ಹಾಡಹಗಲೇ ಕಳ್ಳತನ ಮಾಡುವಂತಹ ಪ್ರಕರಣಗಳು ಹೆಚ್ಚಾಗಿವೆ. ಕಳ್ಳರು ಹೆಚ್ಚಾಗಿ ರಾತ್ರಿಯ ವೇಳೆ ಕಳ್ಳತನ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿಯೇ ತಮ್ಮ ಕಳ್ಳತನದ ಕೆಲಸ ಶುರು ಮಾಡಿಕೊಂಡಿದ್ದಾರೆ. ಅದರಲ್ಲೂ ಜನಸಂದಣಿ ಇರುವಂತಹ ಸ್ಥಳಗಳಲ್ಲಿಯೇ ಯಾವುದೇ ಭಯವಿಲ್ಲದೇ ಇಂತಹ ಘೋರ ಕೃತ್ಯ ಎಸಗುತ್ತಿದ್ದಾರೆ. ಮೊದಲೆಲ್ಲಾ ತಪ್ಪು ಮಾಡಿದವರಿಗೆ ಮುಂದಿನ ಜನ್ಮದಲ್ಲಿ ಶಿಕ್ಷೆ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ ಈಗ ತಪ್ಪು ಮಾಡಿದವರಿಗೆ ಅಂದೇ ದೇವರು ಶಿಕ್ಷೆ ವಿಧಿಸುತ್ತಾನೆ ಎಂಬುದಕ್ಕೆ ಬ್ರೆಜಿಲ್‍ನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಈ ದೃಶ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್(Viral Video) ಆಗಿದೆ.
ಇತ್ತೀಚೆಗೆ ಬ್ರೆಜಿಲ್‍ನ ಸಾವೊ ಪಾಲೊದಲ್ಲಿ ಹಾಡುಹಗಲಿನಲ್ಲಿಯೇ ವೃದ್ಧರೊಬ್ಬರ ಸೆಲ್‍ಫೋನ್ ಅನ್ನು ಯುವಕ ಕಳ್ಳತನ ಮಾಡಿದ್ದಾನೆ. ಆದರೆ ಆತನ ತಪ್ಪಿಗೆ ದೇವರು ತಕ್ಕ ಶಿಕ್ಷಿ ವಿಧಿಸಿದ್ದಾನೆ. ಕದ್ದು ಓಡುತ್ತಿದ್ದ ಯುವಕನಿಗೆ ಬಸ್ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ 71 ವರ್ಷದ ವ್ಯಕ್ತಿಯೊಬ್ಬರು ತಮ್ಮ ಫೋನಿನಲ್ಲಿ ಮಾತನಾಡುತ್ತಾ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕ ಅವರ ಹತ್ತಿರ ಬಂದು ವೃದ್ಧನ ಕೈಯಿಂದ ಫೋನ್ ಅನ್ನು ಕಸಿದುಕೊಂಡನು. ನಂತರ ಓಡುತಾ ರಸ್ತೆ ದಾಟಲು ಪ್ರಯತ್ನಿಸಿದಾಗ ಮುಂದೆ ಬರುತ್ತಿದ್ದ ಬಸ್ ಆತನಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಅವನಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
NEW: 17-year-old teen steals a cell phone and then immediately gets hit by a bus after he tried running off with it.
— Collin Rugg (@CollinRugg) July 20, 2024
The incident reportedly happened in São Paulo, Brazil.
A 71-year-old man was seen walking down the street talking on the phone when the teenager snatched it out… pic.twitter.com/ctgB1SN8f1
ಈ ಘಟನೆ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗೇ ಇದಕ್ಕೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವು ಬಳಕೆದಾರರು ಕಳ್ಳತನದ ಅಪರಾಧಿಗಳಿಗೆ ಇದು ತಕ್ಕ ಶಿಕ್ಷೆ ಎಂದು ಹೇಳಿದ್ದಾರೆ. ಹಾಗೇ ಕೆಲವರು ಕಳ್ಳತನ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ ಎಂದು ತಿಳಿಸಿದ್ದಾರೆ. ಇತರರು ಈ ಪರಿಸ್ಥಿತಿಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ, ಪಲಾಯನ ಮಾಡುವಾಗ ಕಳ್ಳನು ಮೂಲಭೂತ ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಫಲನಾಗಿರುವುದು ಅವನ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅತೀ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ; ಮೇಲೆ ಹಾರಿ ನೆಲಕ್ಕೆ ಅಪ್ಪಳಿಸಿದ ದಂಪತಿ
*Viewers discretion solicited.*
— 𝔇𝔢 𝔖𝔞𝔪 (@Desam_officialz) June 25, 2024
He robbed a lady of her handset and took to his heels. You can hear the lady screaming. This is GOD's instant Judgement on Earth. God have Mercy.🙆♂️🙆♂️🙆♂️🙆♂️ pic.twitter.com/1JnuXXPMaX
ಈ ಹಿಂದೆ ಕಳ್ಳನೊಬ್ಬ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ವೇಗವಾಗಿ ಓಡುತ್ತಾ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ವೇಗವಾಗಿ ಬಂದ ಕಾರೊಂದು ಆತನಿಗೆ ಡಿಕ್ಕಿಹೊಡೆದ ಪರಿಣಾಮ ಮೊಬೈಲ್ ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಯಾವಾಗ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಆತ ಗಾಳಿಯಲ್ಲಿ ಎತ್ತರಕ್ಕೆ ಹಾರಿ ರಸ್ತೆ ಮೇಲೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.