Site icon Vistara News

ಟ್ವಿಟರ್‌ಗೆ ಸ್ಪರ್ಧೆ ನೀಡಲು Bluesky ಆರಂಭಿಸಿದ ಟ್ವಿಟರ್ ಸಹ ಸಂಸ್ಥಾಪಕ ಜಾಕ್‌ ಡಾರ್ಸೆ, ಹೇಗಿದೆ ಈ ಆ್ಯಪ್?

Jack Dorsey started Bluesky, which will compete with twitter

ಬೆಂಗಳೂರು: ಟ್ವಿಟರ್ (Twitter) ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್‌ ಡಾರ್ಸೆ(Jack Dorsey), ಟ್ವಿಟರ್‌ಗೆ ಪರ್ಯಾಯವಾದ ಮತ್ತೊಂದು ಮೈಕ್ರೋಬ್ಲಾಗಿಂಗ್ ತಾಣ ಆರಂಭಿಸಿದ್ದಾರೆ. ಈ ಹೊಸ ತಾಣಕ್ಕೆ, ಬ್ಲೂಸ್ಕೈ (Bluesky) ಎಂದು ಹೆಸರು ಇಡಲಾಗಿದೆ. ಈ ಆ್ಯಪ್ ಈಗ ಆಪಲ್ ಸ್ಟೋರ್‌ನಲ್ಲಿ ಲಭ್ಯವಿದ್ದು, ಇನ್ನೂ ಪರೀಕ್ಷಾ ಹಂತದಲ್ಲಿದೆ. ಟ್ವಿಟರ್ ಫಂಡೆಡ್ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇದೀಗ ಆಹ್ವಾನಕ್ಕೆ-ಮಾತ್ರ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಸಾರ್ವಜನಿಕರಿಗೂ ಈ ಆ್ಯಪ್ ದೊರೆಯಲಿದೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.

ಫೆಬ್ರವರಿ 17ರಂದೇ ಬ್ಲೂಸ್ಕೈ ಐಒಎಸ್ ಆ್ಯಪ್ ಲಾಂಚ್ ಆಗಿದೆ. ಈಗಾಗಲೇ ಸುಮಾರು 2000 ಇನ್‌ಸ್ಟಾಲ್ ಆಗಿದೆ. ಅಲ್ಲದೇ, ಈ ಆ್ಯಪ್ ಇನ್ನೂ ಟೆಸ್ಟಿಂಗ್ ಹಂತದಲ್ಲಿದೆ ಎಂದು ಆ್ಯಪ್ ಇಂಟೆಲಿಜೆನ್ಸ್ ಕಂಪನಿ, ಡೇಟಾ.ಐಎ ತಿಳಿಸಿದೆ. ಈ ಆ್ಯಪ್, ಸರಳೀಕೃತ ಇಂಟರ್ಫೇಸ್ ಆಫರ್ ಮಾಡುತ್ತಿದ್ದು, ಬಳಕೆದಾರರು ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ, 256 ಪದಗಳ ಪೋಸ್ಟ್ ಮಾಡಬಹುದು. ಇದರಲ್ಲಿ ಫೋಟೋ ಕೂಡ ಸೇರಿದೆ.

ಬ್ಲೂಸ್ಕೈ ಹೇಗೆ ಕೆಲಸ ಮಾಡುತ್ತದೆ?

ಟ್ವಿಟರ್‌ “What’s happening?” ಅಂತಾ ಕೇಳಿದರೆ, ಬ್ಲೂಸ್ಕೈ “What’s up?” ಎಂದು ಕೇಳುತ್ತದೆ. ಬ್ಲೂಸ್ಕೈ ಬಳಕೆದಾರರು ಅಕೌಂಟ್ ಷೇರ್ ಮಾಡಬಹುದು, ಮ್ಯೂಟ್ ಮಾಡಬಹುದು ಮತ್ತು ಬ್ಲಾಕ್ ಕೂಡ ಮಾಡಬಹುದು. ಆದರೆ, ಸುಧಾರಿತ ಟೂಲ್‌ಗಳನ್ನು ಪರಿಚಯಿಸಿಲ್ಲ ಎಂದು ಟೆಕ್ ಕ್ರಂಚ್ ವರದಿ ತಿಳಿಸಿದೆ.

ಇದನ್ನೂ ಓದಿ: Elon Musk: ಟ್ವಿಟರ್‌ನಿಂದಲೂ ಚಾಟ್‌ಜಿಪಿಟಿ ರೀತಿ ಚಾಟ್‌ಬಾಟ್, ತಂಡ ನೇಮಕ ಮಾಡಿದ ಮಸ್ಕ್

ಅಪ್ಲಿಕೇಶನ್‌ನ ನ್ಯಾವಿಗೇಶನ್‌ನ ಕೆಳಭಾಗದ ಮಧ್ಯಭಾಗದಲ್ಲಿರುವ ಡಿಸ್ಕವರ್ ಟ್ಯಾಬ್ ಉಪಯುಕ್ತವಾಗಿದೆ. “who to follow” ಮತ್ತು ಇತ್ತೀಚೆಗೆ ಪೋಸ್ಟ್ ಮಾಡಿದ ಬ್ಲೂಸ್ಕಿ ನವೀಕರಣಗಳ ಫೀಡ್ ಅನ್ನು ನೀಡುತ್ತದೆ. ಮತ್ತೊಂದು ಟ್ಯಾಬ್, ನಿಮಗೆ ನೋಟಿಫಿಕೇಷನ್ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ಲೈಕ್ಸ್, ರಿಪೋಸ್ಟ್ಸ್, ಫಾಲೋವ್ಸ್ ಮತ್ತು ರಿಪ್ಲೈ‌ಗಳನ್ನು ನೋಡಬಹುದು. ಆದರೆ, ಡೈರೆಕ್ಟ್ ಮೆಸೇಜ್ ಸೌಲಭ್ಯವನ್ನು ನೀಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version