Jio AirFiber: ಬೆಂಗಳೂರು ಸೇರಿ 8 ಮೆಟ್ರೋ‌ಗಳಲ್ಲಿ ಜಿಯೋ ಏರ್‌ ಫೈಬರ್ ಚಾಲನೆ, ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್‌! Vistara News
Connect with us

ಗ್ಯಾಜೆಟ್ಸ್

Jio AirFiber: ಬೆಂಗಳೂರು ಸೇರಿ 8 ಮೆಟ್ರೋ‌ಗಳಲ್ಲಿ ಜಿಯೋ ಏರ್‌ ಫೈಬರ್ ಚಾಲನೆ, ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್‌!

Jio Air Fiber: ಬೆಂಗಳೂರು ಮಾತ್ರವಲ್ಲದೇ, ದೆಹಲಿ, ಮುಂಬೈ, ಹೈದರಾಬಾದ್‌, ಕೋಲ್ಕೊತಾ, ಅಹಮದಾಬಾದ್‌, ಚೆನ್ನೈ, ಪುಣೆ ನಗರಗಳಲ್ಲೂ ಜಿಯೋ ಏರ್‌ ಫೈಬರ್ ಸೇವೆ ಆರಂಭಿಸಿದೆ.

VISTARANEWS.COM


on

Jio Air Fiber
Koo

ನವದೆಹಲಿ: ಗಣೇಶ ಚತುರ್ಥಿಯ (Ganesh Chaturthi 2023) ವಿಶೇಷ ಸಂದರ್ಭದಲ್ಲಿ ಮುಕೇಶ್‌ ಅಂಬಾನಿ (Mukesh Ambani) ಅವರ ಒಡೆತನದ ರಿಲಯನ್ಸ್ ಜಿಯೋ(Reliance Jio), ದೇಶದ 8 ಮೆಟ್ರೋ ನಗರಗಳಲ್ಲಿ ಜಿಯೋ ಏರ್‍ ಫೈಬರ್‌ (Jio AirFiber) ಸೇವೆಗೆ ಚಾಲೆ ನೀಡಿದೆ. ಜಿಯೋ ಏರ್‍ ಫೈಬರ್‍ ಒಂದು ಇಂಟಿಗ್ರೇಟೆಡ್‌ ನೇರ ಪರಿಹಾರವಾಗಿದ್ದು, ಹೋಮ್‌ ಎಂಟರ್‌ಟೈನ್ಮೆಂಟ್ , ಸ್ಮಾರ್ಟ್‌ ಹೋಮ್‌ ಮತ್ತು ಅತಿ ವೇಗದ ಬ್ರಾಡ್‌ಬ್ಯ್ರಾಂಡ್‌ ಸೇವೆಯನ್ನು ಪೂರೈಸಲಿದೆ. ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕೊತಾ, ಅಹಮದಾಬಾದ್, ಬೆಂಗಳೂರು(Bengaluru), ಚೆನ್ನೈ ಮತ್ತು ಪುಣೆ ಮೆಟ್ರೋ ನಗರಗಳಲ್ಲಿ ಜಿಯೋ ಏರ್‍ ಫೈಬರ್‍ ಸೇವೆಗೆ ಚಾಲನೆ ನೀಡಲಾಗಿದೆ.

ಏರ್ ಫೈಬರ್ ಮತ್ತು ಏರ್ ಫೈಬರ್ ಮ್ಯಾಕ್ಸ್ ಹೆಸರುಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗ್ರಾಹಕರಿಗೆ ಏರ್‍ ಫೈಬರ್‍ ಎರಡು ವೇಗದ ಸೇವೆಯನ್ನು ಒದಗಿಸಲಿದೆ, 30 ಎಂಬಿಪಿಎಸ್‌ ಮತ್ತು 100 ಎಂಬಿಪಿಎಸ್‌ ವೇಗದಲ್ಲಿ ಇಂಟರ್ನೆಟ್‌ ಲಭ್ಯವಾಗಲಿದೆ. ಕಂಪನಿಯು 30 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ಅನ್ನು 599 ರೂ.ಗಳಿಗೆ. 100 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಅನ್ನು 899 ರೂ.ಗಳಿಗೆ ನೀಡುತ್ತಿದೆ. ಈ ಎರಡೂ ಪ್ಲಾನ್‌ಗಳಿಂದ ಗ್ರಾಹಕರಿಗೆ 550ಗೂ ಹೆಚ್ಚು ಡಿಜಿಟಲ್‌ ಚಾನೆಲ್‌ಗಳು ಮತ್ತು 14 ಮನರಂಜನಾ ಆಪ್‌ಗಳು ದೊರೆಯಲಿವೆ.

