Site icon Vistara News

Twitter | ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಿರುವ ಟ್ವಿಟರ್!

Twitter Removed option to send direct message Says some reports

ನವದೆಹಲಿ: ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಆ್ಯಪ್ ಆಗಿರುವ ಟ್ವಿಟರ್ (Twitter) ತನ್ನ ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ ಎಂಬ ಸಂಗತಿಯು ಈಗ ಬಯಲಾಗಿದೆ. ಆಂತರಿಕವಾಗಿ ವಿಶ್ಲೇಷಣೆ ಮಾಡಲಾದ ವರದಿಯಲ್ಲಿ ಈ ಸಂಗತಿಯನ್ನು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಟ್ವಿಟರ್‌ ತನ್ನ ಸಕ್ರಿಯ ಬಳಕೆದಾರರನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಿದೆ. ಈ ಸಕ್ರಿಯ ಬಳಕೆದಾರರು ಒಟ್ಟಾರೆ ಬಿಸಿನೆಸ್‌ಗೆ ಮಹತ್ವದ ಕೊಡುಗೆಯನ್ನು ನೀಡುತ್ತಾರೆ. ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಬಳಿಕ ಪ್ರಮುಖ ಟ್ವೀಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತ ಬಂದಿದೆ ಎಂಬ ಸಂಗತಿಯನ್ನು ವ್ಹೇರ್ ಡಿಡ್ ದಿ ಟ್ವೀಟರ್ಸ್ ಗೋ ಎಂಬ ವರದಿಯಲ್ಲಿ ತಿಳಿಸಲಾಗಿದೆ.

ಮಾಸಿಕ ಒಟ್ಟಾರೆ ಬಳಕೆದಾರರಲ್ಲಿ ಹೆವಿ ಟ್ವೀಟರ್ಸ್ ಶೇ.10 ಕಡಿಮೆ ಇದ್ದರೂ ಎಲ್ಲ ಟ್ವೀಟ್‌ಗಳಿಗೆ ಹೋಲಿಸಿದರೂ ಶೇ.90 ಅವರಿಂದ ಟ್ವೀಟ್ ಹೊರಬರುತ್ತವೆ ಮತ್ತು ಜಾಗತಿಕ ಆದಾಯದಲ್ಲಿ ಇವುಗಳದ್ದೇ ಅರ್ಧದಷ್ಟು ಪಾಲಿದೆ. ಆದರೆ, ಸಂಪೂರ್ಣವಾಗಿ ಹೆವಿ ಟ್ವೀಟರ್ಸ್‌ನಲ್ಲಿ ಕುಸಿತ ಕಾಣಲಾರಂಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಾರದಲ್ಲಿ ಆರು ಅಥವಾ ಏಳು ದಿನ ಟ್ವಿಟರ್‌ಗೆ ಲಾಗ್ ಇನ್ ಆಗುವ ಮತ್ತು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಟ್ವೀಟ್ ಮಾಡುವವರನ್ನು “ಹೆವಿ ಟ್ವೀಟರ್” ಎಂದು ವ್ಯಾಖ್ಯಾನಿಸಲಾಗಿದೆ.

ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಎಲ್ಲ ವ್ಯವಹಾರದ ಪ್ರಕ್ರಿಯೆಗಳು ಮುಕ್ತಾಯವಾಗಿವೆ. ಆದರೆ, ಈ ಮಧ್ಯೆ ಕಂಪನಿ ಮತ್ತು ಮಸ್ಕ್ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ವ್ಯವಹಾರ ಪೂರ್ಣಗೊಳ್ಳುವಲ್ಲಿ ನಿಧಾನವಾಗಿದೆ.

ಇದನ್ನೂ ಓದಿ | Twitter | ಟ್ವಿಟರ್‌ನ 75% ಉದ್ಯೋಗಿಗಳ ವಜಾಕ್ಕೆ ಮಸ್ಕ್‌ ಚಿಂತನೆ, ಉದ್ಯೋಗ ಕಡಿತ ಇಲ್ಲ ಎಂದ ಕಂಪನಿ

Exit mobile version