Anji bridge : ಭಾರತದ ಮೊದಲ ಕೇಬಲ್‌ ಆಧರಿತ ರೈಲ್ವೆ ಸೇತುವೆ ಲೋಕಾರ್ಪಣೆಗೆ ರೆಡಿ, ಇದು ತೂಗು ಸೇತುವೆ ಅಲ್ಲ, ಹಾಗಾದರೆ ಏನು? - Vistara News

EXPLAINER

Anji bridge : ಭಾರತದ ಮೊದಲ ಕೇಬಲ್‌ ಆಧರಿತ ರೈಲ್ವೆ ಸೇತುವೆ ಲೋಕಾರ್ಪಣೆಗೆ ರೆಡಿ, ಇದು ತೂಗು ಸೇತುವೆ ಅಲ್ಲ, ಹಾಗಾದರೆ ಏನು?

ಜಮ್ಮು ಕಾಶ್ಮೀರದಲ್ಲಿ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೇಬಲ್‌ ಆಧರಿತ ರೈಲ್ವೆ ಸೇತುವೆಯನ್ನು ರೈಲ್ವೆಯ ಎಂಜಿನಿಯರಿಂಗ್‌ ಕೌಶಲಕ್ಕೆ ಸಾಕ್ಷಿ ಎಂದೇ ಬಣ್ಣಿಸಲಾಗಿದೆ. ಅಂತಿಮ ಘಟ್ಟದಲ್ಲಿರುವ ಈ ಸೇತುವೆಯ ವಿಶೇಷತೆ ಮತ್ತು (Anji bridge) ಪ್ರಯೋಜನವೇನು? ಇಲ್ಲಿದೆ ವಿವರ.

VISTARANEWS.COM


on

Anji bridge
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದ ಮೊಟ್ಟ ಮೊದಲ ಕೇಬಲ್‌ ಆಧರಿತ ರೈಲ್ವೆ ಸೇತುವೆ ( cable-styled’ bridge) ನಿರ್ಮಾಣದ ಅಂತಿಮ ಘಟ್ಟದಲ್ಲಿದೆ. (Anji bridge) 2023ರ ಮೇ ವೇಳೆಗೆ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ. ಜಮ್ಮು ಕಾಶ್ಮೀರದಲ್ಲಿ ಅಂಜಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಕೇಬಲ್‌ ಆಧರಿತ ರೈಲ್ವೆ ಸೇತುವೆ ದೇಶದ ಎಂಜಿನಿಯರಿಂಗ್‌ ಕೌಶಲಕ್ಕೆ ಸಾಕ್ಷಿ ಎಂದೇ ಬಣ್ಣಿಸಲಾಗುತ್ತಿದೆ. ಅಂಜಿ ಬ್ರಿಡ್ಜ್‌ ಎಂದೇ ಇದು ಜನಪ್ರಿಯವಾಗುತ್ತಿದೆ.

193 ಮೀಟರ್‌ ಎತ್ತರದ ಸೇತುವೆಯ ವಿಶೇಷತೆ ಹಲವು

ಈ ಸೇತುವೆಯ ಮೇಲೆ ರೈಲನ್ನು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಾಯಿಸಬಹುದು. ಹೀಗಿದ್ದರೂ, ಗಾಳಿಯ ವೇಗ ಗಂಟೆಗೆ 90 ಕಿ.ಮೀಗಿಂತ ಹೆಚ್ಚು ಇದ್ದರೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗಂಟೆಗೆ 213 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ ಸೇತುವೆ ತಡೆದುಕೊಳ್ಳಬಲ್ಲುದು.

ಜಮ್ಮುವಿನಿಂದ 80 ಕಿ.ಮೀ ದೂರದಲ್ಲಿ ಇರುವ ಈ ಸೇತುವೆಯು 473 ಮೀಟರ್‌ ಉದ್ದವಿದೆ. ಉಧಾಮ್‌ಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್‌ ಯೋಜನೆಯಲ್ಲಿ ( Udhampur -Srinagar-Baramulla-Rail Link-USBRL) ಕಾತ್ರಾ-ಬನಿಹಾಲ್‌ ನಡುವೆ 2 ಮತ್ತು 3ನೇ ಸುರಂಗವನ್ನು ಈ ಸೇತುವೆ ಜೋಡಿಸುತ್ತದೆ. ಕಾತ್ರಾದಿಂದ ಬನಿಹಾಲ್‌ ನಡುವೆ 111 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಬನಿಹಾಲ್‌ ಮತ್ತು ಬಾರಾಮುಲ್ಲಾಗೆ ರೈಲು ಸಂಪರ್ಕ ಸಿಗಲಿದೆ. ಒಂದು ದೈತ್ಯ ಸ್ತಂಭವನ್ನು ಈ ಸೇತುವೆ ಆಧರಿಸಿದ್ದು, ಈಗಾಗಲೇ ತಿಳಿಸಿರುವಂತೆ ಎರಡು ಸುರಂಗಗಳನ್ನು ಜೋಡಿಸುತ್ತದೆ. ಕಾತ್ರಾ ಕಡೆಯ ಸುರಂಗ ಮಾರ್ಗ 5 ಕಿ.ಮೀ ಉದ್ದ ಹಾಗೂ ಕಾಶ್ಮೀರ ಕಡೆಯ ಸುರಂಗ 3 ಕಿ.ಮೀ ಉದ್ದವನ್ನು ಹೊಂದಿದೆ. ಎರಡೂ ಸುರಂಗಗಳಲ್ಲಿ ರೈಲ್ವೆ ಹಳಿಯನ್ನು ನಿರ್ಮಿಸಲಾಗಿದೆ. 2017ರಲ್ಲಿ ಈ ಕೇಬಲ್‌ ಸೇತುವೆಯ ಕಾಮಗಾರಿ ಆರಂಭವಾಗಿತ್ತು. ಹೀಗಿದ್ದರೂ, ಮೇನ್‌ ಕೇಬಲ್‌ ಅಳವಡಿಕೆ 2018ರಲ್ಲಿ ಶುರುವಾಗಿತ್ತು. ಭೂಕಂಪನದ ಸಾಧ್ಯತೆ ಬಗ್ಗೆಯೂ ರೂರ್ಕೆ ಐಐಟಿಯ ತಂಡ ಇಲ್ಲಿ ಅಧ್ಯಯನ ನಡೆಸಿದೆ.

ಯೋಜನೆಯ ಲಾಭವೇನು?

ಉಧಾಮ್‌ಪುರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್‌ ಯೋಜನೆಯಿಂದ ಕಾಶ್ಮೀರ ಕಣಿವೆಗೂ ರಾಷ್ಟ್ರೀಯ ರೈಲ್ವೆ ಜಾಲಕ್ಕೂ ಸಂಪರ್ಕ ಸಿಗಲಿದೆ. ಈ ರೈಲ್ವೆ ಸೇತುವೆಯ ಆಯುಷ್ಯ 120 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. 40 ಕೆ.ಜಿ ಸ್ಫೋಟಗಳನ್ನು ಸೇತುವೆ ಮೇಲೆ ಸ್ಫೋಟಿಸಿದರೂ, ಸೇತುವೆಗೆ ಹಾನಿಯಾಗುವುದಿಲ್ಲ. ಹಲವಾರು ಕಡೆಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ತೀವ್ರ ನಿಗಾ ವ್ಯವಸ್ಥೆಯನ್ನು ಹೊಂದಿದೆ.

ತೂಗು ಸೇತುವೆ ಅಲ್ಲ, ಹಾಗಾದರೆ ಏನು?

ಮೇಲ್ನೋಟಕ್ಕೆ ಈ ಕೇಬಲ್‌ ಆಧರಿತ ಸೇತುವೆಯು ತೂಗು ಸೇತುವೆಯಂತೆ ಕಾಣುತ್ತದೆ. ಏಕೆಂದರೆ ತೂಗಾಡುವ ಲೇನ್‌ಗಳು, ಗೋಪುರವು ತೂಗುಸೇತುವೆಯನ್ನು ಹೋಲುತ್ತವೆ. ಆದರೆ ಅದಕ್ಕೂ ಇದಕ್ಕೂ ವ್ಯತ್ಯಾಸ ಇದೆ. ಕೇಬಲ್‌ ಆಧರಿತ ಸೇತುವೆಗೆ ತೂಗು ಸೇತುವೆಗೆ ಬೇಕಾಗುವಂತೆ ಎರಡು ಗೋಪುರಗಳ ಅವಶ್ಯಕತೆ ಇಲ್ಲ. ಬದಲಿಗೆ ಒಂದೇ ಸ್ತಂಭವನ್ನು ಆಧರಿಸಿ ಇಕ್ಕೆಲಗಳಲ್ಲೂ ಕೇಬಲ್‌ಗಳನ್ನು ವಿಸ್ತರಿಸಿ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ಎರಡೂ ತುದಿಗಳಲ್ಲಿ ಗೋಪುರಗಳ ಅಗತ್ಯ ಇದಕ್ಕಿರುವುದಿಲ್ಲ.

