Site icon Vistara News

Karnataka Weather : ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಸೇರಿ ವಿವಿಧೆಡೆ ಮಳೆ ಅಬ್ಬರ; ಆರೆಂಜ್‌ ಅಲರ್ಟ್‌ ಘೋಷಣೆ

karnataka Weather Forecast

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Heavy Rain Alert) ಸಾಧ್ಯತೆಯಿದೆ. ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ (Rain News) ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾದರೆ, ಉತ್ತರ ಒಳನಾಡಿನ ಹಗುರದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಊತ್ತರ ಒಳನಾಡಿನ ಕೆಲ ಪ್ರದೇಶದಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಬೆಳಗಾವಿಯಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಮಲೆನಾಡಿನ ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲಿಯಸ್‌ ಇರಲಿದೆ.

ಆರೆಂಜ್‌ ಅಲರ್ಟ್‌

ಗುಡುಗು ಸಹಿತ ಭಾರೀ ಮಳೆಯೊಂದಿಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.

ಜೂನ್‌ 27ರವರೆಗೆ ಮೀನುಗಾರರಿಗೆ ಎಚ್ಚರಿಕೆ

ಜೂನ್‌ 27 ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ

ಇದನ್ನೂ ಓದಿ: Tumkur Shoot out : ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಸರಗಳ್ಳನ ಹೆಡೆಮುರಿ ಕಟ್ಟಿದ ಖಾಕಿ

ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

ಮಳೆಗಾಲಕ್ಕೂ ಟ್ರೆಂಚ್‌ ಕೋಟ್‌ (Monsoon trench coat fashion) ಫ್ಯಾಷನ್‌ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್‌ ಖಾನ್‌ ಮಗಳು ಹಾಗೂ ನಟಿ ಸುಹಾನಾ ಖಾನ್‌ ಟ್ರೆಂಚ್‌ ಕೋಟ್‌ ಧರಿಸಿದ್ದು, ಈ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್‌ ಕೋಟ್‌ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್‌ ಮಾಡಿದೆ.

ಟ್ರೆಂಚ್‌ಕೋಟ್‌ ವೆರೈಟಿ ವಿನ್ಯಾಸ

ಟ್ರೆಂಚ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್‌ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್‌ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್‌ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ, ಟ್ರೆಂಚ್‌ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.

ಕ್ಲಾಸಿಕ್‌ ಲುಕ್‌ ಗ್ಯಾರಂಟಿ

ಅಂದಹಾಗೆ, ವೆಸ್ಟರ್ನ್‌ ಲುಕ್‌ ನೀಡುವಲ್ಲಿಈ ಟ್ರೆಂಚ್‌ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್‌ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್‌ , ಎಥ್ನಿಕ್‌ ಡ್ರೆಸ್‌ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.

ಹೀಗಿರಲಿ ಟ್ರೆಂಚ್‌ ಕೋಟ್‌ ಸ್ಟೈಲಿಂಗ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version