Karnataka Weather : ಒಳನಾಡಿನಲ್ಲಿ ವಿಪರೀತ ಬಿಸಿಲು; ಕರಾವಳಿಯಲ್ಲಿ ಬಿಸಿಗಾಳಿ, ಮಲೆನಾಡಿನಲ್ಲಿ ಗುಡುಗು ಮಳೆ - Vistara News

ಮಳೆ

Karnataka Weather : ಒಳನಾಡಿನಲ್ಲಿ ವಿಪರೀತ ಬಿಸಿಲು; ಕರಾವಳಿಯಲ್ಲಿ ಬಿಸಿಗಾಳಿ, ಮಲೆನಾಡಿನಲ್ಲಿ ಗುಡುಗು ಮಳೆ

Karnataka Weather Forecast : ಉತ್ತರ ಕರ್ನಾಟಕದಲ್ಲಿ ತಾಪಮಾನ ಏರಿಕೆಯಿಂದ ಜನರು ತತ್ತರಿಸಿ ಹೋಗಲಿದ್ದಾರೆ. ಕರಾವಳಿಯಲ್ಲಿ ಬಿಸಿಗಾಳಿಯು (Hot weather) ಬೀಸಲಿದ್ದು, ದಕ್ಷಿಣ ಒಳನಾಡಲ್ಲಿ ಶುಷ್ಕ ವಾತಾವರಣ (Dry Weather) ಇರಲಿದೆ. ಮಲೆನಾಡಿನ ಕೆಲವಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Rain News) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

Karnataka weather Forecast
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಾರಾಂತ್ಯದಲ್ಲಿ ರಾಜ್ಯಾದ್ಯಂತ ಹಗುರದಿಂದ ಕೂಡಿದ ಮಳೆಯಾಗುವ (Rain news) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಮಲೆನಾಡಿನ ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದರೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲ ಭಾಗಗಳಲ್ಲಿ ಶುಷ್ಕ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ತಿಂಗಳಾಂತ್ಯದವರೆಗೂ ತಾಪಮಾನ ಹೆಚ್ಚಳ

ಗರಿಷ್ಠ ತಾಪಮಾನವು ಏಪ್ರಿಲ್‌ 30ರವರೆಗೆ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನ 12ರಿಂದ 3ಗಂಟೆವರೆಗೆ ಹೊರಾಂಗಣ ಚಟುವಟಿಕೆಗಳಿಂದ ದೂರ ಇರುವಂತೆ ತಜ್ಞರು ಸೂಚಿಸಿದ್ದಾರೆ. ಇನ್ನೂ ಕರಾವಳಿ ಕರ್ನಾಟಕದಲ್ಲಿ ವಾತಾವರಣವು ಬಿಸಿಯಾಗಿರಲಿದೆ. ಕೆಲವೊಮ್ಮೆ ಬಿಸಿ ಗಾಳಿಯೂ ಬೀಸಲಿದೆ.

ಯೆಲ್ಲೋ ಅಲರ್ಟ್‌

ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಏರಿಕೆ ಆಗಲಿದೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

Summer Hairstyles

ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು

“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್‌ ಕಂಡೀಷನ್‌ ಕೋಣೆಗಳಲ್ಲಿ ಹಾಗೂ ಇನ್‌ಡೋರ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್‌ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್‌ ಹಾಗೂ ಯುವತಿಯರಲ್ಲೂ ಕಾಮನ್‌ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ನಮಿತಾ. ಅವರ ಪ್ರಕಾರ, ಶಾರ್ಟ್‌ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿವೆ ಎನ್ನುತ್ತಾರೆ.

ಹೈ ಬನ್‌ ಹೇರ್‌ಸ್ಟೈಲ್‌

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್‌ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್‌ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!

