Site icon Vistara News

New Year 2024: ಹೊಸ ವರ್ಷದಲ್ಲಿ ನೀವು ಖರೀದಿಸಲೇಬೇಕಾದ ಸ್ಮಾರ್ಟ್‌ಫೋನ್ಸ್!

Must buy smartphones in new year 2024

ನ್ನು ಮೂರು ದಿನದಲ್ಲಿ ಇಡೀ ಜಗತ್ತು ಹೊಸ ವರ್ಷದ ಹೊಸ್ತಿಲಲ್ಲಿ ಇರುತ್ತದೆ. ಸಾಕಷ್ಟು ಏಳು ಬೀಳುಗಳನ್ನು ಕಂಡ 2023 ವರ್ಷಕ್ಕೆ ವಿದಾಯ ಹೇಳಿ(Year Ender 2023), ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ(New Year 2024). ಮುಂಬರುವ ವರ್ಷ ಗ್ಯಾಜೆಟ್ಸ್(Gadgets), ಸ್ಮಾರ್ಟ್‌ಫೋನ್‌ಗಳ (Smartphones) ಕಾರಣಕ್ಕೂ ಸಾಕಷ್ಟು ಗಮನ ಸೆಳೆಯಲಿದೆ. ಸ್ಯಾಮ್ಸಂಗ್(Samsung), ವಿವೋ(Vivo), ಶವೊಮಿ(Xiaomi), ಒನ್‌ಪ್ಲಸ್ (OnePlus) ಸೇರಿದಂತೆ ಅನೇಕ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿವೆ. ನೀವು ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸಿದ್ದರೆ, ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಕೆಲವು ಸ್ಮಾರ್ಟ್‌ಫೋನ್‌ಗಳಿಗಾಗಿ ಕಾಯಿರಿ. ಈ ಪೈಕಿ ಗಮನ ಸೆಳೆಯಬಹುದಾದ ಮತ್ತು ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಐದು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.

ಒನ್‌ಪ್ಲಸ್ 12

2024ರಲ್ಲಿ ಅತಿ ದೊಡ್ಡ ಸ್ಮಾರ್ಟ್‌ಫೋನ್ ಲಾಂಚ್ ಎಂಬ ಹೆಗ್ಗಳಿಕೆಗೆ ಒನ್‌ಪ್ಲಸ್ 12 (OnePlus 12) ಪಾತ್ರವಾಗಿದೆ. ಬಹಳಷ್ಟು ಬಳಕೆದಾರರು ಈ ಫೋನ್‌ಗಾಗಿ ಕಾಯುತ್ತಿದ್ದಾರೆ. ಬ್ರ್ಯಾಂಡ್ ಈಗಾಗಲೇ ಜನವರಿ 23 ರಂದು ಈ ಫೋನ್ ಲಾಂಚ್ ಬಗ್ಗೆ ಮಾಹಿತಿಯನ್ನು ನೀಡಿದೆ. ಈ ವೇಳೆ, ಫೋನ್ ಬೆಲೆ ಮತ್ತು ಲಭ್ಯತೆಯ ಕುರಿತು ಹೆಚ್ಚಿನ ಮಾಹಿತಿ ಗೊತ್ತಾಗಬಹುದು. ಇತ್ತೀಚಿನ Snapdragon 8 Gen 3 ಪ್ರೊಸೆಸರ್, ಸುಧಾರಿತ ಡಿಸ್ಪ್ಲೇ, ಉತ್ತಮ ಕ್ಯಾಮೆರಾಗಳು ಮತ್ತು ವರ್ಧಿತ ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿರುವ ಸಾಧ್ಯತೆ ಇದೆ. ಭಾರತದಲ್ಲಿ OnePlus 12ನ ಬೆಲೆಯು 60,000 ರೂ.ಗಿಂತ ಹೆಚ್ಚು ಎಂದು ನಿರೀಕ್ಷಿಸಬಹುದು. OnePlus 12 ಜೊತೆಗೆ, ಬ್ರ್ಯಾಂಡ್ ಸ್ವಲ್ಪ ಹೆಚ್ಚು ಕೈಗೆಟುಕುವ ಮಾದರಿಯಾದ OnePlus 12R ಅನ್ನು ಸಹ ಪರಿಚಯಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಅಲ್ಟ್ರಾ

