒಟ್ಟು ಏಳು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳಲ್ಲಿ ಎರಡು ಡ್ಯುಯಲ್ ಟೋನ್. ಐದು ಬಾಗಿಲುಗಳ ಹೊರತಾಗಿಯೂ, ಜಿಮ್ನಿ ಇನ್ನೂ ನಾಲ್ಕು ಆಸನಗಳ ಮಾದರಿಯಾಗಿದೆ.
ಇಂಟೀರಿಯರ್ ವಿಚಾರಕ್ಕೆ ಬಂದರೆ ಡ್ಯಾಶ್ಬೋರ್ಡ್ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ. ಪ್ರಯಾಣಿಕರ ಸೀಟಿನ ಬದಿಯಲ್ಲಿ ಡ್ಯಾಶ್ಬೋರ್ಡ್ ಮೌಂಟೆಡ್ ಗ್ರಾಬ್ ಹ್ಯಾಂಡಲ್ಗಳಿವೆ. ಮಾರುತಿ ಸ್ವಿಫ್ಟ್ನಲ್ಲಿರುವ ಕೆಲವೊಂದು ಫೀಚರ್ಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಥಾರ್ ನಲ್ಲಿರುವಂತೆ, ಪವರ್ ವಿಂಡೋಗಳನ್ನು ನಿರ್ವಹಿಸುವ ಬಟನ್ ಗಳು ಮುಂಭಾಗದ ಎರಡು ಆಸನಗಳ ನಡುವೆ ಇವೆ.
ಮಾರುತಿ ಸುಜುಕಿ ಜಿಮ್ನಿ ವಿನ್ಯಾಸ
ಮಾರುತಿ ಜಿಮ್ನಿ 5 ಓಡರ್ 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್ಬೇಸ್ ಹೊಂದಿದೆ. ಇದು 3 ಡೋರ್ ಜಿಮ್ನಿಗಿಂತ ಮಾದರಿಗಿಂತ 340 ಎಂಎಂ ಉದ್ದವಾಗಿದೆ. 1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರ ಹೊಂದಿದೆ. ನೇರವಾದ ಪಿಲ್ಲರ್ಗಳು , ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್ ಲ್ಯಾಂಪ್ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕಿ ಆಫ್-ರೋಡ್ ಟೈರ್ಗಳು, ಫ್ಲೇರ್ಡ್ ವ್ಹೀಲ್ ಕಮಾನುಗಳು ಮತ್ತು ಟೈಲ್ ಗೇಟ್- ಮೌಂಟೆಡ್ ಸ್ಪೇರ್ ಟೈರ್ ಜಿಮ್ನಿಯ ನೋಟವನ್ನು ಹೆಚ್ಚಿಸಿದೆ. ಜಿಮ್ನಿ 5 ಡೋರ್ ಕಾರು 15 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 195/80 ಸೆಕ್ಷನ್ ಟೈರ್ಗಳನ್ನು ಬಳಸಲಾಗಿದೆ.
ಮಾರುತಿ ಸುಜುಕಿ ಜಿಮ್ನಿ ಪ್ರತಿಸ್ಪರ್ಧಿ
ಜಿಮ್ನಿ ಭಾರತದಲ್ಲಿ ಆಫ್-ರೋಡರ್ಗಳ ಆಕರ್ಷಣೆಗೆ ಪೂರಕವಾಗಿದೆ. ನೇರ ಪ್ರತಿಸ್ಪರ್ಧಿ ಅಲ್ಲದಿದ್ದರೂ ಬೆಲೆ ಮತ್ತು ವಿನ್ಯಾಸದ ಕಾರಣಕ್ಕೆ ಮಹೀಂದ್ರಾ ಥಾರ್ (10.54 ಲಕ್ಷ – ರೂ. 16.77 ಲಕ್ಷ ರೂಪಾಯಿ ಬೆಲೆ) ಮತ್ತು ಫೋರ್ಸ್ ಗೂರ್ಖಾ (15.10 ಲಕ್ಷ ರೂಪಾಯಿ ಬೆಲೆ) ಜಿಮ್ನಿಯ ಪ್ರತಿಸ್ಪರ್ಧಿ ಕಾರುಗಳು.
