Site icon Vistara News

Facebook: ಫೇಸ್‌ಬುಕ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿ ! ಈ ಸ್ಟೆಪ್ಸ್ ಫಾಲೋ ಮಾಡಿ ನೋಡಿ…

You can check internet speed using Facebook app and check details

ಬೆಂಗಳೂರು, ಕರ್ನಾಟಕ: ಮೆಟಾ (Meta) ಒಡೆತನದ ಫೇಸ್‌ಬುಕ್ (Facebook) ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದೆ. ಫೇಸ್‌ಬುಕ್ ಬಳಸದೇ ಇರುವವರ ಸಂಖ್ಯೆ ಬಹಳ ಕಡಿಮೆ. ಜಗತ್ತಿನಾದ್ಯಂತ ಕೋಟ್ಯಂತರ ಸಕ್ರಿಯ ಬಳಕೆದಾರರನ್ನು ಈ ಫೇಸ್‌ಬುಕ್‌ ಹೊಂದಿದೆ. ಹಾಗಾಗಿ, ಫೇಸ್‌ಬುಕ್ ಕೂಡ, ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸುವುದಕ್ಕಾಗಿ ಅನೇಕ ಹೊಸ ಫೀಚರ್ಸ್‌ಗಳನ್ನು ಲಾಂಚ್ ಮಾಡುತ್ತಲೇ ಇರುತ್ತದೆ. ಆದರೆ, ಇವುಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಫೇಸ್‌ಬುಕ್ ಆ್ಯಪ್‌ನಲ್ಲಿ ಇಂಟರ್ನೆಟ್ ಸ್ಪೀಡ್ (Internet Speed) ಕೂಡ ಚೆಕ್ ಮಾಡಬಹುದು.

ಪ್ರಖ್ಯಾತ ಸೋಷಿಯಲ್ ಮೀಡಿಯಾ ಆಗಿರುವ ಫೇಸ್‌ಬುಕ್, ಜನರನ್ನು ಒಂದುಗೂಡಿಸುವ ಮಹತ್ವದ ವೇದಿಕೆಯಾಗಿದೆ. ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಪರಿಚಯಸ್ಥರಿಗೆ ಸಂಪರ್ಕವನ್ನು ಈ ಫೇಸ್‌ಬುಕ್ ಕಲ್ಪಿಸುತ್ತದೆ. ಜತೆಗೆ, ಹೊಸ ಹೊಸ ಸ್ನೇಹಿತರನ್ನೂ ಸಂಪಾದಿಸಲು ಇದು ಸೇತುವೆಯಾಗಿದೆ. ಸಾಕಷ್ಟು ಚರ್ಚೆ, ವಾದ- ವಿವಾದಗಳಿಗೂ ಇಲ್ಲಿ ಜಾಗವುಂಟು. ಬಹುಶಃ ಫೇಸ್‌ಬುಕ್ ಇಲ್ಲದೇ ಇರುವ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ಅದು ನಮ್ಮ ಬದುಕಿನ ಭಾಗವಾಗಿದೆ.

ಫೇಸ್‌ಬುಕ್‌ನಲ್ಲಿ ಬಳಕೆದಾರರು ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸಬಹುದು, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಬಹುದು ಮತ್ತು ಅವರ ದೈನಂದಿನ ಜೀವನದ ಕುರಿತು ಅಪ್‌ಡೇಟ್ ಪೋಸ್ಟ್ ಮಾಡಬಹುದು. ಇದು ಗುಂಪುಗಳು ಮತ್ತು ಪುಟಗಳಿಗೆ ಮೀಸಲಾದ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಇದೇ ರೀತಿಯ ಆಸಕ್ತಿಗಳು ಅಥವಾ ಹವ್ಯಾಸಗಳನ್ನು ಹಂಚಿಕೊಳ್ಳುವ ಇತರರೊಂದಿಗೆ ಸಂಪರ್ಕ ಸಾಧಿಸಲು ಫೇಸ್‌ಬುಕ್ ಅವರಿಗೆ ನೆರವು ಒದಗಿಸುತ್ತದೆ.