ಸೇತುವೆಗೆ ಕಡಿಮೆ ಉಕ್ಕು ಸಾಕು:

ಕೇಬಲ್‌ ಆಧರಿತ ಸೇತುವೆಯು ಸಂಕೋಚನದ ಒತ್ತಡವನ್ನು ಹೀರಿಕೊಳ್ಳುವ ಮತ್ತು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸೇತುವೆಗೆ ಹಲವಾರು ಕಡೆಗಳಲ್ಲಿ ಕಟ್ಟಿದ ಕೇಬಲ್‌ಗಳು ಗೋಪುರದಲ್ಲಿ ಒಂದು ಪಾಯಿಂಟ್‌ನಲ್ಲಿ ಸಂಧಿಸುತ್ತವೆ. ಯುರೋಪ್‌ನಲ್ಲಿ ಎರಡನೇ ಜಾಗತಿಕ ಯುದ್ಧದ ಸಂದರ್ಭ ಕೇಬಲ್‌ ಆಧರಿತ ಸೇತುವೆಗಳನ್ನು ನಿರ್ಮಿಸಲಾಗಿತ್ತು. ಆದರೆ 16ನೇ ಶತಮಾನದ ಹಿಂದೆಯೇ ಐರೋಪ್ಯ ಸಂಶೋಧಕ ಫೌಸ್ಟ್‌ ವ್ರಾನ್‌ಸಿಸ್‌ ಇಂಥ ಎಂಜಿನಿಯರಿಂಗ್‌ ಅನ್ನು ಸಂಶೋಧಿಸಿದ್ದ. ತೂಗು ಸೇತುವೆಯ ಎಲ್ಲ ಪ್ರಯೋಜನಗಳನ್ನೂ ನೀಡುವ ಕೇಬಲ್‌ ಆಧರಿತ ಸೇತುವೆಗಳು ಈಗ ಜನಪ್ರಿಯವಾಗಿವೆ. 152 ಮೀಟರ್‌ನಿಂದ 853 ಮೀಟರ್‌ ಉದ್ದದ ತನಕ ಇಂಥ ಸೇತುವೆಗಳು ನಿರ್ಮಾಣವಾಗಿವೆ. ಇವುಗಳಿಗೆ ಉಕ್ಕಿನ ತಂತಿಗಳು ಕಡಿಮೆ ಸಾಕು. ವೇಗವಾಗಿ ನಿರ್ಮಿಸಬಹುದು. ಕಾಂಕ್ರಿಟ್‌ ರಚನೆಗಳನ್ನು ಮೊದಲೇ ತಯಾರಿಸಿ ಅಳವಡಿಸಬಹುದು. ಹೀಗೆ ಹಲವು ಪ್ರಯೋಜನಗಳಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

ವಿಸ್ತಾರ Explainer: Moscow Attack: ಯಾವುದಿದು ಐಸಿಸ್‌-ಕೆ? ಮಾಸ್ಕೋ ಮೇಲೆ ಈ ಉಗ್ರರು ದಾಳಿ ನಡೆಸಿದ್ದೇಕೆ?

ISIS-K ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನ್ ಶಾಖೆಯ ಕಿರಾತಕರ ಬಗ್ಗೆ ವಿವರ ಹಾಗೂ ರಷ್ಯಾದ ಮೇಲೆ ದಾಳಿ (Moscow Attack) ಮಾಡಿರುವುದರ ಹಿಂದೆ ಅವರ ಉದ್ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ:

VISTARANEWS.COM


on

moscow attack isis k
Koo

ವಾಷಿಂಗ್ಟನ್: ರಷ್ಯಾದ ಪ್ರಮುಖ ನಗರ ಮಾಸ್ಕೋ ಸಂಗೀತ ಹಾಲ್‌ನಲ್ಲಿ ನಡೆದ ಭಯಾನಕ ಗ್ರೆನೇಡ್‌ ಹಾಗೂ ಗುಂಡಿನ ದಾಳಿಯನ್ನು (Moscow Attack) ಇಸ್ಲಾಮಿಕ್ ಸ್ಟೇಟ್ (Islamic state) ಭಯೋತ್ಪಾದಕರು ನಡೆಸಿರುವುದು ಖಚಿತವಾಗಿದೆ. ಐಸಿಸ್‌-ಕೆ (ISIS-K) ಕೈವಾಡವನ್ನು ದೃಢೀಕರಿಸುವ ಗುಪ್ತಚರ ಮಾಹಿತಿಯನ್ನು ಅಮೆರಿಕ ಬೇಹುಗಾರಿಕೆ ಇಲಾಖೆ ಖಚಿತಪಡಿಸಿದೆ.

ISIS-K ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನ್ ಶಾಖೆಯ ಕಿರಾತಕರ ಬಗ್ಗೆ ವಿವರ ಹಾಗೂ ರಷ್ಯಾದ ಮೇಲೆ ದಾಳಿ ಮಾಡಿರುವುದರ ಹಿಂದೆ ಅವರ ಉದ್ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ:

ISIS-K ಎಂದರೇನು?

ISIS-K ಎಂದರೆ ಇಸ್ಲಾಮಿಕ್‌ ಸ್ಟೇಟ್‌ ಖೊರಾಸನ್.‌ ಖೊರಾಸನ್‌ ಎಂದರೆ ಇರಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನದ ಭಾಗಗಳನ್ನು ಒಳಗೊಂಡಿರುವ ಪ್ರದೇಶದ ಹಳೆಯ ಪದ. 2014ರ ಕೊನೆಯಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಇದು ಸ್ಥಾಪನೆಯಾಯಿತು ಮತ್ತು ಜಿಹಾದಿಸ್ಟರ ತೀವ್ರ ಕ್ರೂರತೆಗೆ ಕುಖ್ಯಾತಿ ಪಡೆಯಿತು.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪಿನ ಅತ್ಯಂತ ಸಕ್ರಿಯ ಪ್ರಾದೇಶಿಕ ಅಂಗಸಂಸ್ಥೆಗಳಲ್ಲಿ ಒಂದಾದ ISIS-K, 2018ರ ಸುಮಾರಿಗೆ ತನ್ನ ಸದಸ್ಯತ್ವ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿದೆ. ತಾಲಿಬಾನ್ ಮತ್ತು ಅಮೆರಿಕದ ಪಡೆಗಳು ಇದರ ಮೇಲೆ ದಾಳಿಯೆಸಗಿ ಭಾರೀ ನಷ್ಟವನ್ನುಂಟುಮಾಡಿವೆ. 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳು ಹಿಂದೆಗೆದವು. ಇದಾದ ಬಳಿಕ ಅಫ್ಘಾನಿಸ್ತಾನ ಸೇರಿದತೆ ಈ ಪ್ರಾಂತ್ಯದಲ್ಲಿ ಐಸಿಸ್-ಕೆದಂತಹ ಉಗ್ರಗಾಮಿ ಗುಂಪುಗಳ ವಿರುದ್ಧದ ಗುಪ್ತಚರ ಮಾಹಿತಿ ಪಡೆಯುವ ವ್ಯವಸ್ಥೆ ಹಿನ್ನಡೆ ಕಂಡಿತು.

ಗುಂಪು ಯಾವ ದಾಳಿಗಳನ್ನು ನಡೆಸಿದೆ?

ISIS-K ಅಫ್ಘಾನಿಸ್ತಾನದ ಒಳಗೆ ಮತ್ತು ಹೊರಗೆ ಮಸೀದಿಗಳ ಮೇಲೂ ಸೇರಿದಂತೆ ಹಲವಾರು ಮಾರಕ ದಾಳಿಗಳ ಇತಿಹಾಸವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಇರಾನ್‌ನಲ್ಲಿ ಅವಳಿ ಬಾಂಬ್‌ ದಾಳಿಗಳನ್ನು ನಡೆಸಿ ಸುಮಾರು 100 ಜನರನ್ನು ಕೊಂದಿತು. ಸೆಪ್ಟೆಂಬರ್ 2022ರಲ್ಲಿ ISIS-K ಉಗ್ರಗಾಮಿಗಳು ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಮಾರಣಾಂತಿಕ ಆತ್ಮಹತ್ಯಾ ಬಾಂಬ್ ದಾಳಿ ಮಾಡಿದರು.

Moscow attack

2021ರಲ್ಲಿ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಗುಂಡಿನ ದಾಳಿಗೆ ಈ ಗುಂಪು ಕಾರಣವಾಗಿದೆ. ಅಮೆರಿಕದ ಪಡೆಗಳ ಹಿಂದೆಗೆತದಿಂದ ಅಸ್ತವ್ಯಸ್ತವಾಗಿದ್ದ ದೇಶದಿಂದ ಪಡೆಗಳ ಸ್ಥಳಾಂತರದ ಸಮಯದಲ್ಲಿ ಈ ದಾಳಿ ನಡೆದಿದ್ದು, 13 ಯುಎಸ್ ಸೈನಿಕರು ಮತ್ತು ಹಲವಾರು ನಾಗರಿಕರ ಬಲಿ ಪಡೆದಿತ್ತು.