ಏರ್ ಫೈಬರ್ ಯೋಜನೆಯಡಿಯಲ್ಲಿ, ಕಂಪನಿಯು 100 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಸೇವೆಯನ್ನು 1199 ರೂಗಳಿಗೆ ಪರಿಚಯಿಸಿದೆ. ಇದರಲ್ಲಿ ಮೇಲೆ ಹೇಳಿದ ಚಾನಲ್‌ಗಳು ಮತ್ತು ಅಪ್ಲಿಕೇಶನ್‌ಗಳ ಜೊತೆಗೆ, ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಸಹ ಲಭ್ಯವಿರುತ್ತವೆ.

ಹೆಚ್ಚಿನ ಇಂಟರ್ನೆಟ್ ವೇಗವನ್ನು ಬಯಸುವ ಗ್ರಾಹಕರು ‘ಏರ್ ಫೈಬರ್ ಮ್ಯಾಕ್ಸ್’ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಕಂಪನಿಯು ಮಾರುಕಟ್ಟೆಯಲ್ಲಿ 300 ಎಂಬಿಪಿಎಸ್‌ ನಿಂದ 1000 ಎಂಬಿಪಿಎಸ್‌ ವರೆಗೆ ಅಂದರೆ 1 ಜಿಬಿಪಿಎಸ್‌ ವರೆಗಿನ ಮೂರು ಯೋಜನೆಗಳನ್ನು ಪರಿಚಯಿಸಿದೆ. 300 ಎಂಬಿಪಿಎಸ್‌ ವೇಗದ ಇಂಟರ್ನೆಟ್‌, ರೂ 1499 ಕ್ಕೆ ಲಭ್ಯವಿರುತ್ತದೆ. ಗ್ರಾಹಕರು 2499 ರೂ.ಗೆ 500 ಎಂಬಿಪಿಎಸ್‌ ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದು. ಅಲ್ಲದೆ ಗ್ರಾಹಕರು 1 ಜಿಬಿಪಿಎಸ್‌ ವೇಗದ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದಕ್ಕೆ 3999 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. 550 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು, 14 ಮನರಂಜನಾ ಅಪ್ಲಿಕೇಶನ್‌ಗಳು ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಅಪ್ಲಿಕೇಶನ್‌ಗಳು ಈ ಪ್ಲಾನ್‌ನಲ್ಲಿ ದೊರೆಯುತ್ತವೆ.

ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 15 ಲಕ್ಷ ಕಿ.ಮೀ.ಗಳಷ್ಟುವ್ಯಾಪಿಸಿದೆ. ಕಂಪನಿಯು ತನ್ನ ಜಿಯೋ ಫೈಬರ್ ಸೇವೆಯೊಂದಿಗೆ ಇದುವರೆಗೆ 1 ಕೋಟಿಗೂ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಿದೆ. ಆದರೆ ಇನ್ನೂ ಕೋಟಿಗಟ್ಟಲೆ ಮನೆಗಳನ್ನು ಬೆಸೆಯಬೇಕಿದ್ದು, ಅಲ್ಲಿ ಕೇಬಲ್‌ ಅಥವಾ ಫೈಬರ್ ಸಂಪರ್ಕವನ್ನು ಒದಗಿಸುವುದು ತುಂಬಾ ಕಷ್ಟಕರವಾಗಿದೆ. ಜಿಯೋ ಏರ್ ಫೈಬರ್ ಅಂತಹ ಕಟ್ಟಡ ಕಡೆಯ ಬಿಂದುವನ್ನು ಬೆಸೆಯುವ ಕಷ್ಟವನ್ನು ಕಡಿಮೆ ಮಾಡುತ್ತದೆ. ಜಿಯೋ ಏರ್ ಫೈಬರ್ ಮೂಲಕ 20 ಕೋಟಿ ಮನೆಗಳು ಮತ್ತು ಪರಿಸರಗಳನ್ನು ತಲುಪಲು ಕಂಪನಿಯು ಆಶಿಸುತ್ತಿದೆ.

ಜಿಯೋ ಏರ್ ಫೈಬರ್ ಬಿಡುಗಡೆ ಕುರಿತು ಮಾತನಾಡಿದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾದ ಆಕಾಶ್ ಅಂಬಾನಿ, “ನಮ್ಮ ಫೈಬರ್-ಟು-ದಿ-ಹೋಮ್ ಸೇವೆ, ಜಿಯೋ ಫೈಬರ್, 1 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಜನರು ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮನೆಗಳು ಮತ್ತು ಸಣ್ಣ ವಹಿವಾಟುಗಳನ್ನು ಬೆಸೆಯುವುದು ಬಾಕಿ ಇದೆ.