ಆಟೋಮೊಬೈಲ್
Hero MotoCorp 2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ, ರೇಟ್ ಕೊಂಚ ಏರಿಕೆ!
2023ರ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಸೆಲ್ಫ್ ಸ್ಟಾರ್ಟ್ ಮತ್ತು ಐ3ಎಸ್ ವೇರಿಯೆಂಟ್ ಹಾಗೂ ಟ್ಯೂಬ್ ಲೆಸ್ ಟೈರ್ನೊಂದಿಗೆ ರಸ್ತೆಗಿಳಿದಿದೆ.
ನವ ದೆಹಲಿ: ಹೀರೋ ತನ್ನ ಎಂಟ್ರಿ ಲೆವೆಲ್ 100 ಸಿಸಿ ಕಮ್ಯೂಟರ್ ಬೈಕ್ ಎಚ್ಎಫ್ ಡೀಲಕ್ಸ್ನ 2023ನೇ ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡಗುಡೆ ಮಾಡಿದೆ. ಹಲವಾರು ಸುಧಾರಣೆಗಳೊಂದಿಗೆ ಈ ಬೈಕ್ ಅನ್ನು ಪರಿಚಯಿಸಿರುವ ಕಂಪನಿ ದರವನ್ನು ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿದೆ. ಅತ್ಯಾಧುನಿಕ ಫೀಚರ್ಗಳನ್ನು ನೀಡುವ ಮೂಲಕ ಹೆಚ್ಚು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಖುಷಿ ಪಡಿಸಲು ಮುಂದಾಗಿದೆ. ಈ ಬೈಕ್ನ ಎಕ್ಸ್ ಶೋರೂಮ್ ಬೆಲೆ 60,760 ರೂಪಾಯಿಂದ ಆರಂಭಗೊಂಡು 67,208 ರೂಪಾಯಿ ತನಕ ಇದೆ.
2023ರ ಎಚ್ಎಫ್ ಡೀಲಕ್ಸ್ ಬೈಕಿನಲ್ಲಿ ಟ್ಯೂಬ್ಲೆಸ್ ಟೈರ್ಗಳನ್ನು ನೀಡಲಾಗಿದೆ. ಐ3ಎಸ್ (ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ) ಬೈಕಿನಲ್ಲಿ ಅಳವಡಿಸಲಾಗಿದೆ. ಇದು ಆರಂಭಿಕ ಶ್ರೇಣಿಯಿಂದ ಲಭ್ಯವಿದೆ. ಯುಎಸ್ಬಿ ಚಾರ್ಜರ್ ಅನ್ನು ಆಯ್ಕೆಯಾಗಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಬೈಕ್ಗೆ 5 ವರ್ಷಗಳ ವಾರಂಟಿ ಮತ್ತು ಐದು ಉಚಿತ ಸರ್ವಿಸ್ ಸಿಗಲಿದೆ.
ಇದನ್ನೂ ಓದಿ : MotoGp : ಭಾರತದಲ್ಲಿ ನಡೆಯಲಿರುವ ಬೈಕ್ ರೇಸ್ ನೋಡುವ ಆಸೆಯೇ? ಟಿಕೆಟ್ ರೇಟ್ ಕೇಳಿದ್ರೆ ಗಾಬರಿ ಗ್ಯಾರಂಟಿ!
