ಕಪ್ಪು ಸಮುದ್ರದಲ್ಲಿ ತಾನು ಸ್ಥಾಪಿಸಿರುವ ನೌಕಾಪಡೆ ನೆಲೆಗಳ ಸರಹದ್ದುಗಳನ್ನು ಕಾವಲು ಕಾಯಲು ಡಾಲ್ಫಿನ್‌ಗಳನ್ನು ರಷ್ಯಾ ಸೈನ್ಯ ಬಳಸಿಕೊಳ್ಳುತ್ತಿದೆ. ಈ ವಿಷಯವನ್ನು ಮಕ್ಸಾರ್ ಟೆಕ್ನಾಲಜೀಸ್ ಎಂಬ ಸಂಸ್ಥೆ ಸಬ್‌ಮರೀನ್ ವಿಶ್ಲೇಷಕ ಎಚ್.ಐ.ಸಟ್ಟನ್ ಎಂಬವರು ಬಹಿರಂಗಪಡಿಸಿದ್ದಾರೆ. ಸ್ಯಾಟ್‌ಲೈಟ್ ಚಿತ್ರಗಳು ಇದಕ್ಕೆ ಸಾಕ್ಷಿಯಾಗಿವೆ.
ಇದು 2014ರಲ್ಲಿ ರಷ್ಯಾ ವಶಪಡಿಸಿಕೊಂಡ ಕ್ರಿಮಿಯಾ ಭೂಭಾಗದ ಸೆವಾಸ್ತೊಪೊಲ್ ಎಂಬ ನೌಕಾನೆಲೆಗೆ ಸಮೀಪದಲ್ಲಿದೆ. ಉಕ್ರೇನ್ ಮೇಲೆ ದಾಳಿ ಮಾಡುವ ಮುನ್ನ ಈ ಡಾಲ್ಫಿನ್ ಪಿನ್‌ಗಳನ್ನು ಇಲ್ಲಿಗೆ ಸ್ಥಳಾಂತರಿಸಿತ್ತು. ಇದರಿಂದ, ರಷ್ಯಾ ಸೈನ್ಯ ಬೇಹುಗಾರಿಕೆಗೆ ಡಾಲ್ಫಿನ್‌ಗಳನ್ನು ಬಳಸಿಕೊಳ್ಳುತ್ತಿರುವುದು ಖಚಿತವಾಗಿದೆ.
ಸೆವಾಸ್ತೊಪೊಲ್ ಬಂದರಿನಲ್ಲಿ ರಷ್ಯಾದ ಹಲವು ಯುದ್ಧನೌಕೆಗಳು ಲಂಗರು ಹಾಕಿದ್ದು, ಇದು ಉಕ್ರೇನ್‌ನ ದಾಳಿ ಸಾಧ್ಯತೆಗೆ ಸಮೀಪದಲ್ಲಿವೆ. ರಷ್ಯಾದ ಉಕ್ರೇನ್‌ನ ವಾಯುದಾಳಿಗಿಂತಲೂ, ನೀರಿನಡಿಯಿಂದ ಬರಬಹುದಾದ ದಾಳಿಯ ಬಗ್ಗೆಯೇ ಹೆಚ್ಚು ಹೆದರಿಕೆ. ಇತ್ತೀಚೆಗೆ ʼಮೋಸ್ಕ್ವಾʼ ಎಂಬ ರಷ್ಯನ್ ಯುದ್ಧನೌಕೆಯನ್ನು ಉಕ್ರೇನ್ ಮುಳುಗಿಸಿದೆ.
ಸಸ್ತನಿ ಪ್ರಾಣಿ, ಜಲಚರಗಳನ್ನು ಮಿಲಿಟರಿ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಹೊಸದೇನಲ್ಲ. ಅಮೆರಿಕ ಹಾಗೂ ರಷ್ಯಾಗಳು ಶೀತಲ ಯುದ್ಧದ ಕಾಲದಿಂದಲೂ ಇದನ್ನು ಮಾಡುತ್ತಿವೆ ಎನ್ನಲಾಗಿದೆ. ಸಾಗರದಡಿಯಲ್ಲಿರುವ ಖನಿಜಗಣಿಗಳ ಪತ್ತೆ ಹಚ್ಚಲು ಜಲಸಸ್ತನಿಗಳನ್ನು ಅಮೆರಿಕ 1960ರಿಂದಲೂ ಬಳಸುತ್ತಿದೆ. ಈ ಕುರಿತ ದಾಖಲೆಗಳು ರಹಸ್ಯವಾಗಿವೆ.
