Site icon Vistara News

Karnataka Weather : ರಾಜ್ಯದಲ್ಲಿ ಮತ್ತೆ ಸುಡು ಬಿಸಲು; ಕೊಡಗಿಗೆ ಮಾತ್ರ ಮಳೆ ಅಲರ್ಟ್‌

Karnataka Weather

ಬೆಂಗಳೂರು: ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಉಳಿದ ಭಾಗಗಳಲ್ಲಿ ಒಣಹವೆ (Dry weather) ಮುಂದುವರಿಯಲಿದೆ.

ರಾಜ್ಯದ ಒಂದೆರಡು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 2 ಡಿ.ಸೆ ಹೆಚ್ಚಾಗಿರುವ ಸಾಧ್ಯತೆ ಇದೆ. ಬಿಸಿಲ ಧಗೆಯೂ ಹೆಚ್ಚಾಗಿರಲಿದೆ. ರಾಜಧಾನಿ ಬೆಂಗಳೂರಲ್ಲಿ ಶುಷ್ಕ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 ಹಾಗೂ 21 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದೆ.

ತಿಂಗಳ ಅಂತ್ಯಕ್ಕೆ ಮಳೆ ಸೂಚನೆ

ರಾಜ್ಯದಲ್ಲಿ ಸದ್ಯ ಎರಡ್ಮೂರು ದಿನ ಮಳೆಯು ಬಿಡುವು ಕೊಟ್ಟಿದೆ. ಮಾ.31 ಹಾಗೂ ಏ.1ಕ್ಕೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಮಾ.26ರಿಂದ 30ರವರೆಗೆ ಶುಷ್ಕ ವಾತಾವರಣದೊಂದಿಗೆ ಗರಿಷ್ಠ ತಾಪಮಾನದಲ್ಲಿ ಏರಿಳಿತ ಉಂಟಾಗಲಿದೆ.

ದಕ್ಷಿಣ ಕನ್ನಡ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು ಹಾಗೂ ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 35 ಡಿ.ಸೆ – 21 ಡಿ.ಸೆ
ಮಂಗಳೂರು: 35 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 37 ಡಿ.ಸೆ – 22 ಡಿ.ಸೆ
ಗದಗ: 38 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 24 ಡಿ.ಸೆ
ಕಲಬುರಗಿ: 40 ಡಿ.ಸೆ – 26 ಡಿ.ಸೆ
ಬೆಳಗಾವಿ: 39 ಡಿ.ಸೆ – 21 ಡಿ.ಸೆ
ಕಾರವಾರ: 35 ಡಿ.ಸೆ – 25 ಡಿ.ಸೆ

ಇದನ್ನೂ ಓದಿ: Breast cancer: ಭಾರತದಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್‌ ಪ್ರಮಾಣ! ಏನಿದಕ್ಕೆ ಕಾರಣ?

Garden Printed Fashionwears: ಬೇಸಿಗೆ ಫ್ಯಾಷನ್‌ನಲ್ಲಿ ಗಾರ್ಡನ್‌ ಪ್ರಿಂಟ್ಸ್‌ ಹಂಗಾಮ!

