Site icon Vistara News

Karnataka Weather : ಒಳನಾಡಿನಲ್ಲಿ ವಿಪರೀತ ಬಿಸಿಲು; ಕರಾವಳಿಯಲ್ಲಿ ಬಿಸಿಗಾಳಿ, ಮಲೆನಾಡಿನಲ್ಲಿ ಗುಡುಗು ಮಳೆ

Karnataka weather Forecast

ಬೆಂಗಳೂರು: ವಾರಾಂತ್ಯದಲ್ಲಿ ರಾಜ್ಯಾದ್ಯಂತ ಹಗುರದಿಂದ ಕೂಡಿದ ಮಳೆಯಾಗುವ (Rain news) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಮಲೆನಾಡಿನ ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದರೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲ ಭಾಗಗಳಲ್ಲಿ ಶುಷ್ಕ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ತಿಂಗಳಾಂತ್ಯದವರೆಗೂ ತಾಪಮಾನ ಹೆಚ್ಚಳ

ಗರಿಷ್ಠ ತಾಪಮಾನವು ಏಪ್ರಿಲ್‌ 30ರವರೆಗೆ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನ 12ರಿಂದ 3ಗಂಟೆವರೆಗೆ ಹೊರಾಂಗಣ ಚಟುವಟಿಕೆಗಳಿಂದ ದೂರ ಇರುವಂತೆ ತಜ್ಞರು ಸೂಚಿಸಿದ್ದಾರೆ. ಇನ್ನೂ ಕರಾವಳಿ ಕರ್ನಾಟಕದಲ್ಲಿ ವಾತಾವರಣವು ಬಿಸಿಯಾಗಿರಲಿದೆ. ಕೆಲವೊಮ್ಮೆ ಬಿಸಿ ಗಾಳಿಯೂ ಬೀಸಲಿದೆ.

ಯೆಲ್ಲೋ ಅಲರ್ಟ್‌

ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಏರಿಕೆ ಆಗಲಿದೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು

“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್‌ ಕಂಡೀಷನ್‌ ಕೋಣೆಗಳಲ್ಲಿ ಹಾಗೂ ಇನ್‌ಡೋರ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್‌ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್‌ ಹಾಗೂ ಯುವತಿಯರಲ್ಲೂ ಕಾಮನ್‌ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ನಮಿತಾ. ಅವರ ಪ್ರಕಾರ, ಶಾರ್ಟ್‌ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿವೆ ಎನ್ನುತ್ತಾರೆ.

ಹೈ ಬನ್‌ ಹೇರ್‌ಸ್ಟೈಲ್‌

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್‌ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್‌ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!

ಪೋನಿಟೈಲ್‌ ವಿತ್‌ ಫ್ರಿಂಝ್‌ ಹೇರ್‌ಸ್ಟೈಲ್‌

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್‌ ಮಾಡುವ ಫ್ರಿಂಝ್‌ ಹೇರ್‌ಸ್ಟೈಲ್‌ ಹಿಂದೆ ಸಿಂಪಲ್‌ ಪೋನಿಟೈಲ್‌ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್‌ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್‌ ಕಾಂಬಿನೇಷನ್‌ ಇದಾಗಿರುತ್ತದೆ.

ಹನ್‌ ಹೇರ್‌ಸ್ಟೈಲ್‌

ಅರ್ಧ ಫ್ರೀ ಹೇರ್‌ಸ್ಟೈಲ್‌ ಹಾಗೂ ಅರ್ಧ ಕಟ್ಟಿದ ಬನ್‌ ಹೇರ್‌ಸ್ಟೈಲ್‌ ಕಾಂಬೀನೇಷನ್‌ ಈ ಸೀಸನ್‌ನ ಹನ್‌ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್‌ ಹೇರ್‌ಸ್ಟೈಲ್‌ ಮಿಕ್ಸ್‌ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್‌ ಹನ್‌ ಹೇರ್‌ಸ್ಟೈಲ್‌. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿದೆ.

ಬೇಸಿಗೆ ಹೇರ್‌ಸ್ಟೈಲ್‌ ಫಾಲೋ ಮಾಡಲು ಹೀಗೆ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version