ಈ ತಿಂಗಳ ಆರಂಭದಲ್ಲಿ, ಮಧ್ಯಪ್ರಾಚ್ಯದ ಹೊಣೆ ಹೊತ್ತಿರುವ ಅಮೆರಿಕದ ಉನ್ನತ ಜನರಲ್ ಒಬ್ಬರು, ಐಸಿಸ್-ಕೆ ಅಫ್ಘಾನಿಸ್ತಾನದ ಹೊರಗೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ಹಿತಾಸಕ್ತಿಗಳ ಮೇಲೆ “ಆರು ತಿಂಗಳೊಳಗೆ ಮತ್ತು ಯಾವುದೇ ಎಚ್ಚರಿಕೆಯಿಲ್ಲದೆ” ದಾಳಿ ಮಾಡಬಹುದು ಎಂದು ಹೇಳಿದ್ದರು.

ರಷ್ಯಾದ ಮೇಲೆ ಏಕೆ ದಾಳಿ?

ಶುಕ್ರವಾರ ರಷ್ಯಾದಲ್ಲಿ ISIS-K ನಡೆಸಿದ ದಾಳಿಯು ಭಯಾನಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಗುಂಪು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ತೀವ್ರವಾಗಿ ದ್ವೇಷಿಸುತ್ತಿದೆ. “ಐಎಸ್ಐಎಸ್-ಕೆ ಕಳೆದ ಎರಡು ವರ್ಷಗಳಿಂದ ರಷ್ಯಾದಲ್ಲಿ ಸ್ಥಿರವಾಗಿದೆ. ಪುಟಿನ್ ಅನ್ನು ಆಗಾಗ್ಗೆ ಟೀಕಿಸುತ್ತಿದೆ” ಎಂದು ವಾಷಿಂಗ್ಟನ್ ಮೂಲದ ಸಂಶೋಧನಾ ಗುಂಪು ಸೌಫನ್ ಸೆಂಟರ್‌ನ ಕಾಲಿನ್ ಕ್ಲಾರ್ಕ್ ಹೇಳಿದ್ದಾರೆ.

ವಾಷಿಂಗ್ಟನ್ ಮೂಲದ ವಿಲ್ಸನ್ ಸೆಂಟರ್‌ನ ಮೈಕೆಲ್ ಕುಗೆಲ್‌ಮನ್ ಅವರು, “ನಿರಂತರವಾಗಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಎಸಗುವ ಚಟುವಟಿಕೆಗಳಲ್ಲಿ ರಷ್ಯಾ ಭಾಗಿಯಾಗಿದೆ ಎಂದು ಐಸಿಸ್‌ ಭಾವಿಸಿದೆ” ಎಂದು ಹೇಳುತ್ತಾರೆ. ಮಾಸ್ಕೋ ವಿರುದ್ಧ ತಮ್ಮದೇ ಆದ ದ್ವೇಷದ ಭಾವನೆಯನ್ನು ಹೊಂದಿರುವ ಹಲವಾರು ಮಧ್ಯ ಏಷ್ಯಾದ ಉಗ್ರಗಾಮಿಗಳ ತಂಡಗಳು ಈ ಗುಂಪಿನ ಸದಸ್ಯರಾಗಿವೆ.

ಇದನ್ನೂ ಓದಿ: Moscow Attack: ಮಾಸ್ಕೋದಲ್ಲಿ ಐಸಿಸ್ ಉಗ್ರರ ಭಯಾನಕ ದಾಳಿ; 40 ಸಾವು; ಸಂಗೀತ ಕೇಳಲು ಬಂದವರ ಮೇಲೆ ಯದ್ವಾತದ್ವಾ ಗುಂಡಿಕ್ಕಿದರು

Continue Reading

ಪ್ರಮುಖ ಸುದ್ದಿ

Lok Sabha Election 2024: ಮತದಾರರ ಪಟ್ಟಿಯಲ್ಲಿ ಈಗಲೂ ನಿಮ್ಮ ಹೆಸರು ಸೇರಿಸಬಹುದು; ಹೀಗೆ!

Lok Sabha Election 2024: ನೀವು ಹೊಸ ಮತದಾರರಾಗಿದ್ದರೆ, ಈಗಲೂ ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲು ಹಂತ ಹಂತವಾದ ಮಾರ್ಗದರ್ಶಿ ಇಲ್ಲಿದೆ.

VISTARANEWS.COM


on

new voters lok sabha election 2024
Koo

ಲೋಕಸಭೆ ಚುನಾವಣೆಯ (Lok Sabha Election 2024) ವೇಳಾಪಟ್ಟಿ ಪ್ರಕಟವಾಗಿ, ನೀತಿ ಸಂಹಿತೆಯೂ (Model Code of Conduct) ಜಾರಿಯಾಗಿ, ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದು ಪ್ರಜಾತಂತ್ರದ (Democracy) ಅತಿ ದೊಡ್ಡ ಹಬ್ಬ. ಇದರಲ್ಲಿ ನಾವೂ ನೀವೂ ಎಲ್ಲರೂ ಪಾಲ್ಗೊಳ್ಳಬೇಕಲ್ಲವೇ? ಮತ ಹಾಕಬೇಕಿದ್ದರೆ ಮುಖ್ಯವಾಗಿ ಬೇಕಿರುವುದು ನೀವು ಭಾರತೀಯ ಪ್ರಜೆಯಾಗಿರಬೇಕು (Indian Citizen) ಹಾಗೂ ಮತದಾರರ ಯಾದಿಯಲ್ಲಿ (Voter’s List) ನಿಮ್ಮ ಹೆಸರಿರಬೇಕು. ಒಂದು ವೇಳೆ ನೀವು ಹೊಸ ಮತದಾರರಾಗಿದ್ದರೆ, ಈಗಲೂ ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಅವಕಾಶವಿದೆ.

ಚುನಾವಣಾ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲು ಹಂತ ಹಂತವಾದ ಮಾರ್ಗದರ್ಶಿ ಇಲ್ಲಿದೆ.

ನಿಮ್ಮ ಅರ್ಹತೆಯನ್ನು ಪರಿಶೀಲಿಸಿ

ದಾಖಲಾತಿ ಪ್ರಕ್ರಿಯೆಗೆ ಮುಂದುವರಿಯುವ ಮೊದಲು, ನೀವು ಮತದಾರರ ನೋಂದಣಿಗೆ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂಬುದನ್ನು ಪರಿಶೀಲಿಸಿ. ಮೊದಲನೆಯದಾಗಿ, ನೀವು ಭಾರತೀಯ ನಾಗರಿಕರಾಗಿರಬೇಕು. ಈ ವರ್ಷದ ಜನವರಿ 1ಕ್ಕೆ 18 ವರ್ಷ ತುಂಬಿರಬೇಕು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ನೀವು ಭಾರತೀಯ ಪ್ರಜೆ ಎಂಬುದಕ್ಕೆ ಅಗತ್ಯವಾದ ದಾಖಲೆ ಇರಬೇಕು.

ಆನ್‌ಲೈನ್ ನೋಂದಣಿ

ಚುನಾವಣಾ ಆಯೋಗವು ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ಸೈಟ್‌ಗೆ ಹೋಗಿ; ಅಥವಾ ಮತದಾರರ ಸಹಾಯವಾಣಿಗೆ ಕರೆ ಮಾಡಿ; ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.

ನಿಮ್ಮ ಹೆಸರನ್ನು ಹೇಗೆ ಸೇರಿಸುವುದು?

ಫಾರ್ಮ್ ಸಲ್ಲಿಕೆ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಆನ್‌ಲೈನ್‌ನಲ್ಲಿ ಅರ್ಜಿ ಫಾರ್ಮ್ 6 ಅನ್ನು ಭರ್ತಿ ಮಾಡಿ. ನಿಖರವಾದ ವೈಯಕ್ತಿಕ ವಿವರಗಳನ್ನು ಒದಗಿಸಿ. ಉದಾಹರಣೆಗೆ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಪೋಷಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಡಾಕ್ಯುಮೆಂಟ್ ಪರಿಶೀಲನೆ: ಅಪ್ಲೋಡ್ ಮಾಡಿದ ಎಲ್ಲಾ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡು, ಪರಿಶೀಲನೆಯ ಸಂದರ್ಭದಲ್ಲಿ ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಸ್ವೀಕರಿಸುವ ದಾಖಲೆಗಳೆಂದರೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ಸರ್ಕಾರ ನೀಡಿದ ಇತರ ಯಾವುದೇ ಗುರುತಿನ ಕಾರ್ಡ್.

ಕ್ಷೇತ್ರ ಪರಿಶೀಲನೆ: ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ಬೂತ್ ಮಟ್ಟದ ಅಧಿಕಾರಿ‌ (BLO) ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ನೀವು ನೀಡಿದ ವಿಳಾಸದಲ್ಲಿ ನಿವಾಸಿಯಾಗಿರುವುದನ್ನು ಖಚಿತಪಡಿಸಬೇಕು.