ಈ ಸುದ್ದಿಯನ್ನೂ ಓದಿ: Reliance Jio: ದೇಶದಾದ್ಯಂತ 5ಜಿ ಜಾರಿಯಲ್ಲಿ ಅವಧಿಗೂ ಮುಂಚೆ ಗುರಿ ತಲುಪಿದ ರಿಲಯನ್ಸ್ ಜಿಯೋ

ಜಿಯೋ ಏರ್ ಫೈಬರ್‌ನೊಂದಿಗೆ, ನಾವು ನಮ್ಮ ದೇಶದ ಪ್ರತಿ ಮನೆಯನ್ನು ಅದೇ ಗುಣಮಟ್ಟದ ಸೇವೆಯೊಂದಿಗೆ ವೇಗವಾಗಿ ವಿಸ್ತರಿಸಲಿದ್ದೇವೆ. ಶಿಕ್ಷಣ, ಆರೋಗ್ಯ, ಕಣ್ಗಾವಲು ಮತ್ತು ಸ್ಮಾರ್ಟ್ ಹೋಮ್‌ ಸೇವೆಗಳಲ್ಲಿ ತನ್ನದೇ ಆದ ರೀತಿಯಲ್ಲಿ ಪರಿಹಾರಗಳ ಕಲ್ಪಿಸುವ ಮೂಲಕ ಲಕ್ಷಾಂತರ ಮನೆಗಳಿಗೆ ವಿಶ್ವ ದರ್ಜೆಯ ಡಿಜಿಟಲ್ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಜಿಯೋ ಏರ್ ಫೈಬರ್ ಒದಗಿಸುತ್ತಿದೆ” ಎಂದು ತಿಳಿಸಿದರು.

ಜಿಯೋ ಏರ್ ಫೈಬರ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಬುಕ್ ಮಾಡಬಹುದು. 60008-60008 ಗೆ ಮಿಸ್‌ ಕಾಲ್ ನೀಡುವ ಮೂಲಕ ಅಥವಾ www.jio.com ಗೆ ಭೇಟಿ ನೀಡುವ ಮೂಲಕ ಬುಕಿಂಗ್ ಮಾಡಬಹುದು. ಜಿಯೋ ಏರ್ ಫೈಬರ್ ಅನ್ನು ಜಿಯೋ ಸ್ಟೋರ್‌ಗಳಿಂದಲೂ ಖರೀದಿಸಬಹುದು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

ChatGPT: ಚಾಟ್‌ಜಿಪಿಟಿ ಜತೆ ನೀವಿನ್ನು ಮಾತನಾಡಬಹುದು! ಹೊಸ ಫೀಚರ್ ಪರಿಚಯಿಸಿದ ಓಪನ್ಎಐ

ChatGPT: ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಚಾಟ್‌ಜಿಪಿಟಿ ಹೊಸ ಸಾಧ್ಯತೆಯನ್ನು ಕಂಡುಕೊಂಡಿದೆ. ಬಳಕೆದಾರರು ಈಗ ಚಾಟ್‌ಜಿಪಿಟಿಯೊಂದಿಗೆ ಧ್ವನಿ ಮೂಲಕ ಸಂಭಾಷಣೆಯನ್ನು ನಡೆಸಬಹುದು.

VISTARANEWS.COM


on

Edited by

OpenAI introduced new feature to ChatGPT
Koo

ನವದೆಹಲಿ: ಮೈಕ್ರೋಸಾಫ್ಟ್ (Microsoft) ಬೆಂಬಲಿತ ಓಪನ್ಎಐ (OpenAI) ತನ್ನ ಜನರೇಟಿವ್ ಕೃತಕ ಬುದ್ಧಿಮತ್ತೆ (Generative AI) ಆಧರಿತ ಚಾಟ್‌ಬಾಟ್ ಚಾಟ್‌ಜಿಪಿಟಿಗೆ (ChatGPT) ಹೊಸ ಫೀಚರ್ ಪರಿಚಯಿಸಿದೆ. ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳನ್ನು ಪಡೆದುಕೊಳ್ಳುತ್ತಿರುವ ಚಾಟ್ ಜಿಪಿಟಿ, ಬಳಕೆದಾರರಿಗೆ ಐದು ವಿಭಿನ್ನ ಧ್ವನಿಗಳಲ್ಲಿ ಉತ್ತರಗಳನ್ನು ನೀಡಲು ಮತ್ತು ಅವರು ಸಲ್ಲಿಸುವ ಚಿತ್ರಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ ಎಂದು ಕಂಪನಿಯು ಹೇಳಿದೆ. ಈ ಕುರಿತು ಎಕ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿರುವ ಓಪನ್ಎಐ, ಚಾಟ್‌ಜಿಪಿಟಿ ಈಗ ನೋಡುತ್ತದೆ, ಕೇಳುತ್ತದೆ ಮತ್ತು ಮಾತನಾಡುತ್ತದೆ. ಮುಂದಿನ ಎರಡು ವಾರಗಳಲ್ಲಿ ಪ್ಲಸ್ ಬಳಕೆದಾರರು ಚಾಟ್‌ಜಿಪಿಟಿ ಜತೆ ಇಮೇಜ್ ಸಂಭಾಷಣೆ ಜತೆಗೆ ಧ್ವನಿ ಸಂಭಾಷಣೆ ಕೂಡ ನಡೆಸಬಹುದು ಎಂದು ಹೇಳಿದೆ.