ಹೀರೋ ಎಚ್ಎಫ್ ಡಿಲಕ್ಸ್ ಬೈಕಿನಲ್ಲಿ ಏರ್ ಕೂಲ್ಡ್, 97 ಸಿಸಿ, ಸಿಂಗಲ್ ಸಿಲಿಂಡರ್ ‘ಸ್ಲೋಪರ್’ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಎಚ್ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ದೀರ್ಘಕಾಲ ಸೇವೆ ಸಲ್ಲಿಸುವ ಈ ಎಂಜಿನ್ ಈಗ ಒಬಿಡಿ -2 ಕಾಂಪ್ಲೈಂಟ್ ಹಾಗೂ ಇ20 ಪೆಟ್ರೋಲ್ಗೆ ಸಿದ್ಧಗೊಂಡಿದೆ. 4 ಸ್ಪೀಡ್ನ ಗೇರ್ ಬಾಕ್ಸ್ ಇದೆ. ಈ ಎಂಜಿನ್ ಅನ್ನು ಬೇಸಿಕ್ ಡಬಲ್ ಕ್ರೇಡಲ್ ಫ್ರೇಮ್ ಒಳಗೆ ಇರಿಸಲಾಗಿದ್ದು, ಸರಳ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಎರಡು ಸ್ಟೆಪ್ ಅಡ್ಜಸ್ಟ್ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಮೂಲಕ ಜೋಡಿಸಲಾಘಿದೆ. 9.6 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿರುವ ಎಚ್ ಎಫ್ ಡಿಲಕ್ಸ್ 112 ಕೆ.ಜಿ ತೂಕವಿದೆ.
ವೇರಿಯೆಂಟ್ಗಳು ಯಾವುವು?
ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಡ್ರಮ್ ಕಿಕ್ ಕಾಸ್ಟ್, ಡ್ರಮ್ ಸೆಲ್ಫ್ ಕಾಸ್ಟ್ ಮತ್ತು ಐ3ಎಸ್ ಡ್ರಮ್ ಸೆಲ್ಫ್ ಕಾಸ್ಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಗಳು 60,760 ರೂ.ಗಳಿಂದ ಪ್ರಾರಂಭವಾಗಿ 67,208 ರೂ.ಗಳವರೆಗೆ (ಎಕ್ಸ್ ಶೋ ರೂಂ, ದೆಹಲಿ) ಇದೆ. ಹೀರೋ ಎಚ್ಎಫ್ ಡಿಲಕ್ಸ್ ಹೋಂಡಾ ಶೈನ್ 100 (ರೂ.64,900, ಪರಿಚಯಾತ್ಮಕ, ಎಕ್ಸ್ ಶೋರೂಂ, ಮುಂಬೈ) ಮತ್ತು ಬಜಾಜ್ ಪ್ಲಾಟಿನಾ 100 (ರೂ.67,475) ಬೈಕುಗಳಿಗೆ ಪೈಪೋಟಿ ನೀಡಲಿದೆ.
ಆಟೋಮೊಬೈಲ್
EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ
EV Battery Plant: ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಅಗರತಾಸ್, ಗುಜರಾತ್‌ನಲ್ಲಿ 13000 ಕೋಟಿ ರೂ. ವೆಚ್ಚದಲ್ಲಿ ಇವಿ ಬ್ಯಾಟರಿ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರದ ಜತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು (Tata Group) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್‌ನಲ್ಲಿ (Gujarat) 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು (EV Battery Plant) ಆರಂಭಿಸಲಿದೆ. ಈ ಸಂಬಂಧ ಟಾಟಾ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ (Agaratas Energy Storage Solutions Pvt) ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.
2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ. ರಾಜ್ಯದಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಗುಂಪು ಸಹಾಯವನ್ನು ಪಡೆಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು, ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಾಟಾ ಗ್ರೂಪ್‌ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್‌ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ. ಬ್ರಿಟನ್ ಸರ್ಕಾರವು ಬೆಂಬಲ ಪ್ಯಾಕೇಜ್ ಅನ್ನು ನೀಡಿದ ನಂತರ ಟಾಟಾ ಸ್ಪೇನ್‌ಗಿಂತ ಇಂಗ್ಲೆಂಡ್‌ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ಮೇನಲ್ಲಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Subsidy on E-Vehicle : ಎಲೆಕ್ಟ್ರಿಕ್ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್
ಭಾರತದಲ್ಲೂ ಸಾಂಪ್ರದಾಯಿಕ ಇಂಧನ ಆಧಾರಿತ ವಾಹನಗಳ ಬದಲಿಗೆ ಬ್ಯಾಟರಿ ಆಧರಿತ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನಾ ಕಂಪನಿಗಳಿಗೂ, ಬಳಕೆದಾರರಿಗೂ ಸಾಕಷ್ಟು ಲಾಭಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ದೇಶದಲ್ಲಿ ಇನ್ನೂ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯದ ಕೊರತೆಗಳು ಎದ್ದು ಕಾಣುತ್ತಿದೆ.
