ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಜತೆಗೆ ಮುಂದಿನ ಐದು ದಿನಗಳಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2-3ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರಸ್ತುತ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಹವಾಮಾನ ಮೌಲ್ಯದ 90% ಮೀರಿದೆ. ಇನ್ನು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಶಾಖ ಸೂಚ್ಯಂಕವು 40-50 ಡಿ.ಸೆ ವ್ಯಾಪ್ತಿಯಲ್ಲಿರಲಿದೆ.
ಮುಂದಿನ 2 ದಿನಗಳಲ್ಲಿ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶಾಖದ ಅಲೆಗಳ ಸಾಧ್ಯತೆ ಇದೆ. ಬಿಸಿಗಾಳಿ ಬೀಸಲಿದ್ದು, ಉರಿ ಬಿಸಿಲು ಜನರನ್ನು ತತ್ತರಿಸುವಂತೆ ಮಾಡಿದೆ.
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 35 ಹಾಗೂ ಕನಿಷ್ಠ ಉಷ್ಣಾಂಶ 21 ಡಿ.ಸೆ ದಾಖಲಾಗಿದೆ. ಕೆಲವೊಮ್ಮೆ ಬಿಸಿ ಗಾಳಿ ಬೀಸಲಿದೆ.
ಇದನ್ನೂ ಓದಿ: Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ
ಇನ್ನೂ ಬುಧವಾರದಂದು ರಾಜ್ಯಾದ್ಯಂತ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 40 ಡಿ.ಸೆ ದಾಖಲಾಗಿತ್ತು. ಮಂಡ್ಯದ ಎಡಬ್ಲ್ಯೂಎಸ್‌ನಲ್ಲಿ ಕನಿಷ್ಠ ಉಷ್ಣಾಂಶ 16.7 ಡಿ.ಸೆ ಇತ್ತು. ಸರಾಸರಿ ಕನಿಷ್ಠ ಉಷ್ಣಾಂಶ ಕೋಲಾರದಲ್ಲಿ 18.1 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರು ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 40.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಬೆಂಗಳೂರು ನಗರ, ಕೋಲಾರ, ಹಾಸನ, ರಾಮನಗರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ನಿಂದ 18 ಡಿಗ್ರಿ ಸೆಲ್ಸಿಯಸ್ ಇತ್ತು. ಹಾವೇರಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ನಿಂದ 44 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.
Summer Fashion: ಸಮ್ಮರ್ ಸೀಸನ್‌ನಲ್ಲಿ ಸಿಂಪಲ್ ಸ್ಲಿವ್‌ಲೆಸ್ ಗೌನ್‌ಗಳ ಹಂಗಾಮ!
ಸಮ್ಮರ್ ಸೀಸನ್‌ನಲ್ಲಿ (Summer Fashion) ಇದೀಗ ಸ್ಲಿವ್‌ಲೆಸ್ ಗೌನ್‌ಗಳ ಹಂಗಾಮ ಹೆಚ್ಚಾಗಿದೆ. ನೋಡಲು ಮಾತ್ರವಲ್ಲ, ಧರಿಸಿದಾಗ ಈ ಸೀಸನ್‌ನಲ್ಲಿ ಹೆಚ್ಚು ಸೆಕೆಯಾಗದಂತೆ, ಕಂಫರ್ಟಬಲ್ ಫೀಲ್ ಆಗುವಂತಹ ನಾನಾ ಡಿಸೈನ್ನ ಅದರಲ್ಲೂ ಲೈಟ್‌ವೈಟ್ ಫ್ಯಾಬ್ರಿಕ್‌ನ ತೋಳಿಲ್ಲದ ಈ ಗೌನ್‌ಗಳು ನಾನಾ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿವೆ.
