ನವದೆಹಲಿ: ಗಣೇಶ ಚತುರ್ಥಿಯ (Ganesh Chaturthi 2023) ವಿಶೇಷ ಸಂದರ್ಭದಲ್ಲಿ ಮುಕೇಶ್ ಅಂಬಾನಿ (Mukesh Ambani) ಅವರ ಒಡೆತನದ ರಿಲಯನ್ಸ್ ಜಿಯೋ(Reliance Jio), ದೇಶದ 8 ಮೆಟ್ರೋ ನಗರಗಳಲ್ಲಿ ಜಿಯೋ ಏರ್ ಫೈಬರ್ (Jio AirFiber) ಸೇವೆಗೆ ಚಾಲೆ ನೀಡಿದೆ. ಜಿಯೋ ಏರ್ ಫೈಬರ್ ಒಂದು ಇಂಟಿಗ್ರೇಟೆಡ್ ನೇರ ಪರಿಹಾರವಾಗಿದ್ದು, ಹೋಮ್ ಎಂಟರ್‌ಟೈನ್ಮೆಂಟ್ , ಸ್ಮಾರ್ಟ್ ಹೋಮ್ ಮತ್ತು ಅತಿ ವೇಗದ ಬ್ರಾಡ್‌ಬ್ಯ್ರಾಂಡ್ ಸೇವೆಯನ್ನು ಪೂರೈಸಲಿದೆ. ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕೊತಾ, ಅಹಮದಾಬಾದ್, ಬೆಂಗಳೂರು(Bengaluru), ಚೆನ್ನೈ ಮತ್ತು ಪುಣೆ ಮೆಟ್ರೋ ನಗರಗಳಲ್ಲಿ ಜಿಯೋ ಏರ್ ಫೈಬರ್ ಸೇವೆಗೆ ಚಾಲನೆ ನೀಡಲಾಗಿದೆ.
ಏರ್ ಫೈಬರ್ ಮತ್ತು ಏರ್ ಫೈಬರ್ ಮ್ಯಾಕ್ಸ್ ಹೆಸರುಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಏರ್ ಫೈಬರ್ ಎರಡು ವೇಗದ ಸೇವೆಯನ್ನು ಒದಗಿಸಲಿದೆ, 30 ಎಂಬಿಪಿಎಸ್ ಮತ್ತು 100 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ. ಕಂಪನಿಯು 30 ಎಂಬಿಪಿಎಸ್ ವೇಗದ ಇಂಟರ್ನೆಟ್‌ಅನ್ನು 599 ರೂ.ಗಳಿಗೆ. 100 ಎಂಬಿಪಿಎಸ್ ವೇಗದ ಇಂಟರ್ನೆಟ್ ಅನ್ನು 899 ರೂ.ಗಳಿಗೆ ನೀಡುತ್ತಿದೆ. ಈ ಎರಡೂ ಪ್ಲಾನ್‌ಗಳಿಂದ ಗ್ರಾಹಕರಿಗೆ 550ಗೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು ಮತ್ತು 14 ಮನರಂಜನಾ ಆಪ್‌ಗಳು ದೊರೆಯಲಿವೆ.
ಏರ್ ಫೈಬರ್ ಯೋಜನೆಯಡಿಯಲ್ಲಿ, ಕಂಪನಿಯು 100 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೇವೆಯನ್ನು 1199 ರೂಗಳಿಗೆ ಪರಿಚಯಿಸಿದೆ. ಇದರಲ್ಲಿ ಮೇಲೆ ಹೇಳಿದ ಚಾನಲ್‌ಗಳು ಮತ್ತು ಅಪ್ಲಿಕೇಶನ್‌ಗಳ ಜೊತೆಗೆ, ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಸಹ ಲಭ್ಯವಿರುತ್ತವೆ.
ಹೆಚ್ಚಿನ ಇಂಟರ್ನೆಟ್ ವೇಗವನ್ನು ಬಯಸುವ ಗ್ರಾಹಕರು ‘ಏರ್ ಫೈಬರ್ ಮ್ಯಾಕ್ಸ್’ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಕಂಪನಿಯು ಮಾರುಕಟ್ಟೆಯಲ್ಲಿ 300 ಎಂಬಿಪಿಎಸ್ ನಿಂದ 1000 ಎಂಬಿಪಿಎಸ್ ವರೆಗೆ ಅಂದರೆ 1 ಜಿಬಿಪಿಎಸ್ ವರೆಗಿನ ಮೂರು ಯೋಜನೆಗಳನ್ನು ಪರಿಚಯಿಸಿದೆ. 300 ಎಂಬಿಪಿಎಸ್ ವೇಗದ ಇಂಟರ್ನೆಟ್, ರೂ 1499 ಕ್ಕೆ ಲಭ್ಯವಿರುತ್ತದೆ. ಗ್ರಾಹಕರು 2499 ರೂ.ಗೆ 500 ಎಂಬಿಪಿಎಸ್ ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದು. ಅಲ್ಲದೆ ಗ್ರಾಹಕರು 1 ಜಿಬಿಪಿಎಸ್ ವೇಗದ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕೆ 3999 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. 550 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು, 14 ಮನರಂಜನಾ ಅಪ್ಲಿಕೇಶನ್‌ಗಳು ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಈ ಪ್ಲಾನ್‌ನಲ್ಲಿ ದೊರೆಯುತ್ತವೆ.
ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 15 ಲಕ್ಷ ಕಿ.ಮೀ.ಗಳಷ್ಟುವ್ಯಾಪಿಸಿದೆ. ಕಂಪನಿಯು ತನ್ನ ಜಿಯೋ ಫೈಬರ್ ಸೇವೆಯೊಂದಿಗೆ ಇದುವರೆಗೆ 1 ಕೋಟಿಗೂ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಿದೆ. ಆದರೆ ಇನ್ನೂ ಕೋಟಿಗಟ್ಟಲೆ ಮನೆಗಳನ್ನು ಬೆಸೆಯಬೇಕಿದ್ದು, ಅಲ್ಲಿ ಕೇಬಲ್ ಅಥವಾ ಫೈಬರ್ ಸಂಪರ್ಕವನ್ನು ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಜಿಯೋ ಏರ್ ಫೈಬರ್ ಅಂತಹ ಕಟ್ಟಡ ಕಡೆಯ ಬಿಂದುವನ್ನು ಬೆಸೆಯುವ ಕಷ್ಟವನ್ನು ಕಡಿಮೆ ಮಾಡುತ್ತದೆ. ಜಿಯೋ ಏರ್ ಫೈಬರ್ ಮೂಲಕ 20 ಕೋಟಿ ಮನೆಗಳು ಮತ್ತು ಪರಿಸರಗಳನ್ನು ತಲುಪಲು ಕಂಪನಿಯು ಆಶಿಸುತ್ತಿದೆ.
ಜಿಯೋ ಏರ್ ಫೈಬರ್ ಬಿಡುಗಡೆ ಕುರಿತು ಮಾತನಾಡಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾದ ಆಕಾಶ್ ಅಂಬಾನಿ, “ನಮ್ಮ ಫೈಬರ್-ಟು-ದಿ-ಹೋಮ್ ಸೇವೆ, ಜಿಯೋ ಫೈಬರ್, 1 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಜನರು ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮನೆಗಳು ಮತ್ತು ಸಣ್ಣ ವಹಿವಾಟುಗಳನ್ನು ಬೆಸೆಯುವುದು ಬಾಕಿ ಇದೆ.
ಈ ಸುದ್ದಿಯನ್ನೂ ಓದಿ: Reliance Jio: ದೇಶದಾದ್ಯಂತ 5ಜಿ ಜಾರಿಯಲ್ಲಿ ಅವಧಿಗೂ ಮುಂಚೆ ಗುರಿ ತಲುಪಿದ ರಿಲಯನ್ಸ್ ಜಿಯೋ
ಜಿಯೋ ಏರ್ ಫೈಬರ್‌ನೊಂದಿಗೆ, ನಾವು ನಮ್ಮ ದೇಶದ ಪ್ರತಿ ಮನೆಯನ್ನು ಅದೇ ಗುಣಮಟ್ಟದ ಸೇವೆಯೊಂದಿಗೆ ವೇಗವಾಗಿ ವಿಸ್ತರಿಸಲಿದ್ದೇವೆ. ಶಿಕ್ಷಣ, ಆರೋಗ್ಯ, ಕಣ್ಗಾವಲು ಮತ್ತು ಸ್ಮಾರ್ಟ್ ಹೋಮ್ ಸೇವೆಗಳಲ್ಲಿ ತನ್ನದೇ ಆದ ರೀತಿಯಲ್ಲಿ ಪರಿಹಾರಗಳ ಕಲ್ಪಿಸುವ ಮೂಲಕ ಲಕ್ಷಾಂತರ ಮನೆಗಳಿಗೆ ವಿಶ್ವ ದರ್ಜೆಯ ಡಿಜಿಟಲ್ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಜಿಯೋ ಏರ್ ಫೈಬರ್ ಒದಗಿಸುತ್ತಿದೆ” ಎಂದು ತಿಳಿಸಿದರು.
ಜಿಯೋ ಏರ್ ಫೈಬರ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಬುಕ್ ಮಾಡಬಹುದು. 60008-60008 ಗೆ ಮಿಸ್ ಕಾಲ್ ನೀಡುವ ಮೂಲಕ ಅಥವಾ www.jio.com ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು. ಜಿಯೋ ಏರ್ ಫೈಬರ್ ಅನ್ನು ಜಿಯೋ ಸ್ಟೋರ್‌ಗಳಿಂದಲೂ ಖರೀದಿಸಬಹುದು.