ಅರ್ಜಿಯ ಮೇಲ್ವಿಚಾರಣೆ ಮಾಡಿ: ನಿಮ್ಮ ಅರ್ಜಿ ಏನಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಲು NVSP ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಬಳಸಬಹುದು.

ತಿದ್ದುಪಡಿ ಮತ್ತು ನವೀಕರಣ: ನಿಮ್ಮ ಮತದಾರರ ಚೀಟಿಯಲ್ಲಿ ಯಾವುದೇ ದೋಷಗಳು ಇದ್ದಲ್ಲಿ ಅಥವಾ ಬದಲಾವಣೆ ಬೇಕಿದ್ದಲ್ಲಿ ಸೂಕ್ತ ಮಾಹಿತಿ ಹಾಗೂ ದಾಖಲೆಯೊಂದಿಗೆ ತಿದ್ದುಪಡಿಗಳಿಗಾಗಿ ಅದೇ ಕ್ಷೇತ್ರದಲ್ಲಿದ್ದರೆ ಫಾರ್ಮ್ 8 ಅನ್ನು ಬಳಸಬಹುದು. ಅಥವಾ ಕ್ಷೇತ್ರ ವರ್ಗಾವಣೆಗಾಗಿ ಫಾರ್ಮ್ 8A ಅನ್ನು ಬಳಸಬಹುದು.

ಭೌತಿಕ ದಾಖಲಾತಿ ಕೇಂದ್ರಗಳು: ಸಾಂಪ್ರದಾಯಿಕ ನೋಂದಣಿ ಮಾರ್ಗವನ್ನು ಬಯಸಿದರೆ ನೀವು ಹತ್ತಿರದ ಚುನಾವಣಾ ನೋಂದಣಿ ಅಧಿಕಾರಿ (ERO) ಕಚೇರಿ ಅಥವಾ ಮತದಾರರ ಅನುಕೂಲ ಕೇಂದ್ರಕ್ಕೆ (VFC) ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಭೌತಿಕವಾಗಿ ಸಲ್ಲಿಸಬಹುದು.

ಡೆಡ್‌ಲೈನ್ ಅರಿವು: ದಾಖಲಾತಿಗಾಗಿ ಅಂತಿಮ ದಿನಾಂಕದ ಬಗ್ಗೆ ಗಮನವಿರಲಿ. ಮತದಾರರ ಪಟ್ಟಿಯನ್ನು ಸಾಮಾನ್ಯವಾಗಿ ಚುನಾವಣಾ ದಿನಾಂಕಕ್ಕೆ ಕೆಲವು ವಾರಗಳ ಮೊದಲು ಮುಕ್ತಾಯಗೊಳಿಸಲಾಗುತ್ತದೆ. ಗಡುವನ್ನು ತಪ್ಪಿಸಿಕೊಂಡರೆ ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮತದಾನದ ಹಕ್ಕು ಚಲಾಯಿಸಲು ಸಾಧ್ಯವಾಗದೆ ಇರಬಹುದು.

ಜಾಗೃತಿ ಮೂಡಿಸಿ: ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸ್ನೇಹಿತರು, ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ಪ್ರೋತ್ಸಾಹಿಸಿ.

ಮತದಾನದಲ್ಲಿ ಸಾಮೂಹಿಕ ಭಾಗವಹಿಸುವಿಕೆಯು ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ರಚನೆಯನ್ನು ಬಲಪಡಿಸುತ್ತದೆ. ಈ ಮೇಲಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಲೋಕಸಮರದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು. ನಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸೋಣ ಮತ್ತು ಭಾರತದ ಉಜ್ವಲ ಭವಿಷ್ಯವನ್ನು ರೂಪಿಸೋಣ.

ಇದನ್ನೂ ಓದಿ: Election Ambassabor : ಮತದಾನ ರಾಯಭಾರಿಗಳಾಗಿ ಬಿಗ್‌ ಬಾಸ್‌ ಕಾರ್ತಿಕ್‌, ನಟ ನಾಗಭೂಷಣ್‌ ಆಯ್ಕೆ

Continue Reading

EXPLAINER

ವಿಸ್ತಾರ Explainer: ʼಒಂದು ದೇಶ, ಒಂದು ಚುನಾವಣೆʼ ವರದಿ ಸಲ್ಲಿಕೆಯಾಯ್ತು; ಮುಂದೇನು, ಯಾಕೆ, ಹೇಗೆ?

ವಿಸ್ತಾರ Explainer: ದೇಶದ ಗಾತ್ರ ಮತ್ತು ಪ್ರದೇಶಗಳ ನಡುವಿನ ಭೌಗೋಳಿಕ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಗಮನಿಸಿದರೆ, ಏಕಕಾಲದ ಚುನಾವಣೆಗೆ (one nation, one election) ಹಲವು ಸವಾಲುಗಳಿವೆ.

VISTARANEWS.COM


on

voting one nation one election
Koo

ವಿಸ್ತಾರ Explainer: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ನೇತೃತ್ವದ ಸಮಿತಿಯು ʻಒಂದು ರಾಷ್ಟ್ರ, ಒಂದು ಚುನಾವಣೆ’ (One nation, One Election) ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಲೋಕಸಭೆ ಚುನಾವಣೆಯ (Lok sabha Election 2024) ಸನಿಹದಲ್ಲೇ ಬಂದಿರುವ ಈ ವರದಿ, ಇದರ ನಂತರದ ಅವಧಿಗೆ (2029) ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಪ್ರಸ್ತಾಪ ಇಟ್ಟಿದೆ.

ʼಒಂದು ದೇಶ, ಒಂದು ಚುನಾವಣೆʼ (One nation, One Election) ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಈ ಬಗ್ಗೆ ಆಗಾಗ ದನಿ ಎತ್ತಲಾಗುತ್ತದೆ. ʼಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯು 2019ರಲ್ಲಿ ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. ಆದರೆ ಪ್ರತಿಪಕ್ಷಗಳಿಂದ ಇದು ಭಾರೀ ಟೀಕೆಗೆ ಗುರಿಯಾಗಿದೆ.

ಸದ್ಯ ವರದಿ ಸಲ್ಲಿಸಿರುವ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಸ್ಥಾಪಿಸಲಾಗಿತ್ತು. ಅಂದಿನಿಂದ ಈ ಸಮಿತಿ ಈ ಕುರಿತ ಹಲವು ದೇಶಗಳ ಮಾದರಿಗಳನ್ನು ಅಧ್ಯಯನ ಮಾಡಿದೆ. 39 ರಾಜಕೀಯ ಪಕ್ಷಗಳು, ಅರ್ಥಶಾಸ್ತ್ರಜ್ಞರು ಮತ್ತು ಭಾರತದ ಚುನಾವಣಾ ಆಯೋಗದ ಜೊತೆ ಸಮಾಲೋಚಿಸಿದೆ. ಈ ಪರಿಕಲ್ಪನೆಯನ್ನು ಬೆಂಬಲಿಸಿದೆ; ಆದರೆ ಅಸ್ತಿತ್ವದಲ್ಲಿರುವ ಚುನಾವಣಾ ಪ್ರಕ್ರಿಯೆಯನ್ನು ಮರು- ಹೊಂದಾಣಿಕೆ ಮಾಡಲು ಕಾನೂನುಬದ್ಧವಾದ ಕಾರ್ಯವಿಧಾನಕ್ಕೆ ಶಿಫಾರಸು ಮಾಡಿದೆ.

“ಸಮಿತಿಯು ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂದು ಸರ್ವಾನುಮತದ ಅಭಿಪ್ರಾಯವನ್ನು ಹೊಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳೊಂದಿಗೆ ಸಹ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸಬಹುದು” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯು ಹೇಳಿದೆ.

ʻಒಂದು ರಾಷ್ಟ್ರ, ಒಂದು ಚುನಾವಣೆ’ ಎಂದರೇನು?

ಸರಳವಾಗಿ ಹೇಳುವುದಾದರೆ, ಭಾರತದ ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳ ಸದಸ್ಯರ ಆಯ್ಕೆಗೆ ಮತದಾನ ಏಕಕಾಲದಲ್ಲಿ ನಡೆಯುವುದು. ಏಕಕಾಲದಲ್ಲಿ ಸಾಧ್ಯವಾಗದಿದ್ದರೆ ಒಂದೇ ವರ್ಷದಲ್ಲಿ ನಡೆಸುವುದು. ಪ್ರಸ್ತುತ ಕ್ಷಣದಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದ ಆಯ್ಕೆಗೆ ಚುನಾವಣೆ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕೆಲವು ರಾಜ್ಯ ಸರ್ಕಾರಗಳಿಗೂ ಮತದಾನ ನಡೆಯಲಿದೆ. ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾಗಳು ಈ ಸಮಯದಲ್ಲಿ ಅಸೆಂಬ್ಲಿ ಎಲೆಕ್ಷನ್‌ ಕಾಣಲಿವೆ.

ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ಗಳಲ್ಲಿ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಆರು ವರ್ಷಗಳ ಬಳಿಕ ಮೊದಲ ಅಸೆಂಬ್ಲಿ ಚುನಾವಣೆಯನ್ನು ಸೆಪ್ಟೆಂಬರ್ 30ರ ಮೊದಲು ನಡೆಸಬೇಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ಆದೇಶವಿದೆ. ಉಳಿದ ರಾಜ್ಯಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣಗಳು ಕಳೆದ ವರ್ಷ ವಿವಿಧ ಸಮಯಗಳಲ್ಲಿ ಮತದಾನ ಕಂಡಿದ್ದವು.

ದೇಶದ ಗಾತ್ರ ಮತ್ತು ಪ್ರದೇಶಗಳ ನಡುವಿನ ಭೌಗೋಳಿಕ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಗಮನಿಸಿದರೆ, ಏಕಕಾಲದ ಚುನಾವಣೆಗೆ ಹಲವು ಸವಾಲುಗಳಿವೆ. ಸಾರಿಗೆ ಸಂಪರ್ಕ, ಸಂಪನ್ಮೂಲ, ಸಾಂವಿಧಾನಿಕ, ಕಾನೂನು ಮತ್ತು ಪ್ರಾಯೋಗಿಕ ಸಮಸ್ಯೆಗಳು ಇವೆ.

one nation one election

ಏಕಕಾಲದ ಚುನಾವಣೆ ಏಕೆ?

ಕಳೆದ ವರ್ಷ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಘೋಷಿಸುವ ಮೊದಲು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದರ ಹಿಂದಿನ ಉದ್ದೇಶವನ್ನು ಲೋಕಸಭೆಯ ಮುಂದಿಟ್ಟರು.

ಪ್ರತಿ ವರ್ಷವೂ ಒಂದೊಂದು ಚುನಾವಣೆ ನಡೆಸುವುದರಿಂದ ಹಲವಾರು ಬಾರಿ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ನಿಯೋಜನೆ ಮಾಡಬೇಕಾಗುತ್ತದೆ. ಇದನ್ನು ಕಡಿತಗೊಳಿಸುವುದರಿಂದ ಸಾರ್ವಜನಿಕ ಖಜಾನೆಗೆ ಉಳಿತಾಯ; ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ವೆಚ್ಚವನ್ನು ಕಡಿಮೆ ಮಾಡುವುದರಿಂದ ಏಕಕಾಲಿಕ ಚುನಾವಣೆಗಳು ಹಣಕಾಸಿನ ಉಳಿತಾಯಕ್ಕೆ ಕಾರಣವಾಗುತ್ತವೆ.

ಅಸಮಕಾಲಿಕ ಚುನಾವಣೆ ಎಂದರೆ ನೀತಿ ಸಂಹಿತೆ ಪದೇ ಪದೆ ಜಾರಿಗೆ ಬರುತ್ತಿರುತ್ತದೆ. ಇದು ಕೇಂದ್ರ ಅಥವಾ ರಾಜ್ಯದ ಕಲ್ಯಾಣ ಯೋಜನೆಗಳ ಜಾರಿಯ ಮೇಲೆ, ಆಡಳಿತಾತ್ಮಕ ನಿರ್ಧಾರಗಳ ಮೇಲೆ, ಸೇವಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಏಕಕಾಲದ ಚುನಾವಣೆಯು ಮತದಾನದ ಪ್ರಮಾಣವನ್ನು ಸುಧಾರಿಸಬಹುದು. ಇದು ಪ್ರಸ್ತುತ ರಾಜ್ಯದಿಂದ ರಾಜ್ಯಕ್ಕೆ ಮತ್ತು ಸಾರ್ವತ್ರಿಕ ಚುನಾವಣೆಯಿಂದ ಅಸೆಂಬ್ಲಿ ಚುನಾವಣೆಗೆ ಬೇರೆ ಬೇರೆ ಇದೆ.

ಏಕಕಾಲ ಚುನಾವಣೆ ಹೇಗೆ ಸಾಧ್ಯ?

ಸದ್ಯ ಎಲ್ಲ ವಿಧಾನಸಭೆಗಳ ಕಾಲಾವಧಿ ಬೇರೆ ಬೇರೆ ಇದೆ. ಸಂವಿಧಾನದ ತಿದ್ದುಪಡಿಯಿಲ್ಲದೆ ಇದನ್ನು ಏಕಕಾಲಕ್ಕೆ ತರುವುದು ಅಸಾಧ್ಯ. ಆ ತಿದ್ದುಪಡಿಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಪ್ರಮುಖ ರಾಜಕೀಯ ಪಕ್ಷಗಳು ಅನುಮೋದಿಸಬೇಕು.

ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡುವುದು ಇನ್ನೊಂದು ದಾರಿ. ಅವುಗಳೆಂದರೆ ಆರ್ಟಿಕಲ್ 83 (ಸಂಸತ್ತಿನ ಅವಧಿ), ಆರ್ಟಿಕಲ್ 85 (ರಾಷ್ಟ್ರಪತಿಯಿಂದ ಲೋಕಸಭೆಯ ವಿಸರ್ಜನೆ), ಆರ್ಟಿಕಲ್ 172 (ರಾಜ್ಯ ಶಾಸಕಾಂಗಗಳ ಅವಧಿ), ಮತ್ತು ಆರ್ಟಿಕಲ್ 174 (ರಾಜ್ಯ ಶಾಸಕಾಂಗಗಳ ವಿಸರ್ಜನೆ), ಹಾಗೆಯೇ ವಿಧಿ 356 (ರಾಷ್ಟ್ರಪತಿಗಳ ಆಳ್ವಿಕೆ ಹೇರಿಕೆ). ಆದರೆ ಇದರಿಂದ ಕೇಂದ್ರ ಸರ್ಕಾರ ಭಾರತದ ಒಕ್ಕೂಟ ರಚನೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಒಳಗಾಗಬಹುದು.

ಇವುಗಳು ಪ್ರಮುಖ. ಏಕೆಂದರೆ, ಒಂದು ರಾಜ್ಯ ಅಥವಾ ಕೇಂದ್ರ ಸರ್ಕಾರ ವಿಶ್ವಾಸಮತ ಗಳಿಸಲು ವಿಫಲವಾದರೆ ಅಥವಾ ಅದರ ಅವಧಿ ಮುಗಿಯುವ ಮೊದಲು ವಿಸರ್ಜಿಸಲ್ಪಟ್ಟರೆ ಏನು ಮಾಡಬೇಕು ಎಂಬುದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ರಾಜ್ಯಗಳಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ಕೇಂದ್ರ ಆದೇಶ ನೀಡುವುದು ಅಸಾಧ್ಯ.

evm

ಚುನಾವಣಾ ಆಯೋಗದ 2015ರ ವರದಿ

ಒಂಬತ್ತು ವರ್ಷಗಳ ಹಿಂದೆ ಭಾರತೀಯ ಚುನಾವಣಾ ಆಯೋಗ ಸಹ ಸಹ ʼಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿತು. ಅದರ ಪ್ರಕಾರ, ಅವಿಶ್ವಾಸ ನಿರ್ಣಯಗಳು ಹೊಸ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯ ನಾಮನಿರ್ದೇಶನವನ್ನು ಒಳಗೊಂಡಿರಬೇಕು. ಹೊಸ ನಾಯಕ ತಕ್ಷಣವೇ ಪರೀಕ್ಷೆಯನ್ನು ಎದುರಿಸಬೇಕು. ಅವಧಿ ಮುಂಚೆಯೇ ಸರ್ಕಾರ ವಿಸರ್ಜನೆಗೊಂಡರೆ, ಹೊಸ ಸರ್ಕಾರಕ್ಕೆ ಮತದಾನ ನಡೆಸಬಹುದು. ಆದರೆ ನಿಗದಿತ ಐದು ವರ್ಷಗಳಲ್ಲಿ ಉಳಿದ ಅವಧಿಗೆ ಮಾತ್ರ ಸರ್ಕಾರ ಕಾರ್ಯಾಚರಿಸಬೇಕು.

ಚುನಾವಣೆ ಚಕ್ರವನ್ನು ಸಿಂಕ್ ಮಾಡಲು ಅಧಿಕಾರಾವಧಿ ವಿಸ್ತರಿಸುವುದು ಅಥವಾ ಕಡಿಮೆ ಮಾಡುವುದು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಸೂಚಿಸಲಾಗಿದೆ. ಆದರೆ ಇದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದನ್ನು ಅವರು “ಸಂವಿಧಾನದ ಮೂಲ ಸಂರಚನೆಯನ್ನು ಬುಡಮೇಲು ಮಾಡುವ ಹುನ್ನಾರ” ಎಂದು ಕರೆದಿದ್ದಾರೆ. “ನಿರಂಕುಶಪ್ರಭುತ್ವವನ್ನು ಪ್ರಜಾಪ್ರಭುತ್ವದ ವೇಷಭೂಷಣದಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುವ ವ್ಯವಸ್ಥೆ” ಎಂದಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಇದನ್ನು “ಇದು ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಬೆದರಿಕೆ. ಇದು ಅಪ್ರಾಯೋಗಿಕ. ಭಾರತದ ಸಂವಿಧಾನದಲ್ಲಿ ಇದನ್ನು ಪ್ರತಿಪಾದಿಸಲಾಗಿಲ್ಲ” ಎಂದಿದ್ದಾರೆ. ಆಮ್ ಆದ್ಮಿ ಪಕ್ಷವೂ ಈ ಕಲ್ಪನೆಯನ್ನು ವಿರೋಧಿಸಿದೆ. “ಇದು ಸಂಸದೀಯ ಪ್ರಜಾಪ್ರಭುತ್ವದ ಕಲ್ಪನೆ ಮತ್ತು ಸಂವಿಧಾನದ ಮೂಲ ರಚನೆಗೆ ಹಾನಿ ಮಾಡುತ್ತದೆ” ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು “ಪ್ರಜಾಪ್ರಭುತ್ವ ವಿರೋಧಿ” ಎಂದು ಟೀಕಿಸಿದೆ.