ಧ್ವನಿ ಮತ್ತು ಇಮೇಜ್ ಸಾಮರ್ಥ್ಯಗಳು ನಿಮಗೆ ಧ್ವನಿ ಸಂಭಾಷಣೆ ನಡೆಸಲು ಅಥವಾ ಚಾಟ್‌ಜಿಪಿಟಿಗೆ ನೀವು ಏನು ಮಾತನಾಡುತ್ತಿರುವಿರಿ ಎಂಬುದನ್ನು ತೋರಿಸಲು ಅನುಮತಿಸುವ ಮೂಲಕ ಹೊಸ, ಹೆಚ್ಚು ಅರ್ಥಗರ್ಭಿತ ಇಂಟರ್ಫೇಸ್ ಅನ್ನು ಒದಗಿಸುತ್ತವೆ ಎಂದು ಸ್ಯಾಮ್ ಆಲ್ಟ್‌ಮ್ಯಾನ್ ನೇತೃತ್ವದ ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಈ ಸುದ್ದಿಯನ್ನೂ ಓದಿ: ChatGPT: 3 ವರ್ಷವಾದ್ರೂ 17 ವೈದ್ಯರಿಗೆ ಗೊತ್ತಾಗದ ಬಾಲಕನ ಹಲ್ಲು ನೋವಿನ ಕಾರಣ ಪತ್ತೆ ಹಚ್ಚಿದ ಚಾಟ್‌ಜಿಪಿಟಿ!

ಐದು ವಿಭಿನ್ನ ಧ್ವನಿಗಳಲ್ಲಿ ಚಾಟ್‌ಜಾಪಿಟಿಯು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಧ್ವನಿಯನ್ನು ಆಯ್ಕೆ ಮಾಡಬಹುದಾಗಿದೆ. ಪ್ರತಿ ವಿಭಿನ್ನ ಧ್ವನಿಯನ್ನು ರಚಿಸಲು ವೃತ್ತಿಪರ ಧ್ವನಿ ನಟರ ಸಹಾಯವನ್ನು ಪಡೆದಿದೆ. ಹಾಗೆಯೇ ಮಾತನಾಡುವ ಪದಗಳನ್ನು ಪಠ್ಯಕ್ಕೆ ನಕಲಿಸಲು ಕಂಪನಿಯ ಸ್ವಾಮ್ಯದ ವಿಸ್ಪರ್ ಸ್ಪೀಚ್ ಗುರುತಿಸುವಿಕೆ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಓಪನ್ ಎಐ ಹೇಳಿದೆ.

ಚಾಟ್‌ಜಿಪಿಟಿಯ ಹೊಸ ಧ್ವನಿ ಸಾಮರ್ಥ್ಯಗಳು ಹೊಸ ಪಠ್ಯದಿಂದ ಭಾಷಣದ ಮಾದರಿಯಿಂದ ಚಾಲಿತವಾಗಿದೆ. ಓಪನ್ಎಐ ಹೇಳಿಕೊಳ್ಳುವ ಪ್ರಕಾರ, ಪಠ್ಯ ಮತ್ತು ಕೆಲವು ಸೆಕೆಂಡುಗಳ ಮಾತಿನ ಮಾದರಿಗಳಿಂದ ಮಾನವ ತರಹದ ಆಡಿಯೊವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ತಾಂತ್ರಿಕ ವ್ಯವಸ್ಥೆಯು ಇದು ಅನೇಕ “ಸೃಜನಶೀಲ ಮತ್ತು ಪ್ರವೇಶಿಸುವಿಕೆ-ಕೇಂದ್ರಿತ ಅಪ್ಲಿಕೇಶನ್‌ಗಳಿಗೆ” ಬಾಗಿಲು ತೆರೆಯಲಿದೆ ಎಂದು ಓಪನ್ಎಐ ಅಭಿಪ್ರಾಯಪಟ್ಟಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

WhatsApp update: ಈ ಹಳೇ ಫೋನ್‌ಗಳಲ್ಲಿ ಇನ್ನು ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನ್‌ ಕೂಡ ಇದೆಯಾ ನೋಡಿಕೊಳ್ಳಿ

ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.

VISTARANEWS.COM


on

Edited by

WhatsApp
Koo

ಹೊಸದಿಲ್ಲಿ: ಹಲವಾರು ಹಳೆಯ ಆಂಡ್ರಾಯ್ಡ್‌ (Android) ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಯಾಪ್‌ ಸದ್ಯದಲ್ಲಿಯೇ ಕಾರ್ಯನಿರ್ವಹಣೆ ನಿಲ್ಲಿಸಲಿದೆ.

