Site icon Vistara News

ವಿಸ್ತಾರ TOP 10 NEWS: ಅಮಿತ್​ ಶಾ ರಾಜ್ಯ ಪ್ರವಾಸ; ಕಾಂಗ್ರೆಸ್​, ಬಿಜೆಪಿ ಮೀಸಲಾತಿ ಜಟಾಪಟಿಯವರೆಗಿನ ಪ್ರಮುಖ ಸುದ್ದಿಗಳಿವು

Vistara TOP 10 NEWS: From Amit Shah's state visit to Congress, BJP reservation Fight, the most important news

#image_title

1. ರಾಹುಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಕ್ತಾಯವಾಗುತ್ತಿದೆ: ಮೋದಿ ನೇತೃತ್ವವನ್ನು ದೇಶವೇ ಬಯಸಿದೆ ಎಂದ ಅಮಿತ್‌ ಶಾ
ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಕಾಂಗ್ರೆಸ್‌ ಮುಕ್ತಾಯವಾಗುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ( Amit Shah) ಹೇಳಿದ್ದಾರೆ. ರಾಯಚೂರು ಜಿಲ್ಲೆ ಜಲಜೀವನ್‌ ಮಿಷನ್‌ ಕಾಮಗಾರಿಯ ಶಂಕುಸ್ಥಾಪನೆ ಮತ್ತು ದೇವದುರ್ಗ ಹಾಗೂ ರಾಯಚೂರು(ನಗರ) ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಭಾಗವಹಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ಓದಿಗಾಗಿ: ಸಿಎಂ ಕುರ್ಚಿಗೆ ಕಚ್ಚಾಡುವವರನ್ನು ತಿರಸ್ಕರಿಸಿ ದೇಶಭಕ್ತರನ್ನು ಆಯ್ಕೆಮಾಡಿ ಎಂದು ಕರೆ ನೀಡಿದ ಅಮಿತ್‌ ಶಾ

2. ಮೈಸೂರಿನಲ್ಲಿ ಜೆಡಿಎಸ್‌ ರಾಜವೈಭವ; ಅದ್ಧೂರಿ ಸಮಾವೇಶದೊಂದಿಗೆ ಪಂಚರತ್ನ ರಥಯಾತ್ರೆಗೆ ತೆರೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ (JDS Pancharatna yatre) ಸಮಾರೋಪ ಸಮಾರಂಭ ಭಾನುವಾರ ಸಂಜೆ (ಮಾರ್ಚ್‌ 26) ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ರಾಜವೈಭವದಿಂದ ನಡೆಯಿತು. ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಲಕ್ಷಾಂತರ ಜನರು ನೆರೆದು ಪಕ್ಷಕ್ಕೆ, ನಾಯಕರಿಗೆ ಜಯಘೋಷ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

3. ಮೀಸಲಾತಿ ಒಪ್ಪಿಕೊಳ್ಳಲು ಸ್ವಾಮೀಜಿಗಳಿಗೆ 25 ಬಾರಿ ಫೋನ್‌ ಮಾಡಿ ಒತ್ತಡ: ಡಿಕೆಶಿ ಆರೋಪ, ಬಿಜೆಪಿ ತಿರುಗೇಟು
ರಾಜ್ಯ ಸರ್ಕಾರ ಶುಕ್ರವಾರ (ಮಾ. 24) ಸಂಜೆ ಬಿಡುಗಡೆ ಮಾಡಿದ ಪರಿಷ್ಕೃತ ಮೀಸಲಾತಿ ನೀತಿಯನ್ನು (Reservation) ಒಪ್ಪಿಕೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೂಡಲ ಸಂಗಮಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮೇಲೆ ಒತ್ತಡ ಹೇರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಗಂಭೀರ ಆರೋಪ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ಓದಿಗಾಗಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೊಸ ಮೀಸಲಾತಿ ನೀತಿ ರದ್ದು, ಮುಸ್ಲಿಮರಿಗೆ ನ್ಯಾಯ; ಡಿಕೆಶಿ ಘೋಷಣೆ
ಮತ್ತಷ್ಟು ಓದಿಗಾಗಿ: ಮುಸ್ಲಿಂ ಮೀಸಲಾತಿ ಸಂವಿಧಾನಬದ್ಧವಲ್ಲ: ಮೀಸಲಾತಿ ಕತ್ತರಿಗೆ ಅಮಿತ್‌ ಶಾ ಸಮರ್ಥನೆ
ಮತ್ತಷ್ಟು ಓದಿಗಾಗಿ: ಮುಸ್ಲಿಂ ಮೀಸಲಾತಿ ರದ್ದು ವಿರೋಧಿಸಿ ಕಾನೂನು ಸಮರ: ಹೋರಾಟದ ಕುರಿತು ಮುಸ್ಲಿಂ ಮುಖಂಡರ ಸಭೆ