ಆದರೆ, ಎಲ್ಲ ವಿರೋಧ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಸ್ಥಳೀಯ ಕಾಂಗ್ರೆಸ್ ಘಟಕವು ಕೇಂದ್ರಾಡಳಿತ ಪ್ರದೇಶದಲ್ಲಿ ಏಕಕಾಲಕ ಚುನಾವಣೆ ನಡೆಸಬಹುದು ಎಂದು ಹೇಳಿವೆ.

1967ರವರೆಗೆ ಭಾರತದಲ್ಲಿ ಏಕಕಾಲಿಕ ಮತದಾನಗಳು ರೂಢಿಯಲ್ಲಿತ್ತು. ಆದರೆ ಅಂತಹ ನಾಲ್ಕು ಮತದಾನ ಮಾತ್ರ ನಡೆದವು. ಕೆಲವು ರಾಜ್ಯಗಳ ಶಾಸಕಾಂಗಗಳ ಅವಧಿಪೂರ್ವ ವಿಸರ್ಜನೆಯ ನಂತರ ವಿನ್ಯಾಸ ಬುಡಮೇಲಾಯಿತು.

ಸವಾಲುಗಳು ಏನು?

ಆಡಳಿತಕ್ಕೆ ಹೆಚ್ಚಿನ ಅಡ್ಡಿಯಾಗದಂತೆ ಚುನಾವಣಾ ಚಕ್ರವನ್ನು ಸಿಂಕ್ ಮಾಡುವುದು, ಎಲ್ಲಾ ರಾಜಕೀಯ ಪಕ್ಷಗಳ ಸಮ್ಮತಿ ಪಡೆಯುವುದು, ಸದನಗಳ ವಿಸರ್ಜನೆ, ರಾಷ್ಟ್ರಪತಿ ಆಳ್ವಿಕೆ ಅಥವಾ ಹಂಗ್ ಅಸೆಂಬ್ಲಿ ಕಾರಣದಿಂದ ಉಂಟಾಗುವ ತೊಡಕನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

ಪ್ರಾದೇಶಿಕ ಪಕ್ಷಗಳು ಸೀಮಿತ ಸಂಪನ್ಮೂಲಗಳನ್ನು ಹೊಂದಿರುತ್ತವೆ. ಲೋಕಸಭೆ ಚುನಾವಣೆಯಲ್ಲಿ ವಿಜೃಂಭಿಸುವ ಭಾರಿ ಹಣಕಾಸು ಹೊಂದಿರುವ ಪಕ್ಷಗಳ ಮುಂದೆ ಈ ಪಕ್ಷಗಳು ನೆಲಕಚ್ಚಬಹುದು; ಮತದಾರರಿಗೆ ರಾಷ್ಟ್ರೀಯ ಚುನಾವಣೆಯ ಸನ್ನಿವೇಶದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗದಿರಬಹುದು.

ಮತ್ತೊಂದು ಕಳವಳದ ಅಂಶವೆಂದರೆ ಇವಿಎಂಎಸ್ ಅಥವಾ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಂಗ್ರಹಿಸಲು ಉಂಟಾಗುವ ವೆಚ್ಚ. ಇದು ಪ್ರತಿ 15 ವರ್ಷಗಳಿಗೊಮ್ಮೆ ಸುಮಾರು ₹10,000 ಕೋಟಿ ಆಗಲಿದೆ ಎಂದು ಚುನಾವಣಾ ಸಮಿತಿ ಹೇಳಿದೆ.

ಜನತೆಯ ಅಭಿಪ್ರಾಯವೇನು?

ʼಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿಯು ಸಾರ್ವಜನಿಕರಿಂದ ಸುಮಾರು 21,000 ಸಲಹೆಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ 81 ಪ್ರತಿಶತಕ್ಕೂ ಹೆಚ್ಚು ಪರವಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: One Nation, One Election: ಯಂತ್ರಗಳ ಸಿದ್ಧತೆಗೆ ಒಂದು ವರ್ಷ ಸಮಯ ಬೇಕು: ಚುನಾವಣಾ ಆಯೋಗ

Continue Reading

EXPLAINER

ವಿಸ್ತಾರ Explainer: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಏನಾಗುತ್ತಿದೆ? ಯಾರಿವನು ಶೇಖ್‌ ಶಹಜಹಾನ್‌?

ವಿಸ್ತಾರ Explainer: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರಕ್ಕೆ (Sandeshkhali Violence) ಕಾರಣನಾಗಿರುವ ಶೇಖ್‌ ಶಹಜಹಾನ್‌ ಎಂಬ ಕ್ರೂರಿ ಸದ್ಯ ಸಿಬಿಐ ಬಂಧನದಲ್ಲಿದ್ದಾನೆ.

VISTARANEWS.COM


on

sandeshkhali sheik shahjahan
Koo

ವಿಸ್ತಾರ Explainer: ಪಶ್ಚಿಮ ಬಂಗಾಳ (West Bengal) ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ (Sandeshkhali) ಎಂಬ ಗ್ರಾಮ ಕಳೆದ ಎರಡು ತಿಂಗಳುಗಳಿಂದ ದೇಶವ್ಯಾಪಿ ಸುದ್ದಿಯಾಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ಹಿಂಸಾಚಾರ (Sandeshkhali violence) ರಾಜಕೀಯ ಬಿರುಗಾಳಿ, ಅಭೂತಪೂರ್ವ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್‌ (Trinamool Congress) ನಾಯಕ ಶೇಖ್‌ ಶಹಜಹಾನ್‌ (Sheikh Shahjahan) ಎಂಬಾತ ಇಲ್ಲಿನ ಹಲವಾರು ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯವೇ (Physical Abuse) ಈ ಪ್ರಕರಣದ ಕೇಂದ್ರಬಿಂದು. ಆದರೆ ಬಹುಕೋಟಿ ಪಡಿತರ ಹಗರಣ, ಇಡಿ ಅಧಿಕಾರಿಗಳ ಮೇಲಿನ ದಾಳಿ, ತೃಣಮೂಲ ಕಾಂಗ್ರೆಸ್‌ನ ಪ್ರತಿಷ್ಠೆ, ಬಿಜೆಪಿಯ ಪ್ರತಿಭಟನೆ, ಸುಪ್ರೀಂ ಕೋರ್ಟ್‌ (Supreme court) ಆದೇಶ ಎಲ್ಲವೂ ಸೇರಿಕೊಂಡು ಬೃಹತ್‌ ಪ್ರಮಾಣಕ್ಕೆ ಬೆಳೆದಿದೆ.

ಎಲ್ಲಿಂದ ಆರಂಭ?

ಪ್ರಕರಣ ಬಿಗಡಾಯಿಸಲು ಆರಂಭಿಸಿದ್ದು ಜನವರಿ 5ರಂದು ಮುಂಜಾನೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸಂದೇಶ್‌ಖಾಲಿಯಲ್ಲಿರುವ ಆರೋಪಿ ಶೇಖ್‌ ಶಹಜಹಾನ್‌ ನಿವಾಸಕ್ಕೆ ದಾಳಿ ನಡೆಸಲು ಬಂದಾಗ. ಬಹುಕೋಟಿ ಪಡಿತರ ವಿತರಣೆ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಟಿಎಂಸಿಯ ಪ್ರಭಾವಶಾಲಿ ನಾಯಕ, ಜಿಲ್ಲಾ ಪರಿಷತ್‌ ಸದಸ್ಯನೂ ಆಗಿರುವ ಶೇಖ್‌ ಶಹಜಹಾನ್ ಮನೆಗೆ ಇಡಿ ಅಧಿಕಾರಿಗಳು ದಾಳಿಯಿಟ್ಟರು. ಆದರೆ ಕೂಡಲೇ ಅಲ್ಲಿ ಶಹಜಹಾನ್‌ನ ಬೆಂಬಲಿಗರು ಸೇರಿ ಇಡಿ ಅಧಿಕಾರಿಗಳನ್ನು ತಡೆದದ್ದಲ್ಲದೆ, ಹಲ್ಲೆ ನಡೆಸಿದರು. ಅಧಿಕಾರಿಗಳು ಹೇಗೋ ಜೀವ ಉಳಿಸಿಕೊಂಡು ಅಲ್ಲಿಂದ ಪರಾರಿಯಾಗಬೇಕಾಯಿತು. ಇದಾದ ಬಳಿಕ ಶಹಜಹಾನ್‌ ಅಲ್ಲಿಂದಲೂ ನಾಪತ್ತೆಯಾದ.

ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆದದ್ದು ದೇಶಾದ್ಯಂತ ಸುದ್ದಿಯಾಯಿತು. ಬಿಜೆಒಇ ಹಾಗೂ ರಾಜ್ಯ ವಿಪಕ್ಷಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದನಿಯೆತ್ತಿದವು. ಇದರಿಂದ ದೌರ್ಜನ್ಯಕ್ಕೊಳಗಾಗಿದ್ದ ಸ್ಥಲೀಯ ಮಹಿಳೆಯರಿಗೂ ಧ್ವನಿ ಬಂದಂತಾಯಿತು. ಸಂತ್ರಸ್ತ ಮಹಿಳೆಯರು ಒಟ್ಟು ಸೇರಿದರು. ಶಹಜಹಾನ್‌ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡರು. ಕೂಡಲೇ ರಾಷ್ಟ್ರೀಯ ಮಾಧ್ಯಮದ ಗಮನ ಈ ಮಹಿಳೆಯರ ಕಡೆಗೆ ತಿರುಗಿತು. ಈ ಮಹಿಲೆಯರು ಶೇಖ್‌ ಶಹಜಹಾನ್‌ ಹಾಗೂ ಆತನ ಬೆಂಬಲಿಗರು, ತೃಣಮೂಲ ಕಾರ್ಯಕರ್ತರು ಸಂದೇಶ್‌ಖಾಲಿಯಲ್ಲಿ ನಡೆಸುತ್ತಿದ್ದ ಬರ್ಬರ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

Sheikh Shahjahan

ಬರ್ಬರ ಲೈಂಗಿಕ ದೌರ್ಜನ್ಯ

“ಶಹಜಹಾನ್‌ ಹಾಗೂ ಆತನ ಜನ ನಮ್ಮ ಭೂಮಿಯನ್ನು ಅವರ ಸಿಗಡಿ ಕೃಷಿಗಾಗಿ ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ನಮ್ಮನ್ನು ಹಿಂಸಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದಾರೆ” ಎಂದರು. “ಟಿಎಂಸಿ ಪಕ್ಷದ ಪುಂಡರು ಇಲ್ಲಿನ ಪ್ರತಿ ಮನೆಯನ್ನೂ ಗುಪ್ತವಾಗಿ ಸಮೀಕ್ಷೆ ಮಾಡುತ್ತಾರೆ. ಯಾವುದೇ ಸುಂದರ ಮಹಿಳೆ, ಯುವತಿ ಇದ್ದರೆ, ಅವಳನ್ನು ಪಕ್ಷದ ಕಚೇರಿಗೆ ಕರೆದೊಯ್ಯುತ್ತಾರೆ. ಆಕೆಯನ್ನು ರಾತ್ರಿಯಿಡೀ ಅಥವಾ ತಮಗೆ ತೃಪ್ತಿಯಾಗುವವರೆಗೂ ಅಲ್ಲಿಯೇ ಇರಿಸಿಕೊಳ್ಳುತ್ತಾರೆ” ಎಂದು ಈ ಪ್ರತಿಭಟನೆ ನಡೆಸಿದ ಮಹಿಳೆಯರು ಆರೋಪಿಸಿದರು.

ಶಹಜಹಾನ್‌ ವಿರುದ್ಧ ತನಿಖೆ ಸಂಸ್ಥೆಗಳು ಈಗ ಕ್ರಮಕ್ಕೆ ಮುಂದಾಗಿರುವುದು ತಮಗೆ ಮಾತನಾಡಲು ಧೈರ್ಯವನ್ನು ನೀಡಿದೆ ಎಂದರು ಈ ಸಂತ್ರಸ್ತ ಸ್ತ್ರೀಯರು. ಉತ್ತಮ್ ಸರ್ದಾರ್ ಮತ್ತು ಶಿಬಾಪ್ರಸಾದ್ ಹಜರಾ ಎಂಬ ಶಹಜಹಾನ್‌ನ ಇಬ್ಬರು ಸಹಚರರ ಮೇಲೆ ಆರೋಪ ಮಾಡಿದರು. “ನಮ್ಮ ಗಂಡಂದಿರಿಗೆ ನಮ್ಮ ಮೇಲೆ ಹಕ್ಕು ಇಲ್ಲದಂತೆ ಮಾಡಲಾಗಿದೆ. ಇವರ ದಬ್ಬಾಳಿಕೆಗೆ ಆತ ಹೆಂಡತಿಯನ್ನೂ ಬಿಟ್ಟು ಕೊಡಬೇಕಾಗುತ್ತಿದೆ. ನಮಗೆ ಇಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಹಿಂಸೆ ಅಥವಾ ಲೈಂಗಿಕ ಕಿರುಕುಳದ ಭಯ ಯಾವಾಗಲೂ ಇರುತ್ತದೆ. ನಮಗೆ ಸುರಕ್ಷತೆ ಬೇಕು. ನಮ್ಮ ಬಹುತೇಕ ಪುರುಷರು ಗ್ರಾಮ ತೊರೆದು ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಸಂತ್ರಸ್ತ ಮಹಿಳೆಯರು ಬಿದಿರಿನ ಕೋಲು, ಪೊರಕೆ ಹಿಡಿದು ಪ್ರತಿಭಟನೆ ನಡೆಸಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಘೇರಾವ್ ಹಾಕಿದರು. ಉದ್ರಿಕ್ತರಾದ ಈ ಪ್ರತಿಭಟನಾನಿರತ ಮಹಿಳೆಯರು ಶಹಜಹಾನ್‌ ಒಡೆತನದ ಮೂರು ಕೋಳಿ ಫಾರಂಗಳನ್ನು ಸುಟ್ಟುಹಾಕಿದರು.

ತೃಣಮೂಲ ಕಾಂಗ್ರೆಸ್‌ನ ರಕ್ಷಣೆ

ಇಷ್ಟಾದರೂ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್‌ ಮಾತ್ರ ಕಮಕ್‌ ಕಿಮಕ್‌ ಎನ್ನಲಿಲ್ಲ. ಬಿಜೆಪಿ ಮತ್ತಿತರ ವಿಪಕ್ಷಗಳು ಪ್ರತಿಭಟನೆಯನ್ನು ಜೋರಾಗಿಸಿದವು. ಆಡಳಿತಾರೂಢ ಟಿಎಂಸಿ ಆರೋಪಿಗೆ ರಕ್ಷಣೆ ನೀಡುತ್ತಿದೆ ಎಂದು ಬಿಜೆಪಿ, ಸಿಪಿ(ಐಎಂ) ಮತ್ತು ಕಾಂಗ್ರೆಸ್ ಆರೋಪಿಸಿದವು. ಮಹಿಳೆಯರ ಪ್ರತಿಭಟನೆಯ ಪರಿಣಾಮ ಸಂದೇಶಖಾಲಿಯಲ್ಲಿ ಪರಿಸ್ಥಿತಿ ಅವಲೋಕಿಸಲು ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅಲ್ಲಿಗೆ ಆಗಮಿಸಿದರು. ಅಲ್ಲಿದ್ದ ಮಹಿಳೆಯರೊಂದಿಗೆ ಮಾತನಾಡಿದ ನಂತರ ಬೋಸ್, “ಇದು ಘೋರ, ಆಘಾತಕಾರಿ, ಮನಸ್ಸನ್ನು ಛಿದ್ರಗೊಳಿಸುವ ಸಂಗತಿಯಾಗಿದೆ. ಮಾಡಬಾರದಂತಹದನ್ನು ಮಾಡಲಾಗಿದೆ. ಕೇಳಬಾರದ ಅನೇಕ ವಿಷಯಗಳನ್ನು ನಾನು ಕೇಳಿದ್ದೇನೆ. ಇದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ” ಎಂದು ಹೇಳಿಕೆ ನೀಡಿದರು. ಬೋಸ್ ಅವರು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದರು.