ಇತ್ತೀಚಿನ ಪ್ರಕಟಣೆಯಲ್ಲಿ WhatsApp ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ ಆವೃತ್ತಿ 4.1 (Android OS version 4.1) ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯಾಚರಣೆ ನಿಲ್ಲಿಸುವುದಾಗಿ ತಿಳಿಸಿದೆ.

ಬಳಕೆದಾರರ ಅನುಭವ, ಖಾಸಗಿತನ ಮತ್ತು ಸುರಕ್ಷತೆಯನ್ನು ಸುಧಾರಿಸಲು WhatsApp ನಿಯಮಿತವಾಗಿ ತನ್ನ ಆಫ್‌ ಅನ್ನು ಹೊಸ ಫೀಚರ್‌ಗಳು ಮತ್ತು ಸೆಕ್ಯುರಿಟಿ ವ್ಯವಸ್ಥೆಗಳೊಂದಿಗೆ ನವೀಕರಿಸುತ್ತದೆ. Android, iOS ಮತ್ತು ವೆಬ್ ಸೇರಿದಂತೆ ಎಲ್ಲಾ WhatsApp ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಅಪ್‌ಡೇಟ್‌ಗಳನ್ನು ಸ್ವೀಕರಿಸುತ್ತವೆ. ಇದರೊಂದಿಗೆ, ಹಳೆಯ ಕೆಲವು ಆಪರೇಟಿಂಗ್ ಸಿಸ್ಟಮ್‌ಗಳಿಗೆ ಸಪೋರ್ಟ್‌ ತೆಗೆದುಹಾಕುತ್ತದೆ.

“ಏನನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಲು,

ʼʼಪ್ರತಿ ವರ್ಷ ನಾವು ಇತರ ಟೆಕ್‌ ಕಂಪನಿಗಳಂತೆ, ಯಾವ ಸಾಧನಗಳು ಮತ್ತು ಸಾಫ್ಟ್‌ವೇರ್ ಹಳೆಯದು ಮತ್ತು ಅವುಗಳನ್ನು ಎಷ್ಟು ಜನ ಇನ್ನೂ ಬಳಸುತ್ತಿದ್ದಾರೆ ಎಂಬುದನ್ನು ನೋಡುತ್ತೇವೆ. ಈ ಸಾಧನಗಳು ಇತ್ತೀಚಿನ ಸೆಕ್ಯುರಿಟಿ ವ್ಯವಸ್ಥೆಗಳನ್ನು ಹೊಂದಿಲ್ಲ. ಅಥವಾ ಅವುಗಳಲ್ಲಿ ಇರಬಹುದು ವಾಟ್ಸ್ಯಾಪ್ ನಡೆಸಲು ಅಗತ್ಯವಿರುವ ಕ್ರಿಯಾಶೀಲತೆಯ ಕೊರತೆಯಿದೆ” ಎಂದು WhatsApp ತಿಳಿಸಿದೆ.

Android OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಕೆಲಗೆ ನೀಡಲಾಗಿದೆ. ಇವುಗಳಲ್ಲಿ ಅಕ್ಟೋಬರ್ 24ರ ನಂತರ ವಾಟ್ಸ್ಯಾಪ್‌ ಸಿಗುವುದಿಲ್ಲ.

ನೆಕ್ಸಸ್‌ 7 (ಆಂಡ್ರಾಯ್ಡ್‌ 4.2ಗೆ ಅಪ್‌ಗ್ರೇಡ್ ಮಾಡಬಹುದು)
ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2
ಎಚ್‌ಟಿಸಿ ಒನ್‌
ಸೋನಿ ಎಕ್ಸ್‌ಪೀರಿಯಾ ಝಡ್
ಎಲ್ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್2
ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೆಕ್ಸಸ್‌
ಎಚ್‌ಟಿಸಿ ಸೆನ್ಸೇಶನ್
ಮೊಟರೋಲಾ ಡ್ರಾಯ್ಡ್‌ ರೇಝರ್‌
ಸೋನಿ ಎಕ್ಸ್‌ಪೀರಿಯಾ ಎಸ್2
ಮೋಟರೋಲಾ ಜೂಮ್‌
ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಟ್ಯಾಬ್‌ 10.1
ಏಸಸ್‌ ಈ ಪ್ಯಾಡ್ ಟ್ರಾನ್ಸ್ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ ಎ5003
ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್
ಎಚ್‌ಟಿಸಿ ಡಿಸೈರ್ ಎಚ್‌ಡಿ
ಎಲ್‌ಜಿ ಒಪ್ಟಿಮಸ್‌ 2ಎಕ್ಸ್‌
ಸೋನಿ ಎರಿಕ್ಸನ್‌ ಎಕ್ಸ್‌ಪೀರಿಯಾ ಆರ್ಕ್‌3

