ಬೆಂಗಳೂರು: ಮಲೆನಾಡು ಭಾಗದ ಹಲವೆಡೆ ಈಗಾಗಲೇ ಬೇಸಿಗೆ ಮಳೆಯು ತಂಪೆರೆದಿದೆ. ಇದೀಗ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಲ್ಲಿ ಮಳೆಯು ಆವರಿಸುತ್ತಿದೆ. ಶುಷ್ಕ ವಾತಾವರಣದ (Dry weather) ನಡುವೆಯೂ ಹಲವೆಡೆ ಮಳೆಯಾಗುವ (Rain news) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.
ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಇದ್ದರೆ, ಕರಾವಳಿಯಲ್ಲಿ ಒಣಹವೆ ಇರಲಿದೆ. ಮಲೆನಾಡಿನ ಕೊಡಗು, ಹಾಸನ ಹಾಗೂ ದಕ್ಷಿಣ ಒಳನಾಡಲ್ಲಿ ರಾಮನಗರ, ಮಂಡ್ಯ, ಮೈಸೂರು ಮತ್ತು ತುಮಕೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಉತ್ತರ ಒಳನಾಡಲ್ಲಿ ಬಿಸಿಲ ತಾಪ
ಉತ್ತರ ಒಳನಾಡಿನ ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದಾಗಿ ಬಿಸಿಲ ತಾಪವೂ ಏರಿಕೆ ಆಗಲಿದೆ. ಮುಂದಿನ 48 ಗಂಟೆಯೊಳಗೆ ಭಾಗಶಃ ಮೋಡ ಕವಿದ ವಾತಾವರಣವಿದ್ದರೂ, ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 34 ಡಿ.ಸೆ – 21 ಡಿ.ಸೆ
ಮಂಗಳೂರು: 35 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 23 ಡಿ.ಸೆ
ಗದಗ: 37 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 22 ಡಿ.ಸೆ
ಕಲಬುರಗಿ: 38 ಡಿ.ಸೆ – 25 ಡಿ.ಸೆ
ಬೆಳಗಾವಿ: 35 ಡಿ.ಸೆ – 20 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ
ಇದನ್ನೂ ಓದಿ:Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ
ಸಮ್ಮರ್ ಸೀರೆಯಲ್ಲಿ ನಟಿ ನಿಮಿಕಾರಂತೆ ಆಕರ್ಷಕವಾಗಿ ಕಾಣಲು 5 ಟಿಪ್ಸ್ !
ಸ್ಯಾಂಡಲ್‌ವುಡ್ ನಟಿ ನಿಮಿಕಾ ರತ್ನಾಕರ್, ಸಮ್ಮರ್ ಸೀರೆ (Summer fashion) ಟ್ರೆಂಡ್‌ಗೆ ಸೈ ಎಂದಿದ್ದಾರೆ. ರೈನ್ಬೋ ಶೇಡ್‌ನ ಕಲರ್‌ಫುಲ್ ಜಾರ್ಜೆಟ್ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿರುವ ಅವರು ಬೇಸಿಗೆ ಸೀಸನ್‌ಗೆ ಪರ್ಫೆಕ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಂತೆಯೇ ಸುಂದರವಾಗಿ ಯಾರಿಗೆ ಕಾಣಿಸಲು ಇಷ್ಟವಿಲ್ಲ ಹೇಳಿ! ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ! ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್‌ಫಟ್ರ್ಸ್.
ರೈನ್ಬೋ ಶೇಡ್ ಸೀರೆ ಆಯ್ಕೆ
ಇಂದು ರೈನ್ಬೋ ಶೇಡ್ ಸೀರೆಗಳು ಸಖತ್ ಟ್ರೆಂಡಿಯಾಗಿವೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಇವು ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ. ಉಟ್ಟಾಗ ಮನಮೋಹಕವಾಗಿ ಕಾಣುವ ಇವು ಪಾಸಿಟಿವ್ ವೈಬ್ಸ್ ತುಂಬಿಸುತ್ತವೆ. ಅಲ್ಲದೇ, ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ. ಆ ಮಟ್ಟಿಗೆ ಈ ವರ್ಣಮಯವಾಗಿರುವ ಸೀರೆಗಳು ಸುತ್ತಮುತ್ತಲ ಪರಿಸರವನ್ನು ಅಹ್ಲಾದಕರವಾಗಿಸುತ್ತವೆ. ಹಾಗಾಗಿ ಈ ಶೇಡ್ ಆಯ್ಕೆ ಮಾಡಿ.