ಪೊಲೀಸರು ಸಂದೇಶ್‌ಖಾಲಿಯ ಮಾಜಿ ಸಿಪಿಎಂ ಶಾಸಕ ನಿರಪದಾ ಸರ್ದಾರ್‌, ಸ್ಥಳೀಯ ಬಿಜೆಪಿ ನಾಯಕ ವಿಕಾಸ್‌ ಸಿಂಗ್‌ ಎಂಬವರನ್ನು ಆಳುವ ಸರ್ಕಾರದ ಸೂಚನೆಯಂತೆ ಬಂಧಿಸಿದರು. ಆರೋಪಿಗಳನ್ನು ಮುಟ್ಟದೆ ಬೇರೆಯವರನ್ನು ಬಂಧಿಸಿದ ಕ್ರಮವನ್ನು ಪ್ರತಿಭಟಿಸಲಾಯಿತು. ಸಂದೇಶ್‌ಖಾಲಿಗೆ ಹೋಗಲು ಹೊರಟ ಬಿಜೆಪಿ ನಿಯೋಗವನ್ನು ಅರ್ಧ ದಾರಿಯಲ್ಲೇ ಪೊಲೀಸರು ತಡೆದು ವಾಪಸ್‌ ಕಳಿಸಿದರು. ಈ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ರಾಜ್ಯದ ಬಿಜೆಪಿ ಅಧ್ಯಕ್ಷಷ ಸುಕಾಂತ ಮುಜುಂದಾರ್‌ ಗಾಯಗೊಂಡರು. ರಾಷ್ಟ್ರೀಯ ಮಹಿಲೆ ಆಯೋಗ, ರಾಷ್ಟ್ರೀಯ ಬುಡಕಟ್ಟು ಜಾತಿಗಳ ಆಯೋಗದ ಸಂದೇಶ್‌ಖಾಲಿಗೆ ಹೋಗಲು ಮುಂದಾದಾಗಲೂ ತಡೆಯಲಾಯಿತು.

ಹೈಕೋರ್ಟ್‌ ಕಿಡಿಕಿಡಿ

ಶಹಜಹಾನ್‌ ಶೇಖ್‌ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡಿತು. ಶಹಜಹಾನ್‌ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್‌ ಆದೇಶ ನೀಡಿತು. ನಂತರ ಆತನನ್ನು ಬಂಧಿಸಲಾಯಿತು. ಆತನ ಬಂಧನ ಆದ ಬಳಿಕವೇ ನಿರ್ವಾಹವಿಲ್ಲದೆ ತೃಣಮೂಲ ಕಾಂಗ್ರೆಸ್‌ ಆತನನ್ನು ಪಕ್ಷದಿಂದ ಉಚ್ಛಾಟಿಸಿತು. ಪ್ರಕರಣದಲ್ಲಿ ಶಹಜಹಾನ್‌ ಶೇಖ್‌ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್‌ ಆಗಿ ಹೇಳಿತು. ಇಡಿ ಅಧಿಕಾರಿಗಳ ಮೇಲಿನ ದಾಳಿ ಸೇರಿ ಎಲ್ಲ ಪ್ರಕರಣಗಳನ್ನು ಸಿಬಿಐಗೆ ನೀಡಿ ಆದೇಶ ಹೊರಡಿಸಿದ್ದಲ್ಲದೆ, ಅವುಗಳ ದಾಖಲೆಯನ್ನು ಸಿಬಿಐಗೆ ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿತು.

ಆದರೆ, ಶೇಖ್‌ ಶಹಜಹಾನ್‌ನನ್ನು ಸಿಬಿಐಗೆ ವಹಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತು. ಅಷ್ಟೇ ಅಲ್ಲ, ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ, ಕೋಲ್ಕೊತಾ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು. ಹೈಕೋರ್ಟ್‌ ಮತ್ತೆ ಆದೇಶ ಹೊರಡಿಸಿ, ಸಿಬಿಐಗೆ ಒಪ್ಪಿಸಲು ತಿಳಿಸಿತು. ಅದರಂತೆ ಶಹಜಹಾನ್‌ನನ್ನು ಸಿಬಿಐ ವಶಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯ ಪೊಲೀಸರು ನೀಡಿದ್ದಾರೆ.

ಶಹಜಹಾನ್‌ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್‌, ಬ್ಯಾಂಕ್‌ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ.

Sandeshkhali Violence

ಯಾರಿವನು ಶೇಖ್‌ ಶಹಜಹಾನ್?‌

55 ದಿನಗಳ ಕಾಲ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದ ಶೇಖ್, ಸಂದೇಶ್‌ಖಾಲಿ ಪ್ರದೇಶದಲ್ಲಿ ಲೈಂಗಿಕ ಕಿರುಕುಳದ ಆರೋಪ, ಪಡಿತರ ವಿತರಣೆ ಹಗರಣದ ಆರೋಪಿಯಾಗಿದ್ದಾನೆ. ಜೊತೆಗೆ 10,000 ಕೋಟಿ ರೂ.ಮೌಲ್ಯದ ಭೂಕಬಳಿಕೆ ಆರೋಪವನ್ನೂ ಹೊತ್ತಿದ್ದಾನೆ. ಈತ ಬಾಂಗ್ಲಾ ದೇಶದಿಂದ ಪಶ್ಚಿಮ ಬಂಗಾಳಕ್ಕೆ ಬಂದ ನಿರಾಶ್ರಿತ. ಆರಂಭದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ವಂಚನೆ, ಸುಲಿಗೆಯಿಂದ ಬಹಳ ಬೇಗ ಸಾಕಷ್ಟು ಸಂಪತ್ತು ಗಳಿಸಿದ. ಸಂದೇಶ್‌ಖಾಲಿಯನ್ನಿಡೀ ಹೆದರಿಸಿ ಬೆದರಿಸಿ ಹದ್ದಬಸ್ತಿನಲ್ಲಿ ಇಟ್ಟ.

ಪಡಿತರ ಹಗರಣದಲ್ಲಿ ಈಗಾಗಲೇ ಬಂಧಿತರಾಗಿರುವ ಮಾಜಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿಕಟವರ್ತಿ ಈ ಶೇಖ್. ಉತ್ತರ 24 ಪರಗಣ ಜಿಲ್ಲೆಯ ಬಾಂಗ್ಲಾ ದೇಶದ ಗಡಿಯ ಸಮೀಪದಲ್ಲಿರುವ ಸಂದೇಶ್‌ಖಾಲಿ ಅವನ ಭದ್ರಕೋಟೆಯಾಗಿದೆ. ಆರಂಭದಲ್ಲಿ ಗದ್ದೆ ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಕಾರ್ಮಿಕರನ್ನು ಸಂಘಟಿಸಿ ಒಕ್ಕೂಟವನ್ನು ಕಟ್ಟಿದ. ನಂತರ ರಾಜಕೀಯಕ್ಕೆ ಪ್ರವೇಶಿಸಿದ. ಮಲ್ಲಿಕ್ ಬೆಂಬಲದೊಂದಿಗೆ ಎಡಪಕ್ಷಕ್ಕೆ ಪ್ರವೇಶ ಪಡೆದ. ಬಂಗಾಳದಲ್ಲಿ ರಾಜಕೀಯ ಬದಲಾವಣೆಯ ಅಲೆಯೊಂದಿಗೆ ಶೇಖ್ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ.

ಸ್ಥಳೀಯ ಮೀನುಗಾರಿಕೆ ಹಾಗೂ ಸಿಗಡಿ ಕೃಷಿಯನ್ನು ಈತ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ, ಇದಕ್ಕೆ ಬೇಕಾದ ಜಮೀನನ್ನು ಸ್ಥಳಿಯರಿಂದ ಬಲವಂತವಾಗಿ ಕಿತ್ತುಕೊಂಡು, ಅವರನ್ನು ಹಣ ಕೊಡದೇ ಹೊರದಬ್ಬುತ್ತಿದ್ದ. ಸ್ಥಳೀಯ ಪೊಲೀಸರು ಇವನ ಲಂಚಕ್ಕೆ ಬಾಯಿ ಒಡ್ಡಿ ಸುಮ್ಮನಿದ್ದರು. ಹೀಗಾಗಿ ಇವನು ಆಡಿದ್ದೇ ಆಟವಾಗಿತ್ತು. ಈತನಿಂದ ನೊಂದ ಹಲವು ಮಹಿಳೆಯರು, ಪುರುಷರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವನನ್ನು ವಿರೋಧಿಸಿದ ಹಲವು ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಆದರೆ ಯಾವ ಪ್ರಕರಣವೂ ಈತನ ವಿರುದ್ಧ ಸಾಬೀತಾಗಿಲ್ಲ.

ಇದನ್ನೂ ಓದಿ: ED Raids: ಸಂದೇಶಖಾಲಿಯ ವಿವಿಧೆಡೆ ಇ.ಡಿ ದಾಳಿ; ಶೇಖ್ ಶಹಜಹಾನ್‌ನ ಸಹಚರರ ನಿವಾಸಗಳಲ್ಲಿ ಶೋಧ

Continue Reading
Advertisement
Parliament Flashback
ಕರ್ನಾಟಕ4 mins ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ18 mins ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ31 mins ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ34 mins ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ35 mins ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು37 mins ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ40 mins ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ41 mins ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Lok Sabha Election 2024
ಕರ್ನಾಟಕ42 mins ago

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Lok Sabha Election 2024 Women are only for cook says Shamanur Shivashankarappa and Gayatri says women knows how to fly in the sky
Lok Sabha Election 202443 mins ago

Lok Sabha Election 2024: ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ಆಕಾಶದಲ್ಲಿ ಹಾರಾಡೋಕೂ ಗೊತ್ತೆಂದ ಗಾಯತ್ರಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