4. ದೇಶಾದ್ಯಂತ ಸಮೀಕ್ಷೆಗೆ ಮುಂದಾದ ಆರೆಸ್ಸೆಸ್, ಯಾಕೆ ಈ ಸರ್ವೇ?
ದೇಶಾದ್ಯಂತ ತನ್ನ ನೆಲೆಯನ್ನು ಹೆಚ್ಚಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ವು ಜನರೊಂದಿಗೆ ಸಂಪರ್ಕವನ್ನು ಸಾಧಿಸುವುದಕ್ಕಾಗಿ ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲು ಮುಂದಾಗಿದೆ. ಈ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಬೇರೆ ಬೇರೆ ಪ್ರದೇಶದಲ್ಲಿ ಜನರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಸಾರ್ವಜನಿಕ ಸಹಭಾಗಿತ್ವದ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಲಿದೆ ಎಂದು ಆರೆಸ್ಸೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. ಮಿತಿಮೀರಿದೆ ಖಲಿಸ್ತಾನಿಗಳ ಕುಕೃತ್ಯ; ಯುಎಸ್​​ನಲ್ಲಿ ಭಾರತದ ಪತ್ರಕರ್ತನ ಮೇಲೆ ಹಲ್ಲೆ, ಅಶ್ಲೀಲ ಪದಗಳಿಂದ ನಿಂದನೆ
ಖಲಿಸ್ತಾನಿಗಳು ಭಾರತದಲ್ಲಿದ್ದುಕೊಂಡು ಭಾರತದ ವಿರುದ್ಧ ಕತ್ತಿ ಮಸೆಯುವ ಜತೆಗೆ, ಕೆನಡಾ, ಇಂಗ್ಲೆಂಡ್​, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳಲ್ಲೂ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಆ ದೇಶಗಳಲ್ಲಿರುವ ಹಿಂದು ದೇಗುಲಗಳನ್ನು ಧ್ವಂಸ ಮಾಡುವುದು, ಭಾರತೀಯರನ್ನು ಹೀಗಳೆಯುವುದು ಇತ್ಯಾದಿ ಕುಕೃತ್ಯದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಯುಕೆಯಲ್ಲಿರುವ ಭಾರತದ ರಾಯಭಾರಿ ಕಚೇರಿ ಮೇಲಿನ ತ್ರಿವರ್ಣ ಧ್ವಜವನ್ನು ಕೆಳಗೆ ಇಳಿಸಿದ್ದರು. ಈಗ ಯುಎಸ್​​ನಲ್ಲಿರುವ ಭಾರತೀಯ ಪತ್ರಕರ್ತರೊಬ್ಬರ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ, ಅವರನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

6. ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಚಿನ್ನ ಗೆದ್ದ ಚಿರಾಗ್‌-ಸಾತ್ವಿಕ್‌ ಜೋಡಿ
ಸ್ವಿಸ್‌ ಓಪನ್‌ ಸೂಪರ್‌ ಸೀರೀಸ್‌-300 ಬ್ಯಾಡ್ಮಿಂಟನ್‌(Swiss Open) ಪಂದ್ಯಾವಳಿಯಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಚಿರಾಗ್‌ ಶೆಟ್ಟಿ(Chirag Shetty) ಮತ್ತು ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ(Satwiksairaj Rankireddy) ಜೋಡಿ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಮತ್ತಷ್ಟು ಓದಿಗಾಗಿ: ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಂಡ ನಿಖತ್ ಜರೀನ್
ಮತ್ತಷ್ಟು ಓದಿಗಾಗಿ: ಭಾರತಕ್ಕೆ ನಾಲ್ಕನೇ ಚಿನ್ನದ ಪದಕ; 75 ಕೆಜಿ ವಿಭಾಗದಲ್ಲಿ ಸ್ವರ್ಣ ಗೆದ್ದ ಲವ್ಲಿನಾ ಬೊರ್ಗೊಹೈನ್

7. ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್​ಗಳು ಪತ್ತೆ; ಏಪ್ರಿಲ್​​ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ
ಭಾರತದಲ್ಲಿ 24ಗಂಟೆಯಲ್ಲಿ 1890 ಕೊರೊನಾ ಕೇಸ್​ಗಳು (Coronavirus Cases) ದಾಖಲಾಗಿವೆ. ಇದು ಕಳೆದ 149 ದಿನಗಳಲ್ಲಿಯೇ (ಮೂರುವರೆ ತಿಂಗಳಲ್ಲಿ) ಗರಿಷ್ಠ ಮಟ್ಟದ ಪ್ರಕರಣ ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ಮೂಲಕ ದೇಶದಲ್ಲಿನ ಸಕ್ರಿಯ ಕೊರೊನಾ ಕೇಸ್​ಗಳ ಸಂಖ್ಯೆ 9433ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 4,47,04,147 ಆಗಿದೆ. ಕೊರೊನಾ ಪ್ರಸರಣ ಕಳೆದ ಒಂದು ವಾರದಿಂದ ಏರುತ್ತಿದ್ದು, ಪ್ರತಿದಿನವೂ ಹೆಚ್ಚೆಚ್ಚು ಕೇಸ್​ಗಳು ದಾಖಲಾಗುತ್ತಿವೆ. ಅದರಲ್ಲೂ ದೆಹಲಿ, ಮುಂಬಯಿಯಗಳಲ್ಲೇ ಹೆಚ್ಚು ಕೇಸ್​ಗಳು ಎನ್ನಲಾಗಿದೆ. ಹಾಗೇ, 24ಗಂಟೆಯಲ್ಲಿ ಏಳು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅದರಲ್ಲಿ ಗುಜರಾತ್​​ನಿಂದ ಎರಡು, ಮಹಾರಾಷ್ಟ್ರದಿಂದ 2 ಮತ್ತು ಕೇರಳದಿಂದ ಮೂರು ಸಾವುಗಳು ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

8. ಭಾರತದ ಮೊದಲ ಕೇಬಲ್‌ ಆಧರಿತ ರೈಲ್ವೆ ಸೇತುವೆ ಲೋಕಾರ್ಪಣೆಗೆ ರೆಡಿ, ಇದು ತೂಗು ಸೇತುವೆ ಅಲ್ಲ, ಹಾಗಾದರೆ ಏನು?
ಭಾರತದ ಮೊಟ್ಟ ಮೊದಲ ಕೇಬಲ್‌ ಆಧರಿತ ರೈಲ್ವೆ ಸೇತುವೆ ( cable-styled’ bridge) ನಿರ್ಮಾಣದ ಅಂತಿಮ ಘಟ್ಟದಲ್ಲಿದೆ. (Anji bridge) 2023ರ ಮೇ ವೇಳೆಗೆ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ. ಜಮ್ಮು ಕಾಶ್ಮೀರದಲ್ಲಿ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಕೇಬಲ್‌ ಆಧರಿತ ರೈಲ್ವೆ ಸೇತುವೆ ದೇಶದ ಎಂಜಿನಿಯರಿಂಗ್‌ ಕೌಶಲಕ್ಕೆ ಸಾಕ್ಷಿ ಎಂದೇ ಬಣ್ಣಿಸಲಾಗುತ್ತಿದೆ. ಅಂಜಿ ಬ್ರಿಡ್ಜ್‌ ಎಂದೇ ಇದು ಜನಪ್ರಿಯವಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

9. GST Raid: ಜಿಎಸ್‌ಟಿ ಅಧಿಕಾರಿಗಳ ದಾಳಿ; ಬಿಜೆಪಿ ಆಕಾಂಕ್ಷಿಗೆ ಸೇರಿದ 3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧೆಡೆ ರಾಜಕೀಯ ಪಕ್ಷಗಳಿಂದ ವೋಟಿಗಾಗಿ ಮತದಾರರಿಗೆ ಉಡುಗೊರೆಗಳನ್ನು ನೀಡಿ ಆಮಿಷ ಒಡ್ಡಲಾಗುತ್ತಿದೆ. ಈ ನಡುವೆ ನಗರದ ಪ್ರತಿಷ್ಠಿತ ಖಾಸಗಿ ಶಾಲೆ ಮೇಲೆ ಜಿಎಸ್‌ಟಿ ಅಧಿಕಾರಿಗಳು (GST Raid) ದಾಳಿ ನಡೆಸಿ, ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಕುಕ್ಕರ್‌, ಗಡಿಯಾರ ಹಾಗೂ ಪಾತ್ರೆಗಳನ್ನು ಜಪ್ತಿ ಮಾಡಿದ್ದಾರೆ. ವಶಕ್ಕೆ ಪಡೆದಿರುವ ವಸ್ತುಗಳು ಬ್ಯಾಟರಾಯನಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್‌ಗೆ ಸೇರಿದವು ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

