Site icon Vistara News

Twitter: ಟ್ವಿಟರ್ ಜಾಹೀರಾತು ಆದಾಯದಲ್ಲಿ ಶೇ.89 ಕುಸಿತ! ಎಲಾನ್ ಮಸ್ಕ್‌ಗೆ ಆತಂಕ

X CEO Elon Musk

Elon Musk Has An Offer For Journalists Who Want To Earn More, Here is the details

ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ 44 ಶತಕೋಟಿ ಡಾಲರ್ ‌ತೆತ್ತು ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ (Twitter) ಖರೀದಿಸಿ, ಸಂಪೂರ್ಣವಾಗಿ ಬದಲಾಯಿಸಿದ್ದರು. ಅರ್ಧಕರ್ಧ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು. ಚಂದಾದಾರಿಕೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದ ಟ್ವಿಟರ್‌ಗೆ ಏನಾದರೂ ಲಾಭವಾಯಿತೇ? ಗೊತ್ತಿಲ್ಲ, ಆದರೆ, ಟ್ವಿಟರ್ ಆದಾಯದಲ್ಲಿ ಮಾತ್ರ ಕುಂಠಿತವಾಗಿದೆ. ವರದಿಗಳ ಪ್ರಕಾರ, ಟ್ವಿಟರ್‌ಗೆ ಜಾಹೀರಾತು ಆದಾಯದಲ್ಲಿ ಶೇ.89ರಷ್ಟು ಕುಸಿತವಾಗಿದೆ(Ad Revenue). ಇದು ಎಲಾನ್ ಮಸ್ಕ್ ಅವರ ಚಿಂತೆಗೆ ಕಾರಣವಾಗಿದೆ.

ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಮೇಲೆ, ಅದರ ದೈನಿಂದನ ಬಳಕೆದಾರರಲ್ಲಿ ಹೆಚ್ಚಳವಾಗಿದೆ. ಆದರೆ, ಕಳೆದ ಅಕ್ಟೋಬರ್‌ನಿಂದ ಕಂಪನಿಯ ಆದಾಯದಲ್ಲಿ ಮಾತ್ರ ಭಾರೀ ಕುಸಿತವಾಗಿದೆ. ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಜಾಹೀರಾತು ಆದಾಯದ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

ಎಚ್‌ಬಿಒ, ಅಮೆಜಾನ್, ಐಬಿಎಂ ಮತ್ತು ಕೊಕೊಕೋಲಾ ಟ್ವಿಟರ್‌ನ ಪ್ರಮುಖ ಜಾಹೀರಾತು ಗ್ರಾಹಕರಾಗಿದ್ದರು. ಕಳೆದ ಫೆಬ್ರವರಿಯವರೆಗೆ, ಮಾಂಡೆಲೆಜ್ ಇಂಟರ್‌ನ್ಯಾಷನಲ್ ಇಂಕ್, ಕೊಕೊಕೋಲಾ ಕಂಪನಿ, ಮೆರ್ಕ್ ಆ್ಯಂಡ್ ಕಂಪನಿ ಮತ್ತು ಹಿಲ್ಟನ್ ವರ್ಲ್ಡ್‌ವೈಡ್ ಹೋಲ್ಡಿಂಗ್ಸ್ ಇಂಕ್, ಎಟಿ ಆ್ಯಟಿ ಇಂಕ್ ಸೇರಿದಂತೆ ಅನೇಕ ಕಂಪನಿಗಳು ಇನ್ನೂ ಟ್ವಿಟರ್‌ನಲ್ಲಿ ಜಾಹೀರಾತಿಗಾಗಿ ವೆಚ್ಚ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ.

ಇದರ ಮಧ್ಯೆಯೇ ಎಲಾನ್ ಮಸ್ಕ್ ಅವರು ಜಾಹೀರಾತುದಾರರಿಗೆ ಧೈರ್ಯ ತುಂಬಲು ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವು ನಿಯಂತ್ರಣಗಳನ್ನು ಪರಿಚಯಿಸುವ ಮೂಲಕ ಟ್ವಿಟರ್ ಜಾಹೀರಾತು ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಇದು ನಿರ್ದಿಷ್ಟ ಕೀವರ್ಡ್‌ಗಳು ಅಥವಾ ಚಿತ್ರಗಳನ್ನು ಹೊಂದಿರುವ ಟ್ವೀಟ್‌ಗಳ ಜೊತೆಗೆ ತಮ್ಮ ಜಾಹೀರಾತುಗಳು ಕಾಣಿಸಿಕೊಳ್ಳುವುದನ್ನು ತಡೆಯಲು ಮಾರಾಟಗಾರರಿಗೆ ಅವಕಾಶ ನೀಡುತ್ತದೆ. ಕಳೆದ ವರ್ಷ, ಟ್ವಿಟರ್ ಜಾಹೀರಾತುದಾರರಿಗೆ ಗಮನಾರ್ಹ ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿತು. ಇಷ್ಟಾಗಿಯೂ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ಟ್ವಿಟರ್ ವಿಫಲವಾಗಿದೆ.