ಹೊಸ ವರ್ಷದಲ್ಲಿ ಸ್ಯಾಮ್ಸಂಗ್ ಕೂಡ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಈ ಪೈಕಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ (Samsung Galaxy S24 Ultra) ಹೆಚ್ಚು ಗಮನ ಸೆಳೆಯುತ್ತಿದೆ. ಎಸ್ 24 ಸರಣಿ ಫೋನುಗಳು (ಟಾಪ್-ಎಂಡ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸೇರಿದಂತೆ) ಉನ್ನತ-ಮಟ್ಟದ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಧ್ಯವಾದಷ್ಟು ಉತ್ತಮವಾದ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಒಳಗೊಂಡಿರುತ್ತವೆ ಎಂದು ಹೇಳಲಾಗುತ್ತಿದೆ. ಎಸ್‌24 ಅಲ್ಟ್ರಾ 200MP ಮುಖ್ಯ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆ ಇದೆ. ಎಸ್‌24 ಮತ್ತು ಎಸ್‌24 ಪ್ಲಸ್‌ ಫೋನ್‌ನಲ್ಲಿ ನೀವು ಕೇವಲ 50MP ಕ್ಯಾಮೆರಾ ಪಡೆಯು ಸಾಧ್ಯತೆ ಇದೆ. ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಕ್ಯಾಮೆರಾ ಸ್ಪೆಕ್ಸ್‌ಗಳಲ್ಲಿ 10MP ಟೆಲಿಫೋಟೋ ಸಂವೇದಕಗಳು (S24 ಮತ್ತು S24 ಪ್ಲಸ್) ಮತ್ತು S24 ಅಲ್ಟ್ರಾದಲ್ಲಿ ಒಂದು ಜೋಡಿ ಟೆಲಿಫೋಟೋ ಲೆನ್ಸ್‌ಗಳು ಸೇರಿವೆ. ಅಲ್ಲದೆ, ಮೂರು ಕ್ಯಾಮೆರಾಗಳಲ್ಲಿ 12 ಎಂಪಿ ಅಲ್ಟ್ರಾವೈಡ್ಸ್ ಮತ್ತು 12MP ಸೆಲ್ಫಿ ಕ್ಯಾಮೆರಾಗಳಿವೆ ಎಂದು ಹೇಳಲಾಗುತ್ತಿದೆ.

ವಿವೋ ಎಕ್ಸ್100 ಪ್ರೋ

ವಿವೋ ಉನ್ನತ ಮಟ್ಟದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಕೇಂದ್ರೀಕರಿಸಿದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಕಂಪನಿಯು ಮುಂಬರುವ ಪ್ರೀಮಿಯಂ-ಶ್ರೇಣಿಯ ಫೋನ್‌ X100 ಸರಣಿಯ ವಿವೋ ಎಕ್ಸ್100 ಪ್ರೋ (Vivo X100 Pro) ಮೂಲಕ ಮಾರುಕಟ್ಟೆಯಲ್ಲಿ ಧಮಾಕ್ ಮಾಡಲು ಹೊರಟಿದೆ. X100 Pro ಈಗಾಗಲೇ ಚೀನಾದಲ್ಲಿ ಲಭ್ಯವಿದೆ ಮತ್ತು ಇದು ಸಾಕಷ್ಟು ಶಕ್ತಿಯುತ ಸ್ಮಾರ್ಟ್‌ಫೋನ್‌ನಂತೆ ಕಂಡುಬರುತ್ತದೆ. ಹಿಂದಿನ X ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಆಧರಿಸಿ, ಹೊಸ X100 ಪ್ರೊ ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಪ್ರೊಸೆಸರ್‌ನಿಂದ ಚಾಲಿತ ಕ್ಯಾಮೆರಾ-ಕೇಂದ್ರಿತ ಸಾಧನವಾಗಿದೆ ಎಂದು ನಿರೀಕ್ಷಿಸಲಾಗಿದೆ.