Summer Hairstyles

ಪೋನಿಟೈಲ್‌ ವಿತ್‌ ಫ್ರಿಂಝ್‌ ಹೇರ್‌ಸ್ಟೈಲ್‌

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್‌ ಮಾಡುವ ಫ್ರಿಂಝ್‌ ಹೇರ್‌ಸ್ಟೈಲ್‌ ಹಿಂದೆ ಸಿಂಪಲ್‌ ಪೋನಿಟೈಲ್‌ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್‌ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್‌ ಕಾಂಬಿನೇಷನ್‌ ಇದಾಗಿರುತ್ತದೆ.

ಹನ್‌ ಹೇರ್‌ಸ್ಟೈಲ್‌

ಅರ್ಧ ಫ್ರೀ ಹೇರ್‌ಸ್ಟೈಲ್‌ ಹಾಗೂ ಅರ್ಧ ಕಟ್ಟಿದ ಬನ್‌ ಹೇರ್‌ಸ್ಟೈಲ್‌ ಕಾಂಬೀನೇಷನ್‌ ಈ ಸೀಸನ್‌ನ ಹನ್‌ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್‌ ಹೇರ್‌ಸ್ಟೈಲ್‌ ಮಿಕ್ಸ್‌ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್‌ ಹನ್‌ ಹೇರ್‌ಸ್ಟೈಲ್‌. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿದೆ.

Summer Hairstyles

ಬೇಸಿಗೆ ಹೇರ್‌ಸ್ಟೈಲ್‌ ಫಾಲೋ ಮಾಡಲು ಹೀಗೆ ಮಾಡಿ

  • ಹೊರಗಡೆ ಹೋಗುವಾಗ ಮೇಲಿನ ಹೇರ್‌ಸ್ಟೈಲ್‌ಗಳನ್ನು ಮಾಡಿ.
  • ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
  • ಫ್ರಿಂಝ್‌ ಮಾಡದಿದ್ದವರೂ ಸೈಡ್‌ಲಾಕ್ಸ್‌ ಕೂದಲ ವಿನ್ಯಾಸ ಮಾಡಬಹುದು.
  • ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
  • ಮೇಲಿನ ಹೇರ್‌ಸ್ಟೈಲ್ಸ್‌ ನಿಮಗೆ ಸ್ಲಿಮ್‌ ಲುಕ್‌ ನೀಡಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಬಿರುಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ

Karnataka Weather Forecast : ರಾಜ್ಯಾದ್ಯಂತ ಮತ್ತೆ ಮಳೆ ಅಬ್ಬರಿಸಲಿದ್ದು, ವಿವಿಧ ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಘೋಷಿಸಲಾಗಿದೆ. ಮಳೆ ನಡುವೆಯೂ ಕೆಲವು ಜಿಲ್ಲೆಗಳಿಗೆ ಹೀಟ್‌ ವೇವ್‌ ವಾರ್ನಿಂಗ್‌ ಅನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಬಿರುಗಾಳಿ ಜತೆಗೆ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.

ಮುಖ್ಯವಾಗಿ ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಇನ್ನೂ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ರಾಮನಗರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ 40-50 ಕಿ.ಮೀ ಗಾಳಿಯೊಂದಿಗೆ ಗುಡುಗು ಸಹಿತ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಳೆ ಜತೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.

ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನೂ ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ.

ಹೀಟ್‌ ವೇವ್‌ ವಾರ್ನಿಂಗ್‌

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ವಿಜಯನಗರ, ಬಳ್ಳಾರಿ, ದಾವಣಗೆರೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜತೆಗೆ ಬಳ್ಳಾರಿ, ದಾವಣಗೆರೆ, ವಿಜಯನಗರ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

BESCOM Helpline: ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆಗಳು ಇದ್ದರೆ ದೂರು ಸಲ್ಲಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು ಬೆಸ್ಕಾಂ ನೀಡಿದೆ. ಗ್ರಾಹಕರು ಬೆಸ್ಕಾಂ ಸಂಖ್ಯೆಗೆ ಸಂದೇಶ ಕಳುಹಿಸಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

VISTARANEWS.COM


on

Bescom Helpline
Koo

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಮುರಿದು, ವಿದ್ಯುತ್‌ ಮೂಲ ಸೌಕರ್ಯ ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು (rain damage) ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು (BESCOM Helpline) ಬೆಸ್ಕಾಂ ನೀಡಿದೆ.

