ನವ ದೆಹಲಿ: ಮೈಕ್ರೊಬ್ಲಾಗಿಂಗ್ ಟ್ವಿಟರ್ (Twitter) ಅನ್ನು ಜಗತ್ತಿನ ಅತ್ಯಂತ ಗೌರವಾನ್ವಿತ ಜಾಹೀರಾತು ವೇದಿಕೆಯನ್ನಾಗಿ ಮಾಡುವುದಾಗಿ ಟ್ವಿಟರ್‌ನ ಹೊಸ ಮಾಲೀಕ, ಜಗತ್ತಿನ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಅವರು ಹೇಳಿದ್ದಾರೆ. ಸುಮಾರು 44 ಶತಕೋಟಿ ಡಾಲರ್ ಹಣ ತೆತ್ತು ಅವರು ಟ್ವಿಟರ್ ಖರೀದಿಸಿದ್ದಾರೆ. ವಿಪರ್ಯಾಸ ಎಂದರೆ, ಈ ಹಿಂದೆ ಇದೇ ಎಲಾನ್ ಮಸ್ಕ್ ಅವರು, ಐ ಹೇಟ್ ಅಡ್ವರ್ಟೈಸಿಂಗ್ ಎಂದು ಟ್ವೀಟ್ ಮಾಡಿದ್ದರು!
ಈ ಖರೀದಿ ಒಪ್ಪಂದ ವೇಳೆ ಮಸ್ಕ್, ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡೋರ್ಸೆ ಮತ್ತು ಹೂಡಿಕೆದಾರರು ಈ ಹಿಂದೆ ಜಾಹೀರಾತಿನಿಂದ ಹಿಂದೆ ಸರಿದು, ಚಂದಾದಾರ ಮಾಡೆಲ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದರು. ಆದರೆ, ಈಗ ಮಸ್ಕ್ ಅವರು, ಟ್ವಿಟರ್ ಅನ್ನು ಅತ್ಯುತ್ತಮ ಜಾಹೀರಾತು ವೇದಿಕೆಯನ್ನಾಗಿ ಮಾಡುವೆ ಎಂದು ಹೇಳಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ನಾನು ಯಾಕೆ ಟ್ವಿಟರ್ ಖರೀದಿಸಿದೆ ಎಂಬ ಬಗ್ಗೆ ಅನೇಕರು ಊಹೆ ಮಾಡುತ್ತಿದ್ದಾರೆ. ಬಹುತೇಕರು ಜಾಹೀರಾತಿಗಾಗಿಯೇ ನಾನು ಟ್ವಿಟರ್ ಖರೀದಿಸಿದ್ದೇನೆ ಎಂದು ಬಹುತೇಕ ಭಾವಿಸಿದ್ದಾರೆ. ಆದರೆ ಅವರ ಊಹೆ ತಪ್ಪಾಗಲಿದೆ ಎಂದು ಮಸ್ಕ್ ಅವರು ಟ್ವೀಟ್ ಮಾಡಿದ್ದರು. ಮೂಲಭೂತವಾಗಿ, ನಿಮ್ಮ ಬ್ರ್ಯಾಂಡ್ ಅನ್ನು ಬಲಪಡಿಸುವ ನಿಮ್ಮ ಉದ್ಯಮವನ್ನು ಬೆಳೆಸುವ ವಿಶ್ವದ ಅತ್ಯಂತ ಗೌರವಾನ್ವಿತ ಜಾಹೀರಾತು ವೇದಿಕೆಯಾಗಲು ಟ್ವಿಟರ್ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಇತರ ಸೋಷಿಯಲ್ ಮೀಡಿಯಾಗಳು ನೀಡುವಂತೆ ಟ್ವಿಟರ್ ಕೂಡ ಅಗ್ರ ಕಂಟೆಂಟ್ ಕ್ರಿಯೇಟರ್ಸ್‌ಗೆ ಪರಿಹಾರಧನ ನೀಡಲಾಗುವುದು ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ. ಅದರರ್ಥ, ಟ್ವಿಟರ್ ಕಂಟೆಂಟ್ ಕ್ರಿಯೇಟರ್ಸ್‌ಗೂ ಇನ್ನೂ ಮುಂದೆ ಹಣ ದೊರೆಯಬಹುದು.
ಇದನ್ನೂ ಓದಿ | Elon Musk | ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುವುದಾಗಿ ಎಲಾನ್ ಮಸ್ಕ್ ಘೋಷಣೆ