ಈ ಪಟ್ಟಿಯಲ್ಲಿರುವ ಹೆಚ್ಚಿನ ಫೋನ್‌ಗಳು ಇಂದು ಹೆಚ್ಚಿನ ಜನರು ಬಳಸದ ಹಳೆಯ ಮಾದರಿಗಳಾಗಿವೆ. ಆದಾಗ್ಯೂ ನೀವು ಇನ್ನೂ ಈ ಫೋನ್‌ಗಳಲ್ಲಿ ಒಂದನ್ನು ಹೊಂದಿದ್ದರೆ, ನೀವು ಹೊಸ ಸಾಧನಕ್ಕೆ ಅಪ್‌ಗ್ರೇಡ್ ಮಾಡಬೇಕಾದೀತು. ಏಕೆಂದರೆ ವಾಟ್ಸ್ಯಾಪ್ ಮಾತ್ರವಲ್ಲದೆ ಇತರ ಹಲವು ಆ್ಯಪ್‌ಗಳು ಕೂಡ ಈ ಹಳತಾದ ಆಪರೇಟಿಂಗ್ ಸಿಸ್ಟಂಗಳಿಗೆ ತಮ್ಮ ಬೆಂಬಲವನ್ನು ನಿಲ್ಲಿಸುತ್ತಿವೆ. ಜತೆಗೆ ಸೆಕ್ಯುರಿಟಿ ಅಪ್‌ಡೇಟ್‌ ಕೂಡ ಇಲ್ಲದ್ದರಿಂದ ನಿಮ್ಮ ಫೋನ್ ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದು.

ನಿಮ್ಮ ಸ್ಮಾರ್ಟ್‌ಫೋನ್ Android OS ಆವೃತ್ತಿ 4.1 ಅಥವಾ ಅದಕ್ಕಿಂತ ಹಳೆಯದಾ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಸಾಧನದಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ಪರಿಶೀಲಿಸಬಹುದು. ಸೆಟ್ಟಿಂಗ್‌ಗಳು > ಅಬೌಟ್‌ ಫೋನ್ > ಸಾಫ್ಟ್‌ವೇರ್ ಮಾಹಿತಿಗೆ ಹೋಗಿ. ಅದರಲ್ಲಿ ನಿಮ್ಮ Android ಆವೃತ್ತಿ ನಮೂದಿಸಿರುತ್ತದೆ.

WhatsApp ಕಾರ್ಯಾಚರಣೆ ನಿಲ್ಲಿಸಿದರೆ?

ವಾಟ್ಸ್ಯಾಪ್ ಬಳಕೆದಾರರಿಗೆ ಮುಂಚಿತವಾಗಿ ತಿಳಿಸುತ್ತದೆ ಮತ್ತು ಅಪ್‌ಗ್ರೇಡ್ ಮಾಡಲು ಹಲವು ಬಾರಿ ನೆನಪಿಸುತ್ತದೆ. ಗ್ಯಾಜೆಟ್‌ ಅನ್ನು ನವೀಕರಿಸದಿದ್ದರೆ WhatsApp ಮುಂದೆ ಆ ಸಾಧನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಬಳಕೆದಾರರು ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ.

WhatsApp ಯಾವುದರಲ್ಲೆಲ್ಲಾ ಲಭ್ಯ?

ಅಕ್ಟೋಬರ್ 24ರ ನಂತರ WhatsApp ಅನ್ನು ಬೆಂಬಲಿಸುವ ಸಾಫ್ಟ್‌ವೇರ್‌ ಇರುವ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.

  • Android OS ಆವೃತ್ತಿ 5.0 ಮತ್ತು ಹೊಸದು
  • ಐಒಎಸ್ 12 ಮತ್ತು ಹೊಸದರಲ್ಲಿ ಚಾಲನೆಯಲ್ಲಿರುವ ಐಫೋನ್
  • JioPhone ಮತ್ತು JioPhone 2 ಸೇರಿದಂತೆ KaiOS 2.5.0 ಮತ್ತು ಹೊಸದು
Continue Reading

ಗ್ಯಾಜೆಟ್ಸ್

Reliance Jio: ಅಬ್ಬಬ್ಬಾ ಲಾಟರಿ..! ಐಫೋನ್ 15 ಖರೀದಿಸಿದರೆ 6 ತಿಂಗಳು ರಿಲಯನ್ಸ್ ಜಿಯೋ ಫ್ರೀ ಪ್ಲಾನ್

Reliance Jio: ಹೊಸದಾಗಿ ಲಾಂಚ್ ಆಗಿರುವ ಆ್ಯಪಲ್ ಐಫೋನ್ 15 ಖರೀದಿಯ ಮೇಲೆ ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಣೆ ಮಾಡಿದೆ.