ಆಟೋಮೊಬೈಲ್‌ನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಟೋಮೊಬೈಲ್
Tata Nexon: ಹೊಸ 10.25 ಇಂಚಿನ ಟಚ್ ಸ್ಕ್ರೀನ್ನೊಂದಿಗೆ ಬರುತ್ತಿದೆ ನೆಕ್ಸಾನ್ ಇವಿ
ಎಕ್ಸ್ ಝಡ್ ಪ್ಲಸ್ ಲುಕ್ಸ್ 3.3 ಕಿಲೋವ್ಯಾಟ್ ಮತ್ತು 7.2 ಕಿಲೋವ್ಯಾಟ್ ಚಾರ್ಜರ್ ವೇರಿಯೆಂಟ್ಗಳಿ ಕ್ರಮವಾಗಿ 18.79 ಲಕ್ಷ ಮತ್ತು 19.29 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.
ಮುಂಬಯಿ: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಮ್ಯಾಕ್ಸ್ ಎಕ್ಸ್ ಝಡ್ + ಲುಕ್ಸ್ ಟ್ರಿಮ್ ಅನ್ನು ಅಪ್ಗ್ರೇಡ್ ಮಾಡಿದೆ. ಈಗ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಆವೃತ್ತಿಯ ಬಳಿಕದ ಆವೃತ್ತಿಗಳು 10.25 ಇಂಚಿನ ಟಚ್ ಸ್ಕ್ರೀನ್ನೊಂದಿಗೆ ರಸ್ತೆಗಿಳಿಯಲಿದೆ. 3.3 ಕಿಲೋವ್ಯಾಟ್ ಚಾರ್ಜರ್ ಹೊಂದಿರುವ ಎಕ್ಸ್ ಝಡ್ + ಲುಕ್ಸ್ ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.18.79 ಲಕ್ಷ ರೂಪಾಯಿ. ಟಾಟಾ ಮೋಟಾರ್ಸ್ ಈ ಟ್ರಿಮ್ ಅನ್ನು 7.2 ಕಿಲೋವ್ಯಾಟ್ ಚಾರ್ಜರ್ ನೊಂದಿಗೆ 19.29 ಲಕ್ಷ ರೂಪಾಯಿಗೆ ನೀಡುತ್ತಿದೆ.
ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಆವೃತ್ತಿಯೊಂದಿಗೆ ಪರಿಚಯಿಸಲಾದ ಹೊಸ 10.25 ಇಂಚಿನ ಟಚ್ ಸ್ಕ್ರೀನ್ ಅನ್ನು ಈ ಹೊಸ ಟ್ರಿಮ್ಗೆ ಸೇರಿಸಲಾಗಿದೆ. ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ಸುಧಾರಿತ ರಿವರ್ಸ್ ಕ್ಯಾಮೆರಾ ಮತ್ತು ಇಂಟಿಗ್ರೇಟೆಡ್ ವಾಯ್ಸ್ ಅಸಿಸ್ಟೆಂಟ್ ಇತರ ಫೀಚರ್ಗಳನ್ನು ಸೇರಿಸಲಾಗಿದೆ.