ಭಾರತದಲ್ಲಿ Twitter Blue ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.!

ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ ತನ್ನ ಬ್ಲೂ ಸಬ್‌ಸ್ಕ್ರಿಪ್ಷನ್ (Twitter Blue) ಸೇವೆಯನ್ನು ಭಾರತದಲ್ಲೂ ಆರಂಭಿಸಿದೆ. ಈ ಸೇವೆ, ವೆಬ್ (Web) ಸೇರಿದಂತೆ ಐಒಎಸ್ (iOS) ಮತ್ತು ಆಂಡ್ರಾಯ್ಡ್‌ (Android) ಎರಡೂ ಸಾಧನಗಳಲ್ಲಿ ದೊರೆಯಲಿದೆ. ಟ್ವಿಟರ್ ಬ್ಲೂ ಚಂದಾದಾರರಿಗೆ ಅವರ ಪ್ರೊಫೈಲ್‌ನಲ್ಲಿ ಕೆಲವು ಇತರ ವೈಶಿಷ್ಟ್ಯಗಳೊಂದಿಗೆ ಪರಿಶೀಲಿಸಿದ ನೀಲಿ ಟಿಕ್ ಮಾರ್ಕ್ ನೀಡಲಾಗುತ್ತದೆ. ಈ ಟಿಕ್‌ ಮಾರ್ಕ್‌ ಪಡೆದ ಪ್ರೊಫೈಲ್‌ಗಳಿಗೆ ಅಧಿಕೃತೆ ಲಭ್ಯವಾಗುತ್ತದೆ.

ಒಂದು ವೇಳೆ ನೀವು, ಮೊಬೈಲ್‌ನಲ್ಲಿ ಮಾಸಿಕ ಟ್ವಿಟರ್ ಸಬ್‌ಸ್ಕ್ರಿಪ್ಷನ್ ಸೇವೆ ಆಯ್ಕೆ ಮಾಡಿಕೊಂಡರೆ, 900 ರೂ. ನೀಡಬೇಕಾಗುತ್ತದೆ. ಇದೇ ವೇಳೆ, ವೆಬ್‌ನಲ್ಲಿ ಪ್ರತಿ ತಿಂಗಳಿಗೆ 650 ರೂ. ಆಗಲಿದೆ. ಮಾಸಿಕ ಮಾತ್ರವಲ್ಲದೇ ವಾರ್ಷಿಕ ಚಂದಾದಾರಿಕೆಯನ್ನು ಭಾರತದಲ್ಲಿ ಟ್ವಿಟರ್ ನೀಡುತ್ತಿದೆ. ಅದರನ್ವಯ, ವಾರ್ಷಿಕ 6800 ರೂ. ಪಾವತಿಸಬೇಕಾಗುತ್ತದೆ. ಆಗ, ಮಾಸಿಕ ಅಂದಾಜು 566 ರೂ. ಆಗುತ್ತದೆ.

ಬ್ಲೂ ಟಿಕ್‌ನಿಂದ ಏನೇನು ಲಾಭ?

ಎಡಿಟ್ ಟ್ವೀಟ್ ಬಟನ್ ಸೌಲಭ್ಯ ದೊರೆಯಲಿದೆ
ಟ್ವೀಟ್ ಅನ್ ಡು ಮಾಡಬಹುದು
ದೀರ್ಘ ಮತ್ತು ಗುಣಾತ್ಮಕ ವಿಡಿಯೋ ಪೋಸ್ಟ್ ಮಾಡಬಹುದು
ಸಂಭಾಷಣೆಯಲ್ಲಿ ಆದ್ಯತೆ ದೊರೆಯುತ್ತದೆ
ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ, ಚಂದಾದಾರರಿಗೆ ಕಡಿಮೆ ಜಾಹೀರಾತು ಪ್ರದರ್ಶನ
ಆ್ಯಪ್ ಐಕಾನ್ ಕಸ್ಟಮೈಸ್ ಮಾಡಿಕೊಳ್ಳಬಹುದು
ಎನ್ಎಫ್‌ಟಿ ಪ್ರೊಫೈಲ್ ಪಿಕ್ಚರ್, ಥೀಮ್ಸ್
ನ್ಯಾವಿಗೇಷನ್ ಆಯ್ಕೆ ಕಸ್ಟಮೈಸ್ ಮಾಡಬಹುದು
ಸ್ಪೇಸ್ ಟ್ಯಾಬ್ ಅಕ್ಸೆಸ್, ಇದರಿಂದ ಟ್ವೀಟ್ ಅನ್ ಡು ಮಾಡಬಹುದು
ಅನ್‌ಲಿಮಿಟಿಡ್ ಬುಕ್ ಮಾರ್ಕ್ಸ್, ಫೋಲ್ಡರ್ ಕೂಡ ಬುಕ್ ಮಾರ್ಕ್ ಮಾಡಬಹುದು

Exit mobile version