ಮೆಟಾ ಒಡೆತನದ ಈ ವೇದಿಕೆಯು ವೈಶಿಷ್ಟ್ಯಗಳೊಂದಿಗೆ ತುಂಬಿರುತ್ತದೆ. ಆದರೆ ಅವುಗಳಲ್ಲಿ ಹೆಚ್ಚಿನವು ಉತ್ತಮ ಸಾಮಾಜಿಕ ನೆಟ್‌ವರ್ಕಿಂಗ್ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಉದಾಹರಣೆಗೆ, ಅಪ್ಲಿಕೇಶನ್‌ನ ಮರುವಿನ್ಯಾಸಗೊಳಿಸಲಾದ ಬಳಕೆದಾರ ಇಂಟರ್ಫೇಸ್ ಅಪ್ಲಿಕೇಶನ್‌ನ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ. ಇಷ್ಟು ಮಾತ್ರವಲ್ಲದೇ, ಸಾಮಾಜಿಕ ಮಾಧ್ಯಮ-ಕೇಂದ್ರಿತ ಕಾರ್ಯಗಳನ್ನು ಹೊರತುಪಡಿಸಿ, ಬಳಕೆದಾರರಿಗೆ ಹತ್ತಿರದಲ್ಲಿರುವ Wi Fi ನೆಟ್‌ವರ್ಕ್ ಚೆಕ್ ಮಾಡಬಹುದು. ಅಲ್ಲದೇ, ಇಂಟರ್ನೆಟ್ ವೇಗವನ್ನು ಪರೀಕ್ಷಿಸಬಹುದು.

ಫೇಸ್‌ಬುಕ್‌ನಲ್ಲಿ (Facebook) ಇಂಟರ್ನೆಟ್ ವೇಗ ಹೇಗೆ ಪರೀಕ್ಷಿಸುವುದು?

ಫೇಸ್‌ಬುಕ್ ಆ್ಯಪ್ ಬಳಸಿಕೊಂಡ ಇಂಟರ್ನೆಟ್ ವೇಗ ಪರೀಕ್ಷಿಸಬೇಕಿದ್ದರೆ, ಬಳಕೆದಾರರು ಇತ್ತೀಚನ ಅಪ್‌ಡೇಟೆಡ್ ಆ್ಯಪ್ ಹೊಂದಿರಬೇಕು. ನಿಮ್ಮ ಸಾಧನದಲ್ಲಿ ಫೇಸ್‌ಬುಕ್ ಆ್ಯಪ್ ಓಪನ್ ಮಾಡಿ. ಬಳಿಕ ಲಾಗ್ ಇನ್ ಆಗಿ. ಬಳಿಕ, ಫೇಸ್‌ಬುಕ್‌ನ ವಿವಿಧ ಫಂಕ್ಷನ್ಸ್, ಸೆಟ್ಟಿಂಗ್ಸ್, ಮತ್ತು ಇತರ ಆಯ್ಕೆಗಳಿಗೆ ಪ್ರವೇಶ ಕಲ್ಪಿಸುವ ಹೊಸ ಡ್ರಾಪ್-ಡೌನ್ ಮೆನುವನ್ನು ಪ್ರದರ್ಶಿಸುವ ಮೂರು ಅಡ್ಡ ಸಾಲುಗಳ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೊ ಫೇಸ್‌ ಬುಕ್‌ಗೆ ಅಪ್ಲೋಡ್:‌ ಶಿವಮೊಗ್ಗ ಜಿಲ್ಲೆಯ ಇಬ್ಬರ ಮೇಲೆ ಕೇಸ್‌, ಅಮೆರಿಕದಿಂದ ಬಂದ ಮಾಹಿತಿ!

ಆ ನಂತರ, ಸ್ಕ್ರಾಲ್ ಡೌನ್ ಮಾಡಿ ಮತ್ತು ಡ್ರಾಪ್ ಡೌನ್ ಬಾಕ್ಸ್‌ನಿಂದ Settings & Privacy ಆಪ್ಷನ್ ಸೆಲೆಕ್ಟ್ ಮಾಡಿ. ಅಲ್ಲಿ ಕಾಣಸಿಗುವ Wi-Fi ಮತ್ತು cellular performance ಬಳಸಿ. ಆ ನಂತರ, ಕಂಟಿನ್ಯೂ ಬಟನ್‌ ಸರ್ಚ್ ಮಾಡಿ, ಬಳಿಕ ಸೆಲೆಕ್ಟ್ ಮಾಡಿ. ನಂತರದ ಪುಟದಲ್ಲಿ ರನ್ ಸ್ಪೀಡ್ ಟೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ನೀವು ಇಂಟರ್ನೆಟ್ ಸ್ಪೀಡ್ ಎಷ್ಟಿದೆ ಎಂಬುದನ್ನು ಕಾಣಬಹುದು.

Exit mobile version