10. ಪರಪುರುಷನ ತೆಕ್ಕೆಯಲ್ಲಿ ಪತ್ನಿ; ಆಕೆಯ ಅಕ್ರಮ ಸಂಬಂಧವನ್ನು ಪತಿಗೆ ಗೊತ್ತು ಮಾಡಿಸಿದ್ದು ಕಾರಿನಲ್ಲಿದ್ದ ಜಿಪಿಎಸ್​!
ಜಿಪಿಎಸ್​ (Global Positioning System) ವ್ಯವಸ್ಥೆ ಅದೆಷ್ಟು ಉಪಕಾರಿಯಾಗಿದೆ ಎಂಬುದು ನಮಗೆಲ್ಲ ಗೊತ್ತು. ಈ ಜಿಪಿಎಸ್​ನಿಂದಾಗಿ ನಾವು ಗೊತ್ತಿರದ/ಪರಿಚಯವೇ ಇಲ್ಲದ ಜಾಗಕ್ಕೂ ಆರಾಮಗಿ ಹೋಗಬಹುದು. ಈ ಜಿಪಿಎಸ್​​ನ್ನು ನಿಮ್ಮ ಮೊಬೈಲ್​, ವಾಚ್​, ಕಾರುಗಳಿಗೂ ಅಳವಡಿಸಿಕೊಳ್ಳುವಷ್ಟು ಸೌಲಭ್ಯ ಈಗಿದೆ. ಮನುಷ್ಯನ ಸಂಚಾರವನ್ನು ಜಿಪಿಎಸ್​ ಸುಗಮಗೊಳಿಸಿದೆ. ಇದೇ ಜಿಪಿಎಸ್​ ಈಗ ಬೆಂಗಳೂರಿನ ವ್ಯಕ್ತಿಗೆ ಆತನ ಹೆಂಡತಿಯಿಂದ ಆಗುತ್ತಿದ್ದ ವಂಚನೆಯನ್ನು ಪತ್ತೆ ಮಾಡಿ ತೋರಿಸಿದೆ. ತನ್ನ ಪತ್ನಿಗೆ ಇನ್ನೊಬ್ಬಾತನೊಂದಿಗೆ ಅಫೇರ್​ ಇರುವುದನ್ನು ಆ ವ್ಯಕ್ತಿ ಜಿಪಿಎಸ್​​ನಿಂದ (GPS tracker) ಗೊತ್ತುಮಾಡಿಕೊಂಡಿದ್ದಾರೆ ಮತ್ತು ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. D ಕೋಡ್‌ ಅಂಕಣ: ಜೆಡಿಎಸ್‌ಗೆ 2023ರ ವಿಧಾನಸಭೆ ಚುನಾವಣೆ ‘Final Match’ ಏಕೆಂದರೆ…
  2. ಜಡ್ಜನ್ನು ಬುಕ್‌ ಮಾಡಿಕೊಂಡರೆ ಸಾಕು; ಆಪರೇಷನ್‌ ಕಮಲವೇ ಬೇಡ: ಬಿಜೆಪಿ ಕುರಿತು ದಿನೇಶ್‌ ಗುಂಡೂರಾವ್ ಹೇಳಿಕೆ
  3. Mann Ki Baat : ಅಂಗಾಂಗ ದಾನಕ್ಕೆ ಮುಂದೆ ಬರುವಂತೆ ಜನತೆಗೆ ಪ್ರಧಾನಿ ಮೋದಿ ಮನವಿ
  4. 36 ಉಪಗ್ರಹಗಳನ್ನೊಳಗೊಂಡ ಎಲ್​ವಿಎಂ3 ರಾಕೆಟ್​​ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ
  5. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್‌ಫುಲ್‌ ಟಿಪ್ಸ್‌-ಭಾಗ 2
Exit mobile version