ವಾಟ್ಸ್‌ಆ್ಯಪ್‌ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಜತೆಗೆ ಎಸ್‌ಎಂಎಸ್‌ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್‌ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.

ಇದನ್ನೂ ಓದಿ | Mahila Samman Saving Certificate : ಮಹಿಳಾ ಸಮ್ಮಾನ್‌ ಸೇವಿಂಗ್‌ ಸರ್ಟಿಫಿಕೇಟ್‌ಗೆ 7.5% ಬಡ್ಡಿ, ಏಪ್ರಿಲ್‌ 1ರಿಂದ ಲಭ್ಯ

ಜಿಲ್ಲಾವಾರು ವಾಟ್ಸ್‌ಆ್ಯಪ್‌ ಸಂಖ್ಯೆಗಳು

ಬೆಂಗಳೂರು ಪೂರ್ವ- 8277884013, ಬೆಂಗಳೂರು ಪಶ್ಚಿಮ- 8277884012, ಬೆಂಗಳೂರು ಉತ್ತರ- 8277884014, ಬೆಂಗಳೂರು ದಕ್ಷಿಣ- 8277884011. ಕೋಲಾರ- 8277884015, ಚಿಕ್ಕಬಳ್ಳಾಪುರ- 8277884016, ಬೆಂಗಳೂರು ಗ್ರಾಮಾಂತರ- 8277884017, ರಾಮನಗರ- 8277884018, ತುಮಕೂರು- 8277884019, ಚಿತ್ರದುರ್ಗ- 8277884020 ಹಾಗೂ ದಾವಣಗೆರೆ- 8277884021.

ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್‌ಆ್ಯಪ್‌ ಸಂಖ್ಯೆ: 9483191212, 9483191222 ಮತ್ತು ಬೆಸ್ಕಾಂ ಸಾಮಾನ್ಯ ವಾಟ್ಸ್‌ ಆಪ್‌ ಸಂಖ್ಯೆ- 9449844640.

ಈ ಕೆಳಗಿನ ಮೊಬೈಲ್‌ ಸಂಖ್ಯೆಗಳು- ಕೇವಲ ಎಸ್‌ಎಂಎಸ್‌ಗಳಿಗೆ ಮಾತ್ರ: 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119.

Continue Reading

ಮಳೆ

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Rain News : ಮೇ 7ರಂದು ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ರಾಜ್ಯದಲ್ಲಿ ಇನ್ನೊಂದು ವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಚಿಕ್ಕಮಗಳೂರು/ಹಾಸನ/ಬೆಂಗಳೂರು: ಮಂಗಳವಾರ ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಭಾರಿ ಆಲಿಕಲ್ಲು ಮಳೆಗೆ ಚಿಕ್ಕಮಗಳೂರು ನಗರ ನಿವಾಸಿಗಳು ಥಂಡಾ ಹೊಡೆದಿದ್ದಾರೆ. ಮಳೆಯಿಲ್ಲದೆ ಕಾದ ಕಾವಲಿಯಂತಾಗಿದ್ದ ಕಾಫಿನಾಡಿನಲ್ಲಿ ಕಳೆದೊಂದು ಗಂಟೆಯಿಂದ ಭಯಂಕರ ಮಳೆ ಸುರಿಯುತ್ತಿದೆ.

ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. 41 ಡಿಗ್ರಿ ತಲುಪುತ್ತಿದ್ದ ಬಿಸಿಲ ತಾಪಮಾನಕ್ಕೆ ಜನ ಹೈರಾಣಾಗಿದ್ದರು. ಧಾರಾಕಾರ ಮಳೆ ಕಂಡು ರೈತರು, ಬೆಳೆಗಾರರು ಸಂತಸಗೊಂಡರು. ಇನ್ನೂ ಆಲಿಕಲ್ಲು ಕೈಯಲ್ಲಿ ಹಿಡಿದು ಖುಷಿ ಪಟ್ಟರು.

