Site icon Vistara News

Uber | ವಾಟ್ಸ್ಆ್ಯಪ್ ಮೂಲಕವೇ ಉಬರ್ ಕ್ಯಾಬ್ ಬುಕ್ ಮಾಡಿ, ಕಂಡಿಷನ್ಸ್ ಅಪ್ಲೈ!

UBER

ಬೆಂಗಳೂರು: ಸಾರ್ವಜನಿಕ ಸಾರಿಗೆ ಸಂಪರ್ಕದಲ್ಲಿ ಕ್ರಾಂತಿಗೆ ಕಾರಣವಾಗಿರುವ ಉಬರ್ (Uber), ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ತನ್ನ ಸೇವೆಯನ್ನು ಅಪ್‌ಗ್ರೇಡ್ ಮಾಡುತ್ತದೆ. ಈಗ ಕಂಪನಿಯು ಅಂಥದ್ದೇ ಮತ್ತೊಂದು ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತದೆ. ಪ್ರಯಾಣಿಕರು ಇನ್ನೂ ತಮ್ಮ ವಾಟ್ಸ್‌ಆ್ಯಪ್ ಬಳಸಿಕೊಂಡು ಉಬರ್ ಕ್ಯಾಬ್ ಬುಕ್ ಮಾಡಬಹುದು!

ಆ್ಯಪ್ ಬೇಸ್ಡ್ ಆ್ಯಗ್ರಿಗೇಟರ್ ಆಗಿರುವ ಉಬರ್ ಗ್ರಾಹಕರಿಗೆ ಅಡೆ ತಡೆ ಇಲ್ಲದೇ ಸೌಲಭ್ಯವನ್ನು ಒದಗಿಸುತ್ತದೆ. ಇದಕ್ಕಾಗಿ ಕಂಪನಿಯು ಈಗ ವಾಟ್ಸ್ಆ್ಯಪ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಗ್ರಾಹಕರು ವಾಟ್ಸ್ಆ್ಯಪ್ ಬಳಸಿಕೊಂಡು ಉಬರ್ ಕ್ಯಾಬ್ ಬುಕ್ ಮಾಡಬಹುದಾಗಿದೆ. ಸದ್ಯಕ್ಕೆ ದೇಶಾದ್ಯಂತ ಈ ಸೇವೆ ಲಭ್ಯವಿಲ್ಲ. ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಸಿಸುತ್ತಿರುವ ಗ್ರಾಹಕರು ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹಂತ ಹಂತವಾಗಿ ದೇಶದ ಇತರ ನಗರಗಳಿಗೂ ಈ ಸೌಲಭ್ಯವು ವಿಸ್ತಾರಗೊಳ್ಳಬಹುದು.

ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಬಳಕೆದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಸೇವೆ ದೊರೆಯಲಿದೆ. ವಾಟ್ಸ್ಆ್ಯಪ್ ಚಾಟ್‌ನಲ್ಲಿ ಸುರಕ್ಷಿತ ಗೈಡ್‌ಲೈನ್ಸ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಡ್ರೈವರ್‌ಗೆ ನೀಡಲಾಗುತ್ತಿದೆ.

ಪ್ರಯಾಣದಲ್ಲಿದ್ದಾಗಲೇ ಬಳಕೆದಾರರು ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಎಮರ್ಜೇನ್ಸಿ ಆಪ್ಷನ್ ಆಯ್ಕೆ ಮಾಡಿಕೊಂಡರೆ, ಉಬರ್ ಕಸ್ಟಮರ್ಸ್ ಕೇರ್‌ ಸಪೋರ್ಟ್ ಟೀಂನಿಂದ ಕರೆ ಬರುತ್ತದೆ. ಜತೆಗೇ, ಉಬರ್ ಡ್ರೈವರ್ ಕೂಡ ಸೇಫ್ಟಿಗೆ ಸಂಬಂಧಿಸಿದ ಫೋನ್‌ ನಂಬರ್‌ಗಳನ್ನು ಹೊಂದಿರುತ್ತಾರೆ. ಹಾಗಾಗಿ, ಎಮರ್ಜೇನ್ಸಿ ಸಂದರ್ಭದಲ್ಲಿ ಎಲ್ಲ ರೀತಿಯ ನೆರವಿಗೆ ಉಬರ್ ಬರುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ |ಓಲಾ ಮತ್ತು ಉಬರ್‌ ವಿಲೀನಕ್ಕೆ ಮಾತುಕತೆ? ವರದಿ ನಿರಾಕರಿಸಿದ ಭವೀಶ್‌ ಅಗ್ರವಾಲ್

Exit mobile version