ಮನಸ್ಸಿಗೆ ಮುದ ನೀಡುವ ಚಿತ್ತಾರ ಹಾಗೂ ಉಲ್ಲಾಸಿತಗೊಳಿಸುವ ಬಣ್ಣ ಬಣ್ಣದ ಹೂಗಳನ್ನೊಳಗೊಂಡ ಗಾರ್ಡನ್‌ ಪ್ರಿಂಟ್ಸ್ ಇರುವಂತಹ ಫ್ಯಾಷನ್‌ವೇರ್‌ಗಳು (Garden Printed Fashionwears) ಈ ಬೇಸಿಗೆ ಸೀಸನ್‌ನಲ್ಲಿ ಹೊಸ ರೂಪದಲ್ಲಿ ಎಂಟ್ರಿ ನೀಡಿವೆ. ಗಾರ್ಡನ್‌ ಪ್ರಿಂಟೆಡ್‌ ಫ್ಯಾಷನ್‌: ಹೂ-ಬಳ್ಳಿಯ ಚಿತ್ತಾರ, ಗಿಡ-ಮರಗಳ ಹಸಿರ ಸಿರಿ, ಮಲ್ಲಿಗೆ, ಗುಲಾಬಿ, ಜಾಜಿ-ಸೂಜಿ, ಸೇವಂತಿ ಕಮಲ, ಲಿಲ್ಲಿ, ಸೂರ್ಯಕಾಂತಿ ಸೇರಿದಂತೆ ಬಗೆಬಗೆ ಹೂ ಗಿಡಗಳ ಚಿತ್ತಾರಗಳು ಸಮ್ಮಿಲನಗೊಂಡಿವೆ. ಹೌದು, ಈ ಬಾರಿಯ ಸಮ್ಮರ್‌ನಲ್ಲಿ ಒಂದಲ್ಲ, ಎರಡಲ್ಲ, ನೂರಾರು ಬಗೆಬಗೆಯ ಗಾರ್ಡನ್‌ ಪ್ರಿಂಟ್ಸ್‌ ಫ್ಯಾಷನ್‌ಲೋಕದ ಟ್ರೆಂಡಿ ಉಡುಪುಗಳನ್ನು ಸಿಂಗರಿಸುತ್ತಿವೆ! ಗಾರ್ಡನ್‌ ಪ್ರಿಂಟ್ಸ್‌ ಇಂದು ಯಾವ ಮಟ್ಟಿಗೆ ಟ್ರೆಂಡಿಯಾಗುತ್ತಿವೆ ಎಂದರೇ, ಅದು ಧರಿಸುವ ಉಡುಪಾಗಬಹುದು ಇಲ್ಲವೇ ಸೀರೆಯಾಗಬಹುದು. ಎಲ್ಲಾ ಬಗೆಯ ಔಟ್‌ಫಿಟ್‌ನಲ್ಲೂ ಕಾಣಿಸಿಕೊಳ್ಳುತ್ತಿದೆ.

ಬೇಸಿಗೆ ಔಟ್‌ಫಿಟ್ಸ್ ನಲ್ಲಿ ಗಾರ್ಡನ್‌ ಚಿತ್ತಾರ

ಊಹೆಗೂ ನಿಲುಕದ ವರ್ಣಮಯ ಚಿತ್ತಾರಗಳುಳ್ಳ ಈ ಗಾರ್ಡನ್‌ ಪ್ರಿಂಟ್ಸ್‌ ಔಟ್‌ಫಿಟ್ಸ್, ಇಂದಿನ ಬೇಸಿಗೆ ಫ್ಯಾಷನ್‌ ಲಿಸ್ಟ್‌ನಲ್ಲಿದ್ದು, ಕುರ್ತಾ, ಸೆಲ್ವಾರ್‌-ಚೂಡಿದಾರ್‌, ಗೌನ್‌, ಫ್ರಾಕ್‌, ಸ್ಕರ್ಟ್ಸ್ ಹೀಗೆ ಬಹುತೇಕ ಕಾಸ್ಟ್ಯೂಮ್‌ಗಳ ರೂಪ-ರೇಷೆಯನ್ನು ಬದಲಿಸಿವೆ. ಈ ಫ್ಯಾಷನ್‌ ಮಂತ್ರ ಕೇವಲ ಧರಿಸುವ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ, ಸೀರೆ, ಅಲಂಕಾರಿಕ ಆಕ್ಸೆಸರೀಸ್‌ ಸೇರಿದಂತೆ ಎಲ್ಲೆಡೆಯಲ್ಲೂಜನಪ್ರಿಯವಾಗತೊಡಗಿದೆ. ಲೈಫ್‌ಸ್ಟೈಲ್‌ ಫ್ಯಾಷನ್‌ ವಿನ್ಯಾಸಕರ ಘೋಷಣೆಯ ಲಿಸ್ಟ್‌ನಿಂದ ಮತ್ತೊಮ್ಮೆ ಇದು ಹೊರಬಿದ್ದಿದ್ದೇ ತಡ, ಎಲ್ಲೆಂದರಲ್ಲಿ, ನಾನಾ ಡಿಸೈನರ್‌ ಗಾರ್ಡನ್‌ ಪ್ರಿಂಟ್ಸ್‌ ಬಗೆಬಗೆ ವಿನ್ಯಾಸದಲ್ಲಿಮಾನಿನಿಯರ ಫ್ಯಾಷನ್‌ ಲಿಸ್ಟ್‌ನಲ್ಲಿ ತುಂಬಿ ತುಳುಕಾಡತೊಡಗಿದೆ.