ಕಂಫರ್ಟಬಲ್ ಡಿಸೈನ್ ಗೌನ್
“ಸ್ಲಿವ್‌ಲೆಸ್ ಗೌನ್‌ಗಳು ಸಮ್ಮರ್ ಸೀಸನ್‌ನ ಟ್ರೆಂಡಿ ಗೌನ್‌ಗಳು ಎನ್ನಬಹುದು. ಇವು ಸೆಕೆಯಾಗುವುದಿಲ್ಲ. ಆರಾಮ ಎಂದೆನಿಸುತ್ತವೆ. ಇನ್ನು, ಈ ಸೀಸನ್‌ಗೆ ಪೂರಕ ಎಂಬಂತೆ, ಡಿಸೈನ್‌ಗಳನ್ನು ಹೊಂದಿರುತ್ತವೆ. ತೀರಾ ಟೈಟ್ ಫಿಟ್ಟಿಂಗ್ ಆಗಿರುವುದಿಲ್ಲ. ಅದರಲ್ಲೂ ಲೇಯರ್ ಇನ್ನರ್ ಲೈನಿಂಗ್ ಹೊಂದಿರುವುದಿಲ್ಲ. ಲೈಟ್‌ವೈಟಾಗಿರುತ್ತವೆ. ಅಂತಹ ಫ್ಯಾಬ್ರಿಕನ್ನೇ ಇವುಗಳನ್ನು ವಿನ್ಯಾಸ ಮಾಡಲು ಆಯ್ಕೆ ಮಾಡಲಾಗಿರುತ್ತದೆ. ವೆಡ್ಡಿಂಗ್ ಸೀಸನ್‌ಗೆ ಸೂಕ್ತವಾಗಿರುವುದು ಮಾತ್ರವಲ್ಲ, ಪಾರ್ಟಿವೇರ್ ಗೌನ್‌ಗಳು ಹಾಗೂ ಫೋಟೋಶೂಟ್ ಗೌನ್‌ಗಳು ಈ ಸೀಸನ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಗೌನ್ ಡಿಸೈನರ್ ರಾಜನ್. ಅವರ ಪ್ರಕಾರ, ಇಂತಹ ಗೌನ್‌ಗಳು ಈ ಸೀಸನ್‌ಗೆಂದೇ ಸಿದ್ಧಪಡಿಸಲಾಗಿರುತ್ತದೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಗೌನ್ ಡಿಸೈನ್ಸ್
ಸ್ಲಿವ್‌ಲೆಸ್ ಬಾರ್ಡರ್ ಗೌನ್ಸ್, ಎಥ್ನಿಕ್ ಡಿಸೈನ್ಸ್, ಸ್ಯಾಟಿನ್ ಗೌನ್ಸ್, ನೆಟ್ಟೆಡ್ ಸ್ಲಿವ್‌ಲೆಸ್ ಗೌನ್ಸ್, ಹಾಲ್ಟರ್ ನೆಕ್ ಗೌನ್ಸ್, ಸ್ವಿಂಗ್ ನೆಕ್‌ಲೈನ್ ಗೌನ್ಸ್, ಟೈಯಿಂಗ್ ಸ್ಲಿವ್‌ಲೆಸ್ ಗೌನ್ಸ್, ಶೋಲ್ಡರ್‌ಲೆಸ್ ಗೌನ್‌ಗಳು ಸೇರಿದಂತೆ ನಾನಾ ಬಗೆಯವು ಈ ಸೀಸನ್‌ಗೆ ಎಂಟ್ರಿ ನೀಡಿವೆ. ಇನ್ನು ಫುಲ್‌ಸ್ಲೀವ್ ಗೌನ್‌ಗಳು ಹಾಗೂ ಪಫ್ ಸ್ಲೀವ್, ಟೈಟ್ ಸ್ಲೀವ್ ಗೌನ್‌ಗಳು ಸದ್ಯಕ್ಕೆ ಸೈಡಿಗೆ ಸರಿದಿವೆ. ಮಾನ್ಸೂನ್‌ವರೆಗೂ ಇವು ಹಿಂದಿರುಗುವ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ ಖಾನ್. ಅವರು ಹೇಳುವಂತೆ, ಈ ಸೀಸನ್ ಗೌನ್‌ಗಳು ಆದಷ್ಟೂ ಶಾರ್ಟ್ ಸ್ಲಿವ್ ಅಥವಾ ಸ್ಲಿವ್‌ಲೆಸ್ ಹೊಂದಿರುತ್ತವಂತೆ.
ಪಾರ್ಟಿವೇರ್ ಸ್ಲಿವ್‌ಲೆಸ್ ಗೌನ್‌ಗಳು
ಪಾರ್ಟಿವೇರ್ ಸ್ಲಿವ್‌ಲೆಸ್ ಗೌನ್‌ಗಳು ತೀರಾ ಉದ್ದವಾಗಿರುವುದಿಲ್ಲ! ಬದಲಿಗೆ ನೋಡಲು ಕೊಂಚ ಮ್ಯಾಕ್ಸಿಯಂತಿರುತ್ತವೆ. ಅಥವಾ ಲಾಂಗ್ ಸ್ಕರ್ಟ್‌ನಂತಿರುತ್ತವೆ. ಡಿಸೈನ್‌ಗಳು ಅಷ್ಟೇ! ಸಿಂಪಲ್ ಆಗಿರುತ್ತವೆ. ಕೊಂಚ ಶಿಮ್ಮರ್ ಆಗಿರುತ್ತವೆ ಎನ್ನುತ್ತಾರೆ ಡಿಸೈನರ್ ಡಿಂಪಲ್.
ಸ್ಲಿವ್‌ಲೆಸ್ ಗೌನ್‌ಗಳ ಆಯ್ಕೆಗೆ 3 ಟಿಪ್ಸ್
- ಆದಷ್ಟೂ ಸಿಂಪಲ್ ಡಿಸೈನ್ ಆಯ್ಕೆ ಮಾಡಿ.
- ಟ್ರೆಂಡಿ ಕಲರ್ಸ್ ಸೆಲೆಕ್ಟ್ ಮಾಡಿ.
- ತೀರಾ ಟೈಟ್ ಆಗಿರುವುದು ಬೇಡ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