VISTARANEWS.COM


on

Edited by

Reliance Jio offering free plan for 6 months on purchase of iPhone 15 through reliance
Koo

ಮುಂಬೈ, ಮಹಾರಾಷ್ಟ್ರ: ರಿಲಯನ್ಸ್ ರಿಟೇಲ್ ಸ್ಟೋರ್‌ಗಳು (Reliance Retail), ರಿಲಯನ್ಸ್ ಡಿಜಿಟಲ್ ಆನ್‌ಲೈನ್ (Reliance Digital Online) ಅಥವಾ ಜಿಯೋ‌ಮಾರ್ಟ್‌ನಲ್ಲಿ (Jio Mart) ಜಿಯೋ ಐಫೋನ್ 15 (iPhone 15) ಖರೀದಿ ಮಾಡಿದರೆ 2,394 ರೂ. ಮೌಲ್ಯದ ಆರು ತಿಂಗಳ ಪ್ಲಾನ್ (Reliance Jio) ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ.ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.

ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಸುದ್ದಿಯನ್ನೂ ಓದಿ: Apple iPhone :‌ ಭಾರತದಲ್ಲಿ ಐಫೋನ್‌ 3ಜಿಯಿಂದ ಮೊದಲ ರಿಟೇಲ್‌ ಸ್ಟೋರ್ ತನಕ‌ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?

ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.

ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಗ್ಯಾಜೆಟ್ಸ್

YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್

YouTube: ಮೇಡ್ ಆನ್ ಯುಟ್ಯೂಬ್ ಇವೆಂಟ್‌ನಲ್ಲಿ ಕಂಪನಿಯು ಹೊಸ ಎಡಿಟಿಂಗ್ ಆ್ಯಪ್ ಲಾಂಚ್ ಮಾಡಿದೆ.

VISTARANEWS.COM


on

Edited by

YouTube announce new app called youtube create
Koo

ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ವೇದಿಕೆಯಾಗಿರುವ ಯುಟ್ಯೂಬ್ (YouTube) ಹೊಸ ವಿಡಿಯೋ ಎಡಿಟಿಂಗ್ ಆ್ಯಪ್ (Editing App) ಯುಟ್ಯೂಬ್ ಕ್ರಿಯೇಟ್ (YouTube Create) ಘೋಷಿಸಿದೆ. ಈ ಮೂಲಕ ಬಳಕೆದಾರರಿಗೆ ವಿಡಿಯೋ ಕ್ರಿಯೇಟ್ ಮತ್ತು ಷೇರ್ ಮಾಡಲು ಅನುಮತಿಸಲಿದೆ. ಗುರುವಾರ ನಡೆದ ಮೇಡ್ ಆನ್ ಯುಟ್ಯೂಬ್‌ ಇವೆಂಟ್‌ನಲ್ಲಿ ಈ ಹೊಸ ಆ್ಯಪ್ ಕುರಿತು ಘೋಷಣೆ ಮಾಡಲಾಗಿದೆ. ಸದ್ಯ ಈ ಆ್ಯಪ್ ಬೀಟಾ ವರ್ಷನ್‌ನಲ್ಲಿದ್ದು, ಭಾರತ, ಅಮೆರಿಕ, ಜಮರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಇಂಡೋನೇಷ್ಯಾ, ಕೋರಿಯಾ, ಸಿಂಗಾಪುರ್‌ ಮಾರುಕಗಳಲ್ಲಿ ಲಭ್ಯವಾಗಲಿದೆ. 2024ರಲ್ಲಿ ಐಒಎಸ್‌ಗೆ ಅಪ್‌ಡೇಟ್ ದೊರೆಯಲಿದೆ.

ವಿಡಿಯೋಗಳ ಉತ್ಪಾದನಾ ಪ್ರಕ್ರಿಯೆಯು ಕಷ್ಟಕರವಾಗಿರುತ್ತದೆ ಎಂದು ನಮಗೆ ತಿಳಿದಿದೆ. ಇದರಿಂದಾಗಿ ಮೊದಲ ಬಾರಿಗೆ ವಿಡಿಯೋ ಮಾಡುವವರು ತಮ್ಮ ಮೊದಲ ವೀಡಿಯೊವನ್ನು ಅಪ್‌ಲೋಡ್ ಮಾಡುವುದಕ್ಕೆ ತುಂಬ ಕಷ್ಟಪಡುತ್ತಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಯುಟ್ಯೂಬ್‌ನಲ್ಲಿ ವಿಡಿಯೋಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸಲು ನಾವು ಯುಟ್ಯೂಬ್ ಕ್ರಿಯೇಟ್ ಎಂಬ ಹೊಸ ಮೊಬೈಲ್ ಅಪ್ಲಿಕೇಷನ್ ಆರಂಭಿಸುತ್ತಿದ್ದೇವೆ ಎಂದು ಕಂಪನಿಯು ಮೇಡ್ ಆನ್ ಯುಟ್ಯೂಬ್‌ ಇವೆಂಟ್‌ನಲ್ಲಿ ಹೇಳಿದೆ.