ಫ್ಲೋರಲ್‌ ಪ್ರಿಂಟ್ಸ್

ಗಾರ್ಡನ್‌ ಪ್ರಿಂಟ್ಸ್‌ನಲ್ಲಿ ಇದೀಗ ಹೆಚ್ಚು ಚಾಲ್ತಿಯಲ್ಲಿರುವುದು, ಬಗೆಬಗೆ ಹೂಗಳ ಚಿತ್ತಾರ ಹೊಂದಿರುವ ಫ್ಲೋರಲ್‌ ಪ್ರಿಂಟ್ಸ್‌ . ಇಂದು ಬೇಸಿಗೆ ಸೀಸನ್‌ ಫ್ಯಾಷನ್‌ನ ಟಾಪ್‌ ಲಿಸ್ಟ್‌ನಲ್ಲಿದೆ.

ಟ್ರಾಪಿಕಲ್‌ ಪ್ರಿಂಟ್ಸ್‌

ಟ್ರಾಪಿಕಲ್‌ ಪ್ರಿಂಟ್ಸ್‌ ಕ್ರೇಜ್‌ ಯಾವ ಮಟ್ಟಿಗೆ ಹೆಚ್ಚಾಗಿದೆ ಎಂದರೇ, ಹೆಣ್ಣುಮಕ್ಕಳು ಅದರಲ್ಲೂವಿವಾಹಿತರು ಹಾಕುವ ಸಲ್ವಾರ್‌ ಫ್ರಾಕ್‌ ಹಾಗೂ ಚೂಡಿದಾರ್‌ ಈ ಪ್ರಿಂಟ್ಸ್‌ನಿಂದಲೇ ತುಂಬಿ ಹೋಗಿವೆ. ಇವು ಯಂಗ್‌ ಲುಕ್‌ ನೀಡುತ್ತವೆ ಎಂಬ ಕಾರಣದಿಂದಾಗಿ ಮಧ್ಯ ವಯಸ್ಕ ಹೆಣ್ಣುಮಕ್ಕಳು ಇವುಗಳಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ ಎಂಬುದು ಡಿಸೈನರ್‌ಗಳ ಅಭಿಪ್ರಾಯ. ಅದರಲ್ಲೂ ಕಾಟನ್‌ ಮೆಟಿರೀಯಲ್‌ನಲ್ಲಿ ದೊರಕುವ ತಿಳಿ ಬಣ್ಣದ ಕ್ಯಾಶುವಲ್‌ ವೇರ್‌ ಔಟ್‌ಫಿಟ್‌ಗಳು ಹೆಚ್ಚು ಪ್ರಚಲಿತದಲ್ಲಿವೆ.

ಶೈನಿಂಗ್‌ ಗಾರ್ಡನ್‌ ಚಿತ್ತಾರ

ಪಾರ್ಟಿವೇರ್‌ಗೆ ಸಿಲ್ಕ್‌ನ ಜರ್ಸಿ ಟ್ರಾಪಿಕಲ್‌ ಫ್ಲೋರಲ್‌ ಶೈನಿಂಗ್‌ ಪ್ರಿಂಟ್ಸ್‌ ಉಡುಪುಗಳು ಗ್ಲಾಮರಸ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ರಾಶಿ ಹಾಗೂ ಚಿತ್ರಾ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version