Karnataka weather Forecast

ಹಾಸನದಲ್ಲೂ ಧಾರಾಕಾರ ಮಳೆ

ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಾಸನ, ಹೊಳೆನರಸೀಪುರ, ಅರಸೀಕೆರೆ ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ಗುಡುಗು, ಸಿಡಿಲು ಸಹಿತ ಮಳೆ ಸುರಿಯುತ್ತಿದೆ. ಅರಸೀಕೆರೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಜೋರಾಗಿ ಆಲಿಕಲ್ಲು ಬೀಳುತ್ತಿರುವುದರಿಂದ ಸವಾರರು ಬೈಕ್‌ ನಿಲ್ಲಿಸಿ ರಸ್ತೆ ಬದಿ ನಿಲ್ಲುವಂತಾಯಿತು. ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.

ಇದನ್ನೂ ಓದಿ: Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ

ಮಂಗಳವಾರ ಸಂಜೆಗೆ ಲಘು ಮಳೆ ಎಚ್ಚರಿಕೆ

ಮೇ 7ರ ಸಂಜೆಗೆ ದಕ್ಷಿಣ ಕನ್ನಡ, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ತುಮಕೂರು, ಉಡುಪಿಯಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಮಳೆ

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಮುಂಜಾನೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಂಜೆ/ರಾತ್ರಿಯ ಸಮಯದಲ್ಲಿ ಗುಡುಗು ಮಿಂಚು ಜತೆಗೆ ಮಳೆಯಾಗಲಿದೆ. ಈ ವೇಳೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 ಮತ್ತು 22 ಡಿ.ಸೆ ಇರಲಿದೆ.

ಇನ್ನೂ ಕೊಡಗು, ಮೈಸೂರು, ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ನಗರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಮತ್ತು ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 40-50 ಕಿಮೀ) ಹಗುರದಿಂದ ಶುರುವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ವಿಜಯನಗರ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (30-40 ಕಿಮೀ) ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ

Karnataka Rains : ನಿನ್ನೆ ಸೋಮವಾರ ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿದೆ. ಬಿರುಗಾಳಿ ಮಳೆಗೆ ಮರ ಬಿದ್ದು ಒಬ್ಬನ ಪ್ರಾಣಪಕ್ಷಿ ಹಾರಿಹೋದರೆ, ಮತ್ತೊಬ್ಬ ಬೆನ್ನು ಮೂಳೆಯನ್ನು ಮುರಿದುಕೊಂಡಿದ್ದಾರೆ.

VISTARANEWS.COM


on

By

karnataka rains
Koo

ಬೆಂಗಳೂರು/ಮಂಡ್ಯ: ಜಸ್ಟ್‌ ಅರ್ಧ ಗಂಟೆ ಸುರಿದ ಭಾರಿ ಗಾಳಿ ಮಳೆಗೆ (Karnataka Rains) ಸಾವು-ನೋವುಗಳು ಸಂಭವಿಸಿವೆ. ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿಯೊಬ್ಬರು ಬಲಿಯಾದರೆ, ಬೆಂಗಳೂರಲ್ಲಿ ಟೆಕ್ಕಿಯ ಬೆನ್ನು ಮೂಳೆ ಮುರಿದಿದೆ.

ಸೋಮವಾರ ಬೆಂಗಳೂರಲ್ಲಿ ಸುರಿದ ಮಳೆಗೆ ಟೆಕ್ಕಿಯೊಬ್ಬರು ಬೆನ್ನು ಮೂಳೆ ಮುರಿದುಕೊಂಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಗಾಳಿಗೆ ಮರದ ಕೊಂಬೆ ಮೈ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದಿದೆ. ಬೆಂಗಳೂರಿನ ಸಿ.ವಿ ರಾಮನ್ ನಗರದ ನಾಗವಾರಪಾಳ್ಯದ 2ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.