ಟಾಟಾ ಮೋಟಾರ್ಸ್ ಹೊಸ ಟಚ್ ಸ್ಕ್ರೀನ್ ಅನ್ನು ಮೊದಲು ಹ್ಯಾರಿಯರ್ ಮತ್ತು ಸಫಾರಿ ಎಸ್ಯುವಿಗಳ ರೆಡ್ ಡಾರ್ಕ್ ಆವೃತ್ತಿಗಳೊಂದಿಗೆ ಪರಿಚಯಿಸಿತ್ತು. ಆದರೆ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಯೊಂದಿಗೆ ಕೊಟ್ಟಿರಲಿಲ್ಲ. ಹ್ಯಾರಿಯರ್ ಮತ್ತು ಸಫಾರಿ ಎಸ್ಯುವಿಗಳು ಹೊಸ ಟಚ್ ಸ್ಕ್ರೀನ್ ಜತೆಗೆ ಎಡಿಎಎಸ್ ಸುರಕ್ಷತಾ ಫೀಚರ್ ಅನ್ನು ಪಡೆದುಕೊಂಡಿದೆ. ಇಡೀ ನೆಕ್ಸಾನ್ ಸೀರಿಸ್ಗೆ ಇದು ಇನ್ನೂ ಎಂಟ್ರಿಯಾಗಿಲ್ಲ.
ನೆಕ್ಸಾನ್ ಇವಿ ಮ್ಯಾಕ್ಸ್ ಪವರ್ ಟ್ರೇನ್
ನೆಕ್ಸಾನ್ ಇವಿ ಮ್ಯಾಕ್ಸ್ 40.5 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ಇದು ಎಆರ್ಎಐ ಪ್ರಕಾರ 453 ಕಿ.ಮೀ ರೇಂಜ್ ಹೊಂದಿದೆ. ನೈಜ ಸವಾರಿಯ ಪರೀಕ್ಷೆಯಲ್ಲಿ ಇದು ಸರಾಸರಿ 266 ಕಿ.ಮೀ ಎಂದು ಒಡುತ್ತಿದೆ. ಸಿಂಗಲ್ ಎಲೆಕ್ಟ್ರಿಕ್ ಮೋಟರ್ನಿಂದ ಮುಂಭಾಗದ ಚಕ್ರಗಳಿಗೆ ಪವರ್ ನೀಡಲಾಗುತ್ತದೆ. ಇದು 143 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ.
ಇದನ್ನೂ ಓದಿ : Hyundai Motor : ಹ್ಯುಂಡೈ ಎಕ್ಸ್ಟೆರ್ ಕಾರಿನ ಹಿಂಭಾಗದ ವಿನ್ಯಾಸ ಬಹಿರಂಗ
ಇದು ಸ್ಟ್ಯಾಂಡರ್ಡ್ ಆಗಿ ಎರಡು ಚಾರ್ಜರ್ ಗಳನ್ನು ಪಡೆಯುತ್ತದೆ. 3.3 ಕಿಲೋವ್ಯಾಟ್ ಮತ್ತು 7.2 ಕಿಲೋವ್ಯಾಟ್ ಚಾರ್ಜರ್ಗಳು. ಮೊದಲನೆಯದನ್ನು ಬಳಸಿಕೊಂಡು, ಬ್ಯಾಟರಿಯನ್ನು 15 ಗಂಟೆಗಳಲ್ಲಿ ಶೇಕಡಾ 10-100 ಚಾರ್ಜ್ ಮಾಡಬಹುದು. ಆದರೆ ಎರಡನೆಯ ಚಾರ್ಜರ್ನೊಂದಿಗೆ 0-100 ಪ್ರತಿಶತದಿಂದ ಚಾರ್ಜ್ ಮಾಡಲು 6.5 ಗಂಟೆ ಸಾಕು. ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ 50 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಇದು ಟಾಟಾ ಪ್ರಕಾರ, 56 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಬ್ಯಾಟರಿಯನ್ನು ರೀಚಾರ್ಜ್ ಮಾಡುತ್ತದೆ.
ಪ್ರತಿಸ್ಪರ್ಧಿಗಳು
ನೆಕ್ಸಾನ್ ಇವಿ ಮ್ಯಾಕ್ಸ್ ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿಗೆ 400ಗೆ ಪೈಪೋಟಿ ನೀಡುತ್ತದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.99 ಲಕ್ಷದಿಂದ ರೂ.19.19 ಲಕ್ಷ ರೂಪಾಯಿಗಳು.
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!