ರೆಡ್‌ಮಿ ನೋಟ್ 13 ಪ್ರೋ ಪ್ಲಸ್

ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ರೆಡ್‌ಮಿ ನೋಟ್ 13 ಪ್ರೋ ಪ್ಲಸ್ (Redmi Note 13 Pro+) ಸ್ಮಾರ್ಟ್‌ಫೋನ್ 2024ರಲ್ಲಿ ಬಿಡುಗಡೆಯಾಗಲಿದೆ. ಶವೊಮಿ ನೀಡಿರುವ ಮಾಹಿತಿಯ ಪ್ರಕಾರ ಈ ಫೋನ್ ಜನವರಿ 4ರಂದು ಮಾರುಕಟ್ಟೆಗೆ ಬರಲಿದೆ. ಈ ಫೋನ್ ನವೀಕರಿಸಿದ MediaTek ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುತ್ತಿರುವ ದೇಶಧ ಮೊದಲ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಳ್ಳಲಿದೆ. ಇದು ಬಾಗಿದ ಡಿಸ್‌ಪ್ಲೇಯನ್ನು ಒಳಗೊಂಡಿರುವ Redmi Note ಸರಣಿಯಲ್ಲಿ ಆರಂಭಿಕ ಸ್ಮಾರ್ಟ್‌ಫೋನ್ ಆಗಿರುತ್ತದೆ. IP68 ನೀರು ಮತ್ತು ಧೂಳಿನ ನಿರೋಧಕ ರೇಟಿಂಗ್‌ನೊಂದಿಗೆ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಕಂಪನಿಯ ಮೊದಲ ಫೋನ್ ಆಗಿದೆ.

ಆ್ಯಸುಸ್ ರೋಗ್ ಫೋನ್ 8

ನಿಮಗೆ ಗೇಮ್ ಫೋನ್ ಬೇಕಿದ್ದರೆ ಹೊಸ ವರ್ಷದಲ್ಲಿ ಖರೀದಿ ಮಾಡಿ. ಯಾಕೆಂದರೆ, ಆ್ಯಸುಸ್ ಗೇಮ್‌ಗಾಗಿ ವಿನ್ಯಾಸ ಮಾಡಿದ ಆ್ಯಸುಸ್ ರೋಗ್ ಫೋನ್ 8(Asus ROG Phone 8) ಅನ್ನು ಜನವರಿ 9ರಂದು ಲಾಂಚ್ ಮಾಡುತ್ತಿದೆ. ಮುಂಬರುವ ಗೇಮಿಂಗ್ ಫೋನ್ ಸ್ನಾಪ್‌ಡ್ರಾಗನ್ 8 Gen 3ನಿಂದ ಚಾಲಿತವಾಗಲು ಹೊಂದಿಸಲಾಗಿದೆ. ಇದು OnePlus 12 ಮತ್ತು ಇತ್ತೀಚೆಗೆ ಬಿಡುಗಡೆಯಾದ iQOO 12 ನಂತಹ ಇತರ ಮುಂಬರುವ ಸ್ಮಾರ್ಟ್‌ಫೋನ್‌ಗಳಿಗೆ ದಾರಿ ಮಾಡಿಕೊಡಲಿದೆ. ರೋಗ್ ಫೋನ್ 8, ನಿಮಗೆ ಹೈಯರ್ ಸ್ಕ್ರೀನ್ ಟು ಬಾಡಿ ಪಂಚ್ ಹೋಲ್‌ ಕಟೌಟ್‌ನೊಂದಿಗೆ ಬರಲಿದೆ. ಸ್ಮಾರ್ಟ್‌ಫೋನ್ ಹೊಸ ಕ್ಯಾಮೆರಾ ದ್ವೀಪ ಮತ್ತು ROG ಲೋಗೋದಲ್ಲಿ RGB ಬ್ಯಾಕ್‌ಲೈಟ್ ಅನ್ನು ಸಹ ಒಳಗೊಂಡಿದೆ. ಇದು ಡ್ಯುಯಲ್ USB-C ಪೋರ್ಟ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಒಂದು ಚಾರ್ಜಿಂಗ್‌ಗಾಗಿ ಮತ್ತು ROG ಏರೋಆಕ್ಟಿವ್ ಕೂಲರ್‌ನಂತಹ ಬಿಡಿಭಾಗಗಳನ್ನು ಸಂಪರ್ಕಿಸಲು ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ: New Year 2024: ಹೊಸ ವರ್ಷ ಸ್ವಾಗತಿಸಲು ಪ್ರವಾಸಕ್ಕೆ ಹೊರಡುವಿರಾ? ಇಲ್ಲಿದೆ ಪಟ್ಟಿ!

Exit mobile version