ಐಟಿ ಕಂಪನಿ ಉದ್ಯೋಗಿಯಾಗಿ ರವಿಕುಮಾರ್ (26) ಎಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರ ಬಿದ್ದಿರುವ ಹಿನ್ನೆಲೆಯಲ್ಲಿ ಸ್ಪೈನ್ ಕಾರ್ಡ್ ಮುರಿದುಕೊಂಡಿದ್ದಾರೆ. ಬಿಬಿಎಂಪಿ ಉಸ್ತುವಾರಿಯಲ್ಲಿ ಗಾಯಾಳು ರವಿಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯದಲ್ಲಿ ಬಿರುಗಾಳಿ ಮಳೆ ಎಫೆಕ್ಟ್‌ಗೆ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರಿನ ಮೇಲೆ ಬೃಹತ್ ಮರ ಬಿದ್ದಿದ್ದು, ಅದರೊಳಗೆ ಇದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಕಾರ್ತಿಕ್ ಮೃತ ದುರ್ದೈವಿ. ಮಂಡ್ಯ ನಗರದ ನೆಹರು ನಗರದಲ್ಲಿ ದುರ್ಘಟನೆ ನಡೆದಿದೆ.

ಕಾರ್ತಿಕ್ ಮಂಡ್ಯ ನಗರದ ಖಾಸಗಿ ನರ್ಸಿಂಗ್ ಹೋಮ್‌ಗೆ ಬಂದಿದ್ದರು. ಈ ವೇಳೆ ಮಳೆ ಬಂದ ಕಾರಣಕ್ಕೆ ಮರದ ಕೆಳಗೆ ಕಾರ್ ಪಾರ್ಕ್ ಮಾಡಿ ಕುಳಿತಿದ್ದರು. ಆದರೆ ಜೋರಾಗಿ ಬೀಸಿದ ಬಿರುಗಾಳಿಗೆ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಜಖಂಗೊಂಡಿತ್ತು. ಪರಿಣಾಮ ಕಾರೊಳಗೆ ಸಿಲುಕಿದ ಕಾರ್ತಿಕ್‌ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಇನ್ನೂ ಘಟನೆಯಲ್ಲಿ ಹಲವು ಬೈಕ್‌ಗಳು ಜಖಂಗೊಂಡಿದ್ದವು. ಸ್ಥಳಕ್ಕೆ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: Theft Case : ಹಬ್ಬಕ್ಕೆ ಊರಿಗೆ ಹೋದ ಅಕ್ಕನ ಮನೆಗೆ ಕನ್ನ; ಸಾಕ್ಷಿ ನಾಶಕ್ಕೆ ಖಾರದ ಪುಡಿ ಚೆಲ್ಲಿದ ತಂಗಿ!

ಧರೆಗೆ ಬಿದ್ದ ಮರಗಳು, ವಿದ್ಯುತ್‌ ಕಂಬಗಳು

ಮಂಡ್ಯ ನಗರ ಸೇರಿದಂತೆ ಹಲವೆಡೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ರಸ್ತೆ ಮಧ್ಯೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು. ಹೆದ್ದಾರಿ ಸೇರಿದಂತೆ ನಗರದ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮಂಡ್ಯ ನಗರ ಸೇರಿದಂತೆ ಹಲವೆಡೆ ರಾತ್ರಿ ಪೂರ್ತಿ ವಿದ್ಯುತ್ ಸ್ಥಗಿತವಾಗಿತ್ತು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿತ್ತು. ಪರಿಣಾಮ ಬೈಕ್‌ಗಳು, ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿತ್ತು. ಇನ್ನೂ ಮುರಿದು ಬಿದ್ದ ಮರಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ನಗರಸಭೆ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಯಿಂದ ಹರಸಾಹಸ ಪಡಬೇಕಾಯಿತು.