ಯೂಟ್ಯೂಬ್ ಕ್ರಿಯೇಟ್ ಎನ್ನುವುದು ಕಿರುಚಿತ್ರಗಳು ಮತ್ತು ದೀರ್ಘವಾದ ವೀಡಿಯೊಗಳೆರಡಕ್ಕೂ ವಿಡಿಯೋ ನಿರ್ಮಾಣವನ್ನು ಸರಳ ಮತ್ತು ಸುಲಭ ಮಾಡಲು ವಿನ್ಯಾಸಗೊಳಿಸಿದ ಉಚಿತ ಅಪ್ಲಿಕೇಶನ್ ಎಂದು ಕಂಪನಿಯು ಹೇಳಿದೆ. ಆ ಆ್ಯಪ್ ಸಹಾಯದಿಂದ ವಿಡಿಯೋ ಕ್ರಿಯೇಟರ್ಸ್, ಇತರ ಕೆಲಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಬದಲು ತಮ್ಮ ಸೃಜನಾತ್ಮಕವಾಗಿ ರೂಪಿಸಲು ನೆರವು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನು ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!

ಹೊಸ ಜನರೇಟಿವ್ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್ ನಿಖರವಾದ ಎಡಿಟಿಂಗ್ ಟ್ರಿಮ್ಮಿಂಗ್, ಸ್ವಯಂಚಾಲಿತ ಶೀರ್ಷಿಕೆ, ವಾಯ್ಸ್‌ಓವರ್ ಮತ್ತು ಪರಿವರ್ತನೆಗಳಂತಹ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಟಿಕ್‌ಟಾಕ್‌ನಂತೆಯೇ ಬೀಟ್-ಮ್ಯಾಚಿಂಗ್ ತಂತ್ರಜ್ಞಾನದೊಂದಿಗೆ ರಾಯಲ್ಟಿ-ಮುಕ್ತ ಸಂಗೀತದ ಶ್ರೇಣಿಯನ್ನು ಆಯ್ಕೆ ಮಾಡಲು ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸುಮಾರು ಮೂರು ಸಾವಿರ ಜನರಿಂದ ಫೀಡ್‌ಬ್ಯಾಕ್‌ ಪಡೆದುಕೊಂಡ ಬಳಿಕ ಈ ಹೊಸ ಆ್ಯಪ್ ರೂಪಿಸಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಈ ಆ್ಯಪ್‌ಗೆ ಇನ್ನಷ್ಟು ಹೊಸ ಫೀಚರ್‌ಗಳು ಸೇರಲಿವೆ. ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಎಐ ಸೃಜಿತ ಬ್ಯಾಕ್‌ಗ್ರೌಂಡ್ ಕೂಡ ಬಳಸಿಕೊಳ್ಳಬಹುದು.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Bangladesh Cricket team
ಕ್ರಿಕೆಟ್10 mins ago

World Cup 2023 : ವಿಶ್ವ ಕಪ್​ಗೆ 5 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ, ಸ್ಟಾರ್ ಆಟಗಾರನೇ ಇಲ್ಲ

Bangalore Bandh KG Road
ಕರ್ನಾಟಕ14 mins ago

Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

Supreme Court
ಕೋರ್ಟ್26 mins ago

Supreme Court: ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ

Rishabh Pant
ಕ್ರಿಕೆಟ್39 mins ago

World Cup 2023 : ಮುಂಬರುವ ವಿಶ್ವ ಕಪ್​ ಮಿಸ್ ಮಾಡಿಕೊಳ್ಳಲಿರುವ ಸ್ಟಾರ್​ ಪ್ಲೇಯರ್​ಗಳ ಲಿಸ್ಟ್​ ಇಲ್ಲಿದೆ

Soldier
ಕರ್ನಾಟಕ40 mins ago

Belagavi News: ಹಣಕಾಸು ವಿಚಾರಕ್ಕೆ ಯೋಧನಿಂದಲೇ ಯೋಧನ ಮೇಲೆ ಗುಂಡಿನ ದಾಳಿ

DK Shivakumar and CM Siddaramaiah
ಕರ್ನಾಟಕ1 hour ago

Cauvery Dispute : 3000 ಕ್ಯೂಸೆಕ್‌ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?

Fact Check, PFI Attack on Soldier is Fake Says Kerala Police
Fact Check1 hour ago

Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?

Ruturaj Gaikwad
ಕ್ರಿಕೆಟ್1 hour ago

Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್​

BJP Workers Protest
ಕರ್ನಾಟಕ1 hour ago

BJP Protest: ಕೋಲಾರ ಸಂಸದ ಮುನಿಸ್ವಾಮಿ ಜತೆ ಅನುಚಿತ ವರ್ತನೆಗೆ ಆಕ್ರೋಶ; ಶಾಸಕ, ಎಸ್‌ಪಿ ವಿರುದ್ಧ ಬಿಜೆಪಿ ಪ್ರತಿಭಟನೆ

Cluster level Pratibha Karanji programme in Mehakar village
ಬೀದರ್‌2 hours ago

Bidar News: ಮೇಹಕರ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ16 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ1 day ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ1 day ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ1 day ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ1 day ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