Site icon Vistara News

Karnataka Weather : ಅಬ್ಬರಕ್ಕೆ ಬ್ರೇಕ್‌ ಕೊಟ್ಟ ಮಳೆರಾಯ; ಇನ್ನೆರಡು ದಿನ ಬಿಸಿ ತಾಪ

Karnataka weather Forecast

ಬೆಂಗಳೂರು: ಹಲವು ದಿನಗಳಿಂದ ಉತ್ತರ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಬಿಡುವಿಲ್ಲದೇ ಮಳೆ (Rain News) ಸುರಿಯುತ್ತಿತ್ತು. ಇದೀಗ ಮಳೆ ಅಬ್ಬರಕ್ಕೆ ಬ್ರೇಕ್‌ ಬಿದ್ದಿದೆ. ರಾಜ್ಯಾದ್ಯಂತ ಎರಡು ದಿನಗಳು ಒಣ ಹವೆ (Dry Weather) ಮೇಲುಗೈ ಸಾಧಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಏಪ್ರಿಲ್ 15 ಮತ್ತು 16 ರವರೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮುಂದುವರಿಯಲಿದೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಯಾವುದೇ ಮಳೆ ಮುನ್ಸೂಚನೆ ಇಲ್ಲ. ಗರಿಷ್ಠ ಉಷ್ಣಾಂಶವು 35 ಹಾಗೂ ಕನಿಷ್ಠ ಉಷ್ಣಾಂಶವು 22 ಡಿ.ಸೆ ಇರಲಿದೆ.

ಏಪ್ರಿಲ್‌ 15 ರಂದು ರಾಜ್ಯಾದ್ಯಂತ ಶುಷ್ಕ ವಾತಾವರಣ ಇರಲಿದೆ. ಆದರೆ ಏಪ್ರಿಲ್‌ 16ರಂದು ಮಲೆನಾಡು ಭಾಗದಲ್ಲಿ ಮಳೆಯ ಸಿಂಚನವಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಉಳಿದಂತೆ ಕರಾವಳಿ, ಉತ್ತರ ಒಳನಾಡು , ದಕ್ಷಿಣ ಒಳನಾಡು ಭಾಗದಲ್ಲಿ ಒಣ ಹವೆ ಇರಲಿದೆ.

ಇದನ್ನೂ ಓದಿ: Attempt To Murder : ಯುವಕನ ಅಟ್ಟಾಡಿಸಿ ನೆಲಕ್ಕುರುಳಿಸಿ ಚಾಕುವಿನಿಂದ ಇರಿದ ದುಷ್ಟ

ಭಾನುವಾರ ಸಂಜೆಗೆ ಹೆಚ್ಚಲಿದೆ ಗಾಳಿ ರಭಸ

ಭಾನುವಾರ ಸಂಜೆ ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ತಲುಪುವ ಜತೆಗೆ ಮೇಲ್ಮೈ ಮಾರುತಗಳು ಬಲವಾದ ಮತ್ತು ರಭಸದಿಂದ ಕೂಡಿರುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಗಾಳಿಯ ವೇಗ ಗಂಟೆಗೆ 30-40 ಕಿಮೀ ವೇಗದಲ್ಲಿ ಬೀಸಲಿದೆ. ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಭಾರಿ ಬಿರುಗಾಳಿಗೆ ನೆಲಕ್ಕುರುಳಿದ ವೀಳ್ಯದೆಲೆ ಬಳ್ಳಿ

ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿಯು ನೆಲಕ್ಕುರುಳಿದ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನ ತುಗ್ಗಲಡೋಣಿಯಲ್ಲಿ ನಡೆದಿದೆ. ತುಗ್ಗಲಡೋಣಿಯ ದ್ಯಾಮಣ್ಣ ಭಾವಂಜಿ ಎಂಬುವವರಿಗೆ ಸೇರಿ ವೀಳ್ಯದೆಲೆ ತೋಟವು ಕಟಾವು ಮಾಡುವ ಹಂತದಲ್ಲಿತ್ತು. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ವೀಳ್ಯದೆಲೆ ತೋಟ ಬಿರುಗಾಳಿಗೆ ನಾಶವಾಗಿದೆ ಎಂದು ರೈತ ಕಣ್ಣೀರು ಇಟ್ಟರು. ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿ ಶನಿವಾರ ಉತ್ತರ ಒಳನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಶಿವಮೊಗ್ಗದ ಆಗುಂಬೆಯಲ್ಲಿ 8 ಸೆಂ.ಮೀ ಹಾಗೂ ಕೊಪ್ಪಳದ ತಾವರಗೇರಾದಲ್ಲಿ 7 ಸೆಂ.ಮೀ ಮಳೆಯಾಗಿದೆ. ಧರ್ಮಸ್ಥಳ, ಜಯಪುರ, ಎನ್‌ಆರ್ ಪುರದಲ್ಲಿ ತಲಾ 4 ಸೆಂ.ಮೀ, ಧಾರವಾಡ ಪಿಟಿಒ, ಬೇವೂರು, ಇಂಡಿ ಹಾಗೂ ಶಿವಮೊಗ್ಗ ಪಿಟಿಒ, ಲಿಂಗನಮಕ್ಕಿ, ಆನವಟ್ಟಿ ತಲಾ 3 ಸೆಂ.ಮೀ ಮಳೆಯಾಗಿದೆ.

ಔರಾದ್ 2, ದೇವರಹಿಪ್ಪರಗಿ 2, ರೋಣಾ 2, ಯಡ್ರಾಮಿ, ಕಲಬುರ್ಗಿ 2, ಕಲಘಟಗಿ, ತ್ಯಾಗರ್ತಿ, ಕಳಸ, ಹರಪನಹಳ್ಳಿ, ಕುಡತಿನಿ, ಕೊಪ್ಪ, ತರೀಕೆರೆ, ಶೃಂಗೇರಿ ಚಿಕ್ಕಮಗಳೂರಲ್ಲಿ ತಲಾ 2 ಸೆಂ. ಮೀ ಮಳೆಯಾಗಿದೆ. ಸಿದ್ದಾಪುರ, ಸಿಂಧನೂರು, ಕುಕನೂರು, ಹಿರೇಕೆರೂರು, ಲಕ್ಷೇಶ್ವರ, ಬೆಳ್ಳಟ್ಟಿ, ಕುಂದಗೋಳ, ಧಾರವಾಡ, ಅಣ್ಣಿಗೆರೆ ಅರ್ಸ್, ಸವಣೂರು, ಕಮ್ಮರಡಿ, ಕೊಣನೂರು, ತಾಳಗುಪ್ಪ, ಹುಂಚದಕಟ್ಟೆ ತಲಾ 1 ಸೆಂ. ಮೀ ಮಳೆಯಾಗಿರುವ ವರದಿ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version