Site icon Vistara News

Toyota EV : ಟೊಯೊಟಾದ ಹೊಸ ಇವಿ ಕಾರನ್ನು 10 ನಿಮಿಷ ಚಾರ್ಜ್‌ ಮಾಡಿ 1000 ಕಿ.ಮೀ ಓಡಿಸಿ !

Toyota

#image_title

ನವ ದೆಹಲಿ: ಟೊಯೊಟಾ ಮೋಟಾರ್‌ ಎಲೆಕ್ಟ್ರಿಕ್‌ ಕಾರುಗಳ ವಿಭಾಗದಲ್ಲಿ ಭಾರಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೈ ಹಾಕಿದೆ. ಈ ಮೂಲಕ ಎಲಾನ್‌ ಮಸ್ಕ್‌ ಅವರ ಟೆಸ್ಲಾಗೆ ಸೆಡ್ಡು ಹೊಡೆಯಲು ಟೊಯೊಟಾ (Toyota EV) ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತನ್ನ ಹಾದಿಯ ನೀಲನಕ್ಷೆಯನ್ನು ಕಂಪನಿ ಸಿದ್ಧಪಡಿಸಿದೆ. ನೆಕ್ಸ್ಟ್‌ ಜನರೇಶನ್‌ ಬ್ಯಾಟರಿ ಅಭಿವೃದ್ಧಿ, ಕಾರ್ಖಾನೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ, ತಂತ್ರಜ್ಞಾನದ ಅಳವಡಿಕೆಗೆ ಟೊಯೊಟಾ ಕಾರ್ಯಪ್ರವೃತ್ತವಾಗಿದೆ.

ಜಪಾನ್‌ ಮೂಲದ ಟೊಯೊಟಾ ಮೋಟಾರ್‌ (Toyota Motor), ನೆಕ್ಸ್ಟ್‌ ಜನರೇಶನ್‌ ಲಿಥಿಯಂ ಇಯಾನ್‌ ಬ್ಯಾಟರಿಗಳನ್ನು 2026ರಿಂದ ಬಿಡುಗಡೆಗೊಳಿಸಲಿದೆ. ಇದು ಸುದೀರ್ಘ ವಾಹನ ಸಂಚಾರ ಮತ್ತು ತ್ವರಿತ ಚಾರ್ಜಿಂಗ್‌ಗೆ ಅನುಕೂಲಕರವಾದ ಬ್ಯಾಟರಿಗಳಾಗಿರಲಿದೆ. ಭವಿಷ್ಯದಲ್ಲಿ ಕೇವಲ 10 ನಿಮಿಷಗಳ ರಿಚಾರ್ಜ್‌ನಲ್ಲಿ ಕಾರನ್ನು 1000 ಕಿ.ಮೀ ಚಲಾಯಿಸಲು ಸಾಧ್ಯವಾಗಬಲ್ಲ ಭಾರಿ ಸಾಮರ್ಥ್ಯದ ಬ್ಯಾಟರಿಗಳನ್ನು ಕಂಪನಿ ಅಭಿವೃದ್ಧಿಪಡಿಸಲಿದೆ. ಟೆಸ್ಲಾದ ಲಿಥಿಯಂ ಇಯಾನ್‌ ಚಾಲಿತ ಬ್ಯಾಟರಿಗಿಂತಲೂ ಇದು ಹೆಚ್ಚು ಸಶಕ್ತವಾಗಿ ತಯಾರಾಗುವ ನಿರೀಕ್ಷೆ ಇದೆ. ಈಗ ವಿಶ್ವದ ಬೆಸ್ಟ್‌ ಸೆಲ್ಲಿಂಗ್‌ ಇವಿಯ ಬ್ಯಾಟರಿ ಅಮೆರಿಕದಲ್ಲಿ ಅಲ್ಲಿನ ದರ್ಜೆಗೆ ಅನುಗುಣವಾಗಿ 350 ಕಿ.ಮೀ ತನಕ ಕಾರನ್ನು ಓಡಿಸಲು ಸಾಕಾಗುತ್ತದೆ.