ಮಳೆಯ ಅವಾಂತರಕ್ಕೆ ರಾಜಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ಕಾರು, 2 ಸ್ಕೂಟರ್ ಜಖಂಗೊಂಡಿತ್ತು. ರಾತ್ರಿ ಬಿದ್ದ ಮರವನ್ನು ಮರು ದಿನ ಬೆಳಗ್ಗೆಯಾದರೂ ತೆರವು ಮಾಡದ ಪಾಲಿಕೆ ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ರಸ್ತೆಯಲ್ಲಿ ಓಡಾಡಲು ಜನರು ಪರದಾಡಬೇಕಾಯಿತು. ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ರಾಜೇಶ್ವರಿ ಚಿತ್ರಮಂದಿರ ಬಳಿ ಮರಗಳು ಧರೆಗುರಳಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಲ್ಲೇಶ್ವರಂ ಚಿತ್ತಾಪುರ ಮಠದ ಬಳಿಯೂ ಬೃಹತ್‌ ಮರವು ಅಪ್ಪಳಿಸಿದ್ದು, ಆ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಇನ್ನೂ ಮಳೆ ಗಾಳಿಗೆ ನಗರದ 15 ಬೃಹತ್ ಗಾತ್ರದ ಮರ ಧರೆಗುರುಳಿವೆ ಎಂದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
IPL 2024 Points Table
ಕ್ರಿಕೆಟ್15 mins ago

IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ

sam pitroda pm narendra modi
ಪ್ರಮುಖ ಸುದ್ದಿ24 mins ago

PM Narendra Modi: “ಚರ್ಮದ ಬಣ್ಣದ ಮೇಲಿನ ಈ ಅವಮಾನವನ್ನು ಸಹಿಸುವುದಿಲ್ಲ…” ಪಿತ್ರೋಡಾಗೆ ಮೋದಿ ತಪರಾಕಿ

ವೈರಲ್ ನ್ಯೂಸ್40 mins ago

Viral Video: ಅಬ್ಬಾ.. ಎಂಥಾ ಭೀಕರ ದೃಶ್ಯ! ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿ ಒದ್ದಾಡಿ ಸಾವು

Double Murder Fakirappa stabs brothers to death for falling behind daughter
ಕ್ರೈಂ43 mins ago

Double Murder: ಮಗಳ ಹಿಂದೆ ಬಿದ್ದಿದ್ದಕ್ಕೆ ಸಹೋದರರನ್ನೇ ಚಾಕುವಿನಿಂದ ಇರಿದು ಕೊಂದ ಫಕೀರಪ್ಪ!

SSLC Exam Result 2024 to be declared tomorrow Here are the details
ಶಿಕ್ಷಣ1 hour ago

SSLC Exam Result 2024: ನಾಳೆ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ; ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು? ಇಲ್ಲಿದೆ ಡಿಟೇಲ್ಸ್‌

Srinidhi Shetty Attends Daiva Kola Festivities in Mangalore
ಸ್ಯಾಂಡಲ್ ವುಡ್1 hour ago

Srinidhi Shetty: ಕೋಲ ಸೇವೆ ಸಲ್ಲಿಸಿದ ಕೆಜಿಎಫ್‌ ಬೆಡಗಿ; ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದ್ದೇನು?

Pepper spray
ಕರ್ನಾಟಕ1 hour ago

Pepper Spray: ಪೆಪ್ಪರ್‌ ಸ್ಪ್ರೇ ಬಹಳ ಡೇಂಜರ್‌..ಅದನ್ನು ರಕ್ಷಣೆಗೆ ಬಳಸುವಂತಿಲ್ಲ- ಹೈಕೋರ್ಟ್‌

Prajwal Revanna Case Will resign says DK Shivakumar and slams HD Kumaraswamy
ರಾಜಕೀಯ1 hour ago

Prajwal Revanna Case: ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ; ಕೊಡ್ತೇನೆ ಅಂದ್ರ ಡಿಕೆಶಿ!

Sam Pitroda
ದೇಶ2 hours ago

Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

World Red Cross Day
Latest2 hours ago

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ18 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ21 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ22 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