Site icon Vistara News

WhatsApp Hack | 50 ಕೋಟಿ ವಾಟ್ಸ್ಆ್ಯಪ್ ಸಕ್ರಿಯ ಬಳಕೆದಾರರ ಫೋನ್‌ ನಂಬರ್ಸ್‌ಗೆ ಕನ್ನ, ಡಾಲರ್ ಲೆಕ್ಕದಲ್ಲಿ ಮಾರಾಟ!

WhatsApp Hack @ community

ನವದೆಹಲಿ: ಸುಮಾರು 500 ಮಿಲಿಯನ್ (50 ಕೋಟಿ) ವಾಟ್ಸ್ಆ್ಯಪ್ (WhatsApp Hack) ಬಳಕೆದಾರರ ನಂಬರ್ ಅನ್ನು ಕದ್ದು, ಬಳಕೆದಾರರ ಮಾಹಿತಿಯನ್ನು ಮಾರಾಟಕ್ಕೆ ಇಟ್ಟ ಘಟನೆ ನಡೆದಿದೆ. ಹ್ಯಾಕರ್ಸ್ ಕಮ್ಯುನಿಟಿಯು ಈ ಕದಿಯುವ ಕೆಲಸವನ್ನು ಮಾಡಿದೆ. ಅಮೆರಿಕ, ಇಂಗ್ಲೆಂಡ್, ಇಟಲಿ, ಈಜಿಪ್ಟ್ ಮತ್ತು ಭಾರತವು ಸೇರಿದಂತೆ 84 ರಾಷ್ಟ್ರಗಳ ವಾಟ್ಸ್ಆ್ಯಪ್ ಸಕ್ರಿಯ ಬಳಕೆದಾರರ ಮಾಹಿತಿಯನ್ನು 7 ಸಾವಿರ ಡಾಲರ್, 2,500 ಡಾಲರ್ ಮತ್ತು 2 ಸಾವಿರ ಡಾಲರ್‌ಗೆ ಮಾರಾಟಕ್ಕೆ ಇಟ್ಟಿದ್ದರು ಎನ್ನಲಾಗಿದೆ.

ವರದಿಗಳ ಪ್ರಕಾರ, ಅಮೆರಿಕದ 32 ಮಿಲಿಯನ್, ಇಂಗ್ಲೆಂಡ್‌ನ 11.5 ಮಿಲಿಯನ್ ವಾಟ್ಸ್ಆ್ಯಪ್ ಫೋನ್ ನಂಬರ್ಸ್ ಹ್ಯಾಕ್ ಮಾಡಲಾಗಿದೆ. ಈಜಿಪ್ಟ್‌ನ ಹೆಚ್ಚು ಬಳಕೆದಾರರು ಈ ಜಾಲಕ್ಕೆ ಬಲಿಯಾಗಿದ್ದಾರೆ. 45 ಮಿಲಿಯನ್ ಈಜಿಪ್ಟ್ ಬಳಕೆದಾರರ ಮಾಹಿತಿಯನ್ನು ಕದಿಯಲಾಗಿದೆ. ಇಟಲಿಯ 35 ಮಿಲಿಯನ್, ರಷ್ಯಾದ 10 ಮಿಲಿಯನ್ ಮತ್ತು ಭಾರತದ 6 ಮಿಲಿಯನ್ ವಾಟ್ಸ್ಆ್ಯಪ್ ಬಳಕೆದಾರರ ನಂಬರ್ ಮಾಹಿತಿಯನ್ನು ಕದಿಯಲಾಗಿದೆ. ಇವರೆಲ್ಲರೂ ಸಕ್ರಿಯ ಬಳಕೆದಾರರಾಗಿದ್ದಾರೆ. ಹೀಗೆ ಕದ್ದ ಮಾಹಿತಿಯನ್ನು ಹ್ಯಾಕರ್ಸ್ ಕಮ್ಯುನಿಟಿ ಮಾರಾಟಕ್ಕೆ ಇಟ್ಟಿದೆ.

ಹ್ಯಾಕರ್ ಈ ಫೋನ್ ನಂಬರ್ಸ್ ಬಳಕೆದಾರರ ಮಾಹಿತಿಯನ್ನು ಹೇಗೆ ಪಡೆದರು ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡಿಲ್ಲ. ಆದರೆ, ಇದೊಂದು “ಸ್ಕ್ರ್ಯಾಪಿಂಗ್” ಮಾರ್ಗವಾಗಿರಬಹುದು ಎಂದು ಹೇಳಲಾಗುತ್ತಿದೆ. ತಂತ್ರವು ಪ್ರಮಾಣದಲ್ಲಿ ಡೇಟಾವನ್ನು ಕೊಯ್ಲು ಮಾಡುವುದು, ಆಗಾಗ್ಗೆ ಬಾಟ್‌ಗಳನ್ನು ಬಳಸುವುದು ಮತ್ತು ವಾಟ್ಸ್ಆ್ಯಪ್‌ನ ಸೇವಾ ನಿಯಮಗಳನ್ನು ಉಲ್ಲಂಘಿಸುವುದನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ | Whatsapp New Feature | ವಾಟ್ಸ್ಆ್ಯಪ್‌ಗೆ ಮತ್ತೊಂದು ಸ್ತರದ ಸುರಕ್ಷತೆ! ಈ ಹೊಸ ಫೀಚರ್ ಯಾವಾಗ ಸಿಗಲಿದೆ?

Exit mobile version