ಜಾರ್ಜೆಟ್ ಸೀರೆ ಸೆಲೆಕ್ಷನ್
ಈ ಬೇಸಿಗೆಯಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಸೀರೆ ಉಟ್ಟರೇ ಸೆಕೆಯಾಗಬಹುದು. ಹಾಗಾಗಿ ಆದಷ್ಟೂ ತೆಳುವಾದ ಫ್ಯಾಬ್ರಿಕ್ ಹೊಂದಿರುವಂತದ್ದನ್ನು ಸೆಲೆಕ್ಟ್ ಮಾಡಿ. ಜಾರ್ಜೆಟ್ ಸೀರೆ ನೋಡಲು ಆಕರ್ಷಕವಾಗಿ ಕಾಣುತ್ತಲ್ಲದೇ, ಉಸಿರುಗಟ್ಟಿಸುವುದಿಲ್ಲ. ಉಟ್ಟಾಗ ಭಾರ ಎನಿಸುವುದಿಲ್ಲ!
ಸಿಂಪಲ್ ಬ್ಲೌಸ್ ಧರಿಸಿ
ಜಾರ್ಜೆಟ್ ಸೀರೆಗಳಿಗೆ ಹೆವ್ವಿ ಡಿಸೈನ್‌ನ ಬ್ಲೌಸ್ ಧರಿಸುವುದು ಬೇಡ! ಅದರಲ್ಲೂ ಕಚೇರಿಗೆ ಸೀರೆ ಉಡುವವರು ಸದಾ ಡಿಸೈನರ್ ಬ್ಲೌಸ್ ಧರಿಸಕೂಡದು. ಆದಷ್ಟೂ ಸಿಂಪಲ್ ಬ್ಲೌಸ್ ಧರಿಸುವುದನ್ನು ರೂಢಿಸಿಕೊಳ್ಳಿ. ಇದು ಪ್ರೊಫೆಷನಲ್ ಲುಕ್ ನೀಡುತ್ತದೆ.
ಸಿಂಪಲ್ ನ್ಯಾಚುರಲ್ ಮೇಕಪ್
ಬೇಸಿಗೆಯಲ್ಲಿ ಜಾರ್ಜೆಟ್ ಸೀರೆ ಉಟ್ಟಾಗ ಮುಖಕ್ಕೆ ಹೆವ್ವಿ ಮೇಕಪ್ ಬೇಡ! ಬೆವರಿಗೆ ಮಿಕ್ಸ್ ಆಗಬಹುದು. ಸಿಂಪಲ್ ನ್ಯೂಡ್ ಮೇಕಪ್ ಅಥವಾ ನ್ಯಾಚುರಲ್ ಮೇಕಪ್ ಮಾಡಿ. ಇದು ನೈಜ ಲುಕ್ ನೀಡುತ್ತದೆ.
ಆಕ್ಸೆಸರೀಸ್ ಮಿನಿಮಲ್ ಆಗಿರಲಿ
ರೈನ್ಬೋ ಶೇಡ್ ಸೀರೆಗಳಿಗೆ ಆದಷ್ಟೂ ಕಡಿಮೆ ಆಕ್ಸೆಸರೀಸ್ ಧರಿಸಿ. ಕಲರ್‌ಗಳು ಹೆಚ್ಚಿರುವಾಗ ಆಕ್ಸೆಸರೀಸ್ ಹೆಚ್ಚು ಬೇಡ. ಸೀರೆ ಹೈಲೈಟಾಗದು. ಇದರೊಂದಿಗೆ ಹೇರ್‌ಸ್ಟೈಲ್ ಕೂಡ ಸಿಂಪಾಲ್ಲಾಗಿರಲಿ. ನೋಡಲು ಮನಮೋಹಕವಾಗಿ ಕಾಣಿಸುವುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