ಟೊಯೊಟಾ ಇವಿ ಕಾರುಗಳ ಬಾಳಿಕೆಯ ಬಗ್ಗೆ ಇದುವರೆಗೆ ಕಾಡುತ್ತಿದ್ದ ಹಲವು ತಾಂತ್ರಿಕ ಅಡಚಣೆಗಳನ್ನು ಬಗೆಹರಿಸಿದೆ. ಈ ಪ್ರಬಲ ಬ್ಯಾಟರಿಗಳ ವಾಣಿಜ್ಯೋದ್ದೇಶದ ಉತ್ಪಾದನೆಯನ್ನು 2027ರಿಂದ ಟೊಯೊಟಾ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬ್ಯಾಟರಿಗಳ ರೇಂಜ್‌ ಎಲೆಕ್ಟ್ರಿಕ್‌ ವಾಹನಗಳಲ್ಲಿ ನಿರ್ಣಾಯಕ ಅಂಶವಾಗಿದೆ. ಟೊಯೊಟಾ ಅಭಿವೃದ್ಧಿಪಡಿಸುತ್ತಿರುವ solid-state battery ಗಳು ಈಗಿನ liquid electrolyte battery ಗಿಂತಲೂ ಪರಿಣಾಮಕಾರಿ ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಬ್ಯಾಟರಿಗಳು ದುಬಾರಿಯಾಗಿರುವುದರಿಂದ ಅಗ್ಗದ ಪರ್ಯಾಯ ಲಿಥಿಯಂ ಐರನ್‌ ಫೋಸ್ಫೋಟ್‌ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ.

ಇದನ್ನೂ ಓದಿ:Urban Cruiser Hyryder | ಟೊಯೊಟಾ ಅರ್ಬನ್‌ ಕ್ರೂಸರ್‌ ಹೈರೈಡರ್‌ ಬೆಲೆ ಅನಾವರಣ

ಭಾರತದಲ್ಲಿ ಕಳೆದ ಏಪ್ರಿಲ್‌ ನಲ್ಲಿ ವಾಹನಗಳ ಮಾರಾಟ ಎರಡಂಕಿಯ ಬೆಳವಣಿಗೆ ದಾಖಲಿಸಿದೆ.
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ವಾಹನಗಳ ನೋಂದಣಿಯಲ್ಲಿ ಶೇ.37 ಚೇತರಿಕೆ ಕಂಡು ಬಂದಿದೆ. ಏಪ್ರಿಲ್‌ನಲ್ಲಿ 1,627,975 ವಾಹನಗಳು ನೋಂದಣಿಯಾಗಿದೆ. ಇದು ಶೇ.37ರಷ್ಟು ಹೆಚ್ಚಳವಾಗಿದೆ ಎಂದು ಆಟೊಮೊಬೈಲ್‌ ಡೀಲರ್‌ಗಳ ಸಂಘಟನೆ ಎಫ್‌ಎಡಿಎ ತಿಳಿಸಿದೆ.‌ ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ, ಗ್ರಾಹಕರಿಂದ ಬೇಡಿಕೆಯಲ್ಲಿ ಸುಧಾರಣೆ ಕಂಡು ಬಂದಿದೆ. ಹೀಗಿದ್ದರೂ 2019ರ ಏಪ್ರಿಲ್‌ನ ಕೋವಿಡ್‌ ಪೂರ್ವ ಮಟ್ಟಕ್ಕೆ ಈಗಲೂ ವಾಹನ ಮಾರಾಟ ಚೇತರಿಸಿಲ್ಲ.

ವಾಹನಗಳ ಎಲ್ಲ ಕೆಟಗರಿಗಳಲ್ಲಿ ನೋಂದಣಿ ವೃದ್ಧಿಸಿದೆ ಎಂದು ಎಫ್‌ಎಡಿಎ ಅಧ್ಯಕ್ಷ ವಿಂಕೇಶ್‌ ಗುಲಾಟಿ ತಿಳಿಸಿದ್ದಾರೆ.
2021ಮತ್ತು 2020ರ ಏಪ್ರಿಲ್‌ನಲ್ಲಿ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ವಾಹನ ಮಾರಾಟ ಕುಸಿದಿತ್ತು. ಆದ್ದರಿಂದ 2019ರ ಏಪ್ರಿಲ್‌ ಅನ್ನು ಹೋಲಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.

Exit mobile version