ಬೆಂಗಳೂರು: ಒಮ್ಮೆ ಬಾರಿ ಜೋರಾಗಿ ಮಳೆ (Heavy Rain) ಬಂದರೂ ಜನರಿಗೆ ಕಷ್ಟ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈ ನಡುವೆ ಎಂದಿಗಿಂತ ತುಸು ಜೋರಾಗಿ ಹಾಗೂ ಹೆಚ್ಚಾಗಿಯೇ ಮಳೆಯಾಗುತ್ತಿರುವುದು (Rain News) ಜನರನ್ನು ಹೈರಣಾಗಿಸಿದೆ. ಸದ್ಯ ಇನ್ನೊಂದು ವಾರಕ್ಕೂ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ವಾರಾಂತ್ಯದಲ್ಲಿ ಕರಾವಳಿಯ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ನಿರಂತರ ಗಾಳಿ ಬೀಸಲಿದ್ದು ಗಂಟೆಗೆ 40-50 ಕಿ.ಮೀನಲ್ಲಿ ವೇಗ ಇರಲಿದೆ. ಉಳಿದೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ-ಮಲೆನಾಡಿನಲ್ಲಿ ವಿಪರೀತ ಮಳೆ
ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಕ್ರಿಯವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿತ್ತು. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಇನ್ನೂ ಅತಿ ಹೆಚ್ಚು ಮಳೆಯು ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 30 ಸೆಂ.ಮೀ, ಉಡುಪಿ ಹಾಗೂ ಕೊಡಗಿನ ಭಾಗಮಂಡಲದಲ್ಲಿ ತಲಾ 21 ಸೆಂ.ಮೀ ಮಳೆಯಾಗಿದೆ.
ಮಂಗಳೂರು ವಿಮಾನ ನಿಲ್ದಾಣ , ಮಣಿ , ಕಾರ್ಕಳ, ಆಗುಂಬೆಯಲ್ಲಿ ತಲಾ 17 ಸೆಂ.ಮೀ, ಪಣಂಬೂರು , ಬೆಳ್ತಂಗಡಿ, ಹೊನ್ನಾವರ, ಧರ್ಮಸ್ಥಳದಲ್ಲಿ ತಲಾ 15 ಸೆಂ.ಮೀ ಮಳೆಯಾಗಿದೆ. ಶಿರಾಲಿ, ಕೋಟ, ಉಪ್ಪಿನಂಗಡಿ, ಕೊಟ್ಟಿಗೆಹಾರದಲ್ಲಿ ತಲಾ 14 ಸೆಂ.ಮೀ, ನಾಪೋಕ್ಲು13, ಪೊನ್ನಂಪೇಟೆ 12 ಸೆಂ.ಮೀ ಮಳೆಯಾಗಿದೆ. ಪುತ್ತೂರು , ಕೊಲ್ಲೂರು, ಸುಳ್ಯ, ಮೂರ್ನಾಡು, ವಿರಾಜಪೇಟೆಯಲ್ಲಿ 11 ಸೆಂ.ಮೀ, ಮಂಗಳೂರು 10 ಸೆಂ.ಮೀ, ಮಂಕಿ, ಕಳಸ, ಶೃಂಗೇರಿಯಲ್ಲಿ 9 ಸೆಂ.ಮೀ, ಕುಂದಾಪುರ, ಕುಮಟಾ, ಅಂಕೋಲಾದಲ್ಲಿ 8 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.
ಗೋಕರ್ಣ, ಕೊಪ್ಪ6 ಸೆಂ.ಮೀ, ಸಿದ್ದಾಪುರ , ಜಯಪುರ 5 ಸೆಂ.ಮೀ, ಕದ್ರಾ , ತಾಳಗುಪ್ಪ , ಬಂಡೀಪುರದಲ್ಲಿ 4 ಸೆಂ.ಮೀ ಮಳೆಯಾಗಿದೆ. ಲೋಂಡಾ, ಕುಶಾಲನಗರ, ಸೋಮವಾರಪೇಟೆ, ಹಾರಂಗಿ, ಹುಣಸೂರಿನಲ್ಲಿ 3 ಸೆಂ.ಮೀ ಮಳೆಯಾಗಿದೆ. ಜೋಯಿಡಾ, ಯಲ್ಲಾಪುರ, ಬಾಳೆಹೊನ್ನೂರು, ಹುಂಚದಕಟ್ಟೆ , ಸರಗೂರು 2 ಸೆಂ.ಮೀ, ಮುಂಡಗೋಡ , ಕಾರವಾರ , ಬನವಾಸಿ, ಹಳಿಯಾಳ, ಕಿರವತ್ತಿ , ತ್ಯಾಗರ್ತಿ, ಹಾಸನ , ಕೃಷ್ಣರಾಜಸಾಗರ, ಆನವಟ್ಟಿ, ಎನ್ ಆರ್ ಪುರ, ಗುಂಡ್ಲುಪೇಟೆ, ನಂಜನಗೂಡು, ಕೆ ಆರ್ ನಗರದಲ್ಲಿ 1 ಸೆಂ.ಮೀ ಮಳೆಯಾಗಿದೆ.
ಇದನ್ನೂ ಓದಿ: Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್ ಮರ!
ಚಿಕ್ಕಮಗಳೂರಲ್ಲಿ ಭಾರಿ ಮಳೆಗೆ ರಸ್ತೆ ಕಾಣದೆ ನದಿಗೆ ಬಿದ್ದ ಕಾರು
ಭಾರಿ ಮಳೆಯಿಂದಾಗಿ ರಸ್ತೆ ಕಾಣದೆ ಕಾರೊಂದು ನದಿಗೆ ಬಿದ್ದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಜೂ 28ರಂದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ಘಟನೆ ನಡೆದಿದೆ. ನೋಡ ನೋಡುತ್ತಿದ್ದಂತೆ ಕಾರು ಹೇಮಾವತಿ ನದಿಗೆ ಹಾರಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಕಾರು ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿದೆ. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯಿಂದ ಜಿಗಿದು ನದಿಗೆ ಕಾರು ಬಿದ್ದಿದೆ. ಕಳೆದ ಎರಡು ತಿಂಗಳ ಹಿಂದೆ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಇದೆ ಸ್ಥಳದಲ್ಲೇ ಮತ್ತೊಂದು ಅಪಘಾತ ಸಂಭವಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