ಬೆಲೂಗಾ ತಿಮಿಂಗಿಲ
2019ರಲ್ಲಿ ನಾರ್ವೆಯ ಮೀನುಗಾರರು ಒಂದು ಬೆಲೂಗಾ ತಿಮಿಂಗಿಲವನ್ನು ಕಂಡರು. ಅದರ ದೇಹದಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಯಾರಿಸಲಾದ ಲಗಾಮು ಪಟ್ಟಿಯಿತ್ತು. ಅದಕ್ಕೆ ಒಂದು ಕ್ಯಾಮೆರಾ ಬಿಗಿಯಲಾಗಿತ್ತು. ರಷ್ಯಾದ ಸೈನ್ಯ ನೆಲೆಯಿಂದ ಅದು ತಪ್ಪಿಸಿಕೊಂಡು ಬಂದಿರಬಹುದು ಎಂದು ತರ್ಕಿಸಲಾಯಿತು. ನಾರ್ವೆಯ ಬೆಸ್ತರು ಅದಕ್ಕೆ ಪ್ರೀತಿಯಿಂದ ಹ್ವಾಲ್ದಿಮೀರ್ (ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅನ್ನು ನೆನೆಯುವಂತೆ) ಎಂದು ಹೆಸರಿಟ್ಟರು.
ಈ ತಿಮಿಂಗಲಕ್ಕೆ ಸ್ವತಃ ಬೇಟೆಯಾಡಿ ತಿನ್ನವುದು ಗೊತ್ತಿರಲಿಲ್ಲ. ಹೀಗಾಗಿ, ಇದು ಯಾರೋ ಸಾಕಿದ ತಿಮಿಂಗಿಲವೆಂಬುದಂತೂ ಖಚಿತವಾಯಿತು. ನಂತರ ತಾನೇ ಬೇಟೆಯಾಡಿ ತಿನ್ನಲು ಕಲಿಯಿತು. ಅಮೆರಿಕದ ಫಿಲಂ ಮೇಕರ್ ರೆಜಿನಾ ಕ್ರಾಸ್ಬಿ ಎಂಬಾಕೆ ಇದರ ಬಗ್ಗೆ ಶಾರ್ಟ್‌ಮೂವಿ ತಯಾರಿಸಿದಳು.
ಇದನ್ನೂ ಓದಿ: Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!
ತಿಮಿಂಗಿಲ ಜೈಲುಗಳು
ಮಿಲಿಟರಿ ಕಾರ್ಯ ಮತ್ತಿತರ ಉದ್ದೇಶಗಳಿಗಾಗಿ ರಷ್ಯಾ ಹಲವಾರು “ವ್ಹೇಲ್ ಜೈಲುʼಗಳನ್ನು ರೂಪಿಸಿದ್ದು, ಅಲ್ಲಿ ನೂರಾರು ತಿಮಿಂಗಿಲ ಮರಿಗಳನ್ನು ಹುಟ್ಟಿಸಿ ಟ್ರೇನಿಂಗ್ ನೀಡುತ್ತಿದೆ. ಇವುಗಳನ್ನು ಮುಕ್ತಗೊಳಿಸಬೇಕು ಎಂದು ವಿಶ್ವಾದ್ಯಂತ ಅಭಿಯಾನ ನಡೆಯುತ್ತಿದ್ದು, ಹಾಲಿವುಡ್ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಮುಂತಾದವರು ಅದರಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: Explainer: ರಷ್ಯಾಕ್ಕೆ Moskva ನೌಕೆಯ ಮುಳುಗು ತಂದ